ಬ್ರೇಕಿಂಗ್ ನ್ಯೂಸ್

ಉಳ್ಳಾಲ: ಪತಿ ಮನೆಯಲ್ಲಿ ಕಿರುಕುಳ- ಪತ್ನಿ ನಿಗೂಢ ಸಾವು ➤ ಕೊಲೆ ಶಂಕೆ..!!

(ನ್ಯೂಸ್ ಕಡಬ) newskadaba.com ಉಳ್ಳಾಲ, ಜು.11. ಗೃಹಿಣಿಯೋರ್ವಳು ಗಂಡನ ಮನೆಯಲ್ಲಿ ನಿಗೂಢವಾಗಿ ಮೃತಪಟ್ಟ ಘಟನೆ ಉಳ್ಳಾಲದ ಮುಕ್ಕಚ್ಚೇರಿ ಎಂಬಲ್ಲಿ ಭಾನುವಾರದಂದು ಸಂಜೆ ನಡೆದಿದೆ. ಮೃತ ಮಹಿಳೆಯನ್ನು ಜಂಶೀರ (25) ಎಂದು ಗುರುತಿಸಲಾಗಿದೆ. ಮಿಲ್ಲತ್ ನಗರ ನಿವಾಸಿಯಾದ ಜಂಶೀರಾಳನ್ನು ಎರಡು ವರ್ಷಗಳ ಹಿಂದೆ ಮುಕ್ಕಚ್ಚೇರಿ ನಿವಾಸಿ ಇರ್ಫಾನ್ ಜೊತೆ ವಿವಾಹ ಮಾಡಿಕೊಡಲಾಗಿದ್ದು, ದಂಪತಿಗೆ 8 ತಿಂಗಳ ಗಂಡು ಮಗುವಿದೆ. ವಿವಾಹವಾದದ ಆರಂಭದಲ್ಲೇ ದಂಪತಿ ನಡುವೆ ಕುಟುಂಬ ಕಲಹ ನಡೆಯಿತ್ತಿದ್ದು, ಹಿರಿಯರು ಸೇರಿ ಮಾತುಕತೆ ನಡೆಸಿ ದಂಪತಿಗಳ ಕಲಹವನ್ನು ಇತ್ಯರ್ಥಗೊಳಿಸುತ್ತಿದ್ದರು […]

ಉಳ್ಳಾಲ: ಪತಿ ಮನೆಯಲ್ಲಿ ಕಿರುಕುಳ- ಪತ್ನಿ ನಿಗೂಢ ಸಾವು ➤ ಕೊಲೆ ಶಂಕೆ..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಭಾರೀ ಮಳೆಯ ಹಿನ್ನೆಲೆ ➤ ದ.ಕ. ಜಿಲ್ಲೆಯಲ್ಲಿ ನಾಳೆ ಶಾಲೆಗಳಿಗೆ ರಜೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.10. ರಾಜ್ಯದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನಾಳೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ನಾಳೆ (ಜುಲೈ 11 ಸೋಮವಾರ) ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದ್ದು, ಪಿಯು, ಪದವಿ ಹಾಗೂ ಇನ್ನಿತರ ವೃತ್ತಿಪರ ಸಂಸ್ಥೆಗಳಿಗೆ ಎಂದಿನಂತೆ ತರಗತಿ ನಡೆಯಲಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ‌.

ರಾಜ್ಯದಲ್ಲಿ ಭಾರೀ ಮಳೆಯ ಹಿನ್ನೆಲೆ ➤ ದ.ಕ. ಜಿಲ್ಲೆಯಲ್ಲಿ ನಾಳೆ ಶಾಲೆಗಳಿಗೆ ರಜೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಿರು ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು ನೀರಿನಲ್ಲಿ ಪತ್ತೆ ➤ ಮೂವರು ನೀರುಪಾಲಾಗಿರುವ ಶಂಕೆ

(ನ್ಯೂಸ್ ಕಡಬ) newskadaba.com ಕಡಬ, ಜು.10. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಉಕ್ಕಿ ಹರಿಯುತ್ತಿರುವ ಹೊಳೆಗೆ ಬಿದ್ದ ಘಟನೆ ಶನಿವಾರ ತಡರಾತ್ರಿ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ನಡೆದಿದ್ದು ಇದೀಗ ಕಾರಿನಲ್ಲಿದ್ದವರ ಗುರುತು ಪತ್ತೆಯಾಗಿದೆ. ಪುತ್ತೂರಿನಿಂದ ಕಾಣಿಯೂರು ಕಡೆಗೆ ತೆರಳುತ್ತಿದ್ದ ಮಾರುತಿ 800 ಕಾರು ತಡರಾತ್ರಿ ವೇಳೆಗೆ ಬೈತಡ್ಕ ಗೌರಿಹೊಳೆಗೆ ಬಿದ್ದಿದ್ದು, ಈ ದೃಶ್ಯವು ಬೈತಡ್ಕ ಜುಮಾ ಮಸೀದಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಾಥಮಿಕ ಮಾಹಿತಿಯಂತೆ ಕಾರು ಗುತ್ತಿಗಾರು ಮೂಲದವರದ್ದಾಗಿದ್ದು, ಕಾರಿನಲ್ಲಿ ಒಟ್ಟು ಮೂವರು ಇದ್ದರೆನ್ನಲಾಗಿದೆ. ಮೂವರು

ಕಿರು ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು ನೀರಿನಲ್ಲಿ ಪತ್ತೆ ➤ ಮೂವರು ನೀರುಪಾಲಾಗಿರುವ ಶಂಕೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಡಬ: ಕಿರುಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು ➤ ನೀರುಪಾಲಾದ ಶಂಕೆ, ದೃಶ್ಯ ಸಿಸಿಟಿವಿಯಲ್ಲಿ ಸೆರೆ

(ನ್ಯೂಸ್ ಕಡಬ) newskadaba.com ಕಡಬ, ಜು.10. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಉಕ್ಕಿ ಹರಿಯುತ್ತಿರುವ ಹೊಳೆಗೆ ಬಿದ್ದ ಘಟನೆ ಶನಿವಾರ ತಡರಾತ್ರಿ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರಿನಿಂದ ಕಾಣಿಯೂರು ಕಡೆಗಡ ತೆರಳುತ್ತಿದ್ದ ಅಪರಿಚಿತ ಕಾರು ತಡರಾತ್ರಿ ವೇಳೆಗೆ ಬೈತಡ್ಕ ಗೌರಿಹೊಳೆಗೆ ಬಿದ್ದಿದ್ದು, ಈ ದೃಶ್ಯವು ಬೈತಡ್ಕ ಜುಮಾ ಮಸೀದಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರು ಯಾರದ್ದು, ಕಾರಿನಲ್ಲಿ ಎಷ್ಟು ಮಂದಿ ಇದ್ದರೆಂಬ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಸ್ಥಳಕ್ಕೆ ಬೆಳ್ಳಾರೆ ಠಾಣಾ ಪೊಲೀಸರು ಭೇಟಿ

ಕಡಬ: ಕಿರುಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು ➤ ನೀರುಪಾಲಾದ ಶಂಕೆ, ದೃಶ್ಯ ಸಿಸಿಟಿವಿಯಲ್ಲಿ ಸೆರೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಸಿಸಿಬಿ ದಾಳಿ ➤ ಗಾಂಜಾ ಮಾರಾಟ ಮಾಡುತ್ತಿದ್ದ 12 ವಿದ್ಯಾರ್ಥಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 09. ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಹಾಗೂ ಗಾಂಜಾವನ್ನು ಹೊಂದಿದ 12 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತರನ್ನು ಕೇರಳ ಮೂಲದ ಶಾನೂಫ್ ಅಬ್ದುಲ್ ಗಫೂರ್ (21), ಮುಹಮ್ಮದ್ ರಸೀನ್(22), ಗೋಕುಲ ಕೃಷ್ಣನ್ (22), ಶಾರೂನ್ ಆನಂದ(19), ಅನಂತು ಕೆ ಪಿ(18), ಅಮಲ್(21), ಅಭಿಷೇಕ(21), ನಿದಾಲ್(21), ಶಾಹೀದ್ ಎಂ.ಟಿ.ಪಿ(22), ಫಹಾದ್ ಹಬೀಬ್(22), ಮುಹಮ್ಮದ್ ರಿಶಿನ್(22), ರಿಜಿನ್ ರಿಯಾಝ್(22)

ಮಂಗಳೂರು: ಸಿಸಿಬಿ ದಾಳಿ ➤ ಗಾಂಜಾ ಮಾರಾಟ ಮಾಡುತ್ತಿದ್ದ 12 ವಿದ್ಯಾರ್ಥಿಗಳ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕುಂತೂರು: ಆಟೋ ರಿಕ್ಷಾ – ಟಾಟಾ ಏಸ್ ನಡುವೆ ಅಪಘಾತ ➤ ಕಡಬದ ರಿಕ್ಷಾ ಚಾಲಕ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಜು.08. ಟಾಟಾ ಏಸ್ ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಪರಿಣಾಮ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪದವು ಸಮೀಪದ ಎರ್ಮಾಳ ಎಂಬಲ್ಲಿ ಶುಕ್ರವಾರ ಅಪರಾಹ್ನ ನಡೆದಿದೆ. ಗಾಯಾಳು ಚಾಲಕನನ್ನು ಮರ್ಧಾಳ ಸಮೀಪದ ಸುಳ್ಯ ಮೇಪತ್ತಪಾಲು ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ. ಕುಂತೂರು ಪದವು ಸಮೀಪದ ಎರ್ಮಾಳ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಗಂಭೀರ ಗಾಯಗೊಂಡ ರಿಕ್ಷಾ ಚಾಲಕನನ್ನು ಪುತ್ತೂರಿನ ಆಸ್ಪತ್ರೆಗೆ

ಕುಂತೂರು: ಆಟೋ ರಿಕ್ಷಾ – ಟಾಟಾ ಏಸ್ ನಡುವೆ ಅಪಘಾತ ➤ ಕಡಬದ ರಿಕ್ಷಾ ಚಾಲಕ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ತಮಿಳುನಟ ವಿಕ್ರಂ ಗೆ ಹೃದಯಾಘಾತ..!!

(ನ್ಯೂಸ್ ಕಡಬ) newskadaba.com ಚೆನ್ನೈ, ಜು. 08. ತಮಿಳು ನಟ ವಿಕ್ರಮ್ ಅವರಿಗೆ ಹೃದಯಾಘಾತವಾಗಿದ್ದು, ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ಕುರಿತು ಆಸ್ಪತ್ರೆಯಾಗಲೀ ಅಥವಾ ವಿಕ್ರಮ್ ಅವರ ವಕ್ತಾರರಾಗಲೀ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.   ಚೆನ್ನೈನಲ್ಲಿ ಇಂದು ಸಂಜೆ ನಡೆಯಲಿರುವ ಪೊನ್ನಿಯನ್ ಸೆಲ್ವನ್: ಪಾರ್ಟ್ 1 ಚಿತ್ರದ ಟೀಸರ್ ಬಿಡುಗಡೆಯಲ್ಲಿ ವಿಕ್ರಮ್ ಭಾಗವಹಿಸಬೇಕಿತ್ತು. ಮಣಿರತ್ನಂ ಬರೆದು ನಿರ್ದೇಶಿಸಿರುವ ಎರಡು ಭಾಗಗಳ ಮಹಾಕಾವ್ಯ ನಾಟಕದಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ಒಂದನ್ನು ನಿರ್ವಹಿಸಿದ್ದಾರೆ.

ತಮಿಳುನಟ ವಿಕ್ರಂ ಗೆ ಹೃದಯಾಘಾತ..!! Read More »

ಬ್ರೇಕಿಂಗ್ ನ್ಯೂಸ್

ಓಮ್ನಿ ಮೇಲೆ ಪಲ್ಟಿಯಾದ ಸರಕು ಸಾಗಾಟದ ಲಾರಿ..! ➤ ಚಾಲಕ ಗಂಭೀರ

(ನ್ಯೂಸ್ ಕಡಬ) newskadaba.com ಸುರತ್ಕಲ್, ಜು. 08. ಸರಕು ಸಾಗಾಟದ ಲಾರಿಯೊಂದು ಓಮ್ನಿ ಕಾರಿನ ಮೇಲೆ ಪಲ್ಟಿಯಾದ ಪರಿಣಾಮ ಓಮ್ನಿ ಚಾಲಕ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಹೊನ್ನಕಟ್ಟೆ ಜಂಕ್ಷನ್ ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಓಮ್ನಿ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಸುರತ್ಕಲ್ ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಕ್ರೇನ್ ಸಹಾಯದಿಂದ ಲಾರಿಯನ್ನು ಎತ್ತಿ ಓಮ್ನಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಓಮ್ನಿ ಮೇಲೆ ಪಲ್ಟಿಯಾದ ಸರಕು ಸಾಗಾಟದ ಲಾರಿ..! ➤ ಚಾಲಕ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬ್ಲೇಡ್ ನಿಂದ ಕತ್ತು ಹಾಗೂ ಕೈ ಕೊಯ್ದುಕೊಂಡು ಠಾಣೆಯ ಎದುರೇ ವಿಕೃತಿ ಮೆರೆದ ಯುವಕ…!

(ನ್ಯೂಸ್ ಕಡಬ) newskadaba.com ಕುಣಿಗಲ್, ಜು. 08. ಕುಟುಂಬ ಕಲಹದಿಂದ ಬೇಸತ್ತ ಯುವಕನೋರ್ವ ಕುಣಿಗಲ್ ಪೊಲೀಸ್ ಠಾಣೆ ಎದುರೇ ಬ್ಲೇಡ್ ನಿಂದ ಕತ್ತು ಹಾಗೂ ಕೈ ಕೊಯ್ದುಕೊಂಡು ಹುಚ್ಚಾಟ ಮೆರೆದ ಘಟನೆ ಶುಕ್ರವಾರದಂದು ನಡೆದಿದೆ. ಹುಚ್ಚಾಟ ಮೆರೆದ ಯುವಕನನ್ನು ಕುಣಿಗಲ್ ತಾಲೂಕಿನ ಕಸಬಾ ಹೋಬಳಿ ಬಿಳಿದೇವಾಲಯ ಗ್ರಾಮದ ನಿವಾಸಿ ಅಬ್ರಾಜ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಅಬ್ರಾಜ್ ನ ವಿರುದ್ದ ಪತ್ನಿ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದಿದ್ದು, ಈ ವೇಳೆ ಅಲ್ಲಿಗೆ ಬಂದ ಅಬ್ರಾಜ್

ಬ್ಲೇಡ್ ನಿಂದ ಕತ್ತು ಹಾಗೂ ಕೈ ಕೊಯ್ದುಕೊಂಡು ಠಾಣೆಯ ಎದುರೇ ವಿಕೃತಿ ಮೆರೆದ ಯುವಕ…! Read More »

ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ಗೋಹತ್ಯೆ ಆರೋಪದ ಹಿನ್ನೆಲೆ ➤ ಆರೋಪಿಯ ಆಸ್ತಿ ಜಪ್ತಿಗೆ ನೋಟಿಸ್ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 08. ಅಕ್ರಮವಾಗಿ ಗೋ ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನ ಆಸ್ತಿ ಮುಟ್ಟುಗೋಲು ಹಾಕಲು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು (ಎಸಿ) ನೋಟಿಸ್ ನೀಡಿದ್ದಾರೆ. ಆರೋಪಿಯನ್ನು ಬಾತೀಶ್ ಎಂದು ಗುರುತಿಸಲಾಗಿದೆ. ಈತ ಅಕ್ರಮವಾಗಿ ಗೋಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಜುಲೈ 3 ರಂದು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ 95 ಕೆಜಿ ದನದ ಮಾಂಸ, ತೂಕದ ತಕ್ಕಡಿ, ಕತ್ತಿಗಳು, ಮರದ ದಿಮ್ಮಿ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದರು. ಆರೋಪಿಯು ಎ ಕೆ

ಮಂಗಳೂರು: ಗೋಹತ್ಯೆ ಆರೋಪದ ಹಿನ್ನೆಲೆ ➤ ಆರೋಪಿಯ ಆಸ್ತಿ ಜಪ್ತಿಗೆ ನೋಟಿಸ್ ಜಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top