ಕ್ರೈಮ್ ನ್ಯೂಸ್

60 ವರ್ಷದ ಮಹಿಳೆ ಮೇಲೆ ಅತ್ಯಾಚಾರ !          ➤ ಇಬ್ಬರು ಯುವಕರ ಬಂಧನ

(ನ್ಯೂಸ್ ಕಡಬ)newskadaba.com ವಿಜಯಪುರ, ಮಾ.04. ವಿಜಯಪುರ ಜಿಲ್ಲೆಯಲ್ಲಿ 60 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಬಂಧಿತರನ್ನು ಸದ್ದಾ ಶೇಕ್ ಮತ್ತು ರವಿ ಎಂದು ಗುರುತಿಸಲಾಗಿದ್ದು, ಇವರು ರದ್ದಿ ಅಂಗಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಸಂತ್ರಸ್ತೆಯ ಸ್ಥಿತಿ ಗಂಭೀರವಾಗಿದೆ. ಸಂತ್ರಸ್ತೆ ಜೋರಾಪುರ ಪೇಟೆಯ ದೇವಸ್ಥಾನದಲ್ಲಿ ಭಕ್ತರು ನೀಡುವ ಭಿಕ್ಷೆಯಿಂದ ಜೀವನ ಸಾಗಿಸುತ್ತಿದ್ದರು.

60 ವರ್ಷದ ಮಹಿಳೆ ಮೇಲೆ ಅತ್ಯಾಚಾರ !          ➤ ಇಬ್ಬರು ಯುವಕರ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ಬೆಂಗಳೂರು 300 ಬೆಣ್ಣೆ ಹಣ್ಣಿನ ಮರಗಳಿಗೆ ಕಿಡಿಗೇಡಿಗಳಿಂದ ಬೆಂಕಿ

(ನ್ಯೂಸ್ ಕಡಬ) newskadaba.co.ಬೆಂಗಳೂರು, ಮಾ 4.  ಬಿಡದಿಯ ಕೊಡಿಯಾಲ ಕರೇನಹಳ್ಳಿಯಲ್ಲಿ 42 ವರ್ಷದ ರತ್ನ ಅವರ ಎರಡು ಎಕರೆಗೂ ಹೆಚ್ಚು ಜಮೀನಿನಲ್ಲಿ ಬೆಳೆದಿದ್ದ 300 ಬೆಣ್ಣೆ ಹಣ್ಣಿನ ಮರಗಳನ್ನು ಅಪರಿಚಿತ ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ರತ್ನ ಅವರು ಈ ಬೇಸಿಗೆಯಲ್ಲಿ ಹಣ್ಣುಗಳನ್ನು ಮಾರಾಟ ಮಾಡಿ ಲಾಭ ಗಳಿಸಿದ್ದರು. ಮರಗಳಲ್ಲದೆ, ನೀರಿನ ಪೈಪ್‌ಗಳು ಮತ್ತು ಯಂತ್ರಗಳು ಸಹ ಸುಟ್ಟುಹೋಗಿವೆ. ಇಡೀ ಪ್ರದೇಶವು ಸುಟ್ಟು ಕರಕಲಾಗಿದೆ. ಸುಮಾರು 10 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ವಾಣಿಜ್ಯ ಬೆಳೆಗಳನ್ನು ರಕ್ಷಿಸಲು

➤ ಬೆಂಗಳೂರು 300 ಬೆಣ್ಣೆ ಹಣ್ಣಿನ ಮರಗಳಿಗೆ ಕಿಡಿಗೇಡಿಗಳಿಂದ ಬೆಂಕಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ಕಾಲೇಜು ಆವರಣದಲ್ಲಿ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು..!

(ನ್ಯೂಸ್ ಕಡಬ) newskadaba.com.ಕೊಡಗು, ಮಾ 4.  ಹೈದರಾಬಾದ್, ಮಾ 04 ಕಾಲೇಜಿನಲ್ಲಿ ಊಟ ಮುಗಿಸಿ, ಮೊದಲ ತರಗತಿಯನ್ನು ಮುಗಿಸಿ ಸ್ನೇಹಿತನೊಟ್ಟಿಗೆ ಕಾಲೇಜಿನ ಆವರಣದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತೆಲಂಗಾಣದ ಗುಂಡ್ಲಾ ಪೋಚಂಪಲ್ಲಿಯಲ್ಲಿರುವ ಎಂಆರ್ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರ್‌ ವಿದ್ಯಾರ್ಥಿ ಸಚಿನ್‌ (18) ಮೃತ ದುರ್ದೈವಿ. ಸ್ನೇಹಿತನೊಟ್ಟಿಗೆ ಕಾಲೇಜಿನ ಆವರಣದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸಚಿನ್‌ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,

➤ ಕಾಲೇಜು ಆವರಣದಲ್ಲಿ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ʼಬೈಕ್ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಖದೀಮ ಅರೆಸ್ಟ್‌ʼ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.04. ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕಳ್ಳರಿಗೇನು ಕಮ್ಮಿಯಿಲ್ಲ, ಇದೀಗ ಬೈಕ್ಗಳನ್ನ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನುಸಿದ್ದಾಪುರ ಪೊಲೀಸರಿಂದ ಬಂಧಿಸಲಾಗಿದೆ. ಸಿಲಿಕಾನ್‌ ಸಿಟಿಯಲ್ಲಿ ಬೆಂಗಳೂರಿಲ್ಲಿ ಪಾರ್ಕಿಂಗ್‌ ಇಲ್ಲದೇ ಅದೇಷ್ಟು ಜನರು ಮನೆ ಮುಂದೆ ಬೈಕ್‌ ನ್ನು ನಿಲ್ಲಿಸುತ್ತಾರೆ. ಇದನ್ನೆ ಬಂಡಾವಳವನ್ನಾಗಿ ಮಾಡಿಕೊಂಡು ರಾತ್ರೋರಾತ್ರಿ ಕಳ್ಳತನ ಮಾಡಿ ಮಾರಾಟ ಮಾಡುವ ಹೊಸ ದಂಧೆಯನ್ನ ಶುರು ಮಾಡಿದ್ದನು.

ʼಬೈಕ್ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಖದೀಮ ಅರೆಸ್ಟ್‌ʼ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ಯಾದಗಿರಿ ಮಗನ ಸಾವಿನ ಸುದ್ದಿ ಕೇಳಿ ಸಾವಿಗೆ ಶರಣಾದ ತಂದೆ

(ನ್ಯೂಸ್ ಕಡಬ) newskadaba.com.ಯಾದಗಿರಿ, ಮಾ 4.   ಮಗನ ಸಾವಿನ ಸುದ್ದಿ ಕೇಳಿ ತಂದೆ ಬಸವರಾಜ ಬಿರಾದಾರ (55) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದಲ್ಲಿ ನಡೆದಿದೆ.  ಮದ್ದರಕಿ ಗ್ರಾಮದ ಹೊರಭಾಗದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತವಾಗಿತ್ತು. ಇದರಲ್ಲಿ ಬಸವರಾಜ ಅವರ ಮಗ ಶಿವಕುಮಾರ ಬಿರಾದರ ( 34) ಸಾವನ್ನಪ್ಪಿದ್ದರು. ಈ ಘಟನೆಯಿಂದ ತೀವ್ರ ಮನನೊಂದಿದ್ದ ತಂದೆ ಬಸವರಾಜ ಮಗ ಹೋದ ಮೇಲೆ ನಾನು ಇರಲ್ಲ ಎಂದು

➤ ಯಾದಗಿರಿ ಮಗನ ಸಾವಿನ ಸುದ್ದಿ ಕೇಳಿ ಸಾವಿಗೆ ಶರಣಾದ ತಂದೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ಮನೆಗೆ ನುಗ್ಗಿ ಮಹಿಳೆಯ ಹತ್ಯೆಗೆ ಯತ್ನ ➤ ಕೆಲಸಕ್ಕೆ ಬಂದ ಕಾರ್ಮಿಕರಿಂದ ಕೃತ್ಯ

(ನ್ಯೂಸ್ ಕಡಬ)newskadaba.com ಸುಳ್ಯ, ಮಾ.04. ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಮನೆಯಲ್ಲಿದ್ದವರನ್ನು ಹತ್ಯೆಗೈಯಲು ಯತ್ನಿಸಿದ ಘಟನೆ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ ವರದಿಯಾಗಿದೆ. ಕರಿಕ್ಕಳ ವಿಶ್ವನಾಥ ಮತ್ತು ಗಾಯತ್ರಿ ದಂಪತಿ ಮನೆಗೆ ಕೆಲಸಕ್ಕೆ ಬಂದವರು ಆಕ್ರಮಣ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಮನೆಯವರು ಬೊಬ್ಬೆ ಹೊಡೆದ ಪರಿಣಾಮ ಅಕ್ಕಪಕ್ಕದ ಮನೆಯವರು ಬಂದ ಕಾರಣ ಅಪಾಯ ಉಂಟಾಗಲಿಲ್ಲ.    

ಸುಳ್ಯ: ಮನೆಗೆ ನುಗ್ಗಿ ಮಹಿಳೆಯ ಹತ್ಯೆಗೆ ಯತ್ನ ➤ ಕೆಲಸಕ್ಕೆ ಬಂದ ಕಾರ್ಮಿಕರಿಂದ ಕೃತ್ಯ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾರ್ಕಳ: ಅನಾರೋಗ್ಯ ಹಿನ್ನೆಲೆ..! ➤ ಮನೆನೊಂದು ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಕಾರ್ಕಳ, ಮಾ.04. ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ನಿಟ್ಟೆಯಲ್ಲಿ ನಡೆದಿದೆ. ಮೃತರನ್ನು ಶಿರೂರು ಕರಾವಳಿ ನಿವಾಸಿ ಶೀಲಾವತಿ ಶೆಡ್ಡಿ ಎಂಬವರ ಮಗಳು ಸೀಮಾ (22) ಎಂದು ಗುರುತಿಸಲಾಗಿದೆ. ಇವರು ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ನಿಟ್ಟೆ ಕಾಲೇಜಿನ ಹಾಸ್ಟೆಲ್ ನಲ್ಲಿದ್ದರು. ನರ ಹಾಗೂ ಚರ್ಮದ ಸಮಸ್ಯೆಯಿಂದ ಮನನೊಂದು 4-5 ತಿಂಗಳ ಹಿಂದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇದೀಗ ಮತ್ತೆ ಇದೇ ವಿಚಾರದಿಂದ ಮನನೊಂದು

ಕಾರ್ಕಳ: ಅನಾರೋಗ್ಯ ಹಿನ್ನೆಲೆ..! ➤ ಮನೆನೊಂದು ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಪೆಟ್ರೋಲ್‌ ರಿಕ್ಷಾ ಹಾಗೂ ಇ-ಆಟೋ ಚಾಲಕರ ನಡುವೆ ಗಲಾಟೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.04. ಪೆಟ್ರೋಲ್‌ ಚಾಲಿತ ಆಟೋ ರಿಕ್ಷಾ ಚಾಲಕರು ಹಾಗೂ ಇ-ಆಟೋ ಚಾಲಕರ ನಡುವೆ ಪಾರ್ಕಿಂಗ್‌ ವಿಚಾರಕ್ಕೆ ಗಲಾಟೆ ನಡೆದ ಘಟನೆ ನಗರದಲ್ಲಿ ನಡೆದಿದೆ. ನಂತರ ಹಿರಿಯ ಪೊಲೀಸ್‌ ಅಧಿಕಾರಿಗಳು ಇತ್ತಂಡಗಳ ಪ್ರಮುಖರನ್ನು ಕರೆದು ರಾಜಿ ಸಂಧಾನ ನಡೆಸಿ ಗೊಂದಲ ಬಗೆಹರಿಸಿದ್ದಾರೆಂದು ತಿಳಿದುಬಂದಿದೆ. ಅಲ್ಲದೇ ಇನ್ನೊಂದು ವಾರದೊಳಗೆ ಇ-ಆಟೋಗಳಿಗೆ ವಲಯ ಸಂಖ್ಯೆ ನಮೂದಿಸುವ ಪ್ರಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.  

ಪೆಟ್ರೋಲ್‌ ರಿಕ್ಷಾ ಹಾಗೂ ಇ-ಆಟೋ ಚಾಲಕರ ನಡುವೆ ಗಲಾಟೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ಯುವಕನಿಗೆ ಚೂರಿಯಿಂದ ಇರಿದು ಕೊಲೆ ಯತ್ನ ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಉಳ್ಳಾಲ, ಮಾ.04. ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಪುರ ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಕೋಟೆಪುರ ನಿವಾಸಿ ಸದಕತ್ತುಲ್ಲಾ (34) ಮೇಲೆ ಚೂರಿಯಿಂದ ಇರಿಯಲಾಗಿದೆ.ತಕ್ಷಣ ಅವರನ್ನು ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದಕತ್ತುಲ್ಲಾ ಮನೆಯಲ್ಲಿದ್ದ ಸಂದರ್ಭ ಎದುರುಗಡೆ ಕರೆಸಿ ಚೂರಿಯಿಂದ ಹೊಟ್ಟೆ ಭಾಗಕ್ಕೆ ಇರಿಯಲಾಗಿದೆ ಎನ್ನಲಾಗಿದೆ. ತಕ್ಷಣ ಮನೆಮಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.    

ಉಳ್ಳಾಲ: ಯುವಕನಿಗೆ ಚೂರಿಯಿಂದ ಇರಿದು ಕೊಲೆ ಯತ್ನ ➤ ಆಸ್ಪತ್ರೆಗೆ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

➤ ಕಡಬ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com. ಕಡಬ, ಮಾ 3. ಕೋಡಿಂಬಾಳ ಗ್ರಾಮದ ಕಜೆಮೂಲೆ ನಿವಾಸಿ ಮಹಮ್ಮದ್ ಆತ್ಮಹತ್ಯೆಗೆ ಶರಣಾದವರು. ಕೋಡಿಂಬಾಳದ  ಕಾರ್ಖಾನೆ ಎಂಬಲ್ಲಿ  ಮಾವಿನ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಸುಮಾರು 06 ವರ್ಷಗಳಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು, ಯಾವುದೇ ಕೆಲಸ ಮಾಡಲು ಆಗದೆ ಇದ್ದುದರಿಂದ ಮಾನಸಿಕವಾಗಿ ನೊಂದಿದ್ದು, ಅದೇ ವಿಚಾರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು  ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

➤ ಕಡಬ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top