ಪ್ರೀತಿಸಲು ನಿರಾಕರಿಸಿದ ವಿವಾಹಿತ ಮಹಿಳೆ ➤ ಕೊಡಲಿಯಿಂದ ಕೊಚ್ಚಿ ಕೊಂದು ಮೃತದೇಹದೊಂದಿಗೆ ಮಲಗಿದ ಪ್ರೇಮಿ..!
(ನ್ಯೂಸ್ ಕಡಬ) Newskadaba.com ಜೈಪುರ, ಅ. 27. ತನ್ನನ್ನು ಪ್ರೀತಿಸುವಂತೆ ಮಹಿಳೆಯನ್ನು ಪೀಡಿಸುತ್ತಿದ್ದ ಯುವಕನೋರ್ವ ಆಕೆ ಪ್ರೀತಿಸಲು ನಿರಾಕರಿಸಿದಳೆಂದು ಆಕೆಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿ ಮೃತದೇಹವನ್ನು ತಬ್ಬಿಕೊಂಡು ಮಲಗಿದ ಬೀಭತ್ಸ ಘಟನೆ ರಾಜಸ್ಥಾನದ ಅಹೋರ್ ಪ್ರದೇಶದಲ್ಲಿ ನಡೆದಿದೆ. ಹತ್ಯೆಗೀಡಾದ ಮಹಿಳೆಯನ್ನು ಶಾಂತಿ ದೇವಿ ಎಂದು ಗುರುತಿಸಲಾಗಿದೆ. ಈಕೆಗೆ ಇಬ್ಬರು ಗಂಡು ಮಕ್ಕಳಿದ್ದು, ಪತಿ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮನೆಯಲ್ಲಿ ಪತಿ ಇಲ್ಲದ ವೇಳೆ ಮನೆಗೆ ಬಂದ ಆರೋಪಿ ಗಣೇಶ್, ತನ್ನನ್ನು ಪ್ರೀತಿಸುವಂತೆ ಕೇಳಿಕೊಂಡಿದ್ದು, ಅದಕ್ಕೆ […]








