ಬ್ರೇಕಿಂಗ್ ನ್ಯೂಸ್

ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ವಿಧಿವಶ

(ನ್ಯೂಸ್ ಕಡಬ) newskadaba.com ನವದೆಹಲಿ:, ಸೆ. 27: ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರು ಇಂದು ಬೆಳಿಗ್ಗೆ ದೆಹಲಿಯಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.   ವಾಜಪೇಯಿ ಯವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು.ರಾಜಸ್ಥಾನ ಮೂಲದ ಜಸ್ವಂತ್ ಸಿಂಗ್ ಅವರು ಭಾರತದ ವಿದೇಶಾಂಗ ಸಚಿವರು, ರಕ್ಷಣಾ ಸಚಿವರು ಮತ್ತು ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು 1950 ಮತ್ತು 60 ರ ದಶಕಗಳಲ್ಲಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದರು, ಆದರೆ ನಂತರ ಅವರು ರಾಜಕೀಯ ವೃತ್ತಿಯನ್ನು ಮುಂದುವರಿಸಲು […]

ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ವಿಧಿವಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ➤ ನಾಲ್ವರ ದುರ್ಮರಣ

(ನ್ಯೂಸ್ ಕಡಬ) newskadaba.com ಶಿರಸಿ, ಸೆ. 25. ಕಾರು ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಯಲ್ಲಾಪುರ ವ್ಯಾಪ್ತಿಯ ರಾ.ಹೆ. 63ರ ಹೊಸಳ್ಳಿ ಎಂಬಲ್ಲಿ ನಡೆದಿದೆ. ದೆಹಲಿ ಪಾಸಿಂಗ್ ಇರುವ ಕಾರೊಂದು ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದ್ದು, ಈ ರಭಸಕ್ಕೆ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇವರು ಉತ್ತರ ಭಾರತದಿಂದ ದಕ್ಷಿಣ

ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ➤ ನಾಲ್ವರ ದುರ್ಮರಣ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ವಿಚಾರಣೆಗೆ ಹಾಜರಾಗಲು ಮುಂಬೈಗೆ ಆಗಮಿಸಿದ ದೀಪಿಕಾ ಪಡುಕೋಣೆ

(ನ್ಯೂಸ್ ಕಡಬ) newskadaba.com ಮುಂಬೈ, ಸೆ. 25. ಎನ್.ಸಿ.ಬಿ ವಿಚಾರಣೆಯ ಹಿನ್ನೆಲೆ ಶೂಟಿಂಗ್ ನಲ್ಲಿದ್ದ ದೀಪಿಕಾ ಅರ್ಧಕ್ಕೆ ನಿಲ್ಲಿಸಿ, ವಿಚಾರಣೆಗೆ ಹಾಜರಾಗಲು ಮುಂಬೈಗೆ ಆಗಮಿಸಿದ್ದಾರೆ. ಪತಿ ರಣವೀರ್ ಸಿಂಗ್ ಜೊತೆ ಪಣಜಿ ಏರ್ ಪೋರ್ಟ್ ನಿಂದ ವಿಮಾನದ ಮೂಲಕ ಮುಂಬೈಗೆ ತಲುಪಿದ್ದಾರೆ. ಸೆ. 26ರಂದು ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ತಿಳಿಸಿ, ನೋಟೀಸ್ ಜಾರಿಗೊಳಿಸಿದ್ದರು. ಈ ಹಿನ್ನೆಯಿಂದ ಅವರು ಮುಂಬೈಗೆ ಆಗಮಿಸಿದ್ದಾರೆ.

ವಿಚಾರಣೆಗೆ ಹಾಜರಾಗಲು ಮುಂಬೈಗೆ ಆಗಮಿಸಿದ ದೀಪಿಕಾ ಪಡುಕೋಣೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೋವಿಡ್ ತಪಾಸಣೆ ಮಾಡದವರಿಗೆ ಬಿಸಿ ಮುಟ್ಟಿಸಿದ ಜಿಲ್ಲಾಡಳಿತ ➤ ಎಲ್ಲಾ ಸಾರ್ವಜನಿಕರಿಗೆ ಆಯಾ ಗ್ರಾ.ಪಂ.ನಲ್ಲಿ ಕೊರೋನಾ ಟೆಸ್ಟ್ ಕಡ್ಡಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.24. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಾ ಸಾರ್ವಜನಿಕರ ಕೋವಿಡ್ ಪರೀಕ್ಷೆಯನ್ನು ನಡೆಸಿ ಒಂದು ವಾರದೊಳಗೆ ವರದಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಿಂದ ಸುತ್ತೋಲೆ ಹೊರಡಿಸಲಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಸಲ್ಪಡುವ ಶಿಬಿರಗಳ ದಿನಾಂಕ ಮತ್ತು ಮಾಹಿತಿಯನ್ನು ಜಿಲ್ಲಾ ಪಂಚಾಯತ್ ನಿಂದಲೇ ನಿಗದಿಪಡಿಸಲಾಗಿದ್ದು, ವಿವಿಧ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳಲ್ಲಿ

ಕೋವಿಡ್ ತಪಾಸಣೆ ಮಾಡದವರಿಗೆ ಬಿಸಿ ಮುಟ್ಟಿಸಿದ ಜಿಲ್ಲಾಡಳಿತ ➤ ಎಲ್ಲಾ ಸಾರ್ವಜನಿಕರಿಗೆ ಆಯಾ ಗ್ರಾ.ಪಂ.ನಲ್ಲಿ ಕೊರೋನಾ ಟೆಸ್ಟ್ ಕಡ್ಡಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್, ಲೈಫ್‍ಸ್ಟೈಲ್

ವಿಟ್ಲ: ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿ ಸರ ಕದ್ದೊಯ್ದ ಪ್ರಕರಣ ➤ ಓರ್ವ ಮಹಿಳೆ ಹಾಗೂ ಕಡಬ ತಾಲೂಕಿನ ಮೂವರ ಬಂಧನ

(ನ್ಯೂಸ್ ಕಡಬ) newskadaba.com ವಿಟ್ಲ, ಸೆ. 24. ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆಯ ಸಹಿತ ಒಟ್ಟು ನಾಲ್ವರು ಆರೋಪಿಗಳನ್ನು ವಿಟ್ಲ ಎಸ್.ಐ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕಡಬ ತಾಲೂಕಿನ ಸವಣೂರು ನಿವಾಸಿಗಳಾದ ಮಹಮ್ಮದ್ ಶಾಕೀರ್ (23), ಮಹಮ್ಮದ್ ಇಕ್ಬಾಲ್ (24), ಕೆ.ಎ ಮಹಮ್ಮದ್ ಯಾನೆ ಐಟಿ ಮಮ್ಮು (41) ಹಾಗೂ ತಿಂಗಳಾಡಿ ನಿವಾಸಿ ಹಾಜಿರಾ(44) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 20,650 ರೂ.ನಗದು ಹಾಗೂ

ವಿಟ್ಲ: ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿ ಸರ ಕದ್ದೊಯ್ದ ಪ್ರಕರಣ ➤ ಓರ್ವ ಮಹಿಳೆ ಹಾಗೂ ಕಡಬ ತಾಲೂಕಿನ ಮೂವರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಆ್ಯಸಿಡ್ ಎರಚಿ ಪರಾರಿಯಾದಾತ ಪೊಲೀಸ್ ಬಲೆಗೆ..‼️ ➤ ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಸಿನಿಮೀಯ ಶೈಲಿಯಲ್ಲಿ ಆರೋಪಿ ಅಂದರ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.24. ಆ್ಯಸಿಡ್ ದಾಳಿ ನಡೆಸಿ ಪರಾರಿಯಾದ ಆರೋಪಿಯನ್ನು ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಉಪ್ಪಿನಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಂಬಿ ಹಿಂದೆ ನಿಲ್ಲಿಸಿದ್ದಾರೆ. ಕಡಬ ತಾಲೂಕು ಕೊಣಾಲು ಗ್ರಾಮದ ಮಣ್ಣಮಜಲು ನಿವಾಸಿ ಬಿಜು ಥೋಮಸ್ ಎಂಬಾತ ಕುಡಿತದ ಚಟದಿಂದ ತನ್ನ ಪತ್ನಿ, ಮಗಳು ಹಾಗೂ ಪತ್ನಿಯ ಚಿಕ್ಕಮ್ಮನನ್ನು ಕೊಲೆ ಮಾಡುವ ಉದ್ದೇಶದಿಂದ ಅ್ಯಸಿಡ್ ಎರಚಿ ಪರಾರಿಯಾಗಿದ್ದ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ‌ಅರೋಪಿಯ ಬೆನ್ನುಬಿದ್ದ ಪೊಲೀಸರು ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಪುತ್ತೂರು

ಉಪ್ಪಿನಂಗಡಿ: ಆ್ಯಸಿಡ್ ಎರಚಿ ಪರಾರಿಯಾದಾತ ಪೊಲೀಸ್ ಬಲೆಗೆ..‼️ ➤ ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಸಿನಿಮೀಯ ಶೈಲಿಯಲ್ಲಿ ಆರೋಪಿ ಅಂದರ್ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಭಾರತಕ್ಕೆ ತೆರಳುವ ವಿಮಾನಗಳಿಗೆ ಸೌದಿ ಅರೇಬಿಯಾದಿಂದ ಅನುಮತಿ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 24. ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತಕ್ಕೆ ತೆರಳುವ ವಿಮಾನಗಳ ಹಾರಾಟಕ್ಕೆ ಸೌದಿ ಅರೇಬಿಯಾ ಅನುಮತಿ ನೀಡಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸಿದೆ. ಆದರೆ, ಭಾರತದಿಂದ ಸೌದಿ ಅರೇಬಿಯಾಕ್ಕೆ ವಿಮಾನಗಳು ಹಾರಾಟ ನಡೆಸುವುದಿಲ್ಲ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದೆ. ಕೊರೊನಾ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ಭಾರತ ಮತ್ತು ಇತರ ದೇಶಗಳಿಂದ ಬರುವ ಮತ್ತು ಹೋಗುವ ವಿಮಾನಗಳ ಹಾರಾಟಕ್ಕೆ ಮಂಗಳವಾರ ಸೌದಿ ಅರೇಬಿಯಾ ನಿರ್ಬಂಧ ವಿಧಿಸಿತ್ತು.

ಭಾರತಕ್ಕೆ ತೆರಳುವ ವಿಮಾನಗಳಿಗೆ ಸೌದಿ ಅರೇಬಿಯಾದಿಂದ ಅನುಮತಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಎಸ್.ಪಿ.ಬಿ ಆರೋಗ್ಯದಲ್ಲಿ ಮತ್ತೆ ಏರುಪೇರು

(ನ್ಯೂಸ್ ಕಡಬ) newskadaba.com ಚೆನ್ನೈ, ಸೆ‌. 24. ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಮತ್ತೆ ಕ್ಷೀಣಿಸಿದೆ.   ಎಸ್​.ಪಿ.ಬಿ ಅವರಿಗೆ ಆಗಸ್ಟ್ 5ರಂದು ಕೊರೋನಾ ದೃಢಪಟ್ಟಿದ್ದರಿಂದ ಅದೇ ದಿನ ಚೆನ್ನೈನ ಎಂ.ಜಿ.ಎಂ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಗಸ್ಟ್ 28ರಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಇನ್ನೇನು ಬಿಡುಗಡೆಯಾಗುವಷ್ಟರಲ್ಲಿ ಇದೀಗ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೆಲವು ದಿನಗಳಿಂದ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದು, ಯಾವುದೇ ಚೇತರಿಕೆ ಕಂಡುಬಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಎಸ್.ಪಿ.ಬಿ ಆರೋಗ್ಯದಲ್ಲಿ ಮತ್ತೆ ಏರುಪೇರು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಡುಪಿ – ಚಿಕ್ಕಮಗಳೂರು ಸಂಯುಕ್ತ ಖಾಝಿ ಬೇಕಲ್ ಉಸ್ತಾದ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.24. ಉಡುಪಿ, ಚಿಕ್ಕಮಗಳೂರು, ಹಾಸನ ಸಂಯುಕ್ತ‌ ಖಾಝಿ, ಪ್ರಖ್ಯಾತ ವಿದ್ವಾಂಸ, ಸೂಫೀವರ್ಯ ಶೈಖುನಾ ತಾಜುಲ್ ಫುಖಹಾಅ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಸೌಖ್ಯದ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅವರು ಉಡುಪಿ, ಚಿಕ್ಕಮಗಳೂರು, ಹಾಸನ, ಮಂಗಳೂರು ಸೇರಿದಂತೆ ವಿವಿಧ ಮಹಲ್ಲಿನ ಸಂಯುಕ್ತ ಖಾಝಿಯಾಗಿ ಕರ್ತವ್ಯದಲ್ಲಿದ್ದರು.

ಉಡುಪಿ – ಚಿಕ್ಕಮಗಳೂರು ಸಂಯುಕ್ತ ಖಾಝಿ ಬೇಕಲ್ ಉಸ್ತಾದ್ ನಿಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕೇಂದ್ರ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ ➤ ಕೋವಿಡ್ ಗೆ ಬಲಿಯಾದ ಬೆಳಗಾವಿ ಸಂಸದ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.23. ಕೇಂದ್ರ ರೈಲ್ವೇ ಸಚಿವ, ಬೆಳಗಾವಿಯ ಬಿಜೆಪಿ ಸಂಸದ ಸುರೇಶ್ ಅಂಗಡಿ ಕೊರೋನಾ ಸೋಂಕಿನಿಂದ ಬುಧವಾರ ರಾತ್ರಿ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಳೆದ ಎರಡು ದಶಕಗಳಿಂದ ಬೆಳಗಾವಿ ಸಂಸದರಾಗಿರುವ ಸುರೇಶ್ ಅಂಗಡಿ 1955ರ ಜೂನ್ 1 ರಂದು ಬೆಳಗಾವಿಯ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಜನಿಸಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ 2004 ರಿಂದ ಸತತವಾಗಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಇವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.  

ಕೇಂದ್ರ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ ➤ ಕೋವಿಡ್ ಗೆ ಬಲಿಯಾದ ಬೆಳಗಾವಿ ಸಂಸದ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top