ಕ್ರೈಮ್ ನ್ಯೂಸ್

Crime

ಮಾನಸಿಕ ಅಸ್ವಸ್ಥನ ಕೈಗೆ ಸಿಕ್ಕ ಚೂರಿ..!    ➤  ನಾಲ್ವರು ಮೃತ್ಯು, ಇನ್ನೋರ್ವ ಗಂಭೀರ…!

(ನ್ಯೂಸ್ ಕಡಬ)newskadaba.com ಮುಂಬೈ, ಮಾ.25. ದಕ್ಷಿಣ ಮುಂಬೈನ ವಸತಿ ಕಟ್ಟಡವೊಂದರಲ್ಲಿ 54 ವರ್ಷದ ಮಾನಸಿಕ ಅಸ್ವಸ್ಥನೋರ್ವ ನಾಲ್ವರು ನೆರೆಹೊರೆಯವರನ್ನು ಇರಿದು ಕೊಂದಿದ್ದಾರೆ ಮತ್ತು ಇನ್ನೋರ್ವನಿಗೆ ಗಾಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಂಟ್ ರಸ್ತೆಯಲ್ಲಿರುವ ಪಾರ್ವತಿ ಮ್ಯಾನ್ಷನ್‌ನಲ್ಲಿ ಮಧ್ಯಾಹ್ನ 3.30 ರ ಸುಮಾರಿಗೆ ಈ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವ್ಯಕ್ತಿಯ ಪತ್ನಿ ಮತ್ತು ಮಕ್ಕಳನ್ನು ಎರಡು ತಿಂಗಳ ಹಿಂದೆ ಅವರನ್ನು ತೊರೆದಿದ್ದರು. ಅಂದಿನಿಂದ ಮಾನಸಿಕವಾಗಿ ನೊಂದಿದ್ದ ಈತ ಶುಕ್ರವಾರ ಅಕ್ಕಪಕ್ಕದವರನ್ನು […]

ಮಾನಸಿಕ ಅಸ್ವಸ್ಥನ ಕೈಗೆ ಸಿಕ್ಕ ಚೂರಿ..!    ➤  ನಾಲ್ವರು ಮೃತ್ಯು, ಇನ್ನೋರ್ವ ಗಂಭೀರ…! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದನದ ಕುತ್ತಿಗೆ ಕಡಿದು ತುಂಗಾ ನದಿಗೆ ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು !

(ನ್ಯೂಸ್ ಕಡಬ)newskadaba.com ತೀರ್ಥಹಳ್ಳಿ, ಮಾ.24. ದನದ ಕುತ್ತಿಗೆ ಕಡಿದು ತಲೆಯ ಭಾಗವನ್ನು ತುಂಗಾ ನದಿಗೆ ದುಷ್ಕರ್ಮಿಗಳು ಎಸೆದಿರುವ ಘಟನೆ ವರದಿಯಾಗಿದೆ. ಸ್ಥಳೀಯರು ಸ್ನಾನ ಮಾಡಲು ತುಂಗಾ ನದಿಯ ಹೊಳೆಗೆ ಇಳಿದಾಗ ಘಟನೆ ಬೆಳಕಿಗೆ ಬಂದಿದೆ. ತುಂಗಾನದಿಯಲ್ಲಿ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದಾದ ಚಕ್ರತೀರ್ಥದಲ್ಲಿ ಈ ಅಮಾನವೀಯ ಘಟನೆ ಜರುಗಿದೆ. ಶಂಖತೀರ್ಥ, ಚಕ್ರತೀರ್ಥ, ಗದಾತೀರ್ಥ, ಪದ್ಮತೀರ್ಥ ಎಂಬ ಪವಿತ್ರ ತೀರ್ಥಗಳ ಸಮಾಗಮ ಆಗುವ ತುಂಗಾ ನದಿಯ ರಾಮೇಶ್ವರ ದೇವಸ್ಥಾನದ ಹಿಂಭಾಗದ ಸ್ಥಳಗಳಲ್ಲಿ ಈ ಘಟನೆ ನೆಡೆದಿದ್ದು ದನದ ರುಂಡವನ್ನು

ದನದ ಕುತ್ತಿಗೆ ಕಡಿದು ತುಂಗಾ ನದಿಗೆ ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಆತನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ     ➤ ದೂರು ದಾಖಲು…..! 

(ನ್ಯೂಸ್ ಕಡಬ)newskadaba.com ಮಹಾರಾಷ್ಟ್ರ, ಮಾ.24. ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಆತನ ಎದುರೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 22-24 ವರ್ಷದ ಇಬ್ಬರು ಯುವಕರು ಆಕೆಯ ಗೆಳೆಯನನ್ನು ಮರಕ್ಕೆ ಕಟ್ಟಿಹಾಕಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಒಂದು ದಿನದ ನಂತರ ಅವರನ್ನು ಬಂಧಿಸಿ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಮಾರ್ಚ್ 27 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಆತನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ     ➤ ದೂರು ದಾಖಲು…..!  Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಯುಗಾದಿ ಹಬ್ಬಕ್ಕೆ ಅತ್ತೆ ಮನೆಗೆ ಬಂದಿದ್ದ ವ್ಯಕ್ತಿಯ ಬರ್ಬರ ಹತ್ಯೆ

(ನ್ಯೂಸ್ ಕಡಬ)newskadaba.com ಹಾವೇರಿ, ಮಾ.24. ಯುಗಾದಿ ಹಬ್ಬದ ಆಚರಣೆಗೆಂದು ದಾವಣಗೆರೆಯಲ್ಲಿರುವ ತನ್ನ ಅತ್ತೆ ಮನೆಗೆ ಬಂದಿದ್ದ ಹಾನಗಲ್ ಮೂಲದ ವಿವಾಹಿತ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದ ಮಹಾಂತೇಶ್ ಪುಟ್ಟಪ್ಪ ಚೌರದ ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಈತನ ಕಣ್ಣಿಗೆ ಖಾರದ ಪುಡಿ ಎರಚಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ.  

ಯುಗಾದಿ ಹಬ್ಬಕ್ಕೆ ಅತ್ತೆ ಮನೆಗೆ ಬಂದಿದ್ದ ವ್ಯಕ್ತಿಯ ಬರ್ಬರ ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹೋಟೆಲ್ ವೊಂದರ ರೂಮ್‌ ನಲ್ಲಿ ಇಬ್ಬರ ಶವ ಪತ್ತೆ !

(ನ್ಯೂಸ್ ಕಡಬ)newskadaba.com ವಿಜಯಪುರ, ಮಾ.24. ವಿಜಯಪುರದ ಹೋಟೆಲ್ ರೂಮ್‌ ನಲ್ಲಿ ಇಬ್ಬರ ಶವಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಬಳ್ಳಾರಿ ಮೂಲದ ಸಿ.ಇಂದ್ರಕುಮಾರ ಹಾಗೂ ಮತ್ತೋರ್ವನ ಶವಗಳು ರಕ್ತದ ಮಡುವಿನಲ್ಲಿ ದೊರೆತಿದ್ದು, ಸಾಕಷ್ಟು ಅನುಮಾನ ಮೂಡಿಸಿದೆ ಎಂದು ವರದಿ ತಿಳಿಸಿದೆ.

ಹೋಟೆಲ್ ವೊಂದರ ರೂಮ್‌ ನಲ್ಲಿ ಇಬ್ಬರ ಶವ ಪತ್ತೆ ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮೆಜೆಸ್ಟಿಕ್‌ನಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ      ➤ ಓರ್ವ ಮೃತ್ಯು- ಇಬ್ಬರ ಸ್ಥಿತಿ ಗಂಭೀರ     

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.24. ಮಾದಕ ವ್ಯಸನಿಯೊಬ್ಬ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಹಾಗೂ ಸುಮ್ಮನೆ ಕುಳಿತುಕೊಂಡಿದ್ದವರಿಗೆ ಚಾಕುವಿನಿಂದ ಇರಿದು ವಿಕೃತಿ ಮೆರೆದಿರುವ ಘಟನೆ ಸರಣಿ ರಾಜ್ಯ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ಗಣಪತಿ ದೇವಸ್ಥಾನ ಬಳಿ ನಡೆದಿದೆ. ಸುಮ್ಮನೆ ಕುಳಿತವರಿಗೆ ಚಾಕು ಇರಿತದ ಘಟನೆಯಿಂದ ಪ್ರಯಾಣಿಕರು ಹಾಗೂ ಇತರೆ ಸಾರ್ವಜನಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಗಾಂಜಾ ಸೇವನೆಯ ಮತ್ತಿನಲ್ಲಿ ಇದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ (ಸೈಕೋ) ನಡೆದುಕೊಂಡಿದ್ದಾನೆ. ಗಣಪತಿ ದೇವಸ್ಥಾನದ ಬಳಿ ಊರಿಗೆ ಹೋಗಬೇಕೆಮದು

ಮೆಜೆಸ್ಟಿಕ್‌ನಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ      ➤ ಓರ್ವ ಮೃತ್ಯು- ಇಬ್ಬರ ಸ್ಥಿತಿ ಗಂಭೀರ      Read More »

ಕರ್ನಾಟಕ, ಕ್ರೈಮ್ ನ್ಯೂಸ್

ನವಜಾತ ಶಿಶುವನ್ನು 4.5 ಲಕ್ಷಕ್ಕೆ ಮಾರಾಟ ಮಾಡಿದ ತಾಯಿ ➤ 11 ಮಂದಿ ಬಂಧನ

(ನ್ಯೂಸ್ ಕಡಬ)newskadaba.com ಮಾ.24. ಹೆರಿಗೆಯಾದ ತಕ್ಷಣ ಗಂಡು ಶಿಶುವನ್ನು ತಾಯಿಯೇ 4.5 ಲಕ್ಷಕ್ಕೆ ಮಾರಾಟ ಮಾಡಿರುವ ಘಟನೆ ಜಾರ್ಖಂಡ್ನವ ಛತ್ರಾ ಜಿಲ್ಲೆಯಲ್ಲಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ನವಜಾತ ಶಿಶುವಿನ ತಾಯಿ ಆಶಾದೇವಿ ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ. ಛತ್ರ ಜಿಲ್ಲೆಯ ಮಕ್ಕಳ ಕಲ್ಯಾಣ ಇಲಾಖೆಯ ಉಪ ಆಯುಕ್ತ ಅಬು ಇಮ್ರಾನ್ ಮಾಹಿತಿ ನೀಡಿದ ಕೂಡಲೇ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು 24 ಗಂಟೆಗಳಲ್ಲಿ ಬೊಕಾರೊ ಜಿಲ್ಲೆಯಿಂದ ನವಜಾತ ಶಿಶುವನ್ನು

ನವಜಾತ ಶಿಶುವನ್ನು 4.5 ಲಕ್ಷಕ್ಕೆ ಮಾರಾಟ ಮಾಡಿದ ತಾಯಿ ➤ 11 ಮಂದಿ ಬಂಧನ Read More »

ಕ್ರೈಮ್ ನ್ಯೂಸ್

ವಿಮಾನದಲ್ಲಿ ಮದ್ಯ ಸೇವಿಸಿ ಗಲಾಟೆ ➤ ಇಬ್ಬರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ) newskadaba.com ಮುಂಬೈ, ಮಾ. 24. ದುಬೈ-ಮುಂಬೈ ಇಂಡಿಗೋ ಏರ್‌ಲೈನ್ಸ್’ನಲ್ಲಿ ಮದ್ಯ ಸೇವಿಸಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪ್ರಯಾಣಿಕರನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಈ ಇಬ್ಬರು ಪ್ರಯಾಣಿಕರು ವಿಮಾನ ಹಾರಾಟದಲ್ಲಿದ್ದ ವೇಳೆ ಗಲಾಟೆ ಸೃಷ್ಟಿಸಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರಿಗೂ ಕಿರಿಕಿರಿಯುಂಟು ಮಾಡಿದ್ದರು. ಏರ್ ಲೈನ್ ಸಿಬ್ಬಂದಿಯ ದೂರಿನ ಮೇರೆಗೆ ಎಫ್’ಐಆರ್ ದಾಖಲಿಸಿ ಪಾಲ್ಘರ್ ಜಿಲ್ಲೆಯ ಜಾನ್ ಜಿ ಡಿಸೋಜಾ (49) ಮತ್ತು ಕೊಲ್ಲಾಪುರದ ಮಾನ್ಬೆಟ್ನ ದತ್ತಾತ್ರೇಯ ಬಾಪರ್ಡೇಕರ್ (47) ಎಂಬವರನ್ನು

ವಿಮಾನದಲ್ಲಿ ಮದ್ಯ ಸೇವಿಸಿ ಗಲಾಟೆ ➤ ಇಬ್ಬರು ಆರೋಪಿಗಳು ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೋರ್ಟ್ ಆವರಣದಲ್ಲೇ ಪತ್ನಿ ಮುಖಕ್ಕೆ ಆ್ಯಸಿಡ್ ಎರಚಿದ ಭೂಪ

(ನ್ಯೂಸ್ ಕಡಬ) newskadaba.com ತಮಿಳುನಾಡು, ಮಾ. 24. ಕೋರ್ಟ್ ಆವರಣದಲ್ಲೇ ಪತ್ನಿಯ ಮುಖದ ಮೇಲೆ ಪತಿಯೊಬ್ಬ ಆ್ಯಸಿಡ್ ಎಸೆದಿರುವ ಘಟನೆ ತಮಿಳುನಾಡಿನ ಕೊಯಮತ್ತೂರುನಲ್ಲಿ ನಡೆದಿದೆ. ಇಲ್ಲಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಆ್ಯಸಿಡ್ ಎರಚಿದ್ದು, ಆಕೆ ಮತ್ತು ಇತರ ಇಬ್ಬರು ಗಾಯಗೊಂಡಿದ್ದಾರೆ. ಪ್ರಕರಣವೊಂದರ ವಿಚಾರಣೆಗೆ ಸಂಬಂಧಿಸಿದಂತೆ ಕವಿತಾ ಇಂದು ನ್ಯಾಯಾಲಯಕ್ಕೆ ಆಗಮಿಸಿದ್ದ ವೇಳೆ ಪತಿ ಶಿವಕುಮಾರ್ ಆಸಿಡ್ ಎರಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  

ಕೋರ್ಟ್ ಆವರಣದಲ್ಲೇ ಪತ್ನಿ ಮುಖಕ್ಕೆ ಆ್ಯಸಿಡ್ ಎರಚಿದ ಭೂಪ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಬ್ರಹ್ಮಣ್ಯ: ನೇಣುಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ. 24. ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯದ ಕಾಶಿ ಕಟ್ಟೆಯ ಸಮೀಪ ನಡೆದಿದೆ.   ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಕ್ಕಡದ ನಿವಾಸಿ ಸುಜಿತ್ ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ಲಾಂಡ್ರಿ ಕೆಲಸ ನಡೆಸುತ್ತಿದ್ದ ಈತ, ಪರ್ವತಮುಖಿ ಬಳಿ ಇರುವ ತಮ್ಮ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಬ್ರಹ್ಮಣ್ಯ: ನೇಣುಬಿಗಿದು ಯುವಕ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top