ಸೆಲೆಬ್ರಿಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಉಪಯೋಗಿಸಿದ ಆರೋಪ ➤ ಕಡಬದ ಯುವಕನಿಗೆ ಪಶ್ಚಿಮ ಬಂಗಾಳ ನ್ಯಾಯಾಲಯದಿಂದ ಜಾಮೀನು
(ನ್ಯೂಸ್ ಕಡಬ) newskadaba.com ಕಡಬ, ಸೆ.07. ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬೆಂಗಳೂರಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಪಶ್ಚಿಮ ಬಂಗಾಳದ ಸೆಲೆಬ್ರಿಟಿಯೋರ್ವಳ ಫೋಟೋ ಅಪ್ಲೋಡ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಕೋಲ್ಕತ್ತಾ ಪೊಲೀಸರಿಂದ ಬಂಧಿತರಾಗಿದ್ದ ಕಡಬದ ಯುವಕನಿಗೆ ಅಲ್ಲಿನ ನ್ಯಾಯಾಲಯ ಬುಧವಾರದಂದು ಜಾಮೀನು ನೀಡಿದೆ. ಪಶ್ಚಿಮ ಬಂಗಾಳದ ಸೆಲೆಬ್ರಿಟಿ ಸುಲಘ್ನ ರಾಯ್ ಚೌಧುರಿ ಎಂಬಾಕೆಯ ಫೋಟೋವನ್ನು ಕಡಬದ ನೂಜಿಬಾಳ್ತಿಲ ನಿವಾಸಿ ಸಂಜಯ್ ಕೃಷ್ಣ ಅವರು ಸಾಮಾಜಿಕ ಜಾಲತಾಣದ ಖಾತೆಯೊಂದಕ್ಕೆ ಅಪ್ ಲೋಡ್ ಮಾಡಿದ್ದಾರೆಂದು ಆರೋಪಿಸಲಾಗಿದ್ದು, ಈ ಬಗ್ಗೆ […]








