ಬ್ರೇಕಿಂಗ್ ನ್ಯೂಸ್

ಮೇಲ್ಛಾವಣಿ ಮೂಲಕ ಮನೆಗೆ ನುಗ್ಗಲು ಪ್ರಯತ್ನಿಸಿದ ಅಪರಿಚಿತ ➤ ಮನೆಮಂದಿಯನ್ನು ಕಂಡು ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಅ.10. ಮನೆಯೊಂದರ ಶೌಚಾಲಯದ ಮೇಲ್ಛಾವಣಿಯ ಮೂಲಕ ಅಪರಿಚಿತ ವ್ಯಕ್ತಿಯೋರ್ವ ಒಳ ನುಗ್ಗಲು ಪ್ರಯತ್ನಿಸಿರುವ ಘಟನೆ ಠಾಣಾ ವ್ಯಾಪ್ತಿಯ ಮರ್ಧಾಳದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಮರ್ಧಾಳದ 102 ನೆಕ್ಕಿಲಾಡಿ ಗ್ರಾಮದ ಅತ್ಲಾಜೆ ನಿವಾಸಿ ಹಮೀದ್ ಎಂಬವರ ಮನೆಯ ಶೌಚಾಲಯದ ಮೇಲ್ಛಾವಣಿಯ ಶೀಟ್ ಮೂಲಕ ಅಪರಿಚಿತ ವ್ಯಕ್ತಿಯೋರ್ವ ಒಳನುಗ್ಗಲು ಪ್ರಯತ್ನಿಸಿದ್ದು, ಈ ವೇಳೆ ಶೌಚಾಲಯಕ್ಕೆ ತೆರಳಿದ ಮಹಿಳೆಯೋರ್ವರು ಆತನನ್ನು ಗಮನಿಸಿ ಬೊಬ್ಬೆ ಹೊಡೆದಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯು ಪರಾರಿಯಾಗಿದ್ದು, ಶೌಚಾಲಯದ ಗೋಡೆಯ ಮೇಲೆ […]

ಮೇಲ್ಛಾವಣಿ ಮೂಲಕ ಮನೆಗೆ ನುಗ್ಗಲು ಪ್ರಯತ್ನಿಸಿದ ಅಪರಿಚಿತ ➤ ಮನೆಮಂದಿಯನ್ನು ಕಂಡು ಪರಾರಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತಾನು ವಿಷ ಕುಡಿದು ಮಕ್ಕಳಿಗೆ ವಿಷ ಕುಡಿಸಿದ ಭೂಪ ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಅ.08. ತಾನು ವಿಷ ಕುಡಿದು ತನ್ನ ಮಕ್ಕಳಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ಕುಡಿಸಿದ ಘಟನೆ ಕಡಬದಿಂದ ವರದಿಯಾಗಿದೆ ಮೂತಃ ಬೆಳ್ತಂಗಡಿ ತಾಲೂಕಿನ ಶಿಶಿಲ ನಿವಾಸಿ ವಿಶ್ವನಾಥ ಎಂಬವರು ಕಡಬ ತಾಲೂಕಿನ ಬಲ್ಯದಿಂದ ಮದುವೆಯಾಗಿದ್ದು, ಕುಡಿತದ ಚಟ ಹೊಂದಿದ್ದ ವಿಶ್ವನಾಥರು ಕುಡಿದು ಬಂದು ಪತ್ನಿಯ ಜೊತೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿಯು ತವರು ಮನೆಗೆ ಬಂದಿದ್ದು, ಇಲ್ಲಿಗೆ ಬಂದಿದ್ದ ವಿಶ್ವನಾಥ್ ತನ್ನ ಸಣ್ಣ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಜ್ಯೂಸ್ ಕುಡಿಸಿದ್ದಾನೆ ಎನ್ನಲಾಗಿದೆ.

ತಾನು ವಿಷ ಕುಡಿದು ಮಕ್ಕಳಿಗೆ ವಿಷ ಕುಡಿಸಿದ ಭೂಪ ➤ ಆಸ್ಪತ್ರೆಗೆ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ: ವಿಷಕಾರಿ ಹಾವು ಕಡಿತ ➤ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಅ.08. ವಿಷಕಾರಿ ಹಾವು ಕಡಿದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಇಚಿಲಂಪಾಡಿ ಎಂಬಲ್ಲಿ ಶುಕ್ರವಾರದಂದು ಸಂಭವಿಸಿದೆ. ಮೃತ ವ್ಯಕ್ತಿಯನ್ನು ಇಚಿಲಂಪಾಡಿಯ ಬಿಜೇರು ನಿವಾಸಿ ನಾರಾಯಣ ಶೆಟ್ಟಿ ಎಂದು ಗುರುತಿಸಲಾಗಿದೆ. ಮೃತರು ಗುರುವಾರದಂದು ಗದ್ದೆಯ ಬದಿಯಲ್ಲಿ ಹಾದುಹೋಗುತ್ತಿದ್ದ ವೇಳೆ ವಿಷಕಾರಿ ಹಾವು ಕಡಿದಿದ್ದು, ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಯುರ್ವೇದಿಕ್ ಪಂಡಿತರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು ಎನ್ನಲಾಗಿದೆ.  ಇಂದು ಗಾಯ ಉಲ್ಬಣಿಸಿ ರಕ್ತ ಸ್ರಾವ ಉಂಟಾದ ಹಿನ್ನೆಲೆಯಲ್ಲಿ

ಕಡಬ: ವಿಷಕಾರಿ ಹಾವು ಕಡಿತ ➤ ವ್ಯಕ್ತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕರಾವಳಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ➤ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿದ ಡಿಕೆಶಿ

(ನ್ಯೂಸ್ ಕಡಬ) newskadaba.com ಸುಳ್ಯ, ಅ.05. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಕರಾವಳಿಗೆ ಆಗಮಿಸಿದ್ದು, ಸುಳ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದಾರೆ‌. ಡಿಕೆಶಿ ಈ ಹಿಂದೆ ಸಿದ್ಧರಾಮಯ್ಯ ಸಂಪುಟದಲ್ಲಿ ಇಂಧನ ಸಚಿವರಾಗಿದ್ದ ವೇಳೆ ವಿದ್ಯುತ್ ಸಮಸ್ಯೆ ಬಗ್ಗೆ ಕರೆ ಮಾಡಿದ್ದ ವ್ಯಕ್ತಿಯ ಜೊತೆ ವಾಗ್ವಾದ ನಡೆದಿದ್ದು, ಆ ಬಳಿಕ ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸುಳ್ಯ ಕೋರ್ಟ್ ಡಿ.ಕೆ.ಶಿವಕುಮಾರ್ ಗೆ ಹಲವು ಬಾರಿ ನೊಟೀಸ್ ನೀಡಿದ್ದರೂ ಡಿಕೆಶಿ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ

ಕರಾವಳಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ➤ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿದ ಡಿಕೆಶಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಕ್ಕೇ ಸೇರಿದಂತೆ ರಾಜ್ಯದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ➤ ಅರೆ ಬರೆ ಬಟ್ಟೆ ತೊಟ್ಟು ಆಗಮಿಸುವವರಿಗೆ ಬೀಳಲಿದೆ ಕಡಿವಾಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.05. ರಾಜ್ಯದ 216 ‘ಎ’ ಗ್ರೇಡ್ ದೇವಸ್ಥಾನಗಳಲ್ಲಿ ಇನ್ಮುಂದೆ ಬೇಕಾಬಿಟ್ಟಿಯಾಗಿ ವಸ್ತ್ರ ಧರಿಸುವುದಕ್ಕೆ ಕಡಿವಾಣ ಬೀಳಲಿದೆ. ಕುಕ್ಕೇ ಸುಬ್ರಹ್ಮಣ್ಯ, ಕಟೀಲು, ಪೊಳಲಿ, ಮಂದಾರ್ತಿ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ಬಗ್ಗೆ ಚರ್ಚೆಯಾಗುತ್ತಿದ್ದು, ಅರೆ ಬರೆ ಬಟ್ಟೆ ತೊಟ್ಟು ದೇವಾಲಯಕ್ಕೆ ಆಗಮಿಸುವವರಿಗೆ ನಿಷೇಧ ಹೇರಲಿದೆ. ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನ ಹೊರಬರಲಿದೆ ಎಂದು ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಮಾಹಿತಿ

ಕುಕ್ಕೇ ಸೇರಿದಂತೆ ರಾಜ್ಯದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ➤ ಅರೆ ಬರೆ ಬಟ್ಟೆ ತೊಟ್ಟು ಆಗಮಿಸುವವರಿಗೆ ಬೀಳಲಿದೆ ಕಡಿವಾಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಗತ್ತಿನೆಲ್ಲೆಡೆ ಸ್ಥಗಿತಗೊಂಡ ವಾಟ್ಸ್ಅಪ್, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ ➤ ಪರದಾಡಿದ ನೆಟ್ಟಿಗರು

(ನ್ಯೂಸ್ ಕಡಬ) newskadaba.com ನವದೆಹಲಿ, ಅ.05. ಪ್ರಮುಖ ಸೋಷಿಯಲ್ ಮೀಡಿಯಾಗಳಾದ ವಾಟ್ಸ್ಅಪ್ ಮೆಸೆಂಜರ್‌, ಫೇಸ್‌ಬುಕ್, ಇನ್ಸ್‌ಟಾಗ್ರಾಂ ಸರ್ವರ್ ಜಗತ್ತಿನೆಲ್ಲೆಡೆ ಏಕಕಾಲದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹಲವರು ಪರದಾಡಿದ್ದಾರೆ‌. ಈ ಕುರಿತು ಮಾಹಿತಿ ನೀಡಲು ಸಾಮಾಜಿಕ ತಾಣ ಬಳಕೆದಾರರು ಟ್ವಿಟರ್‌ ಅನ್ನು ಆಶ್ರಯಿಸಿದ್ದಾರೆ. ಸೋಮವಾರ ರಾತ್ರಿ 9.03 ರ ಸಮಯದಲ್ಲಿ ತಾತ್ಕಾಲಿಕವಾಗಿ ಸರ್ವರ್‌ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಒಡೆತನದ ಮೆಸೆಂಜರ್ ಹಾಗೂ ವಾಟ್ಸ್ಅಪ್ ಬಳಕೆದಾರರು ಪರದಾಡಿದ್ದು, ಈ ಬಗ್ಗೆ ಟ್ವಿಟರ್ ನಲ್ಲಿ ಸಂದೇಶ ರವಾನಿಸಲಾಗಿತ್ತು. ಈ ಬಗ್ಗೆ ಫೇಸ್‌ಬುಕ್‌

ಜಗತ್ತಿನೆಲ್ಲೆಡೆ ಸ್ಥಗಿತಗೊಂಡ ವಾಟ್ಸ್ಅಪ್, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ ➤ ಪರದಾಡಿದ ನೆಟ್ಟಿಗರು Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅ.5 ರಂದು ಡಿ.ಕೆ. ಶಿವಕುಮಾರ್ ಸುಳ್ಯ ಕೋರ್ಟ್‌ಗೆ ಹಾಜರ್ ➤ ಕೊನೆಗೂ ಡಿಕೆಶಿ ಕರಾವಳಿ ಪ್ರವಾಸ ಫಿಕ್ಸ್

(ನ್ಯೂಸ್ ಕಡಬ) newskadaba.com ಸುಳ್ಯ, ಅ.03. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಕ್ಟೋಬರ್ 05 ರಂದು ಕರಾವಳಿಗೆ ಆಗಮಿಸಲಿದ್ದು, ಸುಳ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲಿದ್ದಾರೆ‌. ಡಿಕೆಶಿ ಈ ಹಿಂದೆ ಸಿದ್ಧರಾಮಯ್ಯ ಸಂಪುಟದಲ್ಲಿ ಇಂಧನ ಸಚಿವರಾಗಿದ್ದ ವೇಳೆ ವಿದ್ಯುತ್ ಸಮಸ್ಯೆ ಬಗ್ಗೆ ಕರೆ ಮಾಡಿದ ವ್ಯಕ್ತಿಯ ಜೊತೆ ವಾಗ್ವಾದ ನಡೆದಿದ್ದು, ಆ ಬಳಿಕ ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸುಳ್ಯ ಕೋರ್ಟ್ ಡಿ.ಕೆ.ಶಿವಕುಮಾರ್ ಗೆ ಹಲವು ಬಾರಿ ನೊಟೀಸ್ ನೀಡಿದ್ದರೂ ಡಿಕೆಶಿ ಹಾಜರಾಗಿರಲಿಲ್ಲ.

ಅ.5 ರಂದು ಡಿ.ಕೆ. ಶಿವಕುಮಾರ್ ಸುಳ್ಯ ಕೋರ್ಟ್‌ಗೆ ಹಾಜರ್ ➤ ಕೊನೆಗೂ ಡಿಕೆಶಿ ಕರಾವಳಿ ಪ್ರವಾಸ ಫಿಕ್ಸ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಕೋಳಿ ಊಟ ಸೇವಿಸಿ ಹಲವರ ಆರೋಗ್ಯದಲ್ಲಿ ಏರುಪೇರು ➤ ಚಿಕಿತ್ಸೆ ಫಲಿಸದೆ ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಅ.02. ಕೋಳಿ ಊಟ ಸೇವಿಸಿದ ಜನರಲ್ಲಿ ಒರ್ವ ಮೃತಪಟ್ಟು, ಹಲವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಬಲ್ಯ ಸಮೀಪದ ಗಾಣದಕೊಟ್ಟಿಗೆ ಎಂಬಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಗಾಣದ ಕೊಟ್ಟಿಗೆ ನಿವಾಸಿ ದೇವಪ್ಪ ಗೌಡ (60.ವ) ಎಂದು ಗುರುತಿಸಲಾಗಿದೆ. ದೇವಪ್ಪ ಗೌಡರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೂಲಿ ಕೆಲಸ ಮಾಡಲು ಇತರ ಸದಸ್ಯರೊಂದಿಗೆ ಬಲ್ಯದ ಸಂಜೀವ ದೇವಾಡಿಗರವರ ಮನೆಗೆ ಹೋಗಿದ್ದರು. ಅಲ್ಲಿ ಮಧ್ಯಾಹ್ನದ ಊಟಕ್ಕೆ ಮಾಡಲಾಗಿದ್ದ ಕೋಳಿ ಪದಾರ್ಥ ಸೇವಿಸಿದ್ದರು.

ಕಡಬ: ಕೋಳಿ ಊಟ ಸೇವಿಸಿ ಹಲವರ ಆರೋಗ್ಯದಲ್ಲಿ ಏರುಪೇರು ➤ ಚಿಕಿತ್ಸೆ ಫಲಿಸದೆ ಓರ್ವ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಶಂಕಿತ ರೇಬೀಸ್ ವೈರಸ್‌ ಗೆ ಕಾಲೇಜು ವಿದ್ಯಾರ್ಥಿನಿ ಬಲಿ ➤ ಹುಚ್ಚುನಾಯಿ ಕಡಿತಕ್ಕೆ ಬಲಿಯಾಗಿದ್ದ ಈಕೆಯ ಮನೆಯ ಸಾಕು ನಾಯಿ

(ನ್ಯೂಸ್ ಕಡಬ) newskadaba.com ಕಡಬ, ಅ.02. ಹುಚ್ಚುನಾಯಿಯ ವೈರಸ್‌ಗೆ ತುತ್ತಾಗಿ ಶಾಲಾ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಕಡಬದ ಆಲಂಕಾರಿನಲ್ಲಿ ಸಂಭವಿಸಿದೆ. ಮೃತಳನ್ನು ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ, ಆಲಂಕಾರು ಗ್ರಾಮದ ಕೆದಿಲ ನಿವಾಸಿ ವರ್ಗಿಸ್ ಎಂಬವರ ಪುತ್ರಿ ವಿನ್ಸಿ ಸಾರಮ್ಮ (17) ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಸಂಜೆ ವೇಳೆ ತಲೆನೋವು ಉಲ್ಬಣಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು

ಶಂಕಿತ ರೇಬೀಸ್ ವೈರಸ್‌ ಗೆ ಕಾಲೇಜು ವಿದ್ಯಾರ್ಥಿನಿ ಬಲಿ ➤ ಹುಚ್ಚುನಾಯಿ ಕಡಿತಕ್ಕೆ ಬಲಿಯಾಗಿದ್ದ ಈಕೆಯ ಮನೆಯ ಸಾಕು ನಾಯಿ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಬೀಗ ➤ 20 ಕೋಟಿಗೂ ಹೆಚ್ಚಿನ ತೆರಿಗೆ ಬಾಕಿ ಹಿನ್ನೆಲೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.30. ನಗರದ ಮಲ್ಲೇಶ್ವರಂ ನಲ್ಲಿದ್ದ ಪ್ರತಿಷ್ಠಿತ ಐಷಾರಾಮಿ ಶಾಪಿಂಗ್ ಸೆಂಟರ್ ಮಂತ್ರಿ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಗುರುವಾರದಂದು ಬೀಗ ಹಾಕಿದ್ದು, ಗ್ರಾಹಕರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ. ಬಿಬಿಎಂಪಿಗೆ ಸುಮಾರು 20 ಕೋಟಿಗೂ ಅಧಿಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಮಂತ್ರಿ ಸ್ಕ್ವೇರ್​ ಮಾಲ್ ಮಾಲಕರಿಗೆ ಎಷ್ಟೇ ನೋಟೀಸ್ ನೀಡಿದರೂ ತೆರಿಗೆ ಪಾವತಿ ಮಾಡದ ಕಾರಣ ಮಾಲ್ ನ ಮುಖ್ಯದ್ವಾರಕ್ಕೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ಅವರಿಂದ

ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಬೀಗ ➤ 20 ಕೋಟಿಗೂ ಹೆಚ್ಚಿನ ತೆರಿಗೆ ಬಾಕಿ ಹಿನ್ನೆಲೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top