ಬ್ರೇಕಿಂಗ್ ನ್ಯೂಸ್

ಲಾಕ್‍ಡೌನ್ ನಡುವೆ ಬೆಂಗಳೂರಿನಿಂದ ಜಿಲ್ಲೆಗೆ ಬಂದ ಕೆಎಸ್ಸಾರ್ಟಿಸಿ ಬಸ್ ➤ ಕೊಕ್ಕಡದಲ್ಲಿ ತಡೆದು ವಾಪಸು ಬೆಂಗಳೂರಿಗೆ ಕಳುಹಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.22. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರೂ ಬೆಂಗಳೂರಿನಿಂದ ಧರ್ಮಸ್ಥಳಕ್ಕೆಂದು ಆಗಮಿಸಿದ ಕೆಎಸ್ಸಾರ್ಟಿಸಿ ಬಸ್ಸನ್ನು ಕೊಕ್ಕಡದಲ್ಲಿ ಪೊಲೀಸರು ತಡೆದು ಹಿಂದಕ್ಕೆ ಕಳುಹಿಸಿದ ಘಟನೆ ಸೋಮವಾರದಂದು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‍ಡೌನ್ ಇನ್ನೂ ಜಾರಿಯಲ್ಲಿದ್ದು, ಸಾರ್ವಜನಿಕ ಬಸ್ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು. ಈ ನಡುವೆಯೂ ಬೆಂಗಳೂರಿನಿಂದ ಕೆಎಸ್ಸಾರ್ಟಿಸಿ ಬಸ್ ಆಗಮಿಸಿದ್ದು, ಬಸ್ಸಿನಲ್ಲಿ ಒಟ್ಟು 22 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದೆ. ವಿಚಾರ ತಿಳಿದ ಪೊಲೀಸರು ಕೊಕ್ಕಡದಲ್ಲಿ ಬಸ್ಸನ್ನು ತಡೆದು ಬೆಂಗಳೂರಿಗೆ […]

ಲಾಕ್‍ಡೌನ್ ನಡುವೆ ಬೆಂಗಳೂರಿನಿಂದ ಜಿಲ್ಲೆಗೆ ಬಂದ ಕೆಎಸ್ಸಾರ್ಟಿಸಿ ಬಸ್ ➤ ಕೊಕ್ಕಡದಲ್ಲಿ ತಡೆದು ವಾಪಸು ಬೆಂಗಳೂರಿಗೆ ಕಳುಹಿಸಿದ ಪೊಲೀಸರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡದಲ್ಲಿ ಇಂದು 542 ಮಂದಿಗೆ ಕೊರೋನಾ ಪಾಸಿಟಿವ್ ➤ ಸೋಂಕಿಗೆ 14 ಮಂದಿ ಬಲಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.21. ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕು ಹತೋಟಿಗೆ ಬಂದಿದ್ದು, ಸಾವಿನ ಸಂಖ್ಯೆ ಏರಿಕೆಯಾಗಿದೆ. ಇಂದು 542 ಮಂದಿಗೆ ಕೊರೋನಾ ಪಾಸಿಟಿವ್ ಆಗಿದ್ದು, ಕೊರೋನಾ ಮಹಾಮಾರಿಗೆ ಇಂದು 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 637 ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಒಟ್ಟು 7017 ಆ್ಯಕ್ಟಿವ್ ಕೇಸ್ ಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಇಂದು 6.44% ಪಾಸಿಟಿವಿಟಿ ರೇಟ್ ಕಂಡುಬಂದಿದ್ದು, ಇದುವರೆಗೆ 1065 ಮಂದಿ ಬಲಿಯಾಗಿದ್ದಾರೆ.      

ದಕ್ಷಿಣ ಕನ್ನಡದಲ್ಲಿ ಇಂದು 542 ಮಂದಿಗೆ ಕೊರೋನಾ ಪಾಸಿಟಿವ್ ➤ ಸೋಂಕಿಗೆ 14 ಮಂದಿ ಬಲಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಆಟವಾಡುತ್ತಿದ್ದ ವೇಳೆ ಇಲಿ ಪಾಷಾಣ ಸೇವನೆ ➤ ಎರಡೂವರೆ ವರ್ಷದ ಕಂದಮ್ಮ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜೂ.20. ಇಲಿ ಪಾಷಾಣ ಸೇವಿಸಿ ಎರಡೂವರೆ ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ನಡೆದಿದೆ. ಮೃತ ಮಗುವನ್ನು ಕೆಮ್ಮಾರ ನಿವಾಸಿ ನಿವೃತ್ತ ಸೈನಿಕ ಸೈಜು ಎಂಬವರ ಎರಡೂವರೆ ವರ್ಷದ ಪುತ್ರಿ ಶ್ರೇಯಾ ಎಂದು ಗುರುತಿಸಲಾಗಿದೆ. ಎರಡು ತಿಂಗಳ ಹಿಂದೆ ಮನೆಯ ನಾಯಿ ಗೂಡಿನ ಮೇಲೆ ತಂದಿಟ್ಟಿದ್ದ ಇಲಿ ಪಾಷಾಣದ ಟ್ಯೂಬನ್ನು ಶನಿವಾರದಂದು ಮಗು ಆಕಸ್ಮಿಕವಾಗಿ ಸೇವಿಸಿತ್ತು. ಮಧ್ಯಾಹ್ನದ ವೇಳೆ ಮಗುವಿಗೆ ವಾಂತಿ ಆರಂಭಗೊಂಡ

ಆಟವಾಡುತ್ತಿದ್ದ ವೇಳೆ ಇಲಿ ಪಾಷಾಣ ಸೇವನೆ ➤ ಎರಡೂವರೆ ವರ್ಷದ ಕಂದಮ್ಮ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಲಾಕ್‍ಡೌನ್ ಮತ್ತೆ ಮುಂದುವರಿಕೆ..? ➤ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.19. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜೂ.21 ರ ವರೆಗೆ ಲಾಕ್‍ಡೌನ್ ಜಾರಿಯಲ್ಲಿದ್ದು, ಜೂನ್ ಅಂತ್ಯದವರೆಗೆ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೋನಾ ಎರಡನೇ ಅಲೆಯ ತೀವ್ರತೆ ಇನ್ನೂ ಹೆಚ್ಚಳವಾಗುತ್ತಿರುವುದು ಆತಂಕದಿಂದ ಕಾರಣವಾಗಿದೆ. ಈ ಬಗ್ಗೆ ಇಂದು ಸಂಜೆ ತನ್ನ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಭೆ ಕರೆದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಲಾಕ್‍ಡೌನ್ ಮುಂದುವರಿಸಬೇಕೋ ಅಥವಾ ಅನ್ ಲಾಕ್ ಮಾಡಬೇಕೋ ಎಂಬ ಬಗ್ಗೆ ತಜ್ಞರ ಜೊತೆ ಚರ್ಚಿಸಲಿದ್ದಾರೆ. ಲಾಕ್‍ಡೌನ್ ಬಗ್ಗೆ

ರಾಜ್ಯದಲ್ಲಿ ಲಾಕ್‍ಡೌನ್ ಮತ್ತೆ ಮುಂದುವರಿಕೆ..? ➤ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ➤ ನಿಲುವು ಬದಲಾಯಿಸಿದ ರಾಜ್ಯ ಸರಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.18. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿರುವ ರಾಜ್ಯ ಸರಕಾರವು ಪರೀಕ್ಷೆ ಇಲ್ಲದೆಯೇ ಮಾರ್ಕ್ಸ್ ನೀಡಿ ಉತ್ತೀರ್ಣಗೊಳಿಸಲಿದೆ. ಈ ಹಿಂದೆ ಗ್ರೇಡ್ ಆಧಾರದಲ್ಲಿ ಪಾಸ್ ಮಾಡಲಾಗುವುದು ಎಂದಿದ್ದ ಸರಕಾರವು, ಇದೀಗ ಹೈಕೋರ್ಟ್ ಚಾಟಿಗೆ ತನ್ನ ನಿಯಮಗಳನ್ನು ಬದಲಾಯಿಸಿದ್ದು, ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಪರೀಕ್ಷೆಯ ಅಂಕಗಳನ್ನು ಆಧರಿಸಿ ಉತ್ತೀರ್ಣಗೊಳಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ.      

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ➤ ನಿಲುವು ಬದಲಾಯಿಸಿದ ರಾಜ್ಯ ಸರಕಾರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಲವ್ ಪ್ರೊಪೋಸಲ್ ನಿರಾಕರಿಸಿದ ಯುವತಿ ➤ ಯದ್ವಾತದ್ವಾ ಇರಿದು ಕೊಂದ ಪಾಗಲ್ ಪ್ರೇಮಿ

(ನ್ಯೂಸ್ ಕಡಬ) newskadaba.com ಮಲಪ್ಪುರಂ, ಜೂ.18. ಪ್ರೀತಿ ನಿವೇದನೆಯನ್ನು ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೋರ್ವ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ. ಮೃತ ಯುವತಿಯನ್ನು ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಎಲನಾಡ್​ನ ನಿವಾಸಿ ದೃಶ್ಯಾ(21) ಎಂದು ಗುರುತಿಸಲಾಗಿದೆ. ಆರೋಪಿ ವಿನೇಶ್​ ಎಂಬಾತ ದೃಶ್ಯಾಳ ಬಳಿ ತನ್ನ ಪ್ರೀತಿಯನ್ನು ನಿವೇದಿಸಿದ್ದು, ಈ ವೇಳೆ ಯುವತಿಯು ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಆರೋಪಿಯು ಯುವತಿಯ ಮನೆಗೆ ನುಗ್ಗಿ ಯದ್ವಾತದ್ವಾ ಚೂರಿಯಿಂದ ಇರಿದು ಕೊಲೆಗೈದಿದ್ದಾನೆ. ಹಲ್ಲೆ ತಡೆಯಲು ಯತ್ನಿಸಿದ

ಲವ್ ಪ್ರೊಪೋಸಲ್ ನಿರಾಕರಿಸಿದ ಯುವತಿ ➤ ಯದ್ವಾತದ್ವಾ ಇರಿದು ಕೊಂದ ಪಾಗಲ್ ಪ್ರೇಮಿ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೊಂಬಾರು: ಕೃಷಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ➤ ಅಪಾರ ಕೃಷಿ ನಾಶ

(ನ್ಯೂಸ್ ಕಡಬ) newskadaba.com ಕಡಬ, ಜೂ.17. ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲಿ ಕಳೆದ ಹಲವು ಸಮಯಗಳಿಂದ ಸೈಲೆಂಟಾಗಿದ್ದ ಕಾಡಾನೆಯ ಅಟ್ಟಹಾಸ ಮತ್ತೆ ಮುಂದುವರಿದಿದ್ದು, ಗುರುವಾರದಂದು ಹಗಲು ಹೊತ್ತಿನಲ್ಲಿ ಕೃಷಿ ತೋಟಕ್ಕೆ ಲಗ್ಗೆಯಿಟ್ಟಿದೆ. ಕೊಂಬಾರು ಗ್ರಾಮ ಪಂಚಾಯತ್ ನ ಸಿರಿಬಾಗಿಲು ಗ್ರಾಮದ ಪಿಲಿಕಜೆ ನಿವಾಸಿ ಸುಂದರ ಗೌಡ ಎಂಬವರ ತೋಟಕ್ಕೆ ನುಗ್ಗಿರುವ ಕಾಡಾನೆಯು ಅಪಾರ ಪ್ರಮಾಣದಲ್ಲಿ ಅಡಿಕೆ ಮರ ಹಾಗೂ ಬಾಳೆ ಕೃಷಿಯನ್ನು ಹಾನಿಗೊಳಿಸಿದೆ. ಪರಿಸರದ ಹಲವು ತೋಟಕ್ಕೆ ಲಗ್ಗೆಯಿಟ್ಟಿದ್ದು, ಕಾಡಾನೆ ಹಾವಳಿಯನ್ನು ತಡೆಯಲು ಅರಣ್ಯ ಇಲಾಖೆಯು ಅಗತ್ಯ

ಕೊಂಬಾರು: ಕೃಷಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ➤ ಅಪಾರ ಕೃಷಿ ನಾಶ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ರಿಕ್ಷಾ ಚಾಲಕನಿಂದ ಅತ್ಯಾಚಾರ ➤ ಯುವತಿ ಎಂಟು ತಿಂಗಳ ಗರ್ಭಿಣಿ

(ನ್ಯೂಸ್ ಕಡಬ) newskadaba.com ಕಡಬ, ಜೂ.17. ರಿಕ್ಷಾ ಚಾಲಕನೋರ್ವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ನಿರಂತರ ಅತ್ಯಾಚಾರ ಎಸಗಿದ ಹಿನ್ನೆಲೆಯಲ್ಲಿ ಆಕೆ ಗರ್ಭಿಣಿಯಾಗಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲದಿಂದ ವರದಿಯಾಗಿದೆ. ಕೊಯಿಲ ಗ್ರಾಮದ ಬುಡಲೂರು ನಿವಾಸಿ ರಿಕ್ಷಾ ಚಾಲಕ ಯುವರಾಜ್ ಎಂಬಾತ ತನ್ನ ಪರಿಚಯದ 19 ವರ್ಷದ ಯುವತಿಯನ್ನು ಕಳೆದೊಂದು ವರ್ಷದಿಂದ ಆತನ ಮನೆಯ ಸಮೀಪದ ಗುಡ್ಡದಲ್ಲಿ ನಿರಂತರವಾಗಿ ಅತ್ಯಾಚಾರಗೈದಿದ್ದಾನೆ ಎನ್ನಲಾಗಿದೆ. ಯುವತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಮನೆಯವರು ಆಕೆಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಆಕೆ

ಕಡಬ: ರಿಕ್ಷಾ ಚಾಲಕನಿಂದ ಅತ್ಯಾಚಾರ ➤ ಯುವತಿ ಎಂಟು ತಿಂಗಳ ಗರ್ಭಿಣಿ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ➤ ಪರೀಕ್ಷೆ ಇಲ್ಲದೆ ಪಾಸ್ ಮಾಡುವುದಕ್ಕೆ ಹೈಕೋರ್ಟ್ ತಡೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.15. ಪರೀಕ್ಷೆ ಇಲ್ಲದೇ ಪಾಸ್ ಆಗುವ ಖುಷಿಯಲ್ಲಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ನೀಡಿರುವ ಹೈಕೋರ್ಟ್, ಪರೀಕ್ಷೆ ರಹಿತ ಫಲಿತಾಂಶ ಪ್ರಕಟಿಸುವುದಕ್ಕೆ ತಡೆಯಾಜ್ಞೆ ನೀಡಿದೆ. ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕದ ಮಾನದಂಡದಲ್ಲಿ ಉತ್ತೀರ್ಣಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದರು. ಆದರೆ ರಿಪೀಟರ್ಸ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ತಿಳಿಸಲಾಗಿತ್ತು. ಈ ಬಗ್ಗೆ ಕೋರ್ಟ್ ಮೆಟ್ಟಿಲೇರಿರುವ ರಿಪೀಟರ್ಸ್ ವಿದ್ಯಾರ್ಥಿಗಳು,

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ➤ ಪರೀಕ್ಷೆ ಇಲ್ಲದೆ ಪಾಸ್ ಮಾಡುವುದಕ್ಕೆ ಹೈಕೋರ್ಟ್ ತಡೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮರವೂರು ಸೇತುವೆಯಲ್ಲಿ ಬಿರುಕು ➤ ಬಜಪೆ ವಿಮಾನ ನಿಲ್ದಾಣ ಸಂಪರ್ಕ ಕಡಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.15. ನಗರದ ಹೊರವಲಯದ ಮರವೂರು ಸೇತುವೆಯು ಬಿರುಕು ಬಿಟ್ಟಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಳೆದ ಮೂರು – ನಾಲ್ಕು ದಿನಗಳಿಂದ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆಯ ಪಿಲ್ಲರ್ ವೊಂದು ಕುಸಿದಿದ್ದು, ಇದರಿಂದಾಗಿ ಮಂಗಳೂರು ನಗರದಿಂದ ಬಜಪೆ ವಿಮಾನ ನಿಲ್ದಾಣ ಸಂಪರ್ಕಿಸುವ ಪ್ರಮುಖ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೇತುವೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಕಡೆಗೆ ತೆರಳುವ ಪ್ರಯಾಣಿಕರಿಗೆ ಕಾವೂರು, ಕೂಳೂರು ಮಾರ್ಗವಾಗಿ ಜೋಕಟ್ಟೆ ಸಂಪರ್ಕಿಸಿ ಬಜಪೆಗೆ ಅಥವಾ ಪಚ್ಚನಾಡಿ, ಗುರುಪುರ

ಮರವೂರು ಸೇತುವೆಯಲ್ಲಿ ಬಿರುಕು ➤ ಬಜಪೆ ವಿಮಾನ ನಿಲ್ದಾಣ ಸಂಪರ್ಕ ಕಡಿತ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top