ಬ್ರೇಕಿಂಗ್ ನ್ಯೂಸ್

ಕಡಬ: ಕರ್ತವ್ಯ ನಿರತ ಪೊಲೀಸರೊಂದಿಗೆ ವಾಗ್ವಾದ ➤ ನಾಲ್ವರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ.09. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಯೊಂದಿಗೆ ಉಡಾಫೆಯಿಂದ ವರ್ತಿಸಿದ ಆರೋಪದಲ್ಲಿ ನಾಲ್ವರನ್ನು ಕಡಬ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬುಧವಾರದಂದು ಆಲಂಕಾರಿನಲ್ಲಿ ಕರ್ತವ್ಯ ನಿರತ ಪೋಲಿಸ್ ಸಿಬ್ಬಂದಿಯೊಂದಿಗೆ ಜೀಪು ಹಾಗೂ ಆಟೋ ರಿಕ್ಷಾದಲ್ಲಿ ಬಂದ ಸಂಜೀವ, ಶೇಖರ, ಉದಯ ಮತ್ತು ಶಿಯಾಬ್ ಎಂಬವರು ಅನುಚಿತವಾಗಿ ವರ್ತಿಸಿದ್ದಾರೆಂದು ತಿಳಿದುಬಂದಿದ್ದು, ವಾಹನ ಸಹಿತ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.      

ಕಡಬ: ಕರ್ತವ್ಯ ನಿರತ ಪೊಲೀಸರೊಂದಿಗೆ ವಾಗ್ವಾದ ➤ ನಾಲ್ವರು ಪೊಲೀಸ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರೂಪದರ್ಶಿಯನ್ನು 22 ದಿನ ಕೂಡಿ ಹಾಕಿ ಅತ್ಯಾಚಾರಗೈದ ಉದ್ಯಮಿ ➤ ಸಿಗರೇಟ್ ನಿಂದ ಸುಟ್ಟು ವೀಡಿಯೋ ಚಿತ್ರಣ

(ನ್ಯೂಸ್ ಕಡಬ) newskadaba.com ಕೊಚ್ಚಿನ್, ಜೂ.09. ರೂಪದರ್ಶಿ ಯುವತಿಯನ್ನು 22 ದಿನಗಳ ಕಾಲ ಫ್ಲ್ಯಾಟ್ ವೊಂದರಲ್ಲಿ ಕೂಡಿ ಹಾಕಿ ಅತ್ಯಾಚಾರಗೈದಿರುವ ಘಟನೆ ಕೇರಳದ ಕೊಚ್ಚಿನ್ ನಲ್ಲಿ ವರ್ಷಾರಂಭದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೇರಳದ ಪ್ರಸಿದ್ಧ ಉದ್ಯಮಿಯೋರ್ವ ಸಂತ್ರಸ್ತ ರೂಪದರ್ಶಿಯನ್ನು ಫ್ಲ್ಯಾಟ್ ವೊಂದರಲ್ಲಿ ಕೂಡಿ ಹಾಕಿ ನಿರಂತರ ಅತ್ಯಾಚಾರಗೈದಿದ್ದಲ್ಲದೇ ಸಿಗರೇಟ್ ನಿಂದ ರೂಪದರ್ಶಿಯ ಮೈಗೆ ಸುಟ್ಟಿದ್ದ ಎನ್ನಲಾಗಿದೆ. 22 ನೇ ದಿನದಂದು ಆಕೆ ಫ್ಲ್ಯಾಟ್ ನಿಂದ ತಪ್ಪಿಸಿಕೊಂಡು ಹೊರಬಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಪೊಲೀಸರು ಯಾವುದೇ

ರೂಪದರ್ಶಿಯನ್ನು 22 ದಿನ ಕೂಡಿ ಹಾಕಿ ಅತ್ಯಾಚಾರಗೈದ ಉದ್ಯಮಿ ➤ ಸಿಗರೇಟ್ ನಿಂದ ಸುಟ್ಟು ವೀಡಿಯೋ ಚಿತ್ರಣ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಾಲ್ಕು ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ದೌರ್ಜನ್ಯ ➤ ಬೆಳ್ತಂಗಡಿಯಲ್ಲಿ ನಡೆಯಿತು ಪೈಶಾಚಿಕ ಕೃತ್ಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.08. ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ಬೆಳ್ತಂಗಡಿಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಿರುವ ಧರ್ಮಸ್ಥಳ ಪೋಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ಕತ್ತರಿಗುಡ್ಡೆ ನಿವಾಸಿ ವಿಘ್ನೇಶ್ ಭಂಡಾರಿ ಎಂದು ಗುರುತಿಸಲಾಗಿದೆ. ಆರೋಪಿಯು ತನ್ನ ಮನೆ ಸಮೀಪದ ನಾಲ್ಕು ವರ್ಷ ಪ್ರಾಯದ ಬಾಲಕಿಯನ್ನು ಮನೆಗೆ ಕರೆದೊಯ್ದು ಬೆತ್ತಲೆ ಚಿತ್ರಗಳನ್ನು ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿಯ ತಂದೆ ಧರ್ಮಸ್ಥಳ

ನಾಲ್ಕು ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ದೌರ್ಜನ್ಯ ➤ ಬೆಳ್ತಂಗಡಿಯಲ್ಲಿ ನಡೆಯಿತು ಪೈಶಾಚಿಕ ಕೃತ್ಯ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ನಿಮ್ಮಲ್ಲಿ 5 ರೂ.ನ ಹಳೆಯ ನೋಟು ಇದೆಯಾ..? ➤ ಹಾಗಿದ್ದಲ್ಲಿ ನೀವು ಲಕ್ಷಾಧೀಶ ಆಗೋದು ಗ್ಯಾರಂಟಿ

(ನ್ಯೂಸ್ ಕಡಬ) newskadaba.com ಮುಂಬಯಿ, ಜೂ.08. ನಿಮ್ಮ ಬಳಿ 5 ರೂಪಾಯಿಯ ಹಳೆಯ ನೋಟು ಇದೆಯಾ? 5 ರೂಪಾಯಿಯ ಐದು ನೋಟುಗಳು ಇದ್ದಲ್ಲಿ ನೀವೇ ಲಕ್ಷಾಧೀಶರಾಗುತ್ತೀರಿ. ಹೇಗೆಂಬ ಕುತೂಹಲವೇ..? ಇಲ್ಲಿದೆ ಬನ್ನಿ ಸಂಪೂರ್ಣ ಮಾಹಿತಿ. ನಿಮ್ಮಲ್ಲಿರುವ ಹಳೆಯ 5 ರೂಪಾಯಿಯ ನೋಟುಗಳನ್ನು ನೀವು ವೆಬ್​​ಸೈಟ್​ವೊಂದರಲ್ಲಿ ಹರಾಜಿಗಿಟ್ಟರೆ ಒಂದು ನೋಟಿಗೆ 10 ಸಾವಿರದಿಂದ 30 ಸಾವಿರ ರೂ. ವರೆಗೆ ಗಳಿಸಬಹುದು ಎಂದು http://coinbazzar.com ತನ್ನ ಜಾಹೀರಾತಿನಲ್ಲಿ ತಿಳಿಸಿದೆ. ಅಪರೂಪದ 5 ರೂಪಾಯಿಯ ಹಳೆಯ ನೋಟನ್ನು ತೆಗೆದಿಟ್ಟು, coinbazzar.com ವೆಬ್​​ಸೈಟ್​ಗೆ

ನಿಮ್ಮಲ್ಲಿ 5 ರೂ.ನ ಹಳೆಯ ನೋಟು ಇದೆಯಾ..? ➤ ಹಾಗಿದ್ದಲ್ಲಿ ನೀವು ಲಕ್ಷಾಧೀಶ ಆಗೋದು ಗ್ಯಾರಂಟಿ Read More »

ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್, ವಿಶೇಷ ಲೇಖನಗಳು

ನೀವು ಸರಕಾರಿ ಜಾಗದಲ್ಲಿ ಮನೆ ಕಟ್ಟಿದ್ದೀರಾ..? ➤ ಹಾಗಾದರೆ ಈ ಸುದ್ದಿಯನ್ನು ತಪ್ಪದೇ ಓದಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.08. ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ಸರಕಾರವು ಗುಡ್ ನ್ಯೂಸ್ ನೀಡಿದ್ದು, ಸರಕಾರಿ ಭೂಮಿಯ ಸಕ್ರಮಕ್ಕೆ ಅರ್ಜಿ ಸಲ್ಲಿಕೆಯ ಅವಧಿಯನ್ನು 31 ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. 2015 ರ ಜನವರಿ 01 ರ ಮೊದಲು ಮನೆ ನಿರ್ಮಿಸದವರಿಗೆ ಈ ಯೋಜನೆಯು ಅನ್ವಯವಾಗಲಿದ್ದು, ಅನಧಿಕೃತವಾಗಿ ನಿರ್ಮಿಸಿಕೊಂಡ ಮನೆಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. 94 ಸಿ ಹಾಗೂ 94 ಸಿಸಿ ಅನ್ವಯ ಈ ಹಿಂದೆ

ನೀವು ಸರಕಾರಿ ಜಾಗದಲ್ಲಿ ಮನೆ ಕಟ್ಟಿದ್ದೀರಾ..? ➤ ಹಾಗಾದರೆ ಈ ಸುದ್ದಿಯನ್ನು ತಪ್ಪದೇ ಓದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಳಿಕೆಯಾಗದ ಕೊರೋನಾ ಪಾಸಿಟಿವಿಟಿ ➤ ಜೂ.14ರ ವರೆಗೆ ಕಟ್ಟುನಿಟ್ಟಿನ ಲಾಕ್‍ಡೌನ್: ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.08. ರಾಜ್ಯದಲ್ಲಿ ಕೊರೋನಾ ಹಾವಳಿ ಕಡಿಮೆಯಾಗಿದೆ ಆದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಇನ್ನೂ ಇಳಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಜೂನ್ 14 ರ ವರೆಗೆ ಕಟ್ಟುನಿಟ್ಟಿನ ಲಾಕ್‍ಡೌನ್ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50 ಕ್ಕಿಂತ ಹೆಚ್ಚಿನ ಪಾಸಿಟಿವ್ ಪ್ರಕರಣಗಳಿರುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮದುವೆಯಂತಹ ಯಾವುದೇ ಶುಭ ಸಮಾರಂಭಗಳಿಗೂ ಅವಕಾಶವಿಲ್ಲ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಳಿಕೆಯಾಗದ ಕೊರೋನಾ ಪಾಸಿಟಿವಿಟಿ ➤ ಜೂ.14ರ ವರೆಗೆ ಕಟ್ಟುನಿಟ್ಟಿನ ಲಾಕ್‍ಡೌನ್: ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ ತಾಲೂಕಿನ ಈ 1 ಗ್ರಾಮಕ್ಕೆ ಇದುವರೆಗೆ ಕೊರೋನಾ ಕಾಲಿಟ್ಟಿಲ್ಲ ➤ ಆ ಗ್ರಾಮ ಯಾವುದು ಗೊತ್ತೇ..?

(ನ್ಯೂಸ್ ಕಡಬ) newskadaba.com ಕಡಬ, ಜೂ.08. ಕೊರೋನಾ ಎರಡನೇ ಅಲೆಯು ಗ್ರಾಮೀಣ ಭಾಗದಲ್ಲಿ ಬಹಳಷ್ಟು ಜನರನ್ನು ಬಲಿ ತೆಗೆದು ಕೊಂಡಿದೆಯಾದರೂ ಕಡಬ ತಾಲೂಕಿನ ಈ ಒಂದು ಗ್ರಾಮದಲ್ಲಿ ಇದುವರೆಗೆ ಒಂದೇ ಒಂದು ಕೊರೋನಾ ಸೋಂಕು ಕೂಡಾ ಪತ್ತೆಯಾಗಿಲ್ಲ. ತಾಲೂಕಿನ 42 ಗ್ರಾಮಗಳ ಪೈಕಿ ಕೊಂಬಾರು ಪಂಚಾಯತ್ ನ ಸಿರಿಬಾಗಿಲು ಗ್ರಾಮದಲ್ಲಿ ಇದುವರೆಗೆ ಕೊರೋನಾ ಪ್ರಕರಣಗಳು ಕಂಡುಬಂದಿಲ್ಲ. ಪಕ್ಕದ ಕೊಂಬಾರು ಗ್ರಾಮದಲ್ಲಿ ಹಲವರಿಗೆ ಸೋಂಕು ತಗುಲಿದೆಯಾದರೂ ಸಿರಿಬಾಗಿಲು ಗ್ರಾಮಕ್ಕೆ ಕೊರೋನಾ ಇದುವರೆಗೆ ಕಾಲಿಟ್ಟಿಲ್ಲ. ಸಿರಿಬಾಗಿಲು ಕುಗ್ರಾಮವಾಗಿದೆಯಾದರೂ ಜನರು ತಾಲೂಕು

ಕಡಬ ತಾಲೂಕಿನ ಈ 1 ಗ್ರಾಮಕ್ಕೆ ಇದುವರೆಗೆ ಕೊರೋನಾ ಕಾಲಿಟ್ಟಿಲ್ಲ ➤ ಆ ಗ್ರಾಮ ಯಾವುದು ಗೊತ್ತೇ..? Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

18 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್ ➤ ಖಾಸಗಿ ಆಸ್ಪತ್ರೆಗಳಲ್ಲಿ 150 ರೂ‌. ನಿಗದಿ: ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ.07. ಕೊರೋನಾ ವ್ಯಾಕ್ಸಿನ್ ಗೆ ಬೇಕಾಬಿಟ್ಟಿ ದರ ವಸೂಲಿ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗಳ ಹಗಲು ದರೋಡೆಗೆ ಮೂಗುದಾರ ಹಾಕಿರುವ ಕೇಂದ್ರ ಸರಕಾರವು ಖಾಸಗಿ ಆಸ್ಪತ್ರೆಗಳಿಗೆ ಪ್ರತ್ಯೇಕ ದರ ನಿಗದಿಪಡಿಸಿದೆ. ಈ ಬಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ಲಭ್ಯವಿರಲಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ 150 ರೂಪಾಯಿ ಸೇವಾ ಶುಲ್ಕ ಮಾತ್ರ ವಿಧಿಸಲು ದರ ನಿಗದಿಪಡಿಸಲಾಗಿದೆ ಎಂದಿದ್ದಾರೆ. ದೇಶದಲ್ಲಿ ಉತ್ಪಾದಿಸಲಾಗುವ

18 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್ ➤ ಖಾಸಗಿ ಆಸ್ಪತ್ರೆಗಳಲ್ಲಿ 150 ರೂ‌. ನಿಗದಿ: ಪ್ರಧಾನಿ ಮೋದಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು ➤ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ.07. ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಇದುವರೆಗೆ ದೇಶದ 23 ಕೋಟಿ ಜನತೆಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ. ಅವರು ಸೋಮವಾರ ಸಂಜೆ ದೇಶವನ್ನುದ್ದೇಶಿಸಿ ಮಾತನಾಡಿ, ದೇಶಾದ್ಯಂತ ವ್ಯಾಕ್ಸಿನ್ ವಿತರಣೆಗೆ ‘ಮಿಷನ್ ಇಂದ್ರಧನುಷ್’ ಆರಂಭಿಸಲಾಗಿದೆ. ಇನ್ನು ಮುಂದೆ ಕೇಂದ್ರ ಸರಕಾರವೇ ರಾಜ್ಯಗಳಿಗೆ ಉಚಿತವಾಗಿ ಕೊರೋನಾ ಲಸಿಕೆಯನ್ನು ಪೂರೈಸಲಿದ್ದು, ಮುಂದಿನ 2 ವಾರಗಳ ಬಳಿಕ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಿದೆ. ದೇಶದ ಬಡವರು

ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು ➤ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

14 ವರ್ಷದ ಬಾಲಕನನ್ನು ಪ್ರೀತಿಸಿ ಪರಾರಿಯಾದ 2 ಮಕ್ಕಳ ತಾಯಿ ➤ ಮುಂದೆ ನಡೆದಿದ್ದೇ ಬೇರೆ

(ನ್ಯೂಸ್ ಕಡಬ) newskadaba.com ಛತ್ತೀಸ್ಗಢ, ಜೂ.07. ಎರಡು ಮಕ್ಕಳ ತಾಯಿಯೋರ್ವಳು 14 ವರ್ಷದ ಬಾಲಕನೊಂದಿಗೆ ಪರಾರಿಯಾಗಿರುವ ವಿಚಿತ್ರ ಘಟನೆ ಛತ್ತೀಸ್ಗಢದಿಂದ ವರದಿಯಾಗಿದೆ. ಛತ್ತೀಸ್ಗಢದ ಕೊರಬಾ ನಿವಾಸಿ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಮಹಿಳೆಯ ಪತಿಯು ಸರ್ಕಾರಿ ನೌಕರನಾಗಿ ಕರ್ತವ್ಯದಲ್ಲಿದ್ದರು ಎನ್ನಲಾಗಿದೆ. ಮಹಿಳೆಗೆ ತನ್ನ ಮಗನ ವಯಸ್ಸಿನ ಬಾಲಕನ ಮೇಲೆ ಪ್ರೇಮಾಂಕುರವಾಗಿದ್ದು, ಆತನನ್ನು ಪುಸಲಾಯಿಸಿ ಆತನ ಜೊತೆ ಪರಾರಿಯಾಗಿದ್ದಾಳೆ. ವಿಷಯ ತಿಳಿದ ಮನೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ಕೈಗೊಂಡ ಪೊಲೀಸರು ಜೋಡಿಯನ್ನು ಜಾಂಜ್ಗಿರ್ ಜಿಲ್ಲೆಯ ಚಂಪಾ ಎಂಬಲ್ಲಿ ಪತ್ತೆಹಚ್ಚಿ

14 ವರ್ಷದ ಬಾಲಕನನ್ನು ಪ್ರೀತಿಸಿ ಪರಾರಿಯಾದ 2 ಮಕ್ಕಳ ತಾಯಿ ➤ ಮುಂದೆ ನಡೆದಿದ್ದೇ ಬೇರೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top