ಬ್ರೇಕಿಂಗ್ ನ್ಯೂಸ್

ಐತ್ತೂರು: ಕೊರಂ ಕೊರತೆಯ ನಡುವೆಯೇ ಗ್ರಾಮಸಭೆಗೆ ಮುಂದಾದ ಪಿಡಿಒ ➤ ಸಭೆಯಿಂದ ಹೊರನಡೆದ ಸದಸ್ಯರು ಹಾಗೂ ಗ್ರಾಮಸ್ಥರು..!!!

(ನ್ಯೂಸ್ ಕಡಬ) newskadaba.com ಕಡಬ, ಜು. 18. ಕೊರಂ ಕೊರತೆ ಇದ್ದರೂ ಐತ್ತೂರು ಗ್ರಾಮ ಪಂಚಾಯತ್ ಪಿಡಿಒ, ಗ್ರಾಮ ಸಭೆಯನ್ನು ಒತ್ತಡದಿಂದ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಸಭೆಯಿಂದ ಹೊರ‌ ನಡೆದ ಘಟನೆ ನಡೆದಿದೆ. ಗ್ರಾಮಸ್ಥರು ಹೊರ ಹೋಗುವುದನ್ನು ಕಂಡ ಉಪಾಧ್ಯಕ್ಷರು ಹಾಗೂ ನಾಲ್ವರು ಸದಸ್ಯರು ಹೊರ ನಡೆದು ಪಂಚಾಯತ್ ಕಛೇರಿಯಲ್ಲಿ ಕುಳಿತಿದ್ದಾರೆ. ಈ ಹಿನ್ನೆಲೆ ಸ್ಥಳದಲ್ಲಿ ಗೊಂದಲವೇರ್ಪಟ್ಟಿದ್ದು, ಸಭೆಗೆ ಕಡಬ ಎಸ್.ಐ. ಆಂಜನೇಯ ರೆಡ್ಡಿ ಹಾಗೂ ಸಿಬಂದಿಗಳು ಆಗಮಿಸಿದ್ದಾರೆ. ಇದರ […]

ಐತ್ತೂರು: ಕೊರಂ ಕೊರತೆಯ ನಡುವೆಯೇ ಗ್ರಾಮಸಭೆಗೆ ಮುಂದಾದ ಪಿಡಿಒ ➤ ಸಭೆಯಿಂದ ಹೊರನಡೆದ ಸದಸ್ಯರು ಹಾಗೂ ಗ್ರಾಮಸ್ಥರು..!!! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಮಹಿಳೆಯೊಂದಿಗೆ ಅಸಭ್ಯ ವರ್ತನೆ ➤ ಮಾಜಿ ಯೋಧ ಅಂದರ್

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 18. ವಿವಾಹಿತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಕ್ಕೆ ಸಂಬಂಧಿಸಿ ಆರೋಪಿ ಮಾಜಿ ಸೈನಿಕನನ್ನು ಸಂಪ್ಯ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತ ಆರೋಪಿಯನ್ನು ಖಾಸಗಿ ಕಂಪನಿಯ ಭದ್ರತಾ ಸಿಬ್ಬಂದಿ ಹಾಗೂ ಮಾಜಿ ಯೋಧ ವಿದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಜು. 16ರಂದು ಕೆಲಸ ಮುಗಿಸಿ ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ತನ್ನ ಬೈಕ್‌ನಲ್ಲಿ ಹಿಂಬಾಲಿಸಿ, ತಿಂಗಳಾಡಿ ದರ್ಬೆ ಎಂಬಲ್ಲಿ ಅಡ್ಡಗಟ್ಟಿ ಆಕೆಯೊಂದಿಗೆ ಮಾತನಾಡಲು ಯತ್ನಿಸಿ ಅಸಭ್ಯವಾಗಿ

ಪುತ್ತೂರು: ಮಹಿಳೆಯೊಂದಿಗೆ ಅಸಭ್ಯ ವರ್ತನೆ ➤ ಮಾಜಿ ಯೋಧ ಅಂದರ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಇಚಿಲಂಪಾಡಿ: ಗುಡ್ಡ ಕುಸಿತ ➤ ಆಟೋರಿಕ್ಷಾ ಸಹಿತ 4 ದ್ವಿಚಕ್ರ ವಾಹನಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು. 18. ಗುಡ್ಡ ಕುಸಿತಗೊಂಡ ಪರಿಣಾಮ ಆಟೋರಿಕ್ಷಾ ಹಾಗೂ ನಾಲ್ಕು ದ್ವಿಚಕ್ರ ವಾಹನಗಳು ಹಾನಿಗೊಂಡ ಘಟನೆ ಇಚಿಲಂಪಾಡಿ ಗ್ರಾಮದ ಕೊರಮೇರು ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಕೊರಮೇರು ನಿವಾಸಿ ನೋಣಯ್ಯ ಗೌಡ ಅವರ ಮನೆಯ ಹಿಂಬದಿ ಗುಡ್ಡ ಕುಸಿತಗೊಂಡು, ಅಲ್ಲಿಯೇ ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ಮಣ್ಣು ಬಿದ್ದಿದೆ. ಪರಿಣಾಮ ನೋಣಯ್ಯ ಗೌಡರ ಸ್ಕೂಟರ್, ಅವರ ಸಹೋದರ ಕೇಶವ ಗೌಡರಿಗೆ ಸೇರಿದ ಅಟೋ ರಿಕ್ಷಾ, ವಸಂತ ಗೌಡ ಎಂಬವರ ಸ್ಕೂಟರ್ ಹಾಗೂ ಹೊನ್ನಪ್ಪ

ಇಚಿಲಂಪಾಡಿ: ಗುಡ್ಡ ಕುಸಿತ ➤ ಆಟೋರಿಕ್ಷಾ ಸಹಿತ 4 ದ್ವಿಚಕ್ರ ವಾಹನಗಳಿಗೆ ಹಾನಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಬೆಳ್ಳಂಬೆಳಗ್ಗೆ ಖಾಸಗಿ ಬಸ್ ಹಾಗೂ ಇನೋವಾ ಕಾರು ನಡುವೆ ಢಿಕ್ಕಿ ➤ ಪವಾಡಸದೃಶ ಪಾರಾದ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ಕಡಬ, ಜು.16. ಇನ್ನೋವಾ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ಶನಿವಾರ ಬೆಳಿಗ್ಗೆ ಪಂಜ – ಕಡಬ ರಸ್ತೆಯ ಕೋಡಿಂಬಾಳದಲ್ಲಿ ನಡೆದಿದೆ. ಧರ್ಮಸ್ಥಳ ಮೂಲದವರಿದ್ದ ಇನ್ನೋವಾ ಕಾರು ಹಾಗೂ ಬೆಂಗಳೂರಿನಿಂದ ಪಂಜ ಮಾರ್ಗವಾಗಿ ಕಡಬಕ್ಕೆ ಬರುತ್ತಿದ್ದ ಸುಗಮ‌ ಸಂಸ್ಥೆಗೆ ಸೇರಿದ ಖಾಸಗಿ ಬಸ್ ನಡುವೆ ಕೋಡಿಂಬಾಳ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಇನ್ನೋವಾ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಪವಾಡಸದೃಶ ಅಪಾಯದಿಂದ ಪಾರಾಗಿದ್ದಾರೆ.  

ಕಡಬ: ಬೆಳ್ಳಂಬೆಳಗ್ಗೆ ಖಾಸಗಿ ಬಸ್ ಹಾಗೂ ಇನೋವಾ ಕಾರು ನಡುವೆ ಢಿಕ್ಕಿ ➤ ಪವಾಡಸದೃಶ ಪಾರಾದ ಪ್ರಯಾಣಿಕರು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಚೆಂಬು, ಪೆರಾಜೆ ಗ್ರಾಮದಲ್ಲಿ ಮತ್ತೆ ಭೂಕಂಪನ…!!

(ನ್ಯೂಸ್ ಕಡಬ) newskadaba.com ಸುಳ್ಯ, ಜು. 15. ಸುಳ್ಯ ಮತ್ತು ಕೊಡಗು ಗಡಿ ಭಾಗದ ಕೆಲವಡೆ ಇಂದು ಮತ್ತೆ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿರುವುದು ಅನುಭವಕ್ಕೆ ಬಂದಿರುವುದಾಗಿ ಜನರು ಹೇಳಿಕೊಂಡಿದ್ದಾರೆ. ಕೊಡಗು-ಸುಳ್ಯ ಗಡಿ ಪ್ರದೇಶವಾದ ಚೆಂಬು, ಸಂಪಾಜೆ, ಗೂನಡ್ಕ, ಅರಂತೋಡು, ತೊಡಿಕಾನ ಮುಂತಾದೆಡೆ ಇಂದು ಬೆಳಗ್ಗೆ 10.09ರ ವೇಳೆಗೆ ಭೂಮಿಯ ಒಳಗಿನಿಂದ ಭಾರೀ ಶಬ್ದ ಕೇಳಿಸಿದ್ದು, ಮನೆಯಲ್ಲಿನ ವಸ್ತುಗಳೆಲ್ಲ ಅಲುಗಾಡಿವೆ ಎಂಬುದಾಗಿ ಜನರು ಮಾಹಿತಿ ನೀಡಿದ್ದಾರೆ.

ಚೆಂಬು, ಪೆರಾಜೆ ಗ್ರಾಮದಲ್ಲಿ ಮತ್ತೆ ಭೂಕಂಪನ…!! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಿರಾಡಿ ಘಾಟ್ ನಲ್ಲಿ ಹೆದ್ದಾರಿ ಕುಸಿತ ➤ ಘನ ವಾಹನ ಸಂಚಾರ ಸ್ಥಗಿತ, ಸಾಲುಗಟ್ಟಿ ನಿಂತ ವಾಹನಗಳು

(ನ್ಯೂಸ್ ಕಡಬ) newskadaba.com ಸಕಲೇಶಪುರ, ಜು.14. ಶಿರಾಡಿ ಘಾಟ್‌ನಲ್ಲಿ ಮತ್ತೆ ಭೂಕುಸಿತಗೊಂಡ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ಕಳೆದ ವರ್ಷ ಹೆದ್ದಾರಿ ಕುಸಿತಗೊಂಡ ಅಲ್ಪ ದೂರದಲ್ಲೇ ವಾರದ ಹಿಂದೆ ರಸ್ತೆ ಕುಸಿದಿದ್ದು, ಇಂದು ಮತ್ತೆ ಭೂ ಕುಸಿತಗೊಂಡು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಲಾರಿ ಸೇರಿದಂತೆ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಲಘು ವಾಹನಗಳನ್ನು ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.  

ಶಿರಾಡಿ ಘಾಟ್ ನಲ್ಲಿ ಹೆದ್ದಾರಿ ಕುಸಿತ ➤ ಘನ ವಾಹನ ಸಂಚಾರ ಸ್ಥಗಿತ, ಸಾಲುಗಟ್ಟಿ ನಿಂತ ವಾಹನಗಳು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ…! ➤ ಕಾರು ಜಖಂ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 13. ಕಾರಿನ ಮೇಲೆ ಮರ ಬಿದ್ದು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಮಾಣಿ-ಮೈಸೂರು ರಾ.ಹೆದ್ದಾರಿ 275ರ ಸಂಟ್ಯಾರ್ ಸೇತುವೆ ಬಳಿ ಇಂದು ಮಧ್ಯಾಹ್ನ ನಡೆದಿದೆ. ಇಂದು ಮದ್ಯಾಹ್ನ ಬೀಸಿದ ಭಾರೀ ಗಾಳಿ ಬೀಸಿದ ಪರಿಣಾಮ ಚಲಿಸುತ್ತಿದ್ದ ಕಾರಿನ ಮೇಲೆ ಮರ ಮುರಿದು ಬಿದ್ದಿದೆ. ಪರಿಣಾಮ ಕಾರು ಭಾಗಶಃ ಜಖಂಗೊಂಡಿದ್ದು ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಷ್ಟೆ.

ಪುತ್ತೂರು: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ…! ➤ ಕಾರು ಜಖಂ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ನೆಲ್ಯಾಡಿ: ಕೆಮಿಕಲ್ ಸಾಗಾಟದ ಲಾರಿ ಪಲ್ಟಿ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು. 13. ಕೆಮಿಕಲ್ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಹೊಳೆಗೆ ಬಿದ್ದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.

ನೆಲ್ಯಾಡಿ: ಕೆಮಿಕಲ್ ಸಾಗಾಟದ ಲಾರಿ ಪಲ್ಟಿ ➤ ಇಬ್ಬರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಿಟ್ಲ: ಹಾಡಹಗಲೇ ಮಾರಕಾಸ್ತ್ರದಿಂದ ಹಲ್ಲೆ ➤ ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಜು. 13. ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಗಳಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಓರ್ವನ ಇನ್ನೋರ್ವನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಅಡ್ಯನಡ್ಕ ಮರಕ್ಕಿಣಿ ಎಂಬಲ್ಲಿ ಮಂಗಳವಾರದಂದು ಸಂಜೆ ನಡೆದಿದೆ. ಅಮಲು ಪದಾರ್ಥ ಸೇವಿಸಿದ ವ್ಯಕ್ತಿಯು ಈ ಕೃತ್ಯ ಎಸಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಅಡ್ಯನಡ್ಕ ಸಮೀಪದ ಸಾರಡ್ಕ ಎಂಬಲ್ಲಿ ಪೋಲೀಸ್ ಚೆಕ್ ಪೋಸ್ಟ್ ಇದ್ದರೂ ವ್ಯಕ್ತಿಯ ಮೇಲೆ ಈ ದಾಳಿ ನಡೆದಿರುವುದು ಸಾರ್ವಜನಿಕ ವಲಯದಲ್ಲಿ

ವಿಟ್ಲ: ಹಾಡಹಗಲೇ ಮಾರಕಾಸ್ತ್ರದಿಂದ ಹಲ್ಲೆ ➤ ಓರ್ವ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಲೈನ್ ಮ್ಯಾನ್ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 12. ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಮೆಸ್ಕಾಂ ಪವರ್‌ಮ್ಯಾನ್ ಮೃತಪಟ್ಟ ಘಟನೆ ಕುಂಬ್ರ ಸಮೀಪದ ಪರ್ಪುಂಜದಲ್ಲಿ ಇಂದು ನಡೆದಿದೆ.   ಮೃತರನ್ನು ಮೆಸ್ಕಾಂ ಕುಂಬ್ರ ಶಾಖೆಯ ಪವರ್ ಮ್ಯಾನ್ ಬಸವರಾಜ್ (26) ಎಂದು ಗುರುತಿಸಲಾಗಿದೆ. ಬಸವರಾಜ್ ಮೂಲತಃ ಬಾಗಲಕೋಟೆ ನಿವಾಸಿಯಾಗಿದ್ದು, ಕೆಲವು ಸಮಯಗಳಿಂದ ಕುಂಬ್ರ ಮೆಸ್ಕಾಂನಲ್ಲಿ ನಿರ್ವಹಿಸುತ್ತಿದ್ದರೆನ್ನಲಾಗಿದೆ.

ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಲೈನ್ ಮ್ಯಾನ್ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top