ಕ್ರೈಮ್ ನ್ಯೂಸ್

ಒಂದೇ ಮನೆಯ ಮೂವರು ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರ

(ನ್ಯೂಸ್ ಕಡಬ)newskadaba.com ಮುಂಬೈ, ಮಾ.02. ತನ್ನ ನೆರೆಹೊರೆಯಲ್ಲಿ ತಂಗಿದ್ದ ಮೂವರು ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕಸೂತಿ ಕೆಲಸಗಾರನನ್ನು ಮುಂಬೈನ ಜೆಜೆ ಮಾರ್ಗ ಪೊಲೀಸರು ಬಂಧಿಸಿದ್ದಾರೆ. ತನ್ನ ಏಳು ವರ್ಷದ ಮಗಳು ಈ ಸಂಕಟವನ್ನು ವಿವರಿಸಿದ ನಂತರ ಸಂತ್ರಸ್ತೆಯ ತಾಯಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದಳು. ದಕ್ಷಿಣ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ದಿಲೀಪ್ ಸಾವಂತ್ ಅವರು ತ್ವರಿತ ತನಿಖೆಗೆ ಭರವಸೆ ನೀಡಿದ್ದು, ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.

ಒಂದೇ ಮನೆಯ ಮೂವರು ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರ Read More »

ಕ್ರೈಮ್ ನ್ಯೂಸ್

ಕಡಬ: ಮತ್ತೇ ಅರಣ್ಯದಲ್ಲಿ ವ್ಯಕ್ತಿಯೊಬ್ಬರಿಗೆ ಕಾಣ ಸಿಕ್ಕ ಒಂಟಿ ಸಲಗ

(ನ್ಯೂಸ್ ಕಡಬ)newskadaba.com ಕಡಬ, ಮಾ.02. ಕಡಬ ತಾಲೂಕಿನ ಕಲ್ಲುಗುಡ್ಡೆ ಉದನೆ ಸಂಪರ್ಕ ರಸ್ತೆಯ ನಿಡ್ಡೋ ಬಳಿಯ ಅರಣ್ಯದಲ್ಲಿ ನಾಲ್ಕು ದಿನಗಳ ಹಿಂದೆ ಕಾಡಾನೆಯೊಂದು ವ್ಯಕ್ತಿಯೋರ್ವರಿಗೆ ಕಾಣಿಸಿದೆ ಎಂದು ವರದಿ ತಿಳಿಸಿದೆ. ರವಿವಾರ ಬೆಳಗ್ಗೆ ಕಾಡಾನೆ ಸಿಕ್ಕಿದ್ದು ಅವರು ನೀಡಿದ ಮಾಹಿತಿ ಆಧಾರಿಸಿ ಅರಣ್ಯ ಇಲಾಖೆಯ ತಂಡವು ಕಾಡಾನೆ ಪತ್ತೆ ಕಾರ್ಯವನ್ನು ಮತ್ತೆ ಚುರುಗೊಳಿಸಿದೆ.

ಕಡಬ: ಮತ್ತೇ ಅರಣ್ಯದಲ್ಲಿ ವ್ಯಕ್ತಿಯೊಬ್ಬರಿಗೆ ಕಾಣ ಸಿಕ್ಕ ಒಂಟಿ ಸಲಗ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: 4 ವರ್ಷದ ಮಗುವಿನೊಂದಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ     

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.02. ತನ್ನ 4 ವರ್ಷದ ಮಗುವಿನೊಂದಿಗೆ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೊಡಿಯಾಲ್ ಗುತ್ತಿನಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ ಮಹಿಳೆ ತನ್ನ 4 ವರ್ಷದ ಮಗಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಜಯ(33) ಮತ್ತು ಶೋಭಿತಾ (4) ಮೃತಪಟ್ಟವರು. ಇಬ್ಬರು ಮಕ್ಕಳ ಜತೆಗೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು ಇನ್ನೋರ್ವ ಮಗಳು ನೇಣಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.  

ಮಂಗಳೂರು: 4 ವರ್ಷದ ಮಗುವಿನೊಂದಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ      Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಕಾರಿಗೆ ಮೀನು ಸಾಗಾಟ ಲಾರಿ ಢಿಕ್ಕಿ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.02. ಮೀನು ಸಾಗಾಟದ ಲಾರಿಯೊಂದು ಚಾಲಕನ ನಿರ್ಲಕ್ಷತನದ ಚಾಲನೆಯಿಂದ ಕಾರೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳೂರು ಹೊರವಲಯದ ಮುಲ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಪಡು ಪಣಂಬೂರು ಕೀರು ಸೇತುವೆ ಬಳಿ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಉಡುಪಿ ಕಡೆಯಿಂದ ಕೇರಳ ಕಡೆಗೆ ಹೋಗುತ್ತಿದ್ದ ಮೀನಿನ ಲಾರಿ ಪಡುಪಣಂಬೂರು ಕಿರು ಸೇತುವೆ ಬಳಿ ಚಾಲಕನ ನಿರ್ಲಕ್ಷ ಚಾಲನೆಯಿಂದ ಅದೇ ದಿಕ್ಕಿನಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ

ಮಂಗಳೂರು: ಕಾರಿಗೆ ಮೀನು ಸಾಗಾಟ ಲಾರಿ ಢಿಕ್ಕಿ Read More »

ಕರಾವಳಿ, ಕ್ರೈಮ್ ನ್ಯೂಸ್

ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಬರ್ಬರ ಹತ್ಯೆ

(ನ್ಯೂಸ್ ಕಡಬ)newskadaba.com ಕಲಬುರ್ಗಿ, ಮಾ.02. ಯುವಕನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಾಳಮಂದರ್ಗಿ ಗ್ರಾಮದಲ್ಲಿ ನಡೆದಿದೆ. ಭರತ ಸುಭಾಶ್ಚಂದ್ರ (25)ಕೊಲೆಯಾದ ಯುವಕ ಎನ್ನಲಾಗಿದೆ. ಈತನ ಸಂಬಂಧಿಯೇ ಆಗಿರುವ ಮಲ್ಲಿಕಾರ್ಜುನ ಶಿವಶರಣಪ್ಪ ಕೊಲೆ ಮಾಡಿರುವುದು ತಿಳಿದು ಬಂದಿದೆ..

ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಬರ್ಬರ ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಾಯ್ಲರ್ ಸಿಡಿದು ಮೂವರು ಕಾರ್ಮಿಕರ ಸ್ಥಿತಿ ಗಂಭೀರ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.01. ಬಾಯ್ಲರ್ ಸಿಡಿದು ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾದ ಘಟನೆ ಬೆಂಗಳೂರು ನಗರದ ಅನೇಕಲ್ ನ ಬೊಮ್ಮಸಂದ್ರದಲ್ಲಿ ನಡೆದಿದೆ. ಬೊಮ್ಮಸಂದ್ರದ ಬಾಲ್ ಫಾರ್ಮ ಕಂಪನಿಯಲ್ಲಿ ಈ ದುರಂತ ಸಂಭವಿಸಿದೆ. ಪರಿಣಾಮ ಪ್ರದೀಪ್, ಮುರುಗನ್, ಕಿರಣ್ ಎಂಬ ಮೂವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಮೈ ಮೇಲೆ ಭಾರಿ ಪ್ರಮಾಣದ ಕೆಮಿಕಲ್ ಬಿದ್ದು ತೀವ್ರತರದ ಗಾಯಗಳಾಗಿದೆ.  

ಬಾಯ್ಲರ್ ಸಿಡಿದು ಮೂವರು ಕಾರ್ಮಿಕರ ಸ್ಥಿತಿ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಅಕ್ರಮ ಮರಳು ಸಾಗಾಟ; ವಾಹನಗಳು ವಶಕ್ಕೆ  

(ನ್ಯೂಸ್ ಕಡಬ)newskadaba.com  ಮಂಗಳೂರು, ಮಾ.01. ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವಾಹನಗಳ ಮೇಲೆ ಪೊಲೀಸರು ದಾಳಿ ನಡೆಸಿ ಮರಳು ಸಾಗಾಟಕ್ಕೆ ಬಳಸಿದ ಟಿಪ್ಪರ್ ಹಾಗೂ ಲಾರಿಗಳನ್ನು ಮತ್ತು ಮರಳನ್ನು ವಶಪಡಿಸಿಕೊಂಡಿದ್ದಾರೆ. ಫೆಬ್ರವರಿ 25ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಂಆರ್‌ಪಿಎಲ್ ಮೇಲ್ಸೇತುವೆ ಬಳಿ ಸುಮಾರು 10 ಟನ್ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.    

ಮಂಗಳೂರು: ಅಕ್ರಮ ಮರಳು ಸಾಗಾಟ; ವಾಹನಗಳು ವಶಕ್ಕೆ   Read More »

ಕರಾವಳಿ, ಕ್ರೈಮ್ ನ್ಯೂಸ್

ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಹೃದಯಾಘಾತ ➤ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com. ಹೈದರಾಬಾದ್, ಮಾ.01 ಯುವಕನೊಬ್ಬ ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಶ್ಯಾಮ್ ಯಾದವ್ ಮೃತ ಯುವಕ. ಹೈದರಾಬಾದ್‌ನ ಲಾಲಾಪೇಟ್‌ನಲ್ಲಿರುವ ಪ್ರೊ. ಜಯಶಂಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಶ್ಯಾಮ್ ಯಾದವ್ ಅವರು ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ದಿನನಿತ್ಯ ಕಚೇರಿಯಿಂದ ಬಂದು ಬ್ಯಾಡ್ಮಿಂಟನ್ ಆಡಲು ಹೋಗುತ್ತಿದ್ದ ಶ್ಯಾಮ್ ಯಾದವ್

ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಹೃದಯಾಘಾತ ➤ಯುವಕ ಮೃತ್ಯು..! Read More »

ಕ್ರೈಮ್ ನ್ಯೂಸ್

ಕೊಯಿಲ ಫಾರ್ಮ್ ನಲ್ಲಿ ಬೆಂಕಿ ಅನಾಹುತ

(ನ್ಯೂಸ್ ಕಡಬ)newskadaba.com ಕಡಬ, ಮಾ.01. ಕಡಬ ತಾಲೂಕಿನ ರಾಮಕುಂಜ ಸಮೀಪದ ಕೊಯಿಲ ಪಶು ಸಂಗೋಪನ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಪ್ರಕೃತಿ ರಮಣೀಯವಾದ ಹಸಿರು ಹುಲ್ಲುಗಾವಲಿಗೆ ಪ್ರಸಿದ್ದಿ ಪಡೆದಿದ್ದ ಕೇಂದ್ರದಲ್ಲಿ ಈ ಕೇಂದ್ರದಲ್ಲಿ ಸದ್ಯ ಬೇಸಿಗೆ ಕಾಲವಾದುದರಿಂದ ಒಣ ಹುಲ್ಲುಗಳಿಂದ ಆವೃತ್ತವಾಗಿತ್ತು.

ಕೊಯಿಲ ಫಾರ್ಮ್ ನಲ್ಲಿ ಬೆಂಕಿ ಅನಾಹುತ Read More »

ಕರಾವಳಿ, ಕ್ರೈಮ್ ನ್ಯೂಸ್

ರೈಲುಗಳ ಮುಖಾಮುಖಿ ಢಿಕ್ಕಿ; 26 ಮಂದಿ ದುರ್ಮರಣ

(ನ್ಯೂಸ್ ಕಡಬ)newskadaba.com ಅಥೆನ್ಸ್, ಮಾ.01. ರೈಲುಗಳೆರಡರ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿ ಕನಿಷ್ಠ 26 ಮಂದಿ ಸಾವನ್ನಪ್ಪಿದ ಘಟನೆ ಗ್ರೀಸ್‌‌ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ 85ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಥೆನ್ಸ್‌ನ ಉತ್ತರ ನಗರ ಥೆಸಲೋನಿಕಿಗೆ ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್‌ ರೈಲು ಮತ್ತು ಮಧ್ಯ ಗ್ರೀಸ್‌ನ ಲಾರಿಸ್ಸಾ ನಗರದಿಂದ ಬರುತ್ತಿದ್ದ ಸರಕು ತುಂಬಿದ (ಕಾರ್ಗೋ) ರೈಲು ನಡುವೆ ಢಿಕ್ಕಿ ಸಂಭವಿಸಿದೆ.

ರೈಲುಗಳ ಮುಖಾಮುಖಿ ಢಿಕ್ಕಿ; 26 ಮಂದಿ ದುರ್ಮರಣ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top