ಕ್ರೈಮ್ ನ್ಯೂಸ್

ಹೃದಯಾಘಾತ- ನೇಪಾಳ ಪ್ರಧಾನಿಗೆ ಪತ್ನಿವಿಯೋಗ

(ನ್ಯೂಸ್ ಕಡಬ) newskadaba.com ನೇಪಾಳ, ಜು. 12. ನೇಪಾಳದ ಪ್ರಧಾನಿ ಪುಷ್ಪ ಕಮಲ್‌ ದಹಾಲ್‌ ಅವರ ಪತ್ನಿ ಸೀತಾ ದಹಾಲ್‌ (69) ಹೃದಯಾಘಾತದಿಂದ ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸೀತಾ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಕಠ್ಮಂಡುವಿನಲ್ಲಿ ನಾರ್ವಿಕ್ ಇಂಟರ್ನ್ಯಾಷನಲ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೃದಯಾಘಾತ- ನೇಪಾಳ ಪ್ರಧಾನಿಗೆ ಪತ್ನಿವಿಯೋಗ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಹಾಸಿಗೆ ತಯಾರಿಕಾ ಫ್ಯಾಕ್ಟರಿಗೆ ಬೆಂಕಿ- ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು 12. ತಲೆದಿಂಬು ಹಾಗೂ ಹಾಸಿಗೆ ತಯಾರಿಕಾ ಪ್ಯಾಕ್ಟರಿಯೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಸಜೀಪ ಗ್ರಾಮದ ಆಲಾಡಿ ಸಮೀಪದ ಮುಂಡಕೋಡಿನಲ್ಲಿ ನಡೆದಿದೆ. ಸಜಿಪ ನಿವಾಸಿ ಲತೀಫ್ ಎಂಬವರಿಗೆ ಸೇರಿದ ಪ್ಯಾಕ್ಟರಿ ಇದಾಗಿದ್ದು, ಈ ಪ್ಯಾಕ್ಟರಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಮೆಷಿನರಿಗಳು, ತಲೆದಿಂಬು ಹಾಗೂ ಹಾಸಿಗೆಗಳು ಇದ್ದವು ಎಂದೆನ್ನಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಹಾಸಿಗೆ ತಯಾರಿಕಾ ಫ್ಯಾಕ್ಟರಿಗೆ ಬೆಂಕಿ- ಲಕ್ಷಾಂತರ ರೂ. ನಷ್ಟ Read More »

ಕರಾವಳಿ, ಕ್ರೈಮ್ ನ್ಯೂಸ್

ಅಂಗಡಿ ಬೀಗ ಮುರಿದು ಜ್ಯೂಸ್ ಕುಡಿದು ನಗದು ಕದ್ದು ಪರಾರಿಯಾದ ಕಳ್ಳರು..!

(ನ್ಯೂಸ್ ಕಡಬ) newskadaba.com ಸುಳ್ಯ, ಜು. 12. ಎರಡು ಅಂಗಡಿಗಳ ಬೀಗ ಮುರಿದು ಒಳನುಗ್ಗಿದ ಕಳ್ಳರು ಡ್ರಾಯರ್ ನಲ್ಲಿರಿಸಲಾಗಿದ್ದ ನಗದು ದೋಚಿ ಪರಾರಿಯಾದ ಘಟನೆ ಆಲೆಟ್ಟಿ ಗ್ರಾಮದಲ್ಲಿ ನಡೆದಿದೆ. ಆಲೆಟ್ಟಿ ಗ್ರಾಮದ ನಾಗಪಟ್ಟಣ ಬಸ್ ನಿಲ್ದಾಣದ ಬಳಿ ಪಂಚಾಯತ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಪುಷ್ಪರಾಜ್ ಎಂಬವರ ಅಂಗಡಿಯ ಡ್ರಾಯರ್ ನಿಂದ 500 ರೂ. ಹಾಗೂ ಫ್ರಿಡ್ಜ್ ನಲ್ಲಿರಿಸಲಾದ ಜ್ಯೂಸ್ ಕುಡಿದಿದ್ದಾರೆ. ಮಿತ್ತಡ್ಕ ರೋಟರಿ ಶಾಲಾ ಮುಂಭಾಗದಲ್ಲಿನ ಬಸ್ ನಿಲ್ದಾಣದ ಪಂಚಾಯತ್ ಕಟ್ಟಡದಲ್ಲಿರುವ ದಾಮೋದರ ಎಂಬವರ ಅಂಗಡಿಯಿಂದ ಹತ್ತು ಸಾವಿರ

ಅಂಗಡಿ ಬೀಗ ಮುರಿದು ಜ್ಯೂಸ್ ಕುಡಿದು ನಗದು ಕದ್ದು ಪರಾರಿಯಾದ ಕಳ್ಳರು..! Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಡುಪ್ರಾಣಿ ಬೇಟೆ- ಕೋವಿ ಹಾಗೂ ಮಾಂಸ ವಶಕ್ಕೆ; ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಸುಳ್ಯ, ಜು. 12. ಸಂಪಾಜೆ ವಲಯದ ಡಬ್ಬಡ್ಕ ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ನಾಶದಂಚಿನಲ್ಲಿರುವ ಮಲಬಾರ್ ದೈತ್ಯ ಅಳಿಲು ಹಾಗೂ ಹಾರುವ ಅಳಿಲುಗಳನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಂಪಾಜೆ ವಲಯ ಅರಣ್ಯ ಇಲಾಖೆ ಆಧಿಕಾರಿಗಳು ದಾಳಿ ನಡೆಸಿದ ಘಟನೆ ವರದಿಯಾಗಿದೆ.   ವನ್ಯ ಜೀವಿಗಳನ್ನು ಬೇಟೆಯಾಡಿರುವ ಬಗ್ಗೆ ಸಂಪಾಜೆ ವಲಯ ಅರಣ್ಯ ಇಲಾಖೆಗೆ ಲಭಿಸಿದ ಖಚಿತ ಮಾಹಿತಿಯ ಪ್ರಕಾರ ಆರೋಪಿಗಳಾದ ದಬ್ಬಡ್ಕ ಗ್ರಾಮದ ಮದನ್ ಕುಮಾರ್, ಗಣಪತಿ ಬಿನ್ ಮಾಚಯ್ಯ ಹಾಗೂ

ಕಾಡುಪ್ರಾಣಿ ಬೇಟೆ- ಕೋವಿ ಹಾಗೂ ಮಾಂಸ ವಶಕ್ಕೆ; ಆರೋಪಿಗಳು ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಕೊಳೆತ ಸ್ಥಿತಿಯಲ್ಲಿ‌ ಖ್ಯಾತ ವಕೀಲರ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 12. ಖ್ಯಾತ ನ್ಯಾಯವಾದಿಯೊಬ್ಬರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳವಾರದಂದು ಮಂಗಳೂರಿನಲ್ಲಿ ನಡೆದಿದೆ. ಮೃತರನ್ನು ನಗರದ ಖ್ಯಾತ ನ್ಯಾಯವಾದಿ ಬಿ.ಹರೀಶ್ ಆಚಾರ್ಯ (60) ಎಂದು ಗುರುತಿಸಲಾಗಿದೆ. ಅವರ ಮೃತದೇಹವು ಭಾಗಶಃ ಕೊಳೆತ ಸ್ಥಿತಿಯಲ್ಲಿ ನಗರದ ಬಿಜೈ ಬಾರಬೈಲ್‌ನ ಅವರ ಮನೆಯಲ್ಲಿ ಪತ್ತೆಯಾಗಿದ್ದು ಅವರ ರಕ್ತ ಸಂಬಂಧಿಕರಿದ್ದರೆ ಸಂಪರ್ಕಿಸುವಂತೆ ಉರ್ವ ಠಾಣಾ (0824-2220822/2220800) ಪೊಲೀಸರು ತಿಳಿಸಿದ್ದಾರೆ. ಹರೀಶ್ ಆಚಾರ್ಯ ಅವರು ಶುಕ್ರವಾರದಂದು ನ್ಯಾಯಾಲಯದ ಕಲಾಪಕ್ಕೆ ಹಾಜರಾಗಿದ್ದರು. ಜು. 9ರ ಬೆಳಗ್ಗೆ

ಕೊಳೆತ ಸ್ಥಿತಿಯಲ್ಲಿ‌ ಖ್ಯಾತ ವಕೀಲರ ಮೃತದೇಹ ಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಪಾರ್ಟ್ ಟೈಂ ಉದ್ಯೋಗ ನೀಡುವುದಾಗಿ ವಂಚನೆ- ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 11. ಟೆಲಿಗ್ರಾಂ ಅಕೌಂಟ್ ನಿಂದ ಲಿಂಕ್‌ ಕಳುಹಿಸಿ ಪಾರ್ಟ್‌ ಟೈಂ ಉದ್ಯೋಗ ನೀಡುವುದಾಗಿ 5.43 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಮಂಗಳೂರಿನ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂನ್ 29ರಂದು ದೂರುದಾರರಿಗೆ ಸಂದೇಶ ಕಳುಹಿಸಿದ ಅಪರಿಚಿತ ವ್ಯಕ್ತಿ ಅನಂತರ ಟಾಸ್ಕ್ ಗಳನ್ನು ನೀಡಿ, ಅದನ್ನು ಪೂರ್ಣಗೊಳಿಸಿದರೆ ಹಣ ನೀಡುವುದಾಗಿ ನಂಬಿಸಿದ್ದಾನೆ. ಮೊದಲ ಟಾಸ್ಕ್ ಗೆ ಹಣ ಹೂಡಿಕೆ ಮಾಡಿಸಿ ಅನಂತರ 1,237 ರೂ.ಗಳನ್ನು ದೂರುದಾರರ ಖಾತೆಗೆ ವರ್ಗಾಯಿಸಿದ್ದಾನೆ.

ಪಾರ್ಟ್ ಟೈಂ ಉದ್ಯೋಗ ನೀಡುವುದಾಗಿ ವಂಚನೆ- ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ- ಬಿಜೆಪಿ ಕಾರ್ಪೊರೇಟರ್ ಸಹೋದರನ ಬಂಧನ

(ನ್ಯೂಸ್ ಕಡಬ) newskadaba.com ಮೈಸೂರು, ಜು. 11. ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ರವಿವಾರ ನಡೆದಿದ್ದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೈಸೂರಿನ ಬಿಜೆಪಿ ಕಾರ್ಪೋರೇಟರ್ ಸಹೋದರ ಶಂಕರ ಅಲಿಯಾಸ್ ತುಪ್ಪ ಎಂಬಾತನನ್ನು ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ. ಹನುಮಜಯಂತಿ ಆಚರಣೆ ವೇಳೆ ನಾಯಕ ನಟ ದಿವಂಗತ ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರ ಹಾಕುವ ವಿಚಾರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು, ಈ ಹಿನ್ನೆಲೆ ರಾಜಿ ಮಾಡಿಕೊಳ್ಳಲು

ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣ- ಬಿಜೆಪಿ ಕಾರ್ಪೊರೇಟರ್ ಸಹೋದರನ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸಿಡಿಲು ಬಡಿದು ಸುಟ್ಟು ಕರಕಲಾದ ದಿನಸಿ ಅಂಗಡಿ- ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜು. 11. ಸಿಡಿಲು ಬಡಿದು ದಿನಸಿ ಅಂಗಡಿ ಸಂಪೂರ್ಣವಾಗಿ ಸುಟ್ಟುಹೋಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವ ಘಟನೆ ರಾಣಿಪುರದಲ್ಲಿ ದು ಮುಂಜಾನೆ ಸಂಭವಿಸಿದೆ. ಪಕ್ಕದಲ್ಲೇ ಇದ್ದ ಮನೆಗೂ ಬೆಂಕಿ ವ್ಯಾಪಿಸಿದ್ದು, ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರಾಣಿಪುರ ಚರ್ಚ್ ಎದುರಿನಲ್ಲಿರುವ ಪೀಟರ್ ಆಪ್ರೋಸ್ ಎಂಬವರ ದಿನಸಿ ಅಂಗಡಿಗೆ ಸಿಡಿಲು ಬಡಿದು ಭಸ್ಮವಾಗಿದೆ. ಘಟನೆಯ ವೇಳೆ ಪೀಟರ್ ನಿದ್ರಿಸುತ್ತಿದ್ದರು. ಅಂಗಡಿ‌ಗೆ ಬೆಂಕಿ ಬಿದ್ದಿರುವುದನ್ನು ಕಂಡು ದಾರಿಯಲ್ಲಿ ತೆರಳುತ್ತಿದ್ದ ವ್ಯಕ್ತಿ

ಸಿಡಿಲು ಬಡಿದು ಸುಟ್ಟು ಕರಕಲಾದ ದಿನಸಿ ಅಂಗಡಿ- ಲಕ್ಷಾಂತರ ರೂ. ನಷ್ಟ Read More »

ಕರಾವಳಿ, ಕ್ರೈಮ್ ನ್ಯೂಸ್

ಅಡ್ಡಾದಿಡ್ಡಿ ಚಲಿಸಿ ಬೇರೆ ವಾಹನಗಳಿಗೆ ಢಿಕ್ಕಿ ಹೊಡೆದ ಕಾರು- ಮೂವರು ಕಾಡಿನತ್ತ ಪರಾರಿ

(ನ್ಯೂಸ್ ಕಡಬ) newskadaba.com ಉಡುಪಿ, ಜು. 11. ಕಾರೊಂದು ಅಡ್ಡಾದಿಡ್ಡಿ ಚಲಿಸಿ ಇತರ ವಾಹನಗಳಿಗೆ ಢಿಕ್ಕಿ ಹೊಡೆದು ಮೂವರು ಅಪರಿಚಿತರು ಪರಾರಿಯಾಗಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಪರ್ಕಳದಿಂದ ಮಣಿಪಾಲ ಕಡೆಗೆ ಬರುತ್ತಿದ್ದ ಕಾರೊಂದು ಕೆಎಂಸಿ ಆಸ್ಪತ್ರೆ ನಿಲ್ದಾಣ ಸಮೀಪ ಬಸ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದು, ಬಳಿಕ ರಿವರ್ಸ್‌ ತೆಗೆಯುವಾಗ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರರಿಗೆ ಗಾಯವಾಗಿದೆ. ಇನ್ನು ಪರ್ಕಳದಿಂದ ಬರುವಾಗಲೇ ಅಡ್ಡಾದಿಡ್ಡಿ ಸಂಚರಿಸಿದ್ದ ಕಾರು ಕೆಲವು ವಾಹನಗಳಿಗೆ ಢಿಕ್ಕಿ ಹೊಡೆಸಿ ಹಾನಿಗೊಳಿಸಿ, ಮಣಿಪಾಲದಲ್ಲಿ

ಅಡ್ಡಾದಿಡ್ಡಿ ಚಲಿಸಿ ಬೇರೆ ವಾಹನಗಳಿಗೆ ಢಿಕ್ಕಿ ಹೊಡೆದ ಕಾರು- ಮೂವರು ಕಾಡಿನತ್ತ ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್
Theft, crime, Robbery

ಹಾಡಹಗಲೇ ಮನೆ ಕಳ್ಳತನ- 3 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಕುಂದಾಪುರ, ಜು. 11. ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಶಿರೂರಿನಲ್ಲಿ ಸೋಮವಾರದಂದು ಮಧ್ಯಾಹ್ನ ನಡೆದಿದೆ. ಶಿರೂರು ಮಾರ್ಕೆಟ್ ಬಳಿ ನಿವಾಸಿ ರಾಕೇಶ್ ಪಟಗಾ‌ರ್ ದಂಪತಿಗಳು ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಮಧ್ಯಾಹ್ನ ಊಟ ಮುಗಿಸಿ ಕಾಲೇಜಿಗೆ ಮರಳಿದ ಸಮಯ ನೋಡಿ ಹಿಂಬಾಗಿಲಿನಿಂದ ನುಗ್ಗಿದ ಕಳ್ಳರು 32 ಗ್ರಾಂ ಮಾಂಗಲ್ಯ ಸರ, 10 ಗ್ರಾಂ ಕಿವಿಯೋಲೆ, 100 ಗ್ರಾಂ ಬೆಳ್ಳಿ ಹಾಗೂ 1000 ರೂಪಾಯಿ ನಗದು

ಹಾಡಹಗಲೇ ಮನೆ ಕಳ್ಳತನ- 3 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top