ಕ್ರೈಮ್ ನ್ಯೂಸ್

ಸುಳ್ಯದ ಯುವಕ ಬೆಂಗಳೂರಿನಲ್ಲಿ ಮಹಡಿಯಿಂದ ಬಿದ್ದು ಮೃತ್ಯು!

(ನ್ಯೂಸ್ ಕಡಬ) newskadaba.com. ಮಂಗಳೂರು, ಏ.19. ಸುಳ್ಯದ ಯುವಕ ಬೆಂಗಳೂರಿನಲ್ಲಿ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಸುಳ್ಯ ತಾಲೂಕಿನ ಕಳಂಜ ಗ್ರಾಮದ ಮಣಿಮಜಲು ನಿವಾಸಿ ಯತೀಶ ಮೃತ ಯುವಕ. ಇವರು ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದು ಎ. 13 ರಂದು ರಾತ್ರಿ ತಾನಿದ್ದ ರೂಮ್ ನ ಬಳಿ ಮಹಡಿಯಿಂದ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸುಳ್ಯದ ಯುವಕ ಬೆಂಗಳೂರಿನಲ್ಲಿ ಮಹಡಿಯಿಂದ ಬಿದ್ದು ಮೃತ್ಯು! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳುರು ನೆಹರೂ ಮೈದಾನದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ.!!

(ನ್ಯೂಸ್ ಕಡಬ) newskadaba.com. ಮಂಗಳೂರು, ಏ.17. ನಗರದ ಸ್ಟೇಟ್‌ಬ್ಯಾಂಕ್‌ ಬಳಿಯ ನೆಹರು ಮೈದಾನದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಜನಾರ್ದನ್‌ ಎಂದು ಗುರುತಿಸಲಾಗಿದೆ. ಜನಾರ್ದನ್‌ ಪೊಳಲಿ ಮೂಲದವರಾಗಿದ್ದು ಡ್ರೈವರ್‌ ವೃತ್ತಿ ನಿರ್ವಹಿಸುತ್ತಿದ್ದರು. ಇವರು ಬಿಜೆಪಿ ಕಾರ್ಯಕರ್ತರಾಗಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ.  ಮೃತದೇಹದಲ್ಲಿ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಜನಾರ್ದನ ಅವರ ಜತೆ ನಾಲ್ವರು ಜಗಳವಾಡಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

ಮಂಗಳುರು ನೆಹರೂ ಮೈದಾನದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ.!! Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಹೊಟೇಲ್ ಗೆ ಕನ್ನ ಹಾಕಿದ ಖದೀಮರು ➤ ನಗದು ದೋಚಿ ಪರಾರಿ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.19. ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆ ಮಧ್ಯೆ ಬಿಸಿರೋಡಿನ ಹೃದಯ ಭಾಗದಲ್ಲಿರುವ ಪ್ರಸಿದ್ಧ ಹೊಟೇಲ್ ಒಂದಕ್ಕೆ ಕಳ್ಳರು ನುಗ್ಗಿ, ಸಾವಿರಾರು ನಗದು ದೋಚಿದ ಬಂದಿದೆ. ಬಿಸಿರೋಡಿನ ಕಿಶೋರ್ ಎಂಬವರ ಮಾಲಕತ್ವದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ಕೃಷ್ಣ ವಿಲಾಸ ಹೋಟೆಲ್’ನಿಂದ ಕಳವು ಮಾಡಲಾಗಿದೆ. ಹೊಟೇಲ್ ನ ಬೀಗವನ್ನು ಮುರಿದು ಶಟರ್ ತೆಗದು ಒಳನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್’ನಲ್ಲಿದ್ದ ಸುಮಾರು 30 ಸಾವಿರಕ್ಕಿಂತಲೂ ಅಧಿಕ ನಗದನ್ನು ದೋಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಬಂಟ್ವಾಳ: ಹೊಟೇಲ್ ಗೆ ಕನ್ನ ಹಾಕಿದ ಖದೀಮರು ➤ ನಗದು ದೋಚಿ ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ತೂಫಾನ್ ಹಾಗೂ ಆಲ್ಟೋ ಕಾರಿನ ನಡುವೆ ಅಪಘಾತ ➤ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಕಡಬ, ಎ. 18. ತೂಫಾನ್ ಹಾಗೂ ಆಲ್ಟೋ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕಡಬ: ತೂಫಾನ್ ಹಾಗೂ ಆಲ್ಟೋ ಕಾರಿನ ನಡುವೆ ಅಪಘಾತ ➤ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ತೂಫಾನ್ ಹಾಗೂ ಆಲ್ಟೋ ಕಾರಿನ ನಡುವೆ ಭೀಕರ ಅಪಘಾತ ➤ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಎ. 18. ತೂಫಾನ್ ಹಾಗೂ ಆಲ್ಟೋ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನೆಟ್ಟಣದಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಕಡಬ: ತೂಫಾನ್ ಹಾಗೂ ಆಲ್ಟೋ ಕಾರಿನ ನಡುವೆ ಭೀಕರ ಅಪಘಾತ ➤ ಇಬ್ಬರು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಪಡುಬಿದ್ರಿ: ಅನಾರೋಗ್ಯದಿಂದ ಒಂದೇ ದಿನ ತಂದೆ ಮತ್ತು ಮಗ ಮೃತ್ಯು

(ನ್ಯೂಸ್ ಕಡಬ)newskadaba.com ಪಡುಬಿದ್ರಿ, ಏ.18. ಒಂದೇ ದಿನ ಒಂದೇ‌ ಮನೆಯಲ್ಲಿ ತಂದೆ ಮತ್ತು ಮಗ ಮೃತಪಟ್ಟ ಘಟನೆ ನಡೆದಿದೆ. ಪಡುಬಿದ್ರಿ ಕಂಚಿನಡ್ಕದ ಸಂಜೀವ(72) ಹಾಗೂ ಅವರ ಪುತ್ರ ಉದಯ (45) ಒಂದೇ ದಿನ ಮೃತಪಟ್ಟ ಅಪರೂಪದ ಘಟನೆ ನಡೆದಿದೆ ಎನ್ನಲಾಗಿದೆ.

ಪಡುಬಿದ್ರಿ: ಅನಾರೋಗ್ಯದಿಂದ ಒಂದೇ ದಿನ ತಂದೆ ಮತ್ತು ಮಗ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ನಾಪತ್ತೆಯಾಗಿದ್ದ ವ್ಯಕ್ತಿ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ!

(ನ್ಯೂಸ್ ಕಡಬ) newskadaba.com. ಬಂಟ್ವಾಳ, ಏ.17. ನಾಪತ್ತೆಯಾಗಿದ್ದ ವ್ಯಕ್ತಿ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಸಜೀಪ ಮುನ್ನೂರು ಗ್ರಾಮದ ಕೌಳಿಗೆ ನಿವಾಸಿ ಪರಮೇಶ್ವರ(75) ಎಂಬವರು ಮೃತಪಟ್ಟ ವ್ಯಕ್ತಿ. ಮನೆಯಲ್ಲಿದ್ದ ಉಡುಗೆಯಲ್ಲಿ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆಯ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರು ಎ.14 ರಂದು ರಾತ್ರಿ ವೇಳೆ ಕೈಯಲ್ಲಿ ಟಾರ್ಚ್ ಹಿಡಿದು ಕೊಂಡು ಮನೆಯಿಂದ ಹೊರಗೆ ಹೋದವರು ಮನೆಗೆ ಬರದೆ ನಾಪತ್ತೆಯಾಗಿದ್ದಾರೆ ಎಂದು ಇವರ ಮಗ ಶಿವಾನಂದ ದೂರು ನೀಡಿದ್ದರು. 

ಬಂಟ್ವಾಳ: ನಾಪತ್ತೆಯಾಗಿದ್ದ ವ್ಯಕ್ತಿ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ! Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಸರಗೋಡು: ಬೀದಿ ದೀಪ ದುರಸ್ಥಿ ವೇಳೆ ವಿದ್ಯುತ್ ತಂತಿ ಸ್ಪರ್ಶ- ಕಾರ್ಮಿಕ ಮೃತ್ಯು..!

(ನ್ಯೂಸ್ ಕಡಬ) newskadaba.com. ಕಾಸರಗೋಡು, ಏ.17. ಬೀದಿ ದೀಪ ದುರಸ್ಥಿ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಕುಂಬಳೆ ಶಿರಿಯದ ಮುಹಮ್ಮದ್ ಹನೀಫ್(40) ಮೃತಪಟ್ಟವರು. ವಿದ್ಯುತ್ ಕಂಬಕ್ಕೆ ಹತ್ತಿ ದುರಸ್ತಿಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ಪರಿಸರ ವಾಸಿಗಳು ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು. ಪ್ರಕರಣದ ಕುರಿತಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು: ಬೀದಿ ದೀಪ ದುರಸ್ಥಿ ವೇಳೆ ವಿದ್ಯುತ್ ತಂತಿ ಸ್ಪರ್ಶ- ಕಾರ್ಮಿಕ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಟೈರ್ ಸ್ಫೋಟಗೊಂಡು ಕಾರು ಅಪಘಾತ – ಮಾಜಿ ಶಾಸಕಿ ನೀರಜಾ ರೆಡ್ಡಿ ಮೃತ್ಯು..!

(ನ್ಯೂಸ್ ಕಡಬ) newskadaba.com. ತೆಲಂಗಾಣ, ಏ.17. ಕಾರು ಅಪಘಾತಗೊಂಡ ಪರಿಣಾಮ  ಬಿಜೆಪಿ ಉಸ್ತುವಾರಿ ಹಾಗೂ ಮಾಜಿ ಶಾಸಕಿ ನೀರಜಾ ರೆಡ್ಡಿ ನಿಧನರಾಗಿರುವ ಘಟನೆ ತೆಲಂಗಾಣದ ಬೀಚುಪಲ್ಲಿಯಲ್ಲಿ ನಡೆದಿದೆ. ಹೈದರಾಬಾದ್‌ನಿಂದ ಕರ್ನೂಲ್‌ಗೆ ಹಿಂತಿರುಗುತ್ತಿದ್ದಾಗ ತೆಲಂಗಾಣದ ಬೀಚುಪಲ್ಲಿ ಎಂಬಲ್ಲಿ ಕಾರಿನ ಟೈರ್ ಸ್ಫೋಟಗೊಂಡು ವಾಹನದ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇನ್ನು ನೀರಜಾರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. 2009ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಲೂರು ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿದ್ದ

ಟೈರ್ ಸ್ಫೋಟಗೊಂಡು ಕಾರು ಅಪಘಾತ – ಮಾಜಿ ಶಾಸಕಿ ನೀರಜಾ ರೆಡ್ಡಿ ಮೃತ್ಯು..! Read More »

ಕ್ರೈಮ್ ನ್ಯೂಸ್

ಮಿಲಿಟರಿ ಸ್ಟೇಷನ್ ಮೇಲೆ ಗುಂಡಿನ ದಾಳಿ ಪ್ರಕರಣ ➤ ಯೋಧನ ಬಂಧನ

(ನ್ಯೂಸ್ ಕಡಬ) newskadaba.com. ಬಟಿಂಡಾ, ಏ.17. ಮಿಲಿಟರಿ ಸ್ಟೇಷನ್ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ, ಸೇನಾ ಗನ್ನರ್ ಘಟಕದ ಮೋಹನ್ ದೇಸಾಯಿ ಎಂಬ ಯೋಧ  ರೈಫಲ್ ಅನ್ನು ಕದ್ದು ತನ್ನ ನಾಲ್ವರು ಸಹೋದ್ಯೋಗಿಗಳನ್ನು ಕೊಂದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಪ್ರಾಥಮಿಕ ತನಿಖೆಗಳ ಪ್ರಕಾರ ಇದು ವೈಯಕ್ತಿಕ ಹಗೆತನದಿಂದ ಈ ಘಟನೆ ನಡೆದಿದೆ ಎಂದು ಸ್ಪಷ್ಟವಾಗಿ ಕಂಡುಬಂದಿದೆ ಎಂದು HQ ಸೌತ್ ವೆಸ್ಟರ್ನ್ ಕಮಾಂಡ್ ತಿಳಿಸಿದ್ದಾರೆ. ಇದೀಗ ಆ ಯೋಧನನ್ನು ಬಂಧನ ಮಾಡಲಾಗಿದೆ ಎಂದು ಹೇಳಲಾಗಿದೆ. ಗುಂಡಿನ ದಾಳಿಗೆ ಸಂಬಂಧಿಸಿದಂತೆ

ಮಿಲಿಟರಿ ಸ್ಟೇಷನ್ ಮೇಲೆ ಗುಂಡಿನ ದಾಳಿ ಪ್ರಕರಣ ➤ ಯೋಧನ ಬಂಧನ Read More »

ಕ್ರೈಮ್ ನ್ಯೂಸ್
Scroll to Top