ಕ್ರೈಮ್ ನ್ಯೂಸ್

ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್ ನಿಂದಲೇ ಲಕ್ಷಾಂತರ ರೂ. ವಂಚನೆ

(ನ್ಯೂಸ್ ಕಡಬ) newskadaba.com ಮುಂಬಯಿ, ಜೂ. 19. ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದ ನಟಿ ರಶ್ಮಿಕಾ ಮಂದಣ್ಣ ಅವರಿಗೆಇದೀಗ ಲಕ್ಷಾಂತರ ರೂಪಾಯಿಯ ವಂಚನೆಯಾಗಿರುವ ಕುರಿತು ವರದಿಯಾಗಿದೆ. ನಟಿ ರಶ್ಮಿಕಾ ಮಂದಣ್ಣ ಅವರ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್‌ ಅವರಿಂದ 80 ಲಕ್ಷ ರೂ. ವಂಚನೆಯಾಗಿದೆ. ಇನ್ನು ಮ್ಯಾನೇಜರ್‌ ಬಹು ಸಮಯದಿಂದ ನಟಿಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದು, ಮ್ಯಾನೇಜರ್‌ 80 ಲಕ್ಷ ರೂ. ವಂಚನೆ ಎಸಗಿದ ಬಗ್ಗೆ ಗೊತ್ತಾದ ಕೂಡಲೇ ನಟಿ ಮ್ಯಾನೇಜರ್‌ ನನ್ನು ವಜಾಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್ ನಿಂದಲೇ ಲಕ್ಷಾಂತರ ರೂ. ವಂಚನೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹಾಡುತ್ತಿರುವಾಗಲೇ ಕುಸಿದುಬಿದ್ದು ಖ್ಯಾತ ರ್ಯಾಪರ್ ಮೃತ್ಯು

(ನ್ಯೂಸ್ ಕಡಬ) newskadaba.com ಟೆಕ್ಸಾಸ್, ಜೂ. 19. ಅಮೇರಿಕಾದ ಖ್ಯಾತ ರಾಪರ್ ಗಾಯಕನೋರ್ವ ಪ್ರದರ್ಶನ ನೀಡುತ್ತಿದ್ದ ಸಂಸರ್ಭ ಕುಸಿದುಬಿದ್ದ ಘಟನೆ ನಡೆದಿದೆ. ಮೃತ ಗಾಯಕನನ್ನು ಪೋಕಿ ಅಕಾ ಮಿಲ್ಟನ್ ಪೊವೆಲ್ (45) ಎಂದು ಗುರುತಿಸಲಾಗಿದೆ. ಇವರು ವೇದಿಕೆಯ ಮೇಲೆ ಬೀಳುವ ಮೊದಲು ರಾಪ್ ಮಾಡುವಾಗ ನಿಯಂತ್ರಣ ಕಳೆದುಕೊಂಡು ಏಕಾಏಕಿ ಕುಸಿದು ಬಿದ್ದು ಪ್ರಜ್ಞಾಹೀನನಾಗುವ ವಿಡೀಯೋ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದ್ಯರಾತ್ರಿ ಕುಸಿದು ಬಿದ್ದರೂ ತಕ್ಷಣ ವೈದ್ಯರು ಬಂದು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದರೂ

ಹಾಡುತ್ತಿರುವಾಗಲೇ ಕುಸಿದುಬಿದ್ದು ಖ್ಯಾತ ರ್ಯಾಪರ್ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಬಸ್ ಸೇತುವೆಗೆ ಡಿಕ್ಕಿ! ➤ 26 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com  ಛತ್ತೀಸ್‌ಗಢ, ಜೂ  . 19  .  ವೇಗವಾಗಿ ಬಂದ ಬಸ್ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ  26 ಜನರು ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಘರ್ಘೋಡಾ ಪ್ರದೇಶದ ಬಳಿ ನಡೆದಿದೆ, ಫೋನ್‌ನಲ್ಲಿ ಮಾತನಾಡಿಕೊಂಡು ವಾಹನ ಚಲಾಯಿಸುವ ಸಂಧರ್ಭದಲ್ಲಿ  ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿ, ಚಾಲಕ ಫೋನಿನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಿದರ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಬಸ್ ಸೇತುವೆಗೆ ಡಿಕ್ಕಿ! ➤ 26 ಮಂದಿಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

2 ಬಸ್ ಗಳ ನಡುವೆ ಮುಖಾಮುಖಿ ಢಿಕ್ಕಿ ➤ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಚೆನ್ನೈ, ಜೂ. 19. ಎರಡು ಖಾಸಗಿ ಬಸ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟು, ಕನಿಷ್ಠ 30 ಮಂದಿ ಗಾಯಗೊಂಡ ಘಟನೆ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತ ಸಂಭವಿಸಿದ ತಕ್ಷಣ ಸಾರ್ವಜನಿಕರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಘಟನೆಗೆ ನಿಖರ ಕಾರಣ ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2 ಬಸ್ ಗಳ ನಡುವೆ ಮುಖಾಮುಖಿ ಢಿಕ್ಕಿ ➤ ಇಬ್ಬರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚೂರಿ ಇರಿದ ಪ್ರಕರಣ ➤ ತಲೆಮರೆಸಿಕೊಂಡಿದ್ದ ಆರೋಪಿ ಕೋರ್ಟ್ ಗೆ ಹಾಜರ್

(ನ್ಯೂಸ್ ಕಡಬ) newskadaba.com  ಮಂಗಳೂರು, ಜೂ. 19 . ಯುವಕನಿಗೆ ಚೂರಿಯಿಂದ ಇರಿದಿರುವ ಘಟನೆ ಸುರತ್ಕಲ್ ಜನತಾ ಕಾಲನಿಯಲ್ಲಿ ಗುರುವಾರ ರಾತ್ರಿ ನಡೆದಿದ್ದು, ಇದೀಗ ಆರೋಪಿ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿರುವ  ಮೂಲಕ ಬಿಡುಗಡೆಯಾಗಿದ್ದಾನೆ. ಕಾನ ನಿವಾಸಿ ಮುಹಮ್ಮದ್ ಶಾಫಿ(35) ಚೂರಿ ಇರಿತಕ್ಕೊಳಗಾದವರು. ಅದೇ ಪರಿಸರದ ಯುವಕ ತ್ವಾಹಿರ್ (24) ಚೂರಿಯಿಂದ ಇರಿದು ಪರಾರಿಯಾಗಿದ್ದ.ಇದೀಗ ಆರೋಪಿಗೆ ಮಂಗಳೂರಿನ ಎರಡನೇ J M F C ಆರೋಪಿಗೆ ಷರತ್ತು ಬದ್ಧ ಜಾಮೀನನ್ನು ಜೂ.17ರಂದು ನೀಡಿದೆ. ಆರೋಪಿ ಪರ ವಕೀಲರಾದ ಜೀಶಾನ್

ಚೂರಿ ಇರಿದ ಪ್ರಕರಣ ➤ ತಲೆಮರೆಸಿಕೊಂಡಿದ್ದ ಆರೋಪಿ ಕೋರ್ಟ್ ಗೆ ಹಾಜರ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನದಿಗೆ ಈಜಲು ಇಳಿದಿದ್ದ ಇಬ್ಬರು ಉಪನ್ಯಾಸಕರು ನೀರಿನಲ್ಲಿ ಮುಳುಗಿ ಮೃತ್ಯು

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಜೂ. 19. ತುಂಗಾ ನದಿಗೆಈಜಲು ತೆರೆಳಿದ್ದ ನಿಟ್ಟೆ ಕಾಲೇಜಿನ ಇಬ್ಬರು ಉಪನ್ಯಾಸಕರು ನೀರುಪಾಲಾಗಿರುವ ಘಟನೆ ತೀರ್ಥಹಳ್ಳಿಯ ತೀರ್ಥಮತ್ತೂರು ಗ್ರಾಮದಲ್ಲಿ ನಡೆದಿದೆ. ಮೃತ ಪನ್ಯಾಸಕರನ್ನು ಪುನೀತ್ (38 ) ಮತ್ತು ಬಾಲಾಜಿ (36 ) ಎಂದು ಗುರುತಿಸಲಾಗಿದೆ. ಉಪನ್ಯಾಸಕರಿಬ್ಬರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದು, ತೀರ್ಥಮತ್ತೂರು ಮಠದ ಬಳಿಯ ಹೋಮ್ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ಇವರು, ಈಜಾಡಲೆಂದು ತುಂಗಾ ನದಿಗೆ ಇಳಿದಿದ್ದರು. ನೀರಿನ ಸೆಳೆತಕ್ಕೆ ಸಿಲುಕಿದ ಇಬ್ಬರು ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ನದಿಗೆ ಈಜಲು ಇಳಿದಿದ್ದ ಇಬ್ಬರು ಉಪನ್ಯಾಸಕರು ನೀರಿನಲ್ಲಿ ಮುಳುಗಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕ್ಷುಲ್ಲಕ ಕಾರಣಕ್ಕೆ ತಂದೆ ಜೊತೆ ಜಗಳ ➤ ನಾಪತ್ತೆಯಾಗಿದ್ದ ಸಹೋದರಿಯರು ಧರ್ಮಸ್ಥಳದಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 19. ಕ್ಷುಲ್ಲಕ ಕಾರಣಕ್ಕೆ ತಂದೆಯೊಡನೆ ಜಗಳವಾಡಿದ ಸಹೋದರಿಯರಿಬ್ಬರು ಮನೆಬಿಟ್ಟು ಹೋದ ಘಟನೆ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 10 ಮತ್ತು 9ನೇ ತರಗತಿ ಓದುತ್ತಿರುವ ಇಬ್ಬರು ಸಹೋದರಿಯರಿಬ್ಬರು ಮೊದಲು ಚಾಕ್ಲೆಟ್ ತಿಂದು ಬಳಿಕ ಅಂಗಡಿಯವನಿಗೆ ಹಣ ಕೊಡಬೇಕು ಎಂದು ತಂದೆ ಬಳಿ ಕೇಳಿದ್ದಾರೆ. ಈ ವೇಳೆ ತಂದೆ, ತಮ್ಮ ಅನುಮತಿಯಿಲ್ಲದೇ ಅಂಗಡಿಗೆ ಹೋಗಿದ್ದಕ್ಕೆ ಮಕ್ಕಳಿಗೆ ಬೈದಿದ್ದಲ್ಲದೇ ನಾನು ಹಣ ಕೊಡಲ್ಲ ಎಂದು ಹೇಳಿದ್ದಾರೆ. ಬಾಲಕಿಯರು ದಿಢೀರ್ ಕಣ್ಮರೆ ಆಗಿದ್ದರಿಂದ ಆತಂಕಗೊಂಡ

ಕ್ಷುಲ್ಲಕ ಕಾರಣಕ್ಕೆ ತಂದೆ ಜೊತೆ ಜಗಳ ➤ ನಾಪತ್ತೆಯಾಗಿದ್ದ ಸಹೋದರಿಯರು ಧರ್ಮಸ್ಥಳದಲ್ಲಿ ಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ಳಾರೆ: ಅಕ್ರಮ ಗೋಸಾಗಾಟ ➤ ಇಬ್ಬರು ಅರೆಸ್ಟ್, ಇಬ್ಬರು ಪರಾರಿ

(ನ್ಯೂಸ್ ಕಡಬ) newskadab.com ಬೆಳ್ಳಾರೆ, ಜೂ.19. ಅಕ್ರಮ ಗೋಸಾಗಾಟ ನಡೆಸುತ್ತಿದ್ದ ವೇಳೆ ವಾಹನವನ್ನು ತಡೆದ ಬೆಳ್ಳಾರೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂರು ಗಂಡು ಕರುಗಳು, ಆಕ್ಟಿವಾ ಸ್ಕೂಟರ್ ಹಾಗೂ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾನುವಾರ ತಡರಾತ್ರಿ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಮೂವಪ್ಪೆ ಎಂಬಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ಪಿಎಸ್ಐ ಸುಹಾಸ್ ಆರ್. ಹಾಗೂ ಸಿಬ್ಬಂದಿಗಳು ಕರ್ತವ್ಯ ದಲ್ಲಿದ್ದ ವೇಳೆ ಪಿಕಪ್ ವಾಹನದಲ್ಲಿ

ಬೆಳ್ಳಾರೆ: ಅಕ್ರಮ ಗೋಸಾಗಾಟ ➤ ಇಬ್ಬರು ಅರೆಸ್ಟ್, ಇಬ್ಬರು ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಭೀಕರ ಅಪಘಾತ! ➤ಓರ್ವ ಮೃತ್ಯು, ಮೂವರು ಗಂಭೀರ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜೂ . 19 . ಬೈಕ್ ಹಾಗೂ ಮೂರು ಕಾರುಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ 8ನೇ ಮೈಲಿ ಜಂಕ್ಷನ್ ಬಳಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಕಾರು ಚಾಲಕ ಪ್ರಕ್ಯಾತ್ ಚಿನ್ನಪ್ಪ (22)ಎಂದು ಗುರುತಿಸಲಾಗಿದೆ.ಕಾರಿನಲ್ಲಿದ್ದ ನಟರಾಜ್, ರಕ್ಷಿತ್, ಬಸವಗೌಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಕುರಿತು ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣೆ ದಾಖಲಾಗಿದೆ.      

ಭೀಕರ ಅಪಘಾತ! ➤ಓರ್ವ ಮೃತ್ಯು, ಮೂವರು ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಲಂಡನ್ ನಲ್ಲಿ ಮತ್ತೋರ್ವ ಯುವಕನ ಹತ್ಯೆ

(ನ್ಯೂಸ್ ಕಡಬ) newskadaba.com ಲಂಡನ್, ಜೂ. 19. ಕೆಲ ದಿನಗಳ ಹಿಂದೆಯಷ್ಟೇ ಹೈದರಾಬಾದ್‌ನ ಯುವತಿಯೊಬ್ಬಳನ್ನು ಚೂರಿಯಲ್ಲಿ ಇರಿದು ಕೊಲೆ ಮಾಡಿರುವ ಘಟನೆ ಲಂಡನ್‌ನಲ್ಲಿ ನಡೆದಿದ್ದು, ಇದೀಗ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಹತ್ಯೆಗೊಳಗಾದವರನ್ನು ಕ್ಯಾಂಬರ್‌ವೆಲ್‌ನ ಸೌತಾಂಪ್ಟನ್ ವೇನಲ್ಲಿ ಭಾರತೀಯ ಮೂಲದ ಅರವಿಂದ್ ಶಶಿಕುಮಾರ್ (38) ಎಂದು ಗುರುತಿಸಲಾಗಿದೆ. ಹತ್ಯೆ ಸಂಬಂಧ ಸಲ್ಮಾನ್ ಸಲೀಂ (25) ಎಂಬಾತನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಕ್ರೊಯ್ಡಾನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜೂ.20 ರವರೆಗೆ ಕಸ್ಟಡಿಗೆ

ಲಂಡನ್ ನಲ್ಲಿ ಮತ್ತೋರ್ವ ಯುವಕನ ಹತ್ಯೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್
Scroll to Top