ಬ್ರೇಕಿಂಗ್ ನ್ಯೂಸ್

ಮಹಿಳೆಯರ ಮದುವೆ ವಯಸ್ಸು 18ರಿಂದ 21ಕ್ಕೆ ಏರಿಸಲು ಕೆಂದ್ರ ಸಂಪುಟ ಅನುಮೋದನೆ..!

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 16. ಮಹಿಳೆಯರ ಮದುವೆ ವಯಸ್ಸಿನ ಮಿತಿಯನ್ನು 18ರಿಂದ 21 ಕ್ಕೆ ಏರಿಸುವ ಪ್ರಸ್ತಾಪವನ್ನು ಇದೀಗ ಸಂಪುಟ ಅಂಗೀಕರಿಸಿದೆ. ಪ್ರಧಾನಿ ಮೋದಿಯವರು 2020ರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಯುವತಿಯರ ಮದುವೆ ವಯಸ್ಸನ್ನು 18ಕ್ಕೆ ನಿಗದಿಪಡಿಸಲಾಗಿದ್ದು, ಇದನ್ನು ಮರು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದರು. ಇದನ್ನು ಒಂದೂವರೆ ವರ್ಷದ ಬಳಿಕ ಅನುಷ್ಠಾನಕ್ಕೆ ತರಲು ಸರಕಾರ ನಿರ್ಧರಿಸಿದೆ. ದೇಶದಲ್ಲಿ ಬಾಣಂತಿ- ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು, ಪೌಷ್ಟಿಕಾಂಶದ ಕೊರತೆ ನೀಗಿಸಲು ಮತ್ತು ಮಹಿಳೆಯರ ಮದುವೆ […]

ಮಹಿಳೆಯರ ಮದುವೆ ವಯಸ್ಸು 18ರಿಂದ 21ಕ್ಕೆ ಏರಿಸಲು ಕೆಂದ್ರ ಸಂಪುಟ ಅನುಮೋದನೆ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

“ಪುತ್ತೂರು ಕಾಲೇಜು ವಿದ್ಯಾರ್ಥಿನಿಯರೇ ಎಚ್ಚರಿಕೆ..ಬ್ಯಾರಿಗಳ ಜೊತೆ ಮಾತನಾಡುವುದನ್ನು ಗಮನಿಸಿದ್ದೇವೆ..” ➤ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಸಂಘಟನೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 16. ಇತ್ತೀಚಿನ ದಿನಗಳಲ್ಲಿ ಹಿಂದೂ ವಿದ್ಯಾರ್ಥಿನಿಯರು ಮುಸ್ಲಿಂ ಯುವಕರ ಜೊತೆ ಮಾತನಾಡಲು, ಸುತ್ತಾಡಲು ಹೋಗಿ ಸಿಕ್ಕಿಹಾಕಿಕೊಂಡು ಹಿಂದೂ ಸಂಘಟನೆಗಳಿಂದ ಹೊಡೆಸಿಕೊಂಡ ಘಟನೆಗಳು ನಡೆದಿದ್ದು, ಇನ್ಮುಂದೆ ಇಂಥಹ ಪರಿಸ್ಥಿತಿ ಬಾರದಿರಲು ಹಿಂದೂ ಸಂಘಟನೆಯು ವಿದ್ಯಾರ್ಥಿನಿಯರಿಗೆ ಎಚ್ಚರಿಕೆಯ ಪೋಸ್ಟರ್ ಒಂದನ್ನು ಇನ್ಸ್ಟಾಗ್ರಾಂ ಪೇಜ್ ಮೂಲಕ ಹರಿಬಿಟ್ಟಿದೆ. ಇದರಲ್ಲಿ “ಪುತ್ತೂರು ಕಾಲೇಜಿನ ಹಿಂದೂ ವಿದ್ಯಾರ್ಥಿನಿಯರು ಬಸ್ ಸ್ಟ್ಯಾಂಡ್ ಹಾಗೂ ಬ್ಯಾರಿಗಳ ಅಂಗಡಿಯಲ್ಲಿ ಅವರ ಜೊತೆ ಮಾತಾಡುವುದು, ಪೆರ್ಚಿ ಕಟ್ಟುವುದು ಗಮನಿಸುತ್ತಿದ್ದೇವೆ. ನೀವಾಗಿಯೇ ಬದಲಾಗುತ್ತೀರಾ..? ಅಥವಾ

“ಪುತ್ತೂರು ಕಾಲೇಜು ವಿದ್ಯಾರ್ಥಿನಿಯರೇ ಎಚ್ಚರಿಕೆ..ಬ್ಯಾರಿಗಳ ಜೊತೆ ಮಾತನಾಡುವುದನ್ನು ಗಮನಿಸಿದ್ದೇವೆ..” ➤ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಸಂಘಟನೆಯ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ➤ ಹತ್ತು ದೋಣಿಗಳು ವಶಕ್ಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 16. ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ದಾಳಿ ನಡೆಸಿದ ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡವು ಹತ್ತು ದೋಣಿಗಳನ್ನು ವಶಪಡಿಸಿಕೊಂಡ ಘಟನೆ ಕುಂಬಳೆಯಿಂದ ವರದಿಯಾಗಿದೆ. ಅಕ್ರಮ ಮರಳುಗಾರಿಕೆಯ ಬಗ್ಗೆ ಲಭಿಸಿದ ಖಚಿತ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ನಾಲ್ವರ ವಿರುದ್ದ ಪ್ರಕರಣ ದಾಖಲಿಸಿಂಡಿದ್ದಾರೆ.

ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ➤ ಹತ್ತು ದೋಣಿಗಳು ವಶಕ್ಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹೆದ್ದಾರಿಯಲ್ಲೇ ಹೊತ್ತಿ ಉರಿದ ಖಾಸಗಿ ಬಸ್..! ➤ ಅದೃಷ್ಟವಶಾತ್ ಪಾರಾದ ಪ್ರಯಾಣಿಕರು

(ನ್ಯೂಸ್ ಕಡಬ) Newskadaba.com ಕಾರವಾರ, ಡಿ. 16. ಚಲಿಸುತ್ತಿದ್ದ ಖಾಸಗಿ ಬಸ್ ಗೆ ಬೆಂಕಿ ತಗುಲಿದ ಪರಿಣಾಮ ಬಸ್ ಸಂಪೂರ್ಣ ಹೊತ್ತಿ ಉರಿದ ಘಟನೆ ಉ.ಕ ಜಿಲ್ಲೆಯ ಯಲ್ಲಾಪುರದ ಜೋಡು ಕೆರೆ ಬಳಿ ನಡೆದಿದೆ. ಮುಂಬೈನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬಸ್ ನಲ್ಲಿ ಸುಮಾರು 22 ಮಂದಿ ಪ್ರಯಾಣಿಸುತ್ತಿದ್ದು, ಈ ವೇಳ ಬಸ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿ ಉರಿದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರಾಗಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ

ಹೆದ್ದಾರಿಯಲ್ಲೇ ಹೊತ್ತಿ ಉರಿದ ಖಾಸಗಿ ಬಸ್..! ➤ ಅದೃಷ್ಟವಶಾತ್ ಪಾರಾದ ಪ್ರಯಾಣಿಕರು Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳನ್ನು ವಜಾಗೊಳಿಸಲಿರುವ ಗೂಗಲ್..!

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 16. ತನ್ನ ಸಂಸ್ಥೆಯ ಉದ್ಯೋಗಿಗಳು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿದ್ದಲ್ಲಿ ವೇತನ ಕಡಿತದ ಜೊತೆಗೆ ಕ್ರಮೇಣ ಕೆಲಸದಿಂದ ವಜಾ ಮಾಡಲು ಗೂಗಲ್ ನಿರ್ಧರಿಸಿದ್ದು, ಈ ಕುರಿತು ಉದ್ಯೋಗಿಗಳಿಗೆ ಸೂಚನೆಯನ್ನೂ ನೀಡಿದೆ. ವರದಿಗಳ ಪ್ರಕಾರ, ಗೂಗಲ್ ಹೊರಡಿಸಿರುವ ಆದೇಶದಲ್ಲಿ ವ್ಯಾಕ್ಸಿನೇಷನ್‌ ಸ್ಥಿತಿ ಘೋಷಸಲು ಮತ್ತು ಕೋವಿಡ್ ಪ್ರಮಾಣಪತ್ರ ಅಪ್ಲೋಡ್ ಮಾಡಲು ಹಾಗೂ ವೈದ್ಯಕೀಯ ಅಥವಾ ವಿನಾಯಿತಿಗಾಗಿ ಡಿ. 03ರ ವರೆಗೆ ಸಮಯಾವಕಾಶ ನೀಡಲಾಗಿತ್ತು ಎಂದು ಹೇಳಿದೆ. ಈ ನಿಗದಿತ ವಾಯಿದೆ ಮುಗಿದರೂ ಕೋವಿಡ್

ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳನ್ನು ವಜಾಗೊಳಿಸಲಿರುವ ಗೂಗಲ್..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬಂಟ್ವಾಳ: ಕಲ್ಲಿದ್ದಲು ಲಾರಿ ಪಲ್ಟಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 16. ಚಾಲಕನ ನಿಯಂತ್ರಣ ತಪ್ಪಿದ ಕಲ್ಲಿದ್ದಲು ಸಾಗಾಟದ ಲಾರಿಯೊಂದು ರಸ್ತೆ ಮಧ್ಯೆ ಪಲ್ಟಿಯಾದ ಘಟನೆ ತುಂಬೆಯಲ್ಲಿ ನಡೆದಿದೆ. ಮಂಗಳೂರು ಬಂದರಿನಿಂದ ಕಲ್ಲಿದ್ದಲು ತುಂಬಿಸಿಕೊಂಡು ಬಳ್ಳಾರಿ ಕಡೆಗೆ ತೆರಳುತ್ತಿದ್ದ ವೇಳೆ ತುಂಬೆ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದ್ದು, ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಮೆಲ್ಕಾರ್ ಟ್ರಾಫಿಕ್ ಎಸ್ಐ ರಾಜೇಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬಂಟ್ವಾಳ: ಕಲ್ಲಿದ್ದಲು ಲಾರಿ ಪಲ್ಟಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮುಖ್ಯಮಂತ್ರಿಯ ಸ್ಪೆಷಲ್ ಆಫೀಸರ್ ಎಂದು ಹೇಳಿ ಸರಕಾರಿ ಲಾಂಛನವಿರುವ ಕಾರಿನಲ್ಲಿ ಸುತ್ತಾಡುತ್ತಿದ್ದ ಖತರ್ನಾಕ್..! ➤ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ವಂಚನೆ ಮಾಡಿದ ಬಾಳೆಕಾಯಿ ವ್ಯಾಪಾರಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 16. ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಸೋಗಿನಲ್ಲಿ ವರ್ಗಾವಣೆ ಡೀಲಿಂಗ್ ಮಾಡಿ ಕೋಟ್ಯಂತರ ರೂ. ವಂಚಿಸಿದ ಆರೋಪಿಯು ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಘಟನೆ ವರದಿಯಾಗಿದೆ. ಬಂಧಿತನನ್ನು ಚಿಕ್ಕಬಳ್ಳಾಪುರ ಮೂಲದ ಸದ್ಯ ಮೈಲಸಂದ್ರದಲ್ಲಿ ವಾಸವಾಗಿರುವ ಉದಯಪ್ರಭು ಎಂದು ಗುರುತಿಸಲಾಗಿದೆ. ಈತ ಬಿನ್ನಿಮಲ್ ಸಮೀಪ ಬಾಳೆಕಾಯಿ ವ್ಯಾಪಾರ ನಡೆಸುತ್ತಿದ್ದ ಎನ್ನಲಾಗಿದೆ. ಈತ ಹಾಲಿ ಮುಖ್ಯಮಂತ್ರಿ ಕಛೇರಿಯ ಸ್ಪೆಷಲ್ ಆಫೀಸರ್ ಎಂದು ಹೇಳಿ ಸರಕಾರಿ ಲಾಂಛನವಿರುವ ಕಾರಿನಲ್ಲಿ ಸುತ್ತಾಡುತ್ತಿದ್ದು, ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳನ್ನು

ಮುಖ್ಯಮಂತ್ರಿಯ ಸ್ಪೆಷಲ್ ಆಫೀಸರ್ ಎಂದು ಹೇಳಿ ಸರಕಾರಿ ಲಾಂಛನವಿರುವ ಕಾರಿನಲ್ಲಿ ಸುತ್ತಾಡುತ್ತಿದ್ದ ಖತರ್ನಾಕ್..! ➤ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ವಂಚನೆ ಮಾಡಿದ ಬಾಳೆಕಾಯಿ ವ್ಯಾಪಾರಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹಾಲಿನ ಪೌಡರ್ ಡಬ್ಬದಲ್ಲಿ ಡ್ರಗ್ಸ್ ಮಾರಾಟ..! ➤ ಓರ್ವ ಅಂದರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 16. ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಗೋವಿಂದರಾಜಪುರ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಈತ ಚನ್ನಸಂದ್ರದಲ್ಲಿ ವಾಸವಾಗಿದ್ದ. ಈತ ಯಾರಿಗೂ ಅನುಮಾನ ಬಾರದಂತೆ ಅಮೂಲ್ ಡಬ್ಬಿಯಲ್ಲಿ ಮಾದಕ ಮಾತ್ರ ಹಾಗೂ ಹೈಡ್ರೋ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಮಹಿತಿಯನ್ನು ಖಚಿತ ಪಡಿಸಿಕೊಂಡ ಪೊಲೀಸರು ಬಂಧಿಸಿದ್ದಾರೆ. ಈತನಿಂದ 80 ಗ್ರಾಂ ಹೈಡ್ರೋ ಗಾಂಜಾ ಹಾಗೂ 260 ಮಾತ್ರೆಗಳನ್ನು ವಶಕ್ಕೆ

ಹಾಲಿನ ಪೌಡರ್ ಡಬ್ಬದಲ್ಲಿ ಡ್ರಗ್ಸ್ ಮಾರಾಟ..! ➤ ಓರ್ವ ಅಂದರ್ Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ತೊಕ್ಕೊಟ್ಟು: ವೈಯಕ್ತಿಕ ಕಾರಣ ಮುಂದಿಟ್ಟು ರಿಕ್ಷಾ ಚಾಲಕನಿಗೆ ಚೂರಿ ಇರಿತ..! ➤ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ತೊಕ್ಕೊಟ್ಟು, ಡಿ. 16. ವೈಯಕ್ತಿಕ ಕಾರಣವನ್ನು ಮುಂದಿಟ್ಟು ರಿಕ್ಷಾ ಚಾಲಕ ಯುವಕನೋರ್ವನ ಮನೆ ಆವರಣಕ್ಕೆ ನುಗ್ಗಿ ಕೊಲೆಗೆ ಯತ್ನಿಸಿದ್ದಲ್ಲದೆ, ತಡೆಯಲು ಬಂದಾತನಿಗೂ ಇರಿದು ಗಾಯಗೊಳಿಸಿದ ಘಟನೆ ಕುಂಪಲ ಹನುಮಾನ್ ನಗರ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಕುಂಪಲ ಹನುಮಾನ್ ನಗರದ ನಿವಾಸಿ ರಿಕ್ಷಾ ಚಾಲಕ ಸುನಿಲ್ ಹಾಗೂ ಇನ್ನೋರ್ವ ರಿಕ್ಷಾ ಚಾಲಕ ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಕುಂಪಲ ಬಗಂಬಿಲ ನಿವಾಸಿ ರೋಕೇಶ್ ಯಾನೆ ರೋಸ್ ಎಂಬಾತನು ತನ್ನ ಗೆಳೆಯ ದುರ್ಗೇಶ್ ಜೊತೆ ಆಟೋ ರಿಕ್ಷಾದಲ್ಲಿ

ತೊಕ್ಕೊಟ್ಟು: ವೈಯಕ್ತಿಕ ಕಾರಣ ಮುಂದಿಟ್ಟು ರಿಕ್ಷಾ ಚಾಲಕನಿಗೆ ಚೂರಿ ಇರಿತ..! ➤ ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಆಟೋದಲ್ಲಿ ಅಕ್ರಮ ಸಾಗಾಟ ➤ ಆರೋಪಿಗಳು ಪರಾರಿ, ಗೋವು ಸಹಿತ ವಾಹನ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 16. ಅಕ್ರಮ ಗೋಸಾಗಾಟ ಮಾಡುತ್ತಿದ್ದುದನ್ನು ಭಜರಂಗದಳ ಕಾರ್ಯಕರ್ತರು ತಡೆದಿದ್ದು, ಈ ವೇಳೆ ಇಬ್ಬರು ಆರೋಪಿಗಳು ಪರಾರಿಯಾದ ಘಟನೆ ತಾಲೂಕಿನ ಕಾಯರ್ತಡ್ಕ ಸಮೀಪದ ಬೀಜದಡಿ ಎಂಬಲ್ಲಿ ನಡೆದಿದೆ. ಬೀಜದಡಿ ಎಂಬಲ್ಲಿ ಅಕ್ರಮ ಗೋಸಾಗಾಟ ನಡೆಯುತ್ತಿದೆ ಎಂಬ ಮಾಹಿತಿ ಪ್ರಕಾರ ದಾಳಿ ನಡೆಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ತಡೆದಿದ್ದು, ಈ ವೇಳೆ ಆರೋಪಿಗಳಾದ ರವೀಂದ್ರ ಪುತ್ಯೆ ಹಾಗೂ ಶ್ರೀಧರ ಪಂಚಮಿಪಾದೆ ಎಂಬವರು ಪರಾರಿಯಾಗಿದ್ದಾರೆ. ವಾಹನ ಹಾಗೂ ಗೋವನ್ನು ಕಾರ್ಯಕರ್ತರು ಧರ್ಮಸ್ಥಳ

ಬೆಳ್ತಂಗಡಿ: ಆಟೋದಲ್ಲಿ ಅಕ್ರಮ ಸಾಗಾಟ ➤ ಆರೋಪಿಗಳು ಪರಾರಿ, ಗೋವು ಸಹಿತ ವಾಹನ ವಶಕ್ಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top