ಕ್ರೈಮ್ ನ್ಯೂಸ್

ಓವರ್ ಟೇಕ್ ಭರದಲ್ಲಿ ಸರಣಿ ಅಪಘಾತ – ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ಹೆಬ್ರಿ, ಆ. 20. ಓವರ್ ಟೆಕ್ ಮಾಡುವ ಭರದಲ್ಲಿ ಸರಣಿ ಅಪಘಾತ ಸಂಭವಿಸಿ, ನಾಲ್ವರು ಗಾಯಗೊಂಡ ಘಟನೆ ನಾಡ್ಪಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಕ್ಕನಮಕ್ಕಿ ಬಳಿ ನಡೆದಿದೆ. ವರದಿಯ ಪ್ರಕಾರ, ಬೈಕ್ ನ್ನು ಕಾರೊಂದು ಓವರ್ ಟೇಕ್ ಮಾಡುತ್ತಿದ್ದ ಸಂದರ್ಭ ಮುಂದಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಕಾರುಗಳು ಹಾಗೂ ಬೈಕ್ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ […]

ಓವರ್ ಟೇಕ್ ಭರದಲ್ಲಿ ಸರಣಿ ಅಪಘಾತ – ನಾಲ್ವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಎಂಡಿಎಂಎ ಮಾದಕ ವಸ್ತು ಸಹಿತ ಆರೋಪಿಯ ಸೆರೆ – ಸಿಸಿಬಿ ಪೊಲೀಸರ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 20. ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಮಾದಕ ವಸ್ತುವಾದ ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಹಸನ್ ಸಾಧಿಕ್ ಯಾನೆ ಬ್ಲೇಡ್ ಸಾಧಿಕ್(35) ಎಂದು ಗುರುತಿಸಲಾಗಿದೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡ ಆರೋಪಿಯಾಗಿರುವ ಈತ, ಬೆಂಗಳೂರಿನಿಂದ ಎಂಡಿಎಂಎ ಮಾದಕ ವಸ್ತುವನ್ನು ಖರೀದಿಸಿ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಮಾರುತಿ 800 ಕಾರಿನಲ್ಲಿ ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನು.

ಎಂಡಿಎಂಎ ಮಾದಕ ವಸ್ತು ಸಹಿತ ಆರೋಪಿಯ ಸೆರೆ – ಸಿಸಿಬಿ ಪೊಲೀಸರ ಕಾರ್ಯಾಚರಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕ್ವಾರ್ಟರ್ಸ್ ಮೇಲೆ ಮಲಗಿದ್ದ ಕಾರ್ಮಿಕ ಕೆಳಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 20. ಕ್ವಾರ್ಟರ್ಸ್‌ನ ಮೇಲಿನಿಂದ ಬಿದ್ದು ವಲಸೆ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸೀತಾಂಗೋಳಿಯಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ರಾಜಸ್ತಾನ ಬೋಡಗಾನ್ ನಿವಾಸಿ ಕೇಮ್ರಾಜ್ ಗುಜ್ಜರ್ (43) ಎಂದು ಗುರುತಿಸಲಾಗಿದೆ. ಕಳೆದ 20 ವರ್ಷಗಳಿಂದ ಸೀತಾಂಗೋಳಿಯಲ್ಲಿ ಗ್ರಾನೈಟ್ ಹಾಗೂ ಮಾರ್ಬಲ್ ಕೆಲಸ ನಿರ್ವಹಿಸುತ್ತಿದ್ದ ಇವರು ಸೀತಾಂಗೋಳಿ ಪೇಟೆಯಲ್ಲಿರುವ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ ಕ್ವಾರ್ಟರ್ಸ್‌ನ ಮೇಲಿನ ಮಹಡಿಯಲ್ಲಿ ನಿದ್ರಿಸುತ್ತಿದ್ದ ಇವರನ್ನು ಜೊತೆಗಿದ್ದವರು ಶನಿವಾರ ಮುಂಜಾನೆ ಎದ್ದು ನೋಡಿದಾಗ ಕೇಮ್ರಾಜ್ ಗುಜ್ಜರ್ ಕ್ವಾರ್ಟರ್ಸ್‌ನ ಕೆಳಗೆ

ಕ್ವಾರ್ಟರ್ಸ್ ಮೇಲೆ ಮಲಗಿದ್ದ ಕಾರ್ಮಿಕ ಕೆಳಗೆ ಬಿದ್ದು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಟ್ಕಾ ದಂಧೆ- ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 20. ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಉರ್ವ ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ. ಬಂಧಿತ ಆರೋಪಿಗಳನ್ನು ನಗರದ ಚಿಲಿಂಬಿಯ ಗೋಕುಲದಾಸ ಶೆಣೈ ಮತ್ತು ಕೋಡಿಕಲ್ ನಿವಾಸಿ ದೀಪಕ್ ಶೆಟ್ಟಿ ಎಂದು ಗುರುತಿಸಲಾಗಿದೆ. ಆರೋಪಿಗಳ ಜೊತೆಗೆ ಮಟ್ಕಾ ದಂಧೆಗೆ ಬಳಸಿದ್ದ 4,24,490 ರೂ. ನಗದು, ಮೊಬೈಲ್ ಫೋನ್ ಹಾಗೂ ಮಟ್ಕಾ ಬರೆದಿದ್ದ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಟ್ಕಾ ದಂಧೆ- ಇಬ್ಬರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ದಾಸ್ತಾನು – ಓರ್ವ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 20. ನಗರದ ಅಳಕೆ ನ್ಯೂಚಿತ್ರಾ ಸಮೀಪದ ಜನನಿಬಿಡ ವಸತಿ ಸಂಕೀರ್ಣದ ಬಳಿ ಅಕ್ರಮವಾಗಿ ಗ್ಯಾಸ್ ಸಿಲಿಂಡರನ್ನು ದಾಸ್ತಾನಿರಿಸಿದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ಕದ್ರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶೇಖ್ ಅಶಫ್ ಉದ್ದೀನ್ (59) ಎಂದು ಗುರುತಿಸಲಾಗಿದೆ. ಈತ ಮಂಗಳೂರು ಗ್ಯಾಸ್ ಲೈಟ್ ಆ್ಯಂಡ್ ಸರ್ವೀಸ್ ಸೆಂಟರ್ ಅಂಗಡಿಯ ಪಕ್ಕದ ಸಣ್ಣ ಕೊಠಡಿಯಲ್ಲಿ ಪರವಾನಿಗೆ ಇಲ್ಲದೆ ಗ್ಯಾಸ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನಿರಿಸಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ

ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ದಾಸ್ತಾನು – ಓರ್ವ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 19. ಜಮೀನಿಗೆ ಸಂಬಂಧಿಸಿದಂತೆ ಕಡತ ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಸಂಪಾಜೆ- ಅರಂತೋಡು ಗ್ರಾಮ ಲೆಕ್ಕಾಧಿಕಾರಿ ಮಿಯಾಸಾಬ್ ಮುಲ್ಲಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ವರದಿಯಾಗಿದೆ. ಅರಂತೋಡಿನ ವ್ಯಕ್ತಿಯೊಬ್ಬರು ಆಸ್ತಿ ಹಕ್ಕಿಗೆ ಸಂಬಂಧಿಸಿದ ಕಡತ ವಿಲೇವಾರಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭ ಲೆಕ್ಕಾಧಿಕಾರಿ ಮಿಯಾಸಾಬ್‌ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆ ವ್ಯಕ್ತಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಶನಿವಾರದಂದು ಬೆಳಗ್ಗೆ ದಾಳಿ ನಡೆಸಿದ ಲೋಕಾಯುಕ್ತ

ಸುಳ್ಯ: ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬಾವಿಗೆ ಬಿದ್ದು ಕಾಡುಕೋಣ ಮೃತ್ಯು – ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 19. ಕಾಡುಕೋಣವೊಂದು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ನರಿಮೊಗರು ಐಟಿಐ ಮೈದಾನದ ಪಕ್ಕದಲ್ಲಿ ಶನಿವಾರದಂದು ನಡೆದಿದೆ. ಪ್ರಕಾಶ್ ಎಂಬವರ ಜಾಗದಲ್ಲಿರುವ ಬಾವಿಯಲ್ಲಿ ಬೆಳಗ್ಗಿನ ಹೊತ್ತು ಕಾಡುಕೋಣವೊಂದು ಬಿದ್ದು ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯವರು ಕ್ರೇನ್ ಮುಖಾಂತರ ಕಾಡುಕೋಣವನ್ನು ಬಾವಿಯಿಂದ ಮೇಲಕೆತ್ತಿದ್ದಾರೆ. ಮೃತಪಟ್ಟಿರುವ ಕಾಡುಕೋಣಕ್ಕೆ ಅಂದಾಜು 4 ರಿಂದ 5 ವರ್ಷ ಪ್ರಾಯವಾಗಿರಬಹುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಸಿಎಫ್ ಸುಬ್ಬಯ್ಯ ನಾಯ್ಕ,

ಬಾವಿಗೆ ಬಿದ್ದು ಕಾಡುಕೋಣ ಮೃತ್ಯು – ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ರಸ್ತೆ ಅಪಘಾತ- ಪಂಜ ಕೆನರಾ ಬ್ಯಾಂಕ್ ಮಾಜಿ ಉದ್ಯೋಗಿ ಮೃತ್ಯು

(ನ್ಯೂಸ್ ಕಡಬ) newskadaba.com ವಿರಾಜಪೇಟೆ, ಆ. 19. ದ್ವಿಚಕೃ ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಬ್ಯಾಂಕ್ ಉದ್ಯೋಗಿಯೋರ್ವರು ಮೃತಪಟ್ಟ ಘಟನೆ ವಿರಾಜಪೇಟೆ ಅಮ್ಮತ್ತಿ ರಸ್ತೆಯ ಸುಂಕದಕಟ್ಟೆ ಬಳಿ ನಡೆದಿದೆ. ಮೃತರನ್ನು ಮೂಲತಃ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಪ್ರಸ್ತುತ ಅಮ್ಮತ್ತಿಯ ಕೆನರಾ ಬ್ಯಾಂಕ್ ಉದ್ಯೋಗಿ ಅಮೃತ(24) ಎಂದು ಗುರುತಿಸಲಾಗಿದೆ. ಇವರು ಈ ಹಿಂದೆ ಕಡಬ ತಾಲೂಕಿನ ಪಂಜ ಕೆನರಾ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. ಅಮೃತ ಅವರು ಎಂದಿನಂತೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ದ್ವಿಚಕ್ರ

ರಸ್ತೆ ಅಪಘಾತ- ಪಂಜ ಕೆನರಾ ಬ್ಯಾಂಕ್ ಮಾಜಿ ಉದ್ಯೋಗಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ – ತಪ್ಪಿದ ದುರಂತ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 19. ನಿಲ್ಲಿಸಿದ್ದ ಉದ್ಯಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಮೆಜೆಸ್ಟಿಕ್ ಬಳಿಯ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಶನಿವಾರದಂದು ಬೆಳಗ್ಗೆ ಸಂಭವಿಸಿದೆ. ಮುಂಬೈಯಿಂದ ಬಂದಿದ್ದ ಉದ್ಯಾನ್ ಎಕ್ಸ್ ಪ್ರೆಸ್ ರೈಲು ಇಂದು ಬೆಳಗ್ಗೆ 6 ಗಂಟೆಗೆ ಕೆಎಸ್ಆರ್ ರೈಲು ನಿಲ್ದಾಣಕ್ಕೆ ಆಗಮಿಸಿದ್ದು, ಪ್ಲಾಟ್ ಫಾರ್ಮ್ 4ರಲ್ಲಿ ನಿಂತಿತ್ತು. 7:30ರ ಸುಮಾರಿಗೆ ತಾಂತ್ರಿಕ ಸಮಸ್ಯೆಯಿಂದಾಗಿ ರೈಲ್ವೇ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿ ರೈಲಿನ ಎರಡು ಕೋಚ್

ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ – ತಪ್ಪಿದ ದುರಂತ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಕ್ರಮ ಮರಳು ದಾಸ್ತಾನು ಪತ್ತೆ- ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 19. ಅಕ್ರಮ ಮರಳು ದಾಸ್ತಾನು ಮಾಡಿರುವ ಘಟನೆ ಇಲ್ಲಿನ ಫರಂಗಿಪೇಟೆ ಸಮೀಪದ ಅಮ್ಮೆಮಾರ್‌ ರೈಲ್ವೇ ಹಳಿಯ ಬಳಿ ಪತ್ತೆಯಾಗಿದೆ. ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ. ಆದರೆ ಮರಳು ಯಾರಿಗೆ ಸೇರಿದ್ದು ಎಂಬುದು ತಿಳಿದು ಬಂದಿಲ್ಲ.

ಅಕ್ರಮ ಮರಳು ದಾಸ್ತಾನು ಪತ್ತೆ- ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top