ಅಕ್ರಮ ಚಟುವಟಿಕೆಗಳ ತಾಣವಾಯ್ತು ಬೆಂಗಳೂರಿನ ಹೃದಯ ಭಾಗದ ಸ್ಕೈವಾಕ್ ➤ ಕಾಂಡೋಮ್ ಸೇರಿದಂತೆ ತರಹೇವಾರಿ ತ್ಯಾಜ್ಯ ಪತ್ತೆ
(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.29. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತೆ ಅಂತ ಹೇಳುವುದು ಕಷ್ಟ. ಏಕೆಂದರೆ ಪುಂಡರು ಎಲ್ಲಿ ಬೇಕಿದ್ದರೂ ಮೋಜು ಮಸ್ತಿ ಮಾಡುತ್ತಾರೆ. ಸರ್ಕಾರಿ ಶಾಲೆ ಆದರೂ ಆಗಬಹುದು, ಆಟದ ಮೈದಾನ ಆದರೂ ಸರಿಯೇ. ಆದರೆ ಇದೀಗ ಜನ ಓಡಾಡುವ ಸ್ಕೈವಾಕ್ ಕೂಡ ಪುಂಡರ ತಾಣ ಆಗಿದೆ. ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಣಣೆಯಲ್ಲಿ ರಸ್ತೆದಾಟುವುದು ಅಷ್ಟು ಸುಲಭದ ಮಾತಲ್ಲ. ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗಬೇಕು ಎಂದರೆ ಮೇಲ್ಸೇತುವೆಗಳು ಅನಿವಾರ್ಯ. […]




