ಕ್ರೈಮ್ ನ್ಯೂಸ್

ಬೀದಿ ನಾಯಿಗಳ ದಾಳಿ- ಬಾಲಕ ಗಂಭೀರ

(ನ್ಯೂಸ್ ಕಡಬ) newskadaba.com ಬಾಗಲಕೋಟೆ, ಫೆ. 20. ನಾಲ್ಕು ವರ್ಷದ ಬಾಲಕನ ಮೇಲೆ ಬೀದಿನಾಯಿಗಳ ಗುಂಪು ದಾಳಿ ನಡೆಸಿದ ಪರಿಣಾಮ ಬಾಲಕ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದಿದೆ. ಗಾಯಗೊಂಡ ಬಾಲಕನನ್ನು ನಾಲ್ಕು ವರ್ಷದ ಉಮರ್ ಯಾಸಿನ್ ಎಂದು ಗುರುತಿಸಲಾಗಿದೆ. ಬೀದಿ ನಾಯಿಗಳು ಬಾಲಕನ ಮೂಗು, ಬಾಯಿ, ತೊಡೆಗೆ ಕಚ್ಚಿದ್ದರಿಂದ ಗಂಭೀರ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯನ್ನು ಖಂಡಿಸಿದ ಸ್ಥಳೀಯರು ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವಂತೆ ಆಗ್ರಹಿಸಿದ್ದಾರೆ.

ಬೀದಿ ನಾಯಿಗಳ ದಾಳಿ- ಬಾಲಕ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಬೈಕ್ ಹಾಗೂ ಬಸ್ ನಡುವೆ ಅಪಘಾತ- ಸವಾರ ಮೃತ್ಯು..!

(ನ್ಯೂಸ್ ಕಡಬ) newskadaba.com ಕಡಬ, ಫೆ. 19. ಬೈಕ್ ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ಸೋಮವಾರದಂದು ನಡೆದಿದೆ. ಮೃತ ಬೈಕ್ ಸವಾರನನ್ನು ಕೊಂಬಾರು ಮಣಿಭಾಂಡ ತೇರೆಬೀದಿ ನಿವಾಸಿ ನೆಟ್ಟಣದಲ್ಲಿ ಮೆಕ್ಯಾನಿಕ್ ಆಗಿದ್ದ ವಾಸುದೇವ ಗೌಡ ಎಂದು ಗುರುತಿಸಲಾಗಿದೆ. ಕೆಎಸ್ಸಾರ್ಟಿಸಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಎದುರುನಿಂದ ಬಂದ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ವಾಸುದೇವರನ್ನು

ಕಡಬ: ಬೈಕ್ ಹಾಗೂ ಬಸ್ ನಡುವೆ ಅಪಘಾತ- ಸವಾರ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಏರ್ಪೋರ್ಟ್ ವಾಶ್ ರೂಂನಲ್ಲಿ ಬಚ್ಚಿಟ್ಟಿದ್ದ 45.44 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ

(ನ್ಯೂಸ್‌ ಕಡಬ) newskadaba.com ಮಂಗಳೂರು, ಫೆ. 19. ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ 45,44,600 ರೂಪಾಯಿ ಮೌಲ್ಯದ 733 ಗ್ರಾಂ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಕುರಿತು ವರದಿಯಾಗಿದೆ. ಇಮಿಗ್ರೇಷನ್ ಆಗಮನದ ಪ್ರದೇಶದಲ್ಲಿನ ವಾಶ್‌ರೂಮ್‌ನ ಡ್ರೈನೇಜ್ ಚೇಂಬರ್‌ನಲ್ಲಿ ಕಪ್ಪು ಬಣ್ಣದ ಚೀಲದೊಳಗೆ ಬಚ್ಚಿಟ್ಟಿದ್ದ ಪೇಸ್ಟ್ ರೂಪದಲ್ಲಿರುವ ಚಿನ್ನ ಕಂಡುಬಂದಿದ್ದು, ವಿಮಾನ ನಿಲ್ದಾಣ ಅಧಿಕಾರಿಗಳ ಗಮನಕ್ಕೆ ಬಂದಿದೆ. ಟಾಯ್ಲೆಟ್ ನಲ್ಲಿ ಚಿನ್ನವಿಟ್ಟ ವ್ಯಕ್ತಿ ಇನ್ನು ಪತ್ತೆಯಾಗಿಲ್ಲ ಎಂದು ತಿಳಿದಿದ್ದು,  ಕಸ್ಟಮ್ಸ್ ಅಧಿಕಾರಿಗಳು ಕಳ್ಳಸಾಗಣೆ ಮಾಡಿದ

ಏರ್ಪೋರ್ಟ್ ವಾಶ್ ರೂಂನಲ್ಲಿ ಬಚ್ಚಿಟ್ಟಿದ್ದ 45.44 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

40 ಅಡಿ ಎತ್ತರದ ಮರವೇರಿ ಕಾರ್ಮಿಕ ಆತ್ಮಹತ್ಯೆ..!

(ನ್ಯೂಸ್‌ ಕಡಬ) newskadaba.com ವಿಟ್ಲ, ಫೆ. 19. 40 ಅಡಿ ಎತ್ತರದ ಮರವೇರಿ ಕಾರ್ಮಿಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪಡೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕನನ್ನು ಜಾರಪ್ಪನಾಯ್ಕ (60) ಎಂದು ಗುರುತಿಸಲಾಗಿದೆ. ಜಾರಪ್ಪನಾಯ್ಕ ಅವರು ಎಂದಿನಂತೆ ಮನೆಯಿಂದ ರಘುರಾಮ ತಂತ್ರಿ ಎಂಬವರ ತೋಟದ ಕೆಲಸಕ್ಕೆ ಹೋಗುವುದಾಗಿ ಹೇಳಿ ತೆರಳಿದ್ದರು. ಆದರೆ ಅಲ್ಲಿಗೆ ತಲುಪದೇ ಇದ್ದ ಕಾರಣ, ಜಾರಪ್ಪನಾಯ್ಕರ ಮನೆಯಲ್ಲಿ ವಿಚಾರಿಸಿದಾಗ ಬೆಳಿಗ್ಗೆಯೇ ಹೋಗಿದ್ದಾರೆ ಎಂದು ತಿಳಿಸಿದ್ದರು. ಇದರಿಂದ

40 ಅಡಿ ಎತ್ತರದ ಮರವೇರಿ ಕಾರ್ಮಿಕ ಆತ್ಮಹತ್ಯೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ನಿಯಂತ್ರಣ ತಪ್ಪಿ ಇಪ್ಪತ್ತು ಅಡಿ ಆಳದ ಹೊಳೆಗೆ ಬಿದ್ದ ಕಾರು – ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್‌ ಕಡಬ) newskadaba.com ಚಾರ್ಮಾಡಿ, ಫೆ. 19. ಕಾರೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ 20 ಅಡಿ ಆಳದ ಹೊಳೆಗೆ ಬಿದ್ದ ಘಟನೆ ಚಾರ್ಮಾಡಿ ಘಾಟ್ ನ ಮಲಯ ಮಾರುತ ಬಳಿ ಸೋಮವಾರದಂದು ನಡೆದಿದೆ. ನಾಲ್ವರು ಪ್ರವಾಸಿಗರಿದ್ದ ಕಾರು ಚಿತ್ರದುರ್ಗದಿಂದ ಧರ್ಮಸ್ಥಳಕ್ಕೆ ಹೊರಟಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳದ ಹೊಳೆಗೆ ಬಿದ್ದಿದೆನ್ನಲಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿಯಂತ್ರಣ ತಪ್ಪಿ ಇಪ್ಪತ್ತು ಅಡಿ ಆಳದ ಹೊಳೆಗೆ ಬಿದ್ದ ಕಾರು – ಪ್ರಯಾಣಿಕರು ಅಪಾಯದಿಂದ ಪಾರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಸ್ ಹಾಗೂ ಕಾರು ನಡುವೆ ಢಿಕ್ಕಿ- ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 19. ಖಾಸಗಿ ಬಸ್‌ ಹಾಗೂ ಕಾರಿನ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರು ಚಾಲಕ, ಬಸ್ಸಿನ ನಿರ್ವಾಹಕ ಹಾಗೂ ಪ್ರಯಾಣಿಕರೋರ್ವರು ಗಾಯಗೊಂಡ ಘಟನೆ ಕರಿಯಂಗಳ ಗ್ರಾಮದ ಮಂಗಾಜೆ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಕಾರು ಚಾಲಕ ಹೊನ್ನಯ್ಯ ಪೂಜಾರಿ, ಬಸ್ಸಿನ ನಿರ್ವಾಹಕ ಶ್ರೀಕಾಂತ್‌ ಹಾಗೂ ಪ್ರಯಾಣಿಕೆ ಹೈಡ ಕುಟಿನ್ಹಾ ಎಂದು ಗುರುತಿಸಲಾಗಿದೆ. ಬಿ.ಸಿ.ರೋಡು ಕಡೆಗೆ ತೆರಳುತ್ತಿದ್ದ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಘಟನೆಯಲ್ಲಿ ಕಾರು

ಬಸ್ ಹಾಗೂ ಕಾರು ನಡುವೆ ಢಿಕ್ಕಿ- ಮೂವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಯುವರಾಜ್ ಸಿಂಗ್​ ತಾಯಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಳ್ಳತನ

(ನ್ಯೂಸ್‌ ಕಡಬ)newskadaba.com ಹರಿಯಾಣ, ಫೆ.18: ಕ್ರಿಕೆಟರ್ ಯುವರಾಜ್ ಸಿಂಗ್​ ಅವರ ಅಮ್ಮ ವಾಸವಿರುವ ಹರಿಯಾಣದ ಪಂಚಕುಲದಲ್ಲಿರುವ ನಿವಾಸದಲ್ಲಿ ಕಳ್ಳತನವಾಗಿದೆ. ಮನೆಯ ಕಬೋರ್ಡ್​ನಲ್ಲಿ ಸುಮಾರು 75,000 ರೂ. ನಗದು ಮತ್ತು ಆಭರಣ ಕಳವು ಮಾಡಲಾಗಿದೆ ಎಂದು ಯುವಿ ತಾಯಿ ಶಭ್​ನಮ್ ಸಿಂಗ್ ಹೇಳಿದ್ದಾರೆ. ಯುವಿ ಮನೆಯಲ್ಲಿ ಕೆಲಸ ಮಾಡುವ ಕೆಲವು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. ಮನೆಯ ಸಹಾಯಕಿ ಲಲಿತಾ ದೇವಿ, ಅಡುಗೆ ಸಿಬ್ಬಂದಿ ಸಿಲ್ದರ್ ಪಾಲ್ ಮೇಲೆ ಅನುಮಾನ ಇದೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ

ಯುವರಾಜ್ ಸಿಂಗ್​ ತಾಯಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಳ್ಳತನ Read More »

ಕ್ರೈಮ್ ನ್ಯೂಸ್

ರೌಡಿ ಶೀಟರ್ ಗೆ ಚೂರಿ ಇರಿದು ಬರ್ಬರ ಕೊಲೆ..!

(ನ್ಯೂಸ್ ಕಡಬ) newskadaba.com ವಿಜಯನಗರ, ಫೆ. 16. ರೌಡಿ ಶೀಟರ್ ಓರ್ವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯನಗರದ ಹಗರಿಬೊಮ್ಮನ ಹಳ್ಳಿಯ ಜೆಸ್ಕಾಂ ಕಚೇರಿಯ ಬಳಿ ನಡೆದಿದೆ. ಕೊಲೆಯಾದ ರೌಡಿಶೀಟರ್ ನ್ನು ಬಂಗಾರಿ ಮಂಜುನಾಥ್ (28) ಎಂದು ಗುರುತಿಸಲಾಗಿದೆ. ಹಳೆ ದ್ವೇಷ, ವೈಷಮ್ಯ ಹಾಗೂ ಹಣಕಾಸಿನ ವ್ಯವಹಾರದ ಹಿನ್ನೆಲೆ ಮಂಜುನಾಥ್ ನ ಚೂರಿ ಹಾಕಿ ಕೊಲೆ ಮಾಡಿದ್ದಾರೆ. ಕುಟುಂಬಸ್ಥರಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ರೌಡಿ ಶೀಟರ್ ಗೆ ಚೂರಿ ಇರಿದು ಬರ್ಬರ ಕೊಲೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ದೇವಸ್ಥಾನದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆ…!

(ನ್ಯೂಸ್ ಕಡಬ) newskadaba.com ಉಡುಪಿ, ಫೆ. 16. ದೇವಸ್ಥಾನದ ಕೆರೆಯೊಂದರಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾಗಿರುವ ಕುರಿತು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಉಂಡಾರು ಎಂಲ್ಲಿಂದ ವರದಿಯಾಗಿದೆ. ಮೃತ ಯುವಕನನ್ನು ಪಡುಬಿದ್ರಿ ನಿವಾಸಿ ವಿನಯ್ ರಾವ್  (26) ಎಂದು ಗುರುತಿಸಲಾಗಿದೆ. ಈತ ಗುರುವಾರದಂದು ರಾತ್ರಿ 12 ಗಂಟೆ ವೇಳೆಗೆ ದೇವಸ್ಥಾನದ ಬಳಿ ತಿರುಗಾಡುತ್ತಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಪತ್ತೆಯಾದ ಹಿನ್ನೆಲೆ ಈತ ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಕಾಪು

ದೇವಸ್ಥಾನದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆ…! Read More »

ಕರಾವಳಿ, ಕ್ರೈಮ್ ನ್ಯೂಸ್

ಮನೆ ಮಾಲೀಕನಿಗೆ ಖಾರದ ಪುಡಿ ಎರಚಿ, ಬೆದರಿಸಿ ನಗ-ನಗದು ದೋಚಿದ ಕಳ್ಳರು…!

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಫೆ. 16. ಮನೆ ಮಾಲೀಕನಿಗೆ ಖಾರದ ಪುಡಿ ಎರಚಿ ಕುತ್ತಿಗೆಗೆ ಮಾರಕಾಯುಧವನ್ನಿಟ್ಟು ಬೆದರಿಸಿ ನಾಲ್ವರು ಅಪರಿಚಿತರ ತಂಡವೊಂದು ಮನೆಯಲ್ಲಿದ್ದ ಸುಮಾರು 5 ಲಕ್ಷ ರೂ. ನಗದು ಹಾಗೂ 30 ಗ್ರಾಂ. ನ ಮಾಂಗಲ್ಯ ಸರವನ್ನು ಸುಲಿಗೆ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಮಾಳಿಗನಾಡು ಹೆಬ್ಬಾರಟ್ಟಿ ಗ್ರಾಮದಲ್ಲಿ ನಡೆದಿದೆ. ಹೆಬ್ಬಾರಟ್ಟಿ ಅನಂತ ಹೆಬ್ಬಾರ್ ಎಂಬವರ ಮನೆಗೆ ಗುರುವಾರದಂದು ರಾತ್ರಿ ನಾಲ್ವರು ಅಪರಿಚಿತ ಯುವಕರ ತಂಡವೊಂದು ದಾಳಿ ನಡೆಸಿ, ಮನೆ ಮಾಲೀಕನ ಕುತ್ತಿಗೆಗೆ ಹರಿತವಾದ ಲಾಂಗ್

ಮನೆ ಮಾಲೀಕನಿಗೆ ಖಾರದ ಪುಡಿ ಎರಚಿ, ಬೆದರಿಸಿ ನಗ-ನಗದು ದೋಚಿದ ಕಳ್ಳರು…! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top