ಕ್ರೈಮ್ ನ್ಯೂಸ್

ಚೀತಾ ದಾಳಿಗೆ ಬಾಲಕಿ ಮೃತ್ಯು- ಗಾಯಗೊಳಿಸಿ ಬಿಟ್ಟುಹೋದ ಚಿರತೆ

(ನ್ಯೂಸ್ ಕಡಬ) newskadaba.com  ಚಾಮರಾಜನಗರ, ಜು. 15. ಮನೆಯ ಮುಂದೆ ಆಟವಾಡುತ್ತಿದ್ದಾಗ ಚಿರತೆ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಕುರಿತು ವರದಿಯಾಗಿದೆ. ಮೃತ ಬಾಲಕಿಯನ್ನು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಗ್ಗಲಿ ಗುಂದಿ ಗ್ರಾಮದ ಸುಶೀಲ ಎಂದು ಗುರುತಿಸಲಾಗಿದೆ. ಬಾಲಕಿಯು ಮನೆಯ ಮುಂಭಾಗ ಆಟವಾಡುತ್ತಿದ್ದ ವೇಳೆ ಚಿರತೆಯೊಂದು ಬಂದು ಮಗುವನ್ನು ಎಳೆದೊಯ್ದಿದೆ. ಮಗುವಿನ ಚೀರಾಟವನ್ನು ಕೇಳಿದ ಗ್ರಾಮಸ್ಥರು ಹೊರ ಬಂದಾಗ ಚಿರತೆಯನ್ನು ಕಂಡು ಜೋರಾಗಿ ಕೂಗಾಡಿದ್ದಾರೆ. ಈ […]

ಚೀತಾ ದಾಳಿಗೆ ಬಾಲಕಿ ಮೃತ್ಯು- ಗಾಯಗೊಳಿಸಿ ಬಿಟ್ಟುಹೋದ ಚಿರತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪ್ರಪಾತಕ್ಕೆ ಉರುಳುತ್ತಿದ್ದ ಕಾರು ಕೂದಲೆಳೆ ಅಂತರದಲ್ಲಿ ಪಾರು- ಮೂವರು ಬಚಾವ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 15. ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಹಾರಿದ ಘಟನೆ ನಗರದ ಕದ್ರಿ ಸರ್ಕಿಟ್ ಹೌಸ್ ಬಳಿ ನಡೆದಿದೆ. ಘಟನೆಯಿಂದ ಅದೃಷ್ಟವಶಾತ್ ಸ್ವಲ್ಪದರಲ್ಲೇ ಪಕ್ಕದಲ್ಲಿದ್ದ ಪ್ರಪಾತಕ್ಕೆ ಉರುಳುವುದು ತಪ್ಪಿದೆ. ಈ ಮೂಲಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಅಲ್ಪಸ್ವಲ್ಪಗಾಯಗಳೊಂದಿಗೆ ಪವಾಡ ಸದೃಶ ಪಾರಾಗಿದ್ದಾರೆ ಎನ್ನಲಾಗಿದೆ. ಕದ್ರಿ ಸರ್ಕಿಟ್ ಹೌಸ್ ಕಡೆಯಿಂದ ಬಿಜೈ ಕಡೆಗೆ ವೇಗವಾಗಿ ಸಾಗುತ್ತಿದ್ದ ಮಾರುತಿ ಬಲೇನೋ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಢಿಕ್ಕಿ

ಪ್ರಪಾತಕ್ಕೆ ಉರುಳುತ್ತಿದ್ದ ಕಾರು ಕೂದಲೆಳೆ ಅಂತರದಲ್ಲಿ ಪಾರು- ಮೂವರು ಬಚಾವ್ Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಲಂಚ ಪಡೆಯುತ್ತಿದ್ದ ಫುಡ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 15. ಲಂಚ ಪಡೆಯುತ್ತಿದ್ದ ಫುಡ್‌ ಇನ್‌ಸ್ಪೆಕ್ಟರ್‌ ಓರ್ವರನ್ನು ಲೋಕಾಯುಕ್ತ ಅಧಿಕಾರಿಗಳು ಸುಮಾರು 15 ಕಿ.ಮೀ ನಷ್ಟು ದೂರ ಬೆನ್ನಟ್ಟಿ ಹಿಡಿದ ಘಟನೆ ನೆಲಮಂಗಲ ಬಳಿಯ ಸೊಂಡೇಕೊಪ್ಪ ಎಂಬಲ್ಲಿ ನಡೆದಿದೆ. ಬಂಧಿತರನ್ನು ಮಹಂತೇಗೌಡ ದು ಗುರುತಿಸಲಾಗಿದೆ. ರಂಗದಾಮಯ್ಯ ಎಂಬವರು ಕೆ.ಜಿ ಸರ್ಕಲ್ ಬಳಿಯ ತಹಶೀಲ್ದಾರ್ ಆಫೀಸ್‍ನ ಫುಡ್ ಇನ್‍ಸ್ಪೆಕ್ಟರ್ ಮಹಂತೇಗೌಡ ಬಳಿ ವ್ಯಾಪಾರದ ಪರವಾನಗಿ ಮಾಡಿಸಲು ತೆರಳಿದ್ದ ವೇಳೆ ಮಹಂತೇಗೌಡ 1 ಲಕ್ಷ ರೂ. ಹಣವನ್ನು ಲಂಚವಾಗಿ ನೀಡುವಂತೆ ಕೇಳಿದ್ದನು.  ಅಲ್ಲದೇ

ಲಂಚ ಪಡೆಯುತ್ತಿದ್ದ ಫುಡ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Death, deadbody, Waterfall

ಸುರತ್ಕಲ್: ಮೀನು ಹಿಡಿಯಲು ನೀರಿಗಿಳಿದ ವ್ಯಕ್ತಿ ಕೆರೆಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ)newskadaba.com ಸುರತ್ಕಲ್, ಜು.15. ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ನೀರಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸುರತ್ಕಲ್ ನಲ್ಲಿ ವರದಿಯಾಗಿದೆ. ಮೃತಪಟ್ಟವರನ್ನು ಪೋರ್ಕೊಡಿ ನಿವಾಸಿ ಪೂವಪ್ಪ(40) ಎಂದು ಗುರುತಿಸಲಾಗಿದೆ. ತೋಕೂರು ಬಳಿಯ ಜಾರಂದಾಯ ದೈವಸ್ಥಾನದ ಗುತ್ತಿನ ಮನೆಯ ಸಮೀಪದ ಕೆರೆಗೆ ಅಣ್ಣ ತಮ್ಮಂದಿರು ಮೀನು ಹಿಡಿಯಲೆಂದು ಇಳಿದಿದ್ದು, ಕೆಸರಿನಲ್ಲಿ ಹೂತು ಹೋದ ಕಾರಣ ಮೃತಪಟ್ಟಿದ್ದಾರೆ ಎನ್ನಲಾಗಿದೆ.  

ಸುರತ್ಕಲ್: ಮೀನು ಹಿಡಿಯಲು ನೀರಿಗಿಳಿದ ವ್ಯಕ್ತಿ ಕೆರೆಗೆ ಬಿದ್ದು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಯುವಕ ಮೃತ್ಯು..!

(ನ್ಯೂಸ್ ಕಡಬ)newskadaba.com ಕಾರ್ಕಳ, ಜು.15. ಕೂಲಿ ಕಾರ್ಮಿಕ ಯುವಕನೋರ್ವ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಕಾರ್ಕಳ ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಸೌರವ್ ಕುಮಾರ್ (20) ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ದಿನಗೂಲಿ ಕಾರ್ಮಿಕನಾಗಿ ನಿಟ್ಟೆಗೆ ಬಂದಿದ್ದು, ನಿಟ್ಟೆ ಕಾಲೇಜಿನ ಎದುರಿನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು. ಈತ ಹಾಗೂ ಈತನ ಸ್ನೇಹಿತರು ವಾಸಿಸುತ್ತಿದ್ದ ಕಟ್ಟಡದ ಆಸುಪಾಸಿನಲ್ಲಿ ಮಂಗಗಳ ಕಾಟ ಹೆಚ್ಚಾಗಿತ್ತು. ಕೆಲವು ವಸ್ತುಗಳು ಕಾಣಿಸುತ್ತಿರಲಿಲ್ಲ. ಹೀಗಾಗಿ, ಯುವಕರು ಕಾಣೆಯಾದ ವಸ್ತುಗಳನ್ನು ಹುಡುಕಲು ಟೆರೇಸ್

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಯುವಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Crime

ಎರಡು ಗುಂಪುಗಳ‌ ನಡುವೆ ಹೊಡೆದಾಟ- ಪುರಸಭಾ ಸದಸ್ಯನಿಗೆ ಗಾಯ; ಲಘು ಲಾಠಿ ಪ್ರಹಾರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 15. ಕ್ಯೂ ನಿಲ್ಲುವ ವಿಚಾರಕ್ಕೆ ಸಂಬಂಧಿಸಿ ರಿಕ್ಷಾ ಚಾಲಕರ ಎರಡು ಗುಂಪುಗಳ‌ ನಡುವೆ ಗಲಾಟೆ ನಡೆದಿದ್ದು, ಘಟನೆಯಿಂದ  ಪರಿಸ್ಥಿತಿ ತಿಳಿಗೊಳಿಸಲು ಬಂದಿದ್ದ ಸ್ಥಳೀಯ ಪುರಸಭಾ ಸದಸ್ಯನಿಗೆ ಗಾಯವಾಗಿದ್ದು, ಜಮಾಯಿಸಿದ್ದ ಜನರನ್ನು ‌ಚದುರಿಸಲು ಪೋಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ‌ ಬಿಸಿರೋಡಿನ ಕೈಕಂಬದಲ್ಲಿ ನಡೆದಿದೆ. ಬಿಸಿರೋಡಿನ ಕೈಕಂಬದಲ್ಲಿ ರಿಕ್ಷಾ ಕ್ಯೂ ನಿಲ್ಲುವ ವಿಚಾರಕ್ಕೆ ಸಂಬಂಧಿಸಿ ರಿಕ್ಷಾ ಯೂನಿಯನ್ ಪ್ರಮುಖನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಇದಕ್ಕೆ ಪ್ರತಿಯಾಗಿ ಹಲ್ಲೆಗೊಳಗಾದವನ ಕಡೆಯ

ಎರಡು ಗುಂಪುಗಳ‌ ನಡುವೆ ಹೊಡೆದಾಟ- ಪುರಸಭಾ ಸದಸ್ಯನಿಗೆ ಗಾಯ; ಲಘು ಲಾಠಿ ಪ್ರಹಾರ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಅವಲೋಕನ ಸಭೆ- ಉಭಯ ಬಣಗಳ ಮಧ್ಯೆ ಹಲ್ಲೆ, ಮಾರಾಮಾರಿ

(ನ್ಯೂಸ್ ಕಡಬ) newskadaba.com ಕಡಬ, ಜು. 14. ಸುಳ್ಯ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆಯಲ್ಲಿ ಕೃಷ್ಣಪ್ಪ ಜಿ. ಹಾಗೂ ನಂದಕುಮಾರ್ ಬಣದ ನಡುವೆ ಮಾರಾಮಾರಿ ನಡೆದ ಘಟನೆ ಜು.14ರಂದು ನಡೆದಿದೆ. ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ನಡೆದಿದ್ದು, ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಸಮಿತಿಯ ಮುಖಂಡರು ಆಗಮಿಸಿದ್ದರು. ಈ ಸಭೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪ ಹೊತ್ತಿರುವ ಉಚ್ವಾಟಿತ ಮುಖಂಡರು ಆಗಮಿಸಿದ್ದು ಕೃಷ್ಣಪ್ಪ

ಕಡಬದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಅವಲೋಕನ ಸಭೆ- ಉಭಯ ಬಣಗಳ ಮಧ್ಯೆ ಹಲ್ಲೆ, ಮಾರಾಮಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಜಾಗದ ವಿವಾದ- ಅಣ್ಣನನ್ನೇ ಕೊಲೆಗೈದ ತಮ್ಮ

(ನ್ಯೂಸ್ ಕಡಬ) newskadaba.com ಸಂಪಾಜೆ, ಜು. 14. ಆಸ್ತಿಗಾಗಿ ಸಹೋದರರ ನಡುವೆ ಗಲಾಟೆ ಉಂಟಾಗಿ ತಮ್ಮನೋರ್ವ ಅಣ್ಣನನ್ನೇ ಕೊಲೆಗೈದ ಭೀಕರ ಘಟನೆ ಕೊಡಗು ಜಿಲ್ಲೆಯ ಚೆಂಬು ಗ್ರಾಮದಲ್ಲಿ ನಡೆದಿದೆ. ಕೊಲೆಯಾದವರನ್ನು ಉಸ್ಮಾನ್ ಎಂದು ಗುರುತಿಸಲಾಗಿದೆ. ಇವರು ಶುಕ್ರವಾರದಂದು ಚೆಂಬು ಗ್ರಾಮದ ಕುದ್ರೆಪಾಯದ ಸಮೀಪ ಇರುವ ಜಾಗಕ್ಕೆ ಹೋಗಿದ್ದ ವೇಳೆ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದು, ಸಿಟ್ಟಿಗೆದ್ದ ತಮ್ಮ ಅಣ್ಣ ಉಸ್ಮಾನ್ ಅವರಿಗೆ ಚೂರಿಯಿಂದ ಚುಚ್ಚಿದ್ದು, ಈ ವೇಳೆ ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ

ಜಾಗದ ವಿವಾದ- ಅಣ್ಣನನ್ನೇ ಕೊಲೆಗೈದ ತಮ್ಮ Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಅಂಬರ್ ಗ್ರೀಸ್ ಎಂದು ನಂಬಿಸಿ ಹಳದಿ ಬಣ್ನದ ವಸ್ತು ಮಾರಾಟಕ್ಕೆ ಯತ್ನ- ಮೂವರು ಅಂದರ್

(ನ್ಯೂಸ್ ಕಡಬ) newskadaba.com ಬೈಂದೂರು, ಜು. 14. ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಎಂದು ನಂಬಿಸಿ ಹಳದಿ ಬಣ್ಣದ ವಸ್ತುವನ್ನು ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಮೂವರನ್ನು ಬೈಂದೂರು ಪೋಲಿಸರು ಬಂಧಿಸಿರುವ ಕುರಿತು ವರದಿಯಾಗಿದೆ. ಬಂಧಿತರನ್ನು ಶಿವಮೊಗ್ಗದ ನಿರಂಜನ್ ಎಸ್, ಮಿಲನ್ ಮೋನಿಶ್ ಶೆಟ್ಟಿ ಹಾಗೂ ಪೃಥ್ವಿ ಡಾಮ್ಮಿಕ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬೈಂದೂರು ತಾಲೂಕು ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದಲ್ಲಿ ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಲದ ಅಂಬರ್ ಗ್ರೀಸ್ ಎಂದು ಹೇಳಿ 10 ಲಕ್ಷ

ಅಂಬರ್ ಗ್ರೀಸ್ ಎಂದು ನಂಬಿಸಿ ಹಳದಿ ಬಣ್ನದ ವಸ್ತು ಮಾರಾಟಕ್ಕೆ ಯತ್ನ- ಮೂವರು ಅಂದರ್ Read More »

ಕರಾವಳಿ, ಕ್ರೈಮ್ ನ್ಯೂಸ್

ಬಾಲಕಿಯ ಅಪಹರಣಕ್ಕೆ ಯತ್ನಿಸಿದ ಭೂಪ ಅರೆಸ್ಟ್- ಕಿಡ್ನಾಪ್ ಕಾರಣ ಕೇಳಿದ್ರೆ ಅಚ್ಚರಿಪಡೋದಂತು ಗ್ಯಾರಂಟಿ

(ನ್ಯೂಸ್ ಕಡಬ) newskadaba.com ಬೆಳಗಾವಿ, ಜು. 13. ಹಾಡಹಗಲೇ ಟ್ಯೂಷನ್‌ಗೆ ಹೊರಟಿದ್ದ ಬಾಲಕಿಯನ್ನು ಅಪಹರಣಕ್ಕೆ ಯತ್ನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ 24 ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬೆಳಗಾವಿಯ ಮಾರುತಿ ನಗರದ ಗಜಾನನ್ ಪಾಟೀಲ್ (40) ಎಂದು ಗುರುತಿಸಲಾಗಿದೆ. ಈತ ಟ್ಯೂಷನ್‌ಗೆಂದು ಹೊರಟಿದ್ದ ಬಾಲಕಿಯೋರ್ವಳನ್ನು ಹೆಗಲ ಮೇಲೆ ಹೊತ್ತೊಯ್ಯುತ್ತಿದ್ದನು. ಬಾಲಕಿಯ ಚೀರಾಟ ಕೇಳಿ ಸ್ಥಳೀಯ ‌ನಿವಾಸಿಗಳು ಆರೋಪಿಯನ್ನು ಬೆನ್ನತ್ತಿದ್ದಾಗ ಆರೋಪಿಯು ಬಾಲಕಿಯನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿ ತಪ್ಪಿಸಿಕೊಂಡಿದ್ದನು. ಘಟನೆಗೆ ಸಂಬಂಧಿಸಿ ದೂರು

ಬಾಲಕಿಯ ಅಪಹರಣಕ್ಕೆ ಯತ್ನಿಸಿದ ಭೂಪ ಅರೆಸ್ಟ್- ಕಿಡ್ನಾಪ್ ಕಾರಣ ಕೇಳಿದ್ರೆ ಅಚ್ಚರಿಪಡೋದಂತು ಗ್ಯಾರಂಟಿ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top