ಬ್ರೇಕಿಂಗ್ ನ್ಯೂಸ್

ಅತ್ತೆ ಮತ್ತು ಸೊಸೆಯ ಸಂಬಂಧ ಗಟ್ಟಿಯಾಗಿರಬೇಕೆಂದರೆ ಈ ವಿಧಾನ ಅನುಸರಿಸಿ

  ಓಂ ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ […]

ಅತ್ತೆ ಮತ್ತು ಸೊಸೆಯ ಸಂಬಂಧ ಗಟ್ಟಿಯಾಗಿರಬೇಕೆಂದರೆ ಈ ವಿಧಾನ ಅನುಸರಿಸಿ Read More »

ಅಡುಗೆ, ಅಂತರ್ರಾಷ್ಟ್ರೀಯ ನ್ಯೂಸ್, ಆರೋಗ್ಯ ಮಾಹಿತಿ, ಉದ್ಯೋಗ, ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಕ್ರೈಮ್ ನ್ಯೂಸ್, ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್, ಭವಿಷ್ಯ, ರಾಷ್ಟ್ರೀಯ ನ್ಯೂಸ್, ಲೈಫ್‍ಸ್ಟೈಲ್, ವಿಶೇಷ ಲೇಖನಗಳು, ಸಿನಿಮಾ

ಉಪ್ಪಿನಂಗಡಿ: ರಿಕ್ಷಾ ಹಾಗೂ ಲಾರಿ ನಡುವೆ ಢಿಕ್ಕಿ ➤ ಮಗು ಮೃತ್ಯು, ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ. 29. ಅಟೋರಿಕ್ಷಾ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಟೋದಲ್ಲಿದ್ದ ಮಗು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಉಪ್ಪಿನಂಗಡಿ ಮಠ ಎಂಬಲ್ಲಿ ಸೋಮವಾರದಂದು ಸಂಜೆ ಸಂಭವಿಸಿದೆ.   ಗಾಯಾಳುಗಳನ್ನು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಪ್ಪಿನಂಗಡಿ: ರಿಕ್ಷಾ ಹಾಗೂ ಲಾರಿ ನಡುವೆ ಢಿಕ್ಕಿ ➤ ಮಗು ಮೃತ್ಯು, ಮೂವರು ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು ನಗರ ಪೊಲೀಸ್ ಇಲಾಖೆಗೆ ಐವರು ಯೋಧರು ಸೇರ್ಪಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 29. ಭಾರತೀಯ ಸೇನೆಯಲ್ಲಿ ಕರ್ತವ್ಯ ಸಲ್ಲಿಸಿ ನಿವೃತ್ತಿ ಹೊಂದಿದ ಐವರು ಯೋಧರು ಇದೀಗ ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದಾರೆ. ಉಮೇಶ.ಬಿ, ಹರಿಪ್ರಸಾದ್.ಕೆ, ಪದ್ಮನಾಭ ಆರ್.ಕೆ, ಜನಾರ್ಧನ ಮತ್ತು ಜಗನ್ನಾಥ ಶೆಟ್ಟಿ ಈ ಐವರು ನಿವೃತ್ತ ಯೋಧರಾಗಿದ್ದಾರೆ. ಇವರು ಭಾರತೀಯ ಸೇನೆಯಲ್ಲಿ ಸುಮಾರು 17ರಿಂದ 20 ವರ್ಷಗಳ ಅವಧಿಯ ಅನುಭವ ಹೊಂದಿದ್ದು, ಭಾರತದ ಅಸ್ಸಾಂ, ಜಮ್ಮು-ಕಾಶ್ಮೀರ, ಮೀರತ್, ಮಿಜೋರಾಂ, ಪಂಜಾಬ್, ಅರುಣಾಚಲ ಪ್ರದೇಶ, ಲೇಹ್, ಲಡಾಕ್, ಅಹಮದಾಬಾದ್, ಕೇರಳ,

ಮಂಗಳೂರು ನಗರ ಪೊಲೀಸ್ ಇಲಾಖೆಗೆ ಐವರು ಯೋಧರು ಸೇರ್ಪಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದನದ ಹಟ್ಟಿಗೆ ಚಿರತೆ ದಾಳಿ- ಸಾಕುನಾಯಿಯ ಬೊಬ್ಬೆಗೆ ಎಚ್ಚೆತ್ತ ಜನ ➤ ಹಸು ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಪದ್ಮುಂಜ, ನ. 29. ಇಲ್ಲಿನ ನೆಕ್ಕಿಲು ನಿವಾಸಿ ಸಾಂತಪ್ಪ ಪೂಜಾರಿ ಎಂಬವರ ಮನೆ ಸಮೀಪವಿರುವ ದನದ ಹಟ್ಟಿಗೆ ಚಿರತೆ ದಾಳಿ ಮಾಡಿದ ಘಟನೆ ವರದಿಯಾಗಿದೆ. ಮನೆಯವರೆಲ್ಲರೂ ರಾತ್ರಿ ಮಲಗಿದ್ದ ವೇಳೆ ಸಾಕು ನಾಯಿಯೊಂದು ಬೊಗಳಲು ಶುರುಮಾಡಿದ್ದು, ಬೊಬ್ಬೆ ಕೇಳಿ ಮನೆಯವರೆಲ್ಲರೂ ಎದ್ದು ಬಂದು, ಹಟ್ಟಿಯೊಳಗಿದ್ದ ಹಸುವನ್ನು ಹಿಡಿಯಲೆತ್ನಿಸುತ್ತಿದ್ದ ಚಿರತೆಯನ್ನು ಕಂಡು ಜೋರಾಗಿ ಬೊಬ್ಬೆ ಹೊಡೆದು ಓಡಿಸಲೆತ್ನಿಸಿದ್ದಾರೆ. ಕೂಡಲೇ ಚಿರತೆಯು ಸ್ಥಳದಿಂದ ಕಾಲ್ಕಿತ್ತಿದ್ದು, ಹಸುವು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ. ಸೂಕ್ತ

ದನದ ಹಟ್ಟಿಗೆ ಚಿರತೆ ದಾಳಿ- ಸಾಕುನಾಯಿಯ ಬೊಬ್ಬೆಗೆ ಎಚ್ಚೆತ್ತ ಜನ ➤ ಹಸು ಪ್ರಾಣಾಪಾಯದಿಂದ ಪಾರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಲೋಕಸಭೆಯಲ್ಲಿ ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದತಿ ಮಸೂದೆ ಅಂಗೀಕಾರ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ನ. 29. ಕೃಷಿ ಕಾನೂನುಗಳ ರದ್ದತಿ ಮಸೂದೆಯ ಮೇಲೆ ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷ ನಾಯಕರು ಸದನದಲ್ಲಿ ಪ್ರತಿಭಟನೆ ನಡೆಸುತ್ತಿರುವಾಗಲೇ ಕೇಂದ್ರ ಸರಕಾರವು ವಿವಾದಾತ್ಮಕ ಕೃಷಿ ಕಾಯ್ದೆಯನ್ನು ರದ್ದುಗೊಳಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರದಂದು ಅಂಗೀಕರಿಸಿದೆ ಎಂದು ವರದಿ ತಿಳಿಸಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪ್ರತಿಪಕ್ಷಗಳ ಗದ್ದಲದ ನಡುವೆ ಲೋಕಸಭೆಯಲ್ಲಿ ಕೃಷಿ ಕಾನೂನು ರದ್ದತಿ ಮಸೂದೆಯನ್ನು ಮಂಡಿಸಿದ್ದರು. ಲೋಕಸಭೆ ಕಲಾಪವನ್ನು ಮಧ್ಯಾಹ್ನ ಎರಡು ಗಂಟೆಗೆ ಮುಂದೂಡಾಲಾಗಿದೆ.

ಲೋಕಸಭೆಯಲ್ಲಿ ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದತಿ ಮಸೂದೆ ಅಂಗೀಕಾರ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ- ಈ ಕರಿತು ವದಂತಿ ಹಬ್ಬಿಸಿದಲ್ಲಿ ಕ್ರಮ ➤ ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 29. ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾಗುತ್ತಿರುವ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಆರೋಗ್ಯ ಸಚಿವ ಸುಧಾಕರ್, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವುದಿಲ್ಲ. ಅಲ್ಲದೇ ಲಾಕ್ ಡೌನ್ ಕುರಿತು ಇಲ್ಲಸಲ್ಲದ ವದಂತಿ ಹಬ್ಬಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.   ಲಾಕ್ ಡೌನ್‌ ಕುರಿತು ಕೆಲವು ಮಾಧ್ಯಮಗಳು ವರದಿ ಮಾಡುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಲಾಕ್ ಡೌನ್ ಬಗ್ಗೆ ಸರಕಾರದಿಂದ ಅಧಿಕೃತ ಮಾಹಿತಿ ಬಂದ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ- ಈ ಕರಿತು ವದಂತಿ ಹಬ್ಬಿಸಿದಲ್ಲಿ ಕ್ರಮ ➤ ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ರಸ್ತೆಬದಿಯ ಮೈಲ್ ಸ್ಟೋನ್ ಗೆ ಢಿಕ್ಕಿ ಹೊಡೆದ ಕಾರು ➤ ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 29. ರಸ್ತೆ ಬದಿಯಲ್ಲಿನ ಮೈಲ್ ಸ್ಟೋನ್ ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಗಂಭೀರ ಗಾಯಗೊಂಡ ಘಟನೆ ಕೋಲ್ಪೆ ಎಂಬಲ್ಲಿ ನಡೆದಿದೆ. ಅಪಘಾತಕ್ಕೀಡಾದ ಕಾರು ಕೇರಳ ರಿಜಿಸ್ಟರ್ ಹೊಂದಿದ್ದು, ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ನೆಲ್ಯಾಡಿ: ರಸ್ತೆಬದಿಯ ಮೈಲ್ ಸ್ಟೋನ್ ಗೆ ಢಿಕ್ಕಿ ಹೊಡೆದ ಕಾರು ➤ ಓರ್ವ ಗಂಭೀರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಸ್ ಬಿಐ ಬ್ಯಾಂಕ್ ಎಟಿಎಂ ಗೆ ಕಿಡಿಗೇಡಿಗಳಿಂದ ಹಾನಿ

(ನ್ಯೂಸ್ ಕಡಬ) newskadaba.com ಸುರತ್ಕಲ್, ನ. 29. ಎಸ್ಬಿಐ ಬ್ಯಾಂಕ್ ನ ಎಟಿಎಂ ಅನ್ನು ವ್ಯಕ್ತಿಯೋರ್ವ ಒಡೆದು ಪುಡಿಗಟ್ಟಿದ ಘಟನೆ ಇಲ್ಲಿನ ಎಂಆರ್ ಪಿಎಲ್ ರಸ್ತೆಯ ಕಟ್ಲ ತಿರುವು ಬಳಿ ನಡೆದಿದೆ. ಕಳೆದ ಸೆ. 09ರಂದು ಇದೇ ರೀತಿಯ ಘಟನೆ ಉಂಟಾಗಿದ್ದು, ವಿಚಾರಣೆ ನಡೆಸಲಾಗಿತ್ತು. ಆದರೆ ಇದೀಗ ಮತ್ತೆ ಬ್ಯಾಂಕ್ ನ ಎಟಿಎಂ ಯಂತ್ರವನ್ನು ಉರುಳಿಸಿ, ಎಸಿ ಹಾಗೂ ಸಿಸಿಟಿವಿಯ ಗಾಜನ್ನು ಪುಡಿಮಾಡಲಾಗಿದ್ದು, ಲಕ್ಷಾಂತರ ರೂ. ನಷ್ಟವುಂಟಾಗಿದೆ ಎನ್ನಲಾಗಿದೆ. ಈ ಕುರಿತು ಕಟ್ಟಡ ಮಾಲಕ ಪೊಲೀಸ್ ಠಾಣೆಗೆ

ಎಸ್ ಬಿಐ ಬ್ಯಾಂಕ್ ಎಟಿಎಂ ಗೆ ಕಿಡಿಗೇಡಿಗಳಿಂದ ಹಾನಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಅಣ್ಣನಿಂದಲೇ ತಂಗಿಯ ನಿರಂತರ ಅತ್ಯಾಚಾರ ➤ ಗರ್ಭಧಾರಣೆಯ ಬಳಿಕ ವಿಚಾರ ಬೆಳಕಿಗೆ..!

(ನ್ಯೂಸ್ ಕಡಬ) newskadaba.com ಮೈಸೂರು, ನ. 29. ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಸ್ವತಃ ಅಣ್ಣನೇ ಅತ್ಯಾಚಾರಗೈದು ಬಾಲಕಿ ಗರ್ಭಿಣಿಯಾದ ಘಟನೆ ನಗರದ ಬಡಾವಣೆಯೊಂದರಲ್ಲಿ ನಡೆದಿದೆ. ತಂದೆ ತಾಯಿಯನ್ನು ಕಳೆದುಕೊಂಡ ತಂಗಿಯು ತನ್ನ ಇಬ್ಬರು ಅಣ್ಣಂದಿರ ಜೊತೆ ವಾಸವಾಗಿದ್ದು, ಇದರಲ್ಲಿ ಒಬ್ಬ ಮದ್ಯ ಸೇವಿಸಿ ನಿರಂತರ ಅತ್ಯಾಚಾರವೆಸಗುತ್ತಿದ್ದು, ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಳು. ಈ ಕುರಿತು ತನಿಖೆ ನಡೆಸಿದಾಗ ಅಣ್ಣನೇ ಅತ್ಯಾಚಾರಗೈದ ವಿಚಾರ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಣ್ಣನಿಂದಲೇ ತಂಗಿಯ ನಿರಂತರ ಅತ್ಯಾಚಾರ ➤ ಗರ್ಭಧಾರಣೆಯ ಬಳಿಕ ವಿಚಾರ ಬೆಳಕಿಗೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೇರಳ ಮೂಲದ ವಿದ್ಯಾರ್ಥಿಗಳನ್ನು ಅಕ್ರಮವಾಗಿರಿಸಿ ಗಡ್ಡ ಬೋಳಿಸಿ ಹಣಕ್ಕೆ ಬೇಡಿಕೆ ಆರೋಪ ➤ ಒಂಬತ್ತು ಮಂದಿ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 29. ಇಲ್ಲಿನ ನರ್ಸಿಂಗ್ ಕಾಲೇಜೊಂದರ ಕೇರಳ ಮೂಲದ ವಿದ್ಯಾರ್ಥಿಗಳನ್ನು ತಮ್ಮ ಕೊಠಡಿಗೆ ಕರೆದೊಯ್ದು ಅಕ್ರಮ ಬಂಧನದಲ್ಲಿಟ್ಟು ಗಡ್ಡ ಬೋಳಿಸಿ ಹಣ ನೀಡುವಂತೆ ಒತ್ತಾಯಿಸಿ ಕೊಲೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಒಂಬತ್ತು ಮಂದಿಯನ್ನು ಬಂಧಿಸಿದ ಘಟನೆ ನಡೆದಿದೆ. ಬಂಧಿತರಲ್ಲಿ 7 ಮಂದಿ ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಇದರ ಪೈಕಿ ಓರ್ವ ರ್ಯಾಗಿಂಗ್ ಒಳಪಟ್ಟ ವಿದ್ಯಾರ್ಥಿಯಾಗಿದ್ದು, ಏಳು ಮಂದಿ ಬಲ್ಮಠದ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ನಗರದಲ್ಲಿ

ಕೇರಳ ಮೂಲದ ವಿದ್ಯಾರ್ಥಿಗಳನ್ನು ಅಕ್ರಮವಾಗಿರಿಸಿ ಗಡ್ಡ ಬೋಳಿಸಿ ಹಣಕ್ಕೆ ಬೇಡಿಕೆ ಆರೋಪ ➤ ಒಂಬತ್ತು ಮಂದಿ ಆರೋಪಿಗಳ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top