ಕ್ರೈಮ್ ನ್ಯೂಸ್

ಪುತ್ತೂರು: ಬಸ್ಸಿನಲ್ಲಿ ಮಹಿಳೆಗೆ ಕಿರುಕುಳ ➤ ಆರೋಪಿ ಸೆರೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 24. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿವಾಹಿತ ಮಹಿಳೆಗೆ ಸಹ ಪ್ರಯಾಣಿಕನೋರ್ವ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕೆಮ್ಮಿಂಜೆ ಗ್ರಾಮದ ಸುಬ್ರಹ್ಮಣ್ಯ ಭಟ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲ್ಲೂಕಿನ ಕರೋಪಾಡಿ ಗ್ರಾಮದ ಕನ್ಯಾನ ಕುಕ್ಕಾಜೆ ನಿವಾಸಿ ಮಹಮ್ಮದ್ ಅಶ್ರಫ್ ಅವರ ಪತ್ನಿ ಶಹನಾಝ್, ತನ್ನ ತಾಯಿಯೊಂದಿಗೆ ಉಪ್ಪಳದಿಂದ ಪುತ್ತೂರಿಗೆ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ […]

ಪುತ್ತೂರು: ಬಸ್ಸಿನಲ್ಲಿ ಮಹಿಳೆಗೆ ಕಿರುಕುಳ ➤ ಆರೋಪಿ ಸೆರೆ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಪತಿಯಿಂದ ಹಿಂಸೆ ➤ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 24. ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಕುರಿತು ಗಂಡನ ವಿರುದ್ದ ಪತ್ನಿ ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ನಿವಾಸಿ ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ನ್ಯಾಯಾಲಯ ಆದೇಶಿಸಿದ್ದು, ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೂರುದಾರ ಮಹಿಳೆ 2018ರ ಫೆ. 01ರಂದು ಕಾವೇರಿಕಟ್ಟೆಯ ವ್ಯಕ್ತಿಯೊಂದಿಗೆ ವಿವಾಹವಾಗಿದ್ದು, ಇವರಿಗೆ ಮೂರು ವರ್ಷದ ಮಗು ಕೂಡಾ ಇದೆ. ಆದರೆ ಪತಿ ನಿರಂತರ ಹಿಂಸೆ ನೀಡುತ್ತಿದ್ದಾರೆ. ಹಲವು

ಪುತ್ತೂರು: ಪತಿಯಿಂದ ಹಿಂಸೆ ➤ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ವಿವಾಹಿತ ಮಹಿಳೆ ಮಗುವಿನೊಂದಿಗೆ ನಾಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 24. ಗುರುವಾಯನಕೆರೆಯ ಬಾಡಿಗೆ ಕೊಠಡಿಯೊಂದರಲ್ಲಿ ವಾಸಿಸುತ್ತಿದ್ದ ವಿವಾಹಿತ ಮಹಿಳೆಯೋವರು ತನ್ನ ನಾಲ್ಕು ವರ್ಷದ ಮಗನೊಂದಿಗೆ ನಾಪತ್ತೆಯಾದ ಕುರಿತು ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಪತ್ತೆಯಾದವರನ್ನು ಕಡಬ ತಾಲೂಕಿನ ಬೆಳಂದೂರು ಗ್ರಾಮದ ನಿವಾಸಿ ನವೀನ್ ಕೆ.ಆರ್ ಅವರ ಪತ್ನಿ ಕವನ(25) ಜೂ. 06ರಂದು ರಾತ್ರಿ ಊಟ ಮುಗಿಸಿ ಮಲಗಿದ್ದರು. ಆದರೆ, ಬೆಳಗ್ಗೆ ಪತಿ ಎದ್ದು ನೋಡಿದಾಗ ನಾಲ್ಕು ವರ್ಷದ ಮಗ ಹಾಗೂ ಪತ್ನಿ ನಾಪತ್ತೆಯಾಗಿದ್ದರು. 2022ರಲ್ಲಿಯೂ ಕವನಾ ನಾಪತ್ತೆಯಾಗಿದ್ದು, ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ: ವಿವಾಹಿತ ಮಹಿಳೆ ಮಗುವಿನೊಂದಿಗೆ ನಾಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ಏಕಾಏಕಿ ಹಿಂದಕ್ಕೆ ಚಲಿಸಿದ ಲಾರಿ ➤ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ. 23. ಎರಡು ಕಂಟೈನರ್ ಲಾರಿಗಳ ನಡುವೆ ಸಿಲುಕಿ ಲಾರಿ ಚಾಲಕ ದಾರುಣವಾಗಿ ಮೃತಪಟ್ಟಿರುವ ಘಟನೆ ರಾ.ಹೆ. 66ರ ತಲಪಾಡಿ ಟೋಲ್ ಗೇಟ್ ಸಮೀಪ ಗುರುವಾರ ತಡರಾತ್ರಿ ಸಂಭವಿಸಿದೆ. ಮೃತ ಚಾಲಕನನ್ನು ಹರ್ಯಾಣ ಮೂಲದ ಶಮೀಮ್ (38) ಎಂದು ಗುರುತಿಸಲಾಗಿದೆ. ಒಂದೇ ಸಂಸ್ಥೆಗೆ ಸೇರಿದ , ಸಂಬಂಧಿ ಚಾಲಕರು ಎರಡು ಕಂಟೈನರ್ ಲಾರಿಗಳಲ್ಲಿ ಹರಿಯಾಣದಿಂದ ಕೇರಳ ಕಡೆಗೆ ಸರಕು ಸಾಗಾಟ ಮಾಡುತ್ತಿದ್ದರು. ತಲಪಾಡಿ ಟೋಲ್ ಸಮೀಪ ಚಹಾ ಕುಡಿಯಲೆಂದು ಚಾಲಕ ಶಮೀಮ್

ಉಳ್ಳಾಲ: ಏಕಾಏಕಿ ಹಿಂದಕ್ಕೆ ಚಲಿಸಿದ ಲಾರಿ ➤ ಚಾಲಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಆಲಂಕಾರು: ಬ್ರೈನ್ ಎಮರೇಜ್ ಗೆ ತುತ್ತಾಗಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೇ ಮೃತ್ಯು

(ನ್ಯೂಸ್ ಕಡಬ) newskadaba.com ಆಲಂಕಾರು, ಜೂ. 23. ಬ್ರೈನ್ ಎಮರೇಜ್‌ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆಲಂಕಾರಿನ ರಿಕ್ಷಾ ಚಾಲಕರೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಕುರಿತು ವರದಿಯಾಗಿದೆ. ಮೃತ ರಿಕ್ಷಾ ಚಾಲಕನನ್ನು ಕಡಬ ತಾಲೂಕಿನ ಆಲಂಕಾರು ಗ್ರಾಮದ ನೆಕ್ಕಿಲಾಡಿ ನಿವಾಸಿ ಕಮಲಾಕ್ಷ ಗೌಡ ಎಂದು ಗುರುತಿಸಲಾಗಿದೆ. ಇವರು ಜೂ. 20ರಂದು ಬೆಳಗ್ಗೆ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರ ಸಹೋದರ ತಕ್ಷಣ ಆಲಂಕಾರಿನ ಕ್ಲಿನಿಕ್‌ಗೆ ಕರೆತಂದು ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಅಲ್ಲಿನ ವೈದ್ಯರ ಸಲಹೆಯಂತೆ

ಆಲಂಕಾರು: ಬ್ರೈನ್ ಎಮರೇಜ್ ಗೆ ತುತ್ತಾಗಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ಳಾರೆ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ➤ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ. 23. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಯುವಕನನ್ನು ಬಂಧಿಸಿ ಪೋಕ್ಸೋ ಪ್ರಕರಣದಡಿ ದೂರು ದಾಖಲಿಸಿದ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ. ಬಂಧಿತನನ್ನು ಕಲ್ಮಡ್ಕದ ಕಾಪಡ್ಕ ಚಿದಾನಂದ ಎಂದು ಗುರುತಿಸಲಾಗಿದೆ. ಈತ ಕೊಡಿಯಾಲದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ, ಅತ್ಯಾಚಾರ ಎಸಗಿರುವುದಾಗಿ ಬಾಲಕಿಯ ಮನೆಯವರು ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಳಾರೆ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ➤ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಬೈಕ್- ಲಾರಿ ನಡುವೆ ಢಿಕ್ಕಿ ➤ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಡಿಕೇರಿ, ಜೂ. 23. ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಸವಾರನ ದೇಹ ಎರಡು ತುಂಡಾಗಿ ಮೃತಪಟ್ಟ ಘಟನೆ ಕುಶಾಲನಗರದ ಕುಡ್ಲೂರು ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಹಾಸನ ಜಿಲ್ಲೆಯ ಅರಸೀಕೆರೆಯ ಗಂಗಾಧರ ಎಂದು ಗುರುತಿಸಲಾಗಿದೆ. ಕುಶಾಲನಗರದಲ್ಲಿ ವಿದ್ಯುತ್ ಕಂಬದ ಕೆಲಸ ಮಾಡುತ್ತಿದ್ದ ಈತ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪರಿಣಾಮ ಸವಾರನ ಮೇಲೆ ಲಾರಿ ಹರಿದು, ದೇಹ ಎರಡು ತುಂಡಾಗಿದೆ. ಈ ಕುರಿತು

ಬೈಕ್- ಲಾರಿ ನಡುವೆ ಢಿಕ್ಕಿ ➤ ಬೈಕ್ ಸವಾರ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ತಾಯಿ-ಮಗಳನ್ನು ಹಿಂಬಾಲಿಸಿಕೊಂಡು ಬಂದ ಯುವಕರು ➤ ಓರ್ವ ವಶಕ್ಕೆ..?

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ. 23. ಮಹಿಳೆಯೊಬ್ಬರು ತನ್ನ ಮಗಳ ಜೊತೆ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರಿಬ್ಬರು ಬೆನ್ನಟ್ಟಿಸಿಕೊಂಡು ಬಂದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ನೆಕ್ಕೆಗುಡ್ಡೆ ಎಂಬಲ್ಲಿ ಸಂಭವಿಸಿದೆ. ಗುರುವಾರದಂದು ಸಂಜೆ ಮಹಿಳೆ ತನ್ನ ಮಗಳನ್ನು ಶಾಲೆಯಿಂದ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಕಾರಿನಲ್ಲಿ ಬಂದ ಯುವಕರಿಬ್ಬರು ನೆಕ್ಕೆಗುಡ್ಡೆ ಎಂಬಲ್ಲಿ ಕಾರು ನಿಲ್ಲಿಸಿ, ಮಹಿಳೆ ಮತ್ತು ಮಗಳನ್ನು ಬೆನ್ನಟ್ಟಿಸಿಕೊಂಡು ಬಂದಿದ್ದಾರೆ. ಇದರಿಂದ ಹೆದರಿದ ಮಹಿಳೆ ಅಂಗಡಿಯೊಂದರ ಬಳಿ ರಕ್ಷಣೆ ಪಡೆದಿದ್ದು, ಈ ವೇಳೆ

ತಾಯಿ-ಮಗಳನ್ನು ಹಿಂಬಾಲಿಸಿಕೊಂಡು ಬಂದ ಯುವಕರು ➤ ಓರ್ವ ವಶಕ್ಕೆ..? Read More »

ಕರಾವಳಿ, ಕ್ರೈಮ್ ನ್ಯೂಸ್

ಒಂದೇ ಕುಟುಂಬದ ಮೂವರು ನೇಣಿಗೆ ಶರಣು

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜೂ. 23. ಒಂದೇ ಮನೆಯ ಮೂವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೇಡರಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮಹಾದೇವಪ್ಪ, ಆತನ ಪತ್ನಿ ಸವಿತಾ ಹಾಗೂ ಮಗಳು ಸಿಂಚನಾ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಂದೇ ಕುಟುಂಬದ ಮೂವರು ನೇಣಿಗೆ ಶರಣು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ಗೂಡ್ಸ್ ರೈಲಿನಡಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ. 23. ರೈಲ್ವೇ ಹಳಿಗೆ ತಲೆಕೊಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ನೆಟ್ಟಣದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕಡಬ ತಾಲೂಕಿನ ಐನೆಕಿದು ಗ್ರಾಮದ ಪೈಲಾಜೆ ನಿವಾಸಿ ಧರ್ಮರಾಜ ಮುತ್ಲಾಜೆ (45) ಎಂದು ಗುರುತಿಸಲಾಗಿದೆ. ಎಲಿಮಲೆಯ ರಬ್ಬರ್ ಪ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದ ಅವರು ಕೆಲ ಸಮಯದಿಂದ ಕೆಲಸಕ್ಕೆ ಗೈರು ಹಾಜರಾಗುತ್ತಿದ್ದರು ಎಂದೆನ್ನಲಾಗಿದ್ದು, ಇದೀಗ ಗೂಡ್ಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸುಬ್ರಹ್ಮಣ್ಯ: ಗೂಡ್ಸ್ ರೈಲಿನಡಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top