ಬ್ರೇಕಿಂಗ್ ನ್ಯೂಸ್

ಪಂಜದಿಂದ ಕಡಬ ಕಡೆಗೆ ಹೊರಟ ಕಾಡಾನೆ ? ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪಂಜ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಫೆ.08. ವರ್ಷಂಪ್ರತಿ ಕಡಬ ಮೂಲಕ ಪಂಜ ಕಡೆಗೆ ತೆರಳುವ ಆನೆಯು ಕಳೆದ ಕೆಲವು ಸಮಯಗಳ ಹಿಂದೆ ಸುಳ್ಯ ತಾಲೂಕಿಗೆ ತೆರಳಿದ್ದು, ಕಳೆದ ರಾತ್ರಿ ಪಂಬೆತ್ತಾಡಿ ಕಾಡಿನಲ್ಲಿ ಆನೆ ಇರುವುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದರು. ಇಂದು ರಾತ್ರಿ ಆನೆಯು ಪಂಬೆತ್ತಾಡಿಯಿಂದ ಹೊರಟಿದ್ದು, ಪಂಜ ಮೂಲಕ ಪುಳಿಕುಕ್ಕು ಕಡೆಗೆ ಸಂಚರಿಸಿದೆ. ಆನೆಯು ಪ್ರತೀ ವರ್ಷ ಅದರದ್ದೇ ಆದ ದಾರಿ ಸಂಚರಿಸುತ್ತಿದ್ದು, ಇಂದು ಕೂಡಾ ಆನೆಯು ಕಡಬ ಹಳೇಸ್ಟೇಷನ್ ಮೂಲಕ ಹಾದುಹೋಗುವ ಸಾಧ್ಯತೆ ದಟ್ಟವಾಗಿದೆ. […]

ಪಂಜದಿಂದ ಕಡಬ ಕಡೆಗೆ ಹೊರಟ ಕಾಡಾನೆ ? ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಪಂಜ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮನವಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಜುಪಿಟರ್ – ಪಿಕಪ್ ನಡುವೆ ಅಪಘಾತ | ಸವಾರ ಮೃತ್ಯು ➤ ಕಳೆದ 36 ಗಂಟೆಗಳಲ್ಲಿ ನಾಲ್ವರು ದ್ವಿಚಕ್ರ ವಾಹನ ಸವಾರರ ದುರ್ಮರಣ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.08. ಮಹೀಂದ್ರಾ ಪಿಕಪ್ ಹಾಗೂ ಟಿವಿಎಸ್ ಜುಪಿಟರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಮೊಟ್ಟೆತ್ತಡ್ಕ ಎಂಬಲ್ಲಿ ಸೋಮವಾರದಂದು ನಡೆದಿದೆ. ಮೃತ ಸವಾರನನ್ನು ಸಾಮೆತ್ತಡ್ಕ ನಿವಾಸಿ ಪ್ರಸಾದ್ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಜುಪಿಟರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪಿಕಪ್ ಚರಂಡಿಗೆ ಇಳಿದಿತ್ತು. ಕರಾವಳಿಯಲ್ಲಿ ಕಳೆದ 36 ಗಂಟೆಗಳ ಅವಧಿಯಲ್ಲಿ ನಡೆದ 4 ದ್ವಿಚಕ್ರ ವಾಹನ ಅಪಘಾತದಲ್ಲಿ ನಾಲ್ವರು ಸವಾರರೂ ಬಲಿಯಾಗಿದ್ದು, ಬೆಚ್ಚಿಬೀಳಿಸುವಂತೆ

ಪುತ್ತೂರು: ಜುಪಿಟರ್ – ಪಿಕಪ್ ನಡುವೆ ಅಪಘಾತ | ಸವಾರ ಮೃತ್ಯು ➤ ಕಳೆದ 36 ಗಂಟೆಗಳಲ್ಲಿ ನಾಲ್ವರು ದ್ವಿಚಕ್ರ ವಾಹನ ಸವಾರರ ದುರ್ಮರಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

? ಕಾಸರಗೋಡು: ಲಾರಿ ಹಾಗೂ ಕಾರು ನಡುವೆ ಢಿಕ್ಕಿ ➤ ಓರ್ವ ಮೃತ್ಯು, ಮೂವರಿಗರ ಗಾಯ

(ನ್ಯೂಸ್ ಕಡಬ) newskadaba.com. ಕಾಸರಗೋಡು, ಫೆ. 08. ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಬಂದ್ಯೋಡು ಮುಟ್ಟಂ ಎಂಬಲ್ಲಿ ಸೋಮವಾರ ನಡೆದಿದೆ. ಮೃತರನ್ನು ಮುಟ್ಟಂ ಸೈದಾಲಿ ಎಂದು ಗುರುತಿಸಲಾಗಿದೆ. ಇವರ ಜೊತೆಗಿದ್ದ ಸೈದಾಲಿ ಅವರ ಮಗನ ಪತ್ನಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದು, ಅವರನ್ನು ಕುಂಬಳೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

? ಕಾಸರಗೋಡು: ಲಾರಿ ಹಾಗೂ ಕಾರು ನಡುವೆ ಢಿಕ್ಕಿ ➤ ಓರ್ವ ಮೃತ್ಯು, ಮೂವರಿಗರ ಗಾಯ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಟ್ಲ: ಬೈಕ್ – ಬೊಲೆರೋ ನಡುವೆ ಅಪಘಾತ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ಫೆ.08. ಬೈಕ್ ಹಾಗೂ ಬೊಲೆರೋ ನಡುವೆ ನಡೆದ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರದಂದು ವಿಟ್ಲ ಸಮೀಪದ ಕಾಶಿಮಠ ಎಂಬಲ್ಲಿ ನಡೆದಿದೆ. ಮೃತ ಸವಾರನನ್ನು ಮಾಣಿ ಸಮೀಪದ ಬರಿಮಾರು ನಿವಾಸಿ ಬಾಲಕೃಷ್ಣ(55) ಎಂದು ಗುರುತಿಸಲಾಗಿದೆ. ವಿಟ್ಲದಿಂದ ಉಕ್ಕುಡ ಕಡೆಗೆ ತೆರಳುತ್ತಿದ್ದ ಬೈಕಿಗೆ ಹಿಂದಿನಿಂದ ಬೊಲೆರೋ ಢಿಕ್ಕಿ ಹೊಡೆದಿದ್ದು, ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಬಾಲಕೃಷ್ಣ ರವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ

ವಿಟ್ಲ: ಬೈಕ್ – ಬೊಲೆರೋ ನಡುವೆ ಅಪಘಾತ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಸುಬ್ರಹ್ಮಣ್ಯ – ಗುಂಡ್ಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಬೃಹತ್ ಮರ ➤ ಸಂಚಾರದಲ್ಲಿ ವ್ಯತ್ಯಯ

(ನ್ಯೂಸ್ ಕಡಬ) newskadaba.com ಕಡಬ, ಫೆ.08. ಬೃಹತ್ ಮರವೊಂದು ರಸ್ತೆಗಡ್ಡವಾಗಿ ಮುರಿದ ಬಿದ್ದುದರಿಂದ ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯುಂಟಾಗಿದೆ. ಬೆಂಗಳೂರಿನಿಂದ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿದ್ದು, ಸೋಮವಾರವಾದ್ದರಿಂದ ಕ್ಷೇತ್ರಕ್ಕೆ ಆಗಮಿಸುವ ಯಾತ್ರಿಕರ ಸಂಖ್ಯೆ ಹೆಚ್ಚಾಗಿದೆ. ಗುಂಡ್ಯ ಅರಣ್ಯ ಕಚೇರಿಯ ಬಳಿ ಬೃಹತ್ ಮರ ಮುರಿದು ಬಿದ್ದ ಕಾರಣ ಸಂಚಾರಕ್ಕೆ ತೊಡಕಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ವಿದ್ಯುತ್ ಲೈನ್ ಗೂ ಹಾನಿಯಾಗಿದ್ದು, ಅರಣ್ಯಾಧಿಕಾರಿಗಳು ಮರವನ್ನು ತೆರವುಗೊಳಿಸುತ್ತಿದ್ದಾರೆ.  

ಸುಬ್ರಹ್ಮಣ್ಯ – ಗುಂಡ್ಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಬೃಹತ್ ಮರ ➤ ಸಂಚಾರದಲ್ಲಿ ವ್ಯತ್ಯಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಲ್ಲಡ್ಕ: ಬೆಳಗಿನ ಘಟನೆ ಮಾಸುವ ಮುನ್ನವೇ ಕಾರು – ಡಿಯೋ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.07. ಕಾರು ಹಾಗೂ ಹೋಂಡಾ ಡಿಯೋ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಡಿಯೋ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಕಲ್ಲಡ್ಕ ಸಮೀಪದ ಪೂರ್ಲಿಪಾಡಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಸವಾರನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಅಪಘಾತದ ತೀವ್ರತೆಗೆ ಡಿಯೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕ್ರೆಟಾ ಕಾರಿನ ಒಂದು ಪಾರ್ಶ್ವ ಹಾನಿಯಾಗಿದೆ. ಇಂದು ಬೆಳಗ್ಗೆಯಷ್ಟೇ

ಕಲ್ಲಡ್ಕ: ಬೆಳಗಿನ ಘಟನೆ ಮಾಸುವ ಮುನ್ನವೇ ಕಾರು – ಡಿಯೋ ನಡುವೆ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ರಾಜ್ಯ ಸರಕಾರಕ್ಕೆ ತಾ.ಪಂ ರದ್ದುಪಡಿಸುವ ಅಧಿಕಾರವಿಲ್ಲ…! ➤ ಸಚಿವ ಶಿವರಾಂ ಹೆಬ್ಬಾರ್

(ನ್ಯೂಸ್ ಕಡಬ) newskadaba.com ಕಾರವಾರ, ಫೆ. 07. ರಾಜ್ಯ ಸರಕಾರ ತಾ.ಪಂ ವ್ಯವಸ್ಥೆಯನ್ನು ರದ್ದುಪಡಿಸಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ವಿಷಯ, ತಾ.ಪಂ ರದ್ದುಪಡಿಸುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ ಎಂದು ಗ್ರಾಮೀಣಾಭಿವೃದ್ದಿ ಸಚಿವರು ಸ್ಪಷ್ಟಪಡಿಸಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ಈ ಬಾರಿಯೂ ತಾ.ಪಂ ಹಾಗೂ ಜಿ.ಪಂ ಚುನಾವಣೆಗಳು ಏಕಕಾಲದಲ್ಲಿ ನಡೆಯಲಿದೆ ಎಂದು ಹೇಳಿದರು.

ರಾಜ್ಯ ಸರಕಾರಕ್ಕೆ ತಾ.ಪಂ ರದ್ದುಪಡಿಸುವ ಅಧಿಕಾರವಿಲ್ಲ…! ➤ ಸಚಿವ ಶಿವರಾಂ ಹೆಬ್ಬಾರ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಒತ್ತಡಕ್ಕೆ ಮಣಿದ ಕಾಂಗ್ರೆಸ್ ಹೈಕಮಾಂಡ್ ➤ ಕೊನೆಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನಲಪಾಡ್ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.07. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಆಂತರಿಕ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದರೂ ಕ್ರಿಮಿನಲ್ ಹಿನ್ನೆಲೆಯ ಕಾರಣದಿಂದ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದ ಮುಹಮ್ಮದ್ ಹ್ಯಾರಿಸ್‌ ನಲಪಾಡ್ ಕೊನೆಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 64 ಸಾವಿರ ಮತಗಳನ್ನು ಗಳಿಸಿ ಗೆದ್ದರೂ ಅಧ್ಯಕ್ಷ ಸ್ಥಾನ ನೀಡದೆ 57 ಸಾವಿರ ಗಳಿಸಿ ಎರಡನೇ ಸ್ಥಾನ ಗಳಿಸಿದ್ದ ರಕ್ಷಾ ರಾಮಯ್ಯಗೆ ಮಣೆ ಹಾಕಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆ

ಒತ್ತಡಕ್ಕೆ ಮಣಿದ ಕಾಂಗ್ರೆಸ್ ಹೈಕಮಾಂಡ್ ➤ ಕೊನೆಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನಲಪಾಡ್ ಆಯ್ಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಲ್ಲಡ್ಕ: ಟ್ಯಾಂಕರ್ – ಸ್ಕೂಟರ್ ನಡುವೆ ಢಿಕ್ಕಿ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.07. ಟ್ಯಾಂಕರ್ ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಲ್ಲಡ್ಕ ಪೇಟೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಮೃತ ಸವಾರನನ್ನು ಕಲ್ಲಡ್ಕದ ಬಿಕೆ ನಗರ ನಿವಾಸಿ ಹಿಮಾದ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಕಲ್ಲಡ್ಕ ಪೇಟೆಯಲ್ಲಿ ಸ್ಕೂಟರ್ ಗೆ ಢೆಕ್ಕಿಯಾಗಿದ್ದು, ಘಟನೆಯಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಭೀಕರತೆಗೆ ಯುವಕನ ಮೃತದೇಹ ಛಿದ್ರವಾಗಿತ್ತು. ಸ್ಥಳಕ್ಕೆ ಬಂಟ್ವಾಳ

ಕಲ್ಲಡ್ಕ: ಟ್ಯಾಂಕರ್ – ಸ್ಕೂಟರ್ ನಡುವೆ ಢಿಕ್ಕಿ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಾರು – ಮೀನಿನ ಲಾರಿ ನಡುವೆ ಅಪಘಾತ ➤ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.06. ಲಾರಿ ಮತ್ತು ಕಾರಿನ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ತುಳು ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಗಾಯಗೊಂಡ ಘಟನೆ ಶನಿವಾರ ಬೆಳಗಿನ ಜಾವ ನಂತೂರಿನಲ್ಲಿ ನಡೆದಿದೆ. ದಯಾನಂದ ಕತ್ತಲ್ ಸಾರ್ ಅವರು ತನ್ನ ಕಾರಿನಲ್ಲಿ ನಗರದಿಂದ ನಂತೂರು ಕಡೆಗೆ ತೆರಳುತ್ತಿದ್ದ ವೇಳೆ ನಂತೂರು ಜಂಕ್ಷನ್ ಬಳಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮೀನಿನ ಲಾರಿ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ದಯಾನಂದ ಕತ್ತಲ್ ಸಾರ್ ಅವರ ತಲೆಗೆ ಗಾಯಗಳಾಗಿದ್ದು,

ಕಾರು – ಮೀನಿನ ಲಾರಿ ನಡುವೆ ಅಪಘಾತ ➤ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top