ಬ್ರೇಕಿಂಗ್ ನ್ಯೂಸ್

ಗ್ರಾಮೀಣ ಭಾಗದಲ್ಲಿ ದಿನೇದಿನೇ ಹೆಚ್ಚುತ್ತಿರುವ ಕೊರೋನಾ ಆರ್ಭಟ ➤ ಕಡಬ ತಾಲೂಕಿನಲ್ಲಿಂದು 17 ಮಂದಿಗೆ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಎ.28. ಗ್ರಾಮೀಣ ಭಾಗದಲ್ಲೂ ಕೊರೋನಾ ಸೋಂಕು ದಿನೇದಿನೇ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆಯ ವರದಿಯಂತೆ ಎಪ್ರಿಲ್ 28 ರಂದು ಕಡಬ ತಾಲೂಕಿನಲ್ಲಿ 17 ಮಂದಿಗೆ ಕೊರೋನಾ ದೃಢಪಟ್ಟಿದೆ. ಕಡಬ ತಾಲೂಕಿನ ಪೆರಿಯಡ್ಕದ 40 ವರ್ಷದ ಮತ್ತು 41 ವರ್ಷದ ಇಬ್ಬರು ವ್ಯಕ್ತಿಗಳು, 31 ವರ್ಷದ ಮಹಿಳೆ, 5 ವರ್ಷದ ಬಾಲಕಿ, 7 ವರ್ಷದ ಬಾಲಕ, ನೆಲ್ಯಾಡಿ ಕೌಕ್ರಾಡಿ ನಿವಾಸಿ 29 ವರ್ಷದ ವ್ಯಕ್ತಿ, ಆಲಂಕಾರಿನ 31 ವರ್ಷದ ವ್ಯಕ್ತಿ, ಕಾಣಿಯೂರು ಕೂಡುರಸ್ತೆಯ 72 […]

ಗ್ರಾಮೀಣ ಭಾಗದಲ್ಲಿ ದಿನೇದಿನೇ ಹೆಚ್ಚುತ್ತಿರುವ ಕೊರೋನಾ ಆರ್ಭಟ ➤ ಕಡಬ ತಾಲೂಕಿನಲ್ಲಿಂದು 17 ಮಂದಿಗೆ ಕೊರೋನಾ ದೃಢ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬಟ್ಟೆ, ಮೊಬೈಲ್, ಚಿನ್ನದಂಗಡಿ ಮುಚ್ಚುವಂತೆ ಸರಕಾರದಿಂದ ಸುತ್ತೋಲೆ ➤ ಕಡಬ ವ್ಯಾಪ್ತಿಯ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಚ್ಚುವಂತೆ ಎಸ್ಐ ರುಕ್ಮನಾಯ್ಕ್ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಎ.22. ಕೊರೋನಾ ಹತೋಟಿಗೆ ಕಠಿಣ ಕ್ರಮಗಳನ್ನು ಕೈಗೊಂಡಿರುವ ಸರಕಾರವು ಬಟ್ಟೆ, ಮೊಬೈಲ್ ಹಾಗೂ ಚಿನ್ನಾಭರಣದ ಅಂಗಡಿಗಳನ್ನು ಮುಚ್ಚುವಂತೆ ದಿಢೀರ್ ಸೂಚನೆ ನೀಡಿದೆ. ಇದೀಗ ಪೊಲೀಸರು ಮಾಲಕರಲ್ಲಿ ಅಂಗಡಿ ಮುಚ್ಚುವಂತೆ ಸೂಚಿಸಿದ್ದು, ಕೆಲವೆಡೆ ವ್ಯಾಪಾರಿಗಳು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಕಡಬ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಬಟ್ಟೆ, ಮೊಬೈಲ್ ಹಾಗೂ ಚಿನ್ನಾಭರಣದ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚುವಂತೆ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ರುಕ್ಮನಾಯ್ಕ್ ಸೂಚಿಸಿದ್ದಾರೆ.    

ಬಟ್ಟೆ, ಮೊಬೈಲ್, ಚಿನ್ನದಂಗಡಿ ಮುಚ್ಚುವಂತೆ ಸರಕಾರದಿಂದ ಸುತ್ತೋಲೆ ➤ ಕಡಬ ವ್ಯಾಪ್ತಿಯ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಚ್ಚುವಂತೆ ಎಸ್ಐ ರುಕ್ಮನಾಯ್ಕ್ ಮನವಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅನ್ನಭಾಗ್ಯಕ್ಕೆ ಕನ್ನ ಹಾಕಿ ಗಾಯದ ಮೇಲೆ ಬರೆ ಎಳೆದ ಸರಕಾರ ➤ ಇನ್ಮುಂದೆ ಬರೀ 2 ಕೆಜಿ ಅಕ್ಕಿ..‼️

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.22. ಕೊರೋನಾ ಸಂಕಷ್ಟದ ನಡುವೆ ಅನ್ನಭಾಗ್ಯ ಅಕ್ಕಿಗೆ ಸರಕಾರವು ಕನ್ನ ಹಾಕಿದ್ದು, ಈ ತಿಂಗಳಿನಿಂದ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿಯ ಬದಲಾಗಿ 2 ಕೆಜಿ ಅಕ್ಕಿ ವಿತರಿಸಲು ಸರಕಾರವು ಮುಂದಾಗಿದೆ. ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ವೇಳೆ ಬಡ ಜನತೆಯ ಹಸಿವು ನೀಗಿಸುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಪ್ರತೀ ತಿಂಗಳು ಓರ್ವ ಸದಸ್ಯನಿಗೆ ತಲಾ 7 ಕೆಜಿಯಂತೆ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿತ್ತು. ತದ ನಂತರ ಯಡಿಯೂರಪ್ಪ

ಅನ್ನಭಾಗ್ಯಕ್ಕೆ ಕನ್ನ ಹಾಕಿ ಗಾಯದ ಮೇಲೆ ಬರೆ ಎಳೆದ ಸರಕಾರ ➤ ಇನ್ಮುಂದೆ ಬರೀ 2 ಕೆಜಿ ಅಕ್ಕಿ..‼️ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿಂದು ಕೊರೋನಾ ಸೋಂಕಿಗೆ 116 ಮಂದಿ ಬಲಿ ➤ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 401 ಮಂದಿಗೆ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.21. ರಾಜ್ಯದಲ್ಲಿ ಕೊರೋನಾ ಅಬ್ಬರ ಮಿತಿಮೀರುತ್ತಿದ್ದು, ಇಂದು 23000 ದ ಗಡಿ ದಾಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 401 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ 13000ದ ಗಡಿ ದಾಟಿದೆ. ರಾಜ್ಯಾದ್ಯಂತ ಇಂದು 23558ದ ಗಡಿ ದಾಟಿದ್ದು, ರಾಜ್ಯದಲ್ಲಿಂದು 116 ಜನ ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ‌.      

ರಾಜ್ಯದಲ್ಲಿಂದು ಕೊರೋನಾ ಸೋಂಕಿಗೆ 116 ಮಂದಿ ಬಲಿ ➤ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 401 ಮಂದಿಗೆ ಕೊರೋನಾ ದೃಢ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಕೊರೋನಾ ಟಫ್ ರೂಲ್ಸ್ ➤ ವೀಕೆಂಡ್ ಫುಲ್‌ ಕರ್ಫ್ಯೂ, ಉಳಿದ ದಿನ ನೈಟ್ ಕರ್ಫ್ಯೂ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.20. ರಾಜ್ಯದಲ್ಲಿ ಕೊರೋನಾ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಸರಕಾರವು ಟಫ್ ರೂಲ್ಸ್ ಜಾರಿಗೊಳಿಸಿದ್ದು, ವೀಕೆಂಡ್ ಸಂಪೂರ್ಣ ಕರ್ಫ್ಯೂ ಹಾಗೂ ಉಳಿದ ದಿನ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದೆ. ನಾಳೆಯಿಂದ ಆರಂಭಗೊಂಡು ಮೇ ತಿಂಗಳ 4ರ ತನಕ ಒಟ್ಟು ಹದಿನಾಲ್ಕು ದಿನಗಳ ಕಾಲ ಹೊಸ ಮಾರ್ಗಸೂಚಿ ಜಾರಿಯಲ್ಲಿರಲಿದೆ. ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ‌. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯ ತನಕ

ರಾಜ್ಯದಲ್ಲಿ ಕೊರೋನಾ ಟಫ್ ರೂಲ್ಸ್ ➤ ವೀಕೆಂಡ್ ಫುಲ್‌ ಕರ್ಫ್ಯೂ, ಉಳಿದ ದಿನ ನೈಟ್ ಕರ್ಫ್ಯೂ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೇಶದಲ್ಲಿ ಕೊರೋನಾ ಮರಣ ಮೃದಂಗ ➤ ರಾತ್ರಿ 8.45ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮಾತು

(ನ್ಯೂಸ್ ಕಡಬ) newskadaba.com ನವದೆಹಲಿ, ಎ.20. ದೇಶದಲ್ಲಿ ಕೊರೋನಾ ಮರಣ ಮೃದಂಗ ಬಾರಿಸುತ್ತಿರುವುದರ ನಡುವೆಯೇ ರಾಜ್ಯದಲ್ಲಿ ಲಾಕ್‍ಡೌನ್ ಮಾಡುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯಪಾಲರ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ನಡೆದಿದ್ದು, ಲಾಕ್‍ಡೌನ್ ಮಾಡುವ ಬಗ್ಗೆ ಬಹುತೇಕ ನಾಯಕರು ಒಲವನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾತ್ರಿ 8.45 ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿಯ ಮಾತಿನತ್ತ ಇದೀಗ ಎಲ್ಲರ ಚಿತ್ತ ಹರಿದಿದ್ದು, ಲಾಕ್‍ಡೌನ್ ವಿಚಾರವಾಗಿ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.  

ದೇಶದಲ್ಲಿ ಕೊರೋನಾ ಮರಣ ಮೃದಂಗ ➤ ರಾತ್ರಿ 8.45ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮಾತು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗ್ರಾಮೀಣ ಭಾಗಕ್ಕೂ ತಟ್ಟಿದ ಕೊರೋನಾ ಶಾಕ್..‼️ ➤ ಕಡಬ ತಾಲೂಕಿನ 11 ಮಂದಿಯಲ್ಲಿ ಕೊರೋನಾ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಎ.20. ಕೊರೋನಾ 2ನೇ ಅಲೆಯ ಅಟ್ಟಹಾದ ಮಿತಿಮೀರುತ್ತಿದ್ದು, ಎಪ್ರಿಲ್ 20ರ ಆರೋಗ್ಯ ಇಲಾಖೆಯ ವರದಿಯಂತೆ ಪುತ್ತೂರು ಮತ್ತು ಕಡಬದಲ್ಲಿ ಒಂದೇ ದಿನ 30 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಕಡಬ ತಾಲೂಕಿನ ಗುಂಡ್ಯ ಸಮೀಪದ ಅಡ್ಡಹೊಳೆಯ 44 ವರ್ಷದ ಪುರುಷ, ಸವಣೂರು ನಿವಾಸಿ 38 ವರ್ಷದ ಮಹಿಳೆ, 81 ವರ್ಷದ ಪುರುಷ, ಕಡಬದ 21 ವರ್ಷದ ಯುವಕ, ಕೊಣಾಲು ನಿವಾಸಿ 57 ವರ್ಷದ ಪುರುಷ, ಚಾರ್ವಾಕ ನಿವಾಸಿ 26 ವರ್ಷದ ಯುವಕ

ಗ್ರಾಮೀಣ ಭಾಗಕ್ಕೂ ತಟ್ಟಿದ ಕೊರೋನಾ ಶಾಕ್..‼️ ➤ ಕಡಬ ತಾಲೂಕಿನ 11 ಮಂದಿಯಲ್ಲಿ ಕೊರೋನಾ ಪತ್ತೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಬೈಕ್ ಗಳ ನಡುವೆ ಢಿಕ್ಕಿ | ಓರ್ವ ಮೃತ್ಯು, ಇಬ್ಬರು ಗಂಭೀರ ➤ ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ತಲುಪಿಸಿದ ‘ಬಾಬಾ ಅಂಬ್ಯುಲೆನ್ಸ್ ನ ನೌಫಲ್’

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.19. ಬೈಕ್ ಗಳೆರಡು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರನೋರ್ವ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಉರುವಾಲು ಪದವು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೃತ ಸವಾರನನ್ನು ರಾಜೇಶ್ (30) ಎಂದು ಗುರುತಿಸಲಾಗಿದೆ. ಸಹ ಸವಾರ ಪುರಂದರ ಹಾಗೂ ಇನ್ನೊಂದು ಬೈಕ್ ಚಲಾಯಿಸುತ್ತಿದ್ದ ಶಾಫಿ ಎಂಬವರು ಗಂಭೀರ ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಪ್ಪೆಟ್ಟಿ ಕಡೆಯಿಂದ ಬಂದಾರು ಕಡೆ ರಾಜೇಶ್

ಉಪ್ಪಿನಂಗಡಿ: ಬೈಕ್ ಗಳ ನಡುವೆ ಢಿಕ್ಕಿ | ಓರ್ವ ಮೃತ್ಯು, ಇಬ್ಬರು ಗಂಭೀರ ➤ ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ತಲುಪಿಸಿದ ‘ಬಾಬಾ ಅಂಬ್ಯುಲೆನ್ಸ್ ನ ನೌಫಲ್’ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

Breaking – ಸ್ನಾನಕ್ಕೆಂದು ನದಿಗಿಳಿದ ಯುವಕರಿಬ್ಬರು ನೀರುಪಾಲು

(ನ್ಯೂಸ್ ಕಡಬ) newskadaba.com ಕಡಬ, ಎ.19. ಸ್ನಾನಕ್ಕೆಂದು ನದಿಗೆ ಇಳಿದಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ಇಚಿಲಂಪಾಡಿಯಲ್ಲಿ ನಡೆದಿದೆ. ಮೃತ ಯುವಕರನ್ನು ನೆಲ್ಯಾಡಿ ಶಾಂತಿಬೆಟ್ಟು ನಿವಾಸಿ ಉಮ್ಮರ್ ಎಂಬವರ ಪುತ್ರ ಝಾಕಿರ್(20) ಹಾಗೂ ಸಹೋದರಿಯ ಪುತ್ರ ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆ ನಿವಾಸಿ ಸಿನಾನ್ ಎಂದು ಗುರುತಿಸಲಾಗಿದೆ. ಮೃತ ಯುವಕರು ಸ್ನಾನಕ್ಕೆಂದು ಇಚಿಲಂಪಾಡಿ ಸೇತುವೆ ಸಮೀಪ ನದಿಗೆ ಇಳಿದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ಸ್ಥಳೀಯರು ನೀರಿಗಿಳಿದು ಇಬ್ಬರ ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ.

Breaking – ಸ್ನಾನಕ್ಕೆಂದು ನದಿಗಿಳಿದ ಯುವಕರಿಬ್ಬರು ನೀರುಪಾಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗುತ್ತಿಗಾರು ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ➤ ಪರೀಕ್ಷೆ ರದ್ದು, ಆತಂಕದಲ್ಲಿ ಇತರ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಸುಳ್ಯ, ಎ.19. ಗುತ್ತಿಗಾರು ಸರಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ತರಗತಿಯ ಮೂವರು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಇಂಟರ್ನಲ್ ಪರೀಕ್ಷೆಯನ್ನು ರದ್ದುಗೊಳಿಸಿ ಶಾಲೆಗೆ ರಜೆ ಸಾರಲಾಗಿದೆ. ಸೋಮವಾರದಂದು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದ ವೇಳೆ ಮೂವರು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಇಂಟರ್ನಲ್ ಪರೀಕ್ಷೆಯನ್ನು ರದ್ದುಗೊಳಿಸಿ ವಿದ್ಯಾರ್ಥಿಗಳಿಗೆ ರಜೆ ನೀಡಿದ ಬಗ್ಗೆ ವರದಿಯಾಗಿದೆ. ಮೂವರಿಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಇತರ ವಿದ್ಯಾರ್ಥಿಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.    

ಗುತ್ತಿಗಾರು ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ➤ ಪರೀಕ್ಷೆ ರದ್ದು, ಆತಂಕದಲ್ಲಿ ಇತರ ವಿದ್ಯಾರ್ಥಿಗಳು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top