ಕ್ರೈಮ್ ನ್ಯೂಸ್

ಕಾರು ಢಿಕ್ಕಿ- ಆಟೊ ಚಾಲಕ ಗಂಭೀರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 30. ಕಾರೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ಗಾಯಗೊಂಡ ಆಟೋ ಚಾಲಕನನ್ನು ಮಹಮ್ಮದ್ ಸಾದಿಕ್ ಎಂದು ಗುರುತಿಸಲಾಗಿದೆ. ಸಾದಿಕ್ ತನ್ನ ಆಟೋ ರಿಕ್ಷಾದಲ್ಲಿ ಸುರಕ್ಷಾ ಅಧಿಕಾರಿಯೋರ್ವರನ್ನು ಗೂಡಿನಬಳಿಯಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಪಾಣೆಮಂಗಳೂರು ಕಡೆಯಿಂದ ಬಂದ ಕಾರೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿ, ರಿಕ್ಷಾ ಚಾಲಕನಿಗೆ ಗಂಭೀರವಾಗಿ ಗಾಯವಾಗಿದ್ದು, ಪ್ರಯಾಣಿಕರೊಬ್ಬರು […]

ಕಾರು ಢಿಕ್ಕಿ- ಆಟೊ ಚಾಲಕ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್

ಅಕ್ರಮ ಮರ ಸಾಗಾಟ – ಲಕ್ಷಾಂತರ ರೂ. ಮೌಲ್ಯದ ಮರ ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 30. ಅಕ್ರಮವಾಗಿ ಮರ ಸಾಗಾಟದ ವೇಳೆ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಅರಣ್ಯ ಇಲಾಖಾಧಿಕಾರಿಗಳು ಆರೋಪಿ ಸಹಿತ ಲಕ್ಷಾಂತರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ ಘಟನೆ ತಾಲೂಕಿನ ಬಂಟ್ವಾಳ ಮೂಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75ರ ಬಿಸಿ ರೋಡ್ ಜಂಕ್ಷನ್ ಬಳಿ ನಡೆದಿದೆ. ವಾಹನ ಮತ್ತು ಅಮಾನತು ಪಡಿಸಿದ ಸೊತ್ತಿನ ಮೌಲ್ಯ ಒಟ್ಟು 7 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣದಲ್ಲಿ ಬಂಟ್ವಾಳ ವಲಯ ಅರಣ್ಯ ಅಧಿಕಾರಿ

ಅಕ್ರಮ ಮರ ಸಾಗಾಟ – ಲಕ್ಷಾಂತರ ರೂ. ಮೌಲ್ಯದ ಮರ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಯುವಕನ ಕೊಲೆಯತ್ನ ಪ್ರಕರಣ- ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 30. ನಗರದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಯುವಕನೋರ್ವನ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವನನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 12ರಂದು ಕೊಣಾಜೆ ಠಾಣಾ ವ್ಯಾಪ್ತಿಯ ನೆತ್ತಿಲಪದವು ನಿವಾಸಿ ಮನ್ಸೂರ್ ಎಂಬವರ ಜೊತೆ ಮನೆ ಬಾಡಿಗೆ ವಿಚಾರದಲ್ಲಿ ಆರೋಪಿ ನಝೀರ್ ಹಂಸ ಎಂಬಾತನು ಗಲಾಟೆ ಮಾಡಿ ಏಕಾಏಕಿ ತನ್ನಲ್ಲಿದ್ದ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ, ಬಳಿಕ ತಲೆಮರೆಸಿಕೊಂಡಿದ್ದನು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ

ಯುವಕನ ಕೊಲೆಯತ್ನ ಪ್ರಕರಣ- ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಉರುಳಿಗೆ ಬಿದ್ದು ಚಿರತೆ ಮೃತಪಟ್ಟ ಪ್ರಕರಣ – ಇಬ್ಬರ ಬಂಧನ

(ನ್ಯೂಸ್ ಕಡಬ) newdkadaba.com ಸುಳ್ಯ, ಆ. 30. ಸುಮಾರು ಒಂದೂವರೆ ವರ್ಷದ ಚಿರತೆ ಮರಿಯೊಂದು ಉರುಳಿಗೆ ಸಿಲುಕಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಲಾದ ಘಟನೆ ತಾಲೂಕಿನ ಅಜ್ಜಾವರ ಗ್ರಾಮದ ಪಡ್ಡಂಬೈಲು ಎಂಬಲ್ಲಿಂದ ವರದಿಯಾಗಿದೆ. ಬಂಧಿತರನ್ನು ಜಯರಾಮ ಪಡ್ಡಂಬೈಲು ಹಾಗೂ ಪೃಥ್ವಿ ಪಡ್ಡಂಬೈಲು ಎಂದು ಗುರುತಿಸಲಾಗಿದೆ. ಮಂಗಳವಾರದಂದು ಮಧ್ಯಾಹ್ನದ ವೇಳೆಗೆ ಚಿರತೆ ಉರುಳಿಗೆ ಬಿದ್ದಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೊರೆತ ಮಾಹಿತಿಯಂತೆ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಚಿರತೆ

ಸುಳ್ಯ: ಉರುಳಿಗೆ ಬಿದ್ದು ಚಿರತೆ ಮೃತಪಟ್ಟ ಪ್ರಕರಣ – ಇಬ್ಬರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಯುವತಿ ಸ್ನಾನ ಮಾಡುತ್ತಿದ್ದ ವೇಳೆ ವಿಡಿಯೋ ಮಾಡಿದ ಅಪರಿಚಿತ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 29. ಯುವತಿಯೋರ್ವಳು ಬಾತ್ ರೂಮಿನಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿನ‌ ಹಂಚಿನ ಮನೆಯೊಳಗೆ ಬಚ್ಚಲು ಕೋಣೆಯಲ್ಲಿ ರಾತ್ರಿ ವೇಳೆ ಯುವತಿಯೋರ್ವಳು ಸ್ನಾನ ಮಾಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೋರ್ವ ಗೋಡೆಯ ಸೆರೆಯ ಮಧ್ಯೆ ಮೊಬೈಲ್ ಮೂಲಕ ವಿಡಿಯೋ ಸೆರೆ ಹಿಡಿಯುವುದು ಗಮನಕ್ಕೆ ಬಂದಿದೆ. ಇದನ್ನು ಕಂಡ

ಯುವತಿ ಸ್ನಾನ ಮಾಡುತ್ತಿದ್ದ ವೇಳೆ ವಿಡಿಯೋ ಮಾಡಿದ ಅಪರಿಚಿತ Read More »

ಕರಾವಳಿ, ಕ್ರೈಮ್ ನ್ಯೂಸ್

ಇಸ್ರೋ ವಿಜ್ಞಾನಿಯ ಕಾರನ್ನು ಹಿಂಬಾಲಿಸಿ ಕಲ್ಲೆಸೆತ- ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29. ಇಸ್ರೋದ ವಿಜ್ಞಾನಿಯೊಬ್ಬರ ಕಾರನ್ನು ಹಿಂಬಾಲಿಸಿ ಕಲ್ಲೆಸೆದ ಘಟನೆ ಬೆಂಗಳೂರಿನ ರತನಹಳ್ಳಿ ಮುಖ್ಯ ರಸ್ತೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್‌ 24ರ ರಾತ್ರಿ ಮನೆಗೆ ತೆರಳುತ್ತಿದ್ದಾಗ ಗೂಂಡಾಗಳು ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರನ್ನು ಹಿಂಬಾಲಿಸಿ ಕಾರನ್ನು ತಡೆದು ನಿಲ್ಲಿಸಿ ಹಿಂಭಾಗದ ಗಾಜನ್ನು ಒಡೆದು ಹಾಕಿದ್ದಾರೆ. ಈ ಕುರಿತು ದೂರು ನೀಡಲು ಮುಂದಾದಾಗ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಎಕ್ಸ್‌ ಮೂಲಕ ಘಟನೆ ಹಂಚಿಕೊಂಡ ಬಳಿಕ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ

ಇಸ್ರೋ ವಿಜ್ಞಾನಿಯ ಕಾರನ್ನು ಹಿಂಬಾಲಿಸಿ ಕಲ್ಲೆಸೆತ- ಪ್ರಕರಣ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಲಂಚ ಪಡೆದ ಆರೋಪ- ಇಡಿ ಅಧಿಕಾರಿ ಸಿಬಿಐ ಬಲೆಗೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 29. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಐದು ಕೋಟಿ ರೂ, ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿ ಇಡಿ ಅಧಿಕಾರಿಯನ್ನು ಸಿಬಿಐ ಬಂಧಿಸಿರುವ ಕುರಿತು ವರದಿಯಾಗಿದೆ. ಅಬಕಾರಿ ನೀತಿ ಪ್ರಕರಣದ ಆರೋಪಿ ಅಮನ್‌ದೀಪ್ ಸಿಂಗ್ ಧಲ್ ಅವರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಇಡಿ ಸಹಾಯಕ ನಿರ್ದೇಶಕ ಪವನ್ ಖತ್ರಿ ಎಂಬ ಅಧಿಕಾರಿಯನ್ನು ಬಂಧಿಸಿ, ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಪವನ್ ಖತ್ರಿ ಮತ್ತು ಕ್ಲರ್ಕ್ ನಿತೇಶ್ ಕೊಹರ್ ವಿರುದ್ದ

ಲಂಚ ಪಡೆದ ಆರೋಪ- ಇಡಿ ಅಧಿಕಾರಿ ಸಿಬಿಐ ಬಲೆಗೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸ್ನಾನಕ್ಕೆಂದು ಕೊಳಕ್ಕೆ ಇಳಿದ ಯುವಕ ನೀರಿ‌ನಲ್ಲಿ ಮುಳುಗಿ ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ, ಆ. 29. ಸ್ನೇಹಿತರ ಜತೆ ಸ್ನಾನಕ್ಕೆಂದು ತೆರಳಿ ಕೊಳಕ್ಕೆ ಇಳಿದಿದ್ದ ಯುವಕನೋರ್ವ ನೀರುಪಾಲಾಗಿರುವ ಘಟನೆ ಕೆಳಗಿನ ತಲಪಾಡಿ ಬಳಿ ಸಂಭವಿಸಿದೆ. ಮೃತರನ್ನು ಕೇರಳದ ಹೊಸಂಗಡಿ ದುರ್ಗಿಪಳ್ಳ ನಿವಾಸಿ ದಿ. ಸುಬ್ರಾಯ ಆಚಾರ್ಯ- ಉಮಾವತಿ ದಂಪತಿ ಪುತ್ರ ಹರಿಪ್ರಸಾದ್‌ ಆಚಾರ್ಯ(36) ಎಂದು ಗುರುತಿಸಲಾಗಿದೆ. ನಾಲ್ವರ ತಂಡವೊಂದು ತಲಪಾಡಿಯ ಖಾಸಗಿ ಜಾಗದಲ್ಲಿರುವ ಕೊಳಕ್ಕೆ ಸ್ನಾನಕ್ಕೆಂದು ಬಂದಿದ್ದು, ಈ ಪೈಕಿ ಹರಿಪ್ರಸಾದ್‌ ನೀರಿನಡಿಯ ಕೆಸರಿನಲ್ಲಿ ಸಿಲುಕಿ ಮುಳುಗಿದ್ದು, ಇದರಿಂದಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನಾ

ಸ್ನಾನಕ್ಕೆಂದು ಕೊಳಕ್ಕೆ ಇಳಿದ ಯುವಕ ನೀರಿ‌ನಲ್ಲಿ ಮುಳುಗಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಶಂಕಿತ ಉಗ್ರನ ಸಹಚರನ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29. ಬೆಂಗಳೂರಿನ ಶಂಕಿತ ಉಗ್ರನ ಮನೆಯಲ್ಲಿ ಗ್ರೆನೇಡ್‌ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರಮುಖ ಆರೋಪಿ ಜುನೈದ್ ನ , ಸಹಚರನೋರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್‌ ಅರ್ಷದ್‌ ಎಂದು ಗುರುತಿಸಲಾಗಿದೆ. ರಾಜ್ಯ ರಾಜಧಾನಿಯಲ್ಲಿ ಇತ್ತೀಚೆಗೆ ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪದಡಿ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಈ ವೇಳೆ ಜುನೈದ್‌ ಸಹಚರ ಅರ್ಷದ್‌ ಎಂಬಾತ ನಾಪತ್ತೆಯಾಗಿದ್ದ. ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿರುವ ಅರ್ಷದ್‌ ವಿರುದ್ಧ 17 ಪ್ರಕರಣಗಳು ದಾಖಲಾಗಿದ್ದವು. ಇನ್ನು

ಶಂಕಿತ ಉಗ್ರನ ಸಹಚರನ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸಮುದ್ರಪಾಲಾಗಿದ್ದ ಯುವಕರಿಬ್ಬರ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaa.com ಬೈಂದೂರು, ಆ. 28. ಇಲ್ಲಿನ ಶಿರೂರು ಅಳ್ವೆಗದ್ದೆ ಎಂಬಲ್ಲಿ ರವಿವಾರದಂದು ಸಂಜೆ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿಯಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಮೃತದೇಹವು ಇಂದು ಪತ್ತೆಯಾಗಿದೆ. ದೋಣಿ ಮಗುಚಿ ಬಿದ್ದ 300 ಮೀಟರ್ ವ್ಯಾಪ್ತಿಯಲ್ಲಿ ಗಂಗೊಳ್ಳಿ ಮುಸ್ತಾಫಾ ಅವರ ಮಗ ಮುಹಮ್ಮದ್ ಮುಸಾಬ್ (22) ಹಾಗೂ ಬಾವು ನೂರುಲ್ ಅಮೀನ್ ಅವರ ಮಗ ನಝಾನ್ (24) ಅವರ ಮೃತದೇಹವು ದೊರೆತಿದೆ.

ಸಮುದ್ರಪಾಲಾಗಿದ್ದ ಯುವಕರಿಬ್ಬರ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top