ಬ್ರೇಕಿಂಗ್ ನ್ಯೂಸ್

ಯುವಕನ ಹೆಸರಿನಲ್ಲಿ ಮಂಗಳಮುಖಿ ಚಾಟಿಂಗ್ ➤ ವಿಟ್ಲ ಠಾಣಾ ಮೆಟ್ಟಿಲೇರಿದ ಯುವತಿಯ ಫೇಸ್ ಬುಕ್ ಲವ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 23. ಯುವತಿಗೆ ಫೇಸ್ ಬುಕ್ ಮೂಲಕ ವ್ಯಕ್ತಿಯೊಬ್ಬರ ಪರಿಚಯವಾಗಿ ಬಳಿಕ ಅದು ಪ್ರೀತಿಗೆ ತಿರುಗಿ ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಯುವತಿಗೆ ನಾಲ್ಕು ವರ್ಷದ ಹಿಂದೆ ಫೇಸ್ ಬುಕ್ ನಲ್ಲಿ ಪ್ರದೀಪ್ ಎಂಬಾತನ ಪರಿಚಯವಾಗಿತ್ತು. ಆತನ ಮುಖ ನೋಡದೆ ಇದ್ದರೂ, ಆತನ ಪ್ರೀತಿಯ ಮಾತಿಗೆ ಮರುಳಾಗಿ ಯುವತಿ ಪ್ರೇಮಪಾಶಕ್ಕೆ ಸಿಲುಕಿದ್ದಳು. ಆತ ದಿನಾ ಕರೆ […]

ಯುವಕನ ಹೆಸರಿನಲ್ಲಿ ಮಂಗಳಮುಖಿ ಚಾಟಿಂಗ್ ➤ ವಿಟ್ಲ ಠಾಣಾ ಮೆಟ್ಟಿಲೇರಿದ ಯುವತಿಯ ಫೇಸ್ ಬುಕ್ ಲವ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಹಳಿತಪ್ಪಿದ ರೈಲು ಕಂಬಕ್ಕೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 23. ಹಳಿತಪ್ಪಿದ ರೈಲೊಂದು ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಕಂಕನಾಡಿ ರೈಲು ನಿಲ್ದಾಣದ ಬಳಿ ನಡೆದಿದೆ. ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಪರಿಣಾಮ ಪಕ್ಕದಲ್ಲೇ ಇದ್ದ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಕೂಡಲೇ ಸಿಬ್ಬಂದಿ ಕಾರ್ಯಚರಣೆ ನಡೆಸಿ ಬೋಗಿಗಳನ್ನು ತೆರವುಗೊಳಿಸಿದ್ದಾರೆ.

ಮಂಗಳೂರು: ಹಳಿತಪ್ಪಿದ ರೈಲು ಕಂಬಕ್ಕೆ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮತ್ತೆ ಭಾರೀ ಶಬ್ದದೊಂದಿಗೆ ಕೊಡಗಿನಲ್ಲಿ ಭೂಕುಸಿತ ➤ 18 ಕುಟುಂಬಗಳ ಸ್ಥಳಾಂತರ

(ನ್ಯೂಸ್ ಕಡಬ) newskadaba.com ಕೊಡಗು, ಜು. 23. ಕೊಡಗಿನಲ್ಲಿ ಮತ್ತೆ ಭಾರೀ ಶಬ್ದದೊಂದಿಗೆ ಭೂ ಕುಸಿತ ಉಂಟಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಮದೆನಾಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ 275ರ ಬಳಿಯ ಮದೆನಾಡು, ಜೋಡುಪಾಲ, ಮೊಣ್ಣಂಗೇರಿ ಗ್ರಾಮಸ್ಥರಲ್ಲಿ ಭೂಕಂಪನದ ಅನುಭವವಾಗಿದ್ದು, ಈ ಕಂಪನ ಮತ್ತು ಭೂಕುಸಿತದಿಂದಾಗಿ ಸ್ಥಳೀಯರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ. ಈಗಾಗಲೇ ಬೆಟ್ಟದ ತಪ್ಪಲಿನ 18 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಮತ್ತೆ ಭಾರೀ ಶಬ್ದದೊಂದಿಗೆ ಕೊಡಗಿನಲ್ಲಿ ಭೂಕುಸಿತ ➤ 18 ಕುಟುಂಬಗಳ ಸ್ಥಳಾಂತರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಆರೋಪ ➤ ಯುವಕರ ತಂಡದಿಂದ ಇಬ್ಬರ ಮೇಲೆ ಹಲ್ಲೆ- ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 23. ಬಾಲಕಿಯ ಮೇಲೆ ವ್ಯಕ್ತಿಯೋರ್ವರು ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ಯುವಕರ ತಂಡವೊಂದು ಹಲ್ಲೆ ನಡೆಸಿದ್ದು, ಈ ವೇಳೆ ಜಗಳ ತಡೆಯಲು ಬಂದ ವ್ಯಕ್ತಿಗೂ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದ ನಿವಾಸಿ ಜಾರಪ್ಪ ನಾಯ್ಕ್ (55) ಎಂದು ಗುರುತಿಸಲಾಗಿದೆ. ಕಳೆದ ಹತ್ತು ದಿನಗಳ ಹಿಂದೆ ನಾರಾಯಣ ನಾಯ್ಕ್ (47)

ಬೆಳ್ತಂಗಡಿ: ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ಆರೋಪ ➤ ಯುವಕರ ತಂಡದಿಂದ ಇಬ್ಬರ ಮೇಲೆ ಹಲ್ಲೆ- ಓರ್ವ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಿಸೆಸ್ ಇಂಡಿಯಾ 2022 ಪ್ರಶಸ್ತಿ ಮುಡಿಗೇರಿಸಿಕೊಂಡ ನಿವೇದಿತಾ ಗೌಡ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 22. ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮಿಸೆಸ್ ಇಡಿಯಾ 2022 ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.   ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022ರ ವಿಜೇತರಾಗಿ ನಿವೇದಿತಾ ಗೌಡ ಹೊರಹೊಮ್ಮಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾದಲ್ಲಿ‌ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಪೋಸ್ಟ್​ ಮಾಡಿಕೊಂಡಿದ್ದಾರೆ.  

ಮಿಸೆಸ್ ಇಂಡಿಯಾ 2022 ಪ್ರಶಸ್ತಿ ಮುಡಿಗೇರಿಸಿಕೊಂಡ ನಿವೇದಿತಾ ಗೌಡ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೊಂಬಾರು ಗ್ರಾ.ಪಂ. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ರಾಜೀನಾಮೆ..!!!

(ನ್ಯೂಸ್ ಕಡಬ) newskadaba.com ಕಡಬ, ಜು. 22. ತಾಲೂಕಿನ ಕೊಂಬಾರು ಗ್ರಾ.ಪಂ.ನ ಅಧ್ಯಕ್ಷೆ ಸುಶೀಲ ಶಿವಪ್ರಸಾದ್ ಹಾಗೂ ಉಪಾಧ್ಯಕ್ಷೆ ಸರಿತಾ ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜಿನಾಮೆ ಅಂಗೀಕಾರಗೊಂಡಿದೆ. ಇವರು ರಾಜಿನಾಮೆ ನೀಡಿ ಹತ್ತು ದಿನಗಳವರೆಗೂ ಹಿಂದೆಗೆದುಕೊಳ್ಳದೇ ಇರುವುದರಿಂದ ಜು.20ರಂದು ಪುತ್ತೂರು ಸಹಾಯಕ ಕಮೀಷನರ್ ರಾಜಿನಾಮೆ ಅಂಗೀಕರಿಸಿದ್ದಾರೆ. ಈ ಹಿನ್ನಲೆಯಲ್ಲಿ ಕೊಂಬಾರು ಗ್ರಾ.ಪಂ.ನಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಖಾಲಿಯಾಗಿದೆ. ಮುಂದಿನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು ಈ ಸ್ಥಾನಕ್ಕಾಗಿ ಬಿರುಸಿನ

ಕೊಂಬಾರು ಗ್ರಾ.ಪಂ. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ರಾಜೀನಾಮೆ..!!! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸವಣೂರು: ಹುಚ್ಚುನಾಯಿ ಕಡಿತ ➤ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಸವಣೂರು, ಜು. 22. ಹುಚ್ಚು ನಾಯಿ ಕಡಿತಕ್ಕೊಳಗಾಗಿ ಇಬ್ಬರು ಗಾಯಗೊಂಡ ಘಟನೆ ಸವಣೂರು ಸಮೀಪದ ಶಾಂತಿನಗರದಲ್ಲಿ ನಡೆದಿದೆ. ಶಾಂತಿನಗರದ ಸಮೀರ್ ಹಾಗೂ ಹಸೈನ್ ಎಂಬವರಿಗೆ ಹುಚ್ಚು ನಾಯಿ ಕಚ್ಚಿದ್ದು, ಸ್ಥಳೀಯವಾಗಿ ಎರಡು ಆಡುಗಳಿಗೆ ಹಾಗೂ ಬೆಕ್ಕುಗಳಿಗೆ ಇದೇ ಹುಚ್ಚು ನಾಯಿ ಕಡಿದಿರುವುದಾಗಿ ತಿಳಿದು ಬಂದಿದೆ. ನಾಯಿಯು ಮಗುವಿನ ಮೇಲೆ ದಾಳಿ ಮಾಡಿದ್ದು, ಮಗುವನ್ನು ರಕ್ಷಿಸುವ ಸಂದರ್ಭ ಓರ್ವನಿಗೆ ನಾಯಿ ಕಚ್ಚಿರುವುದಾಗಿ ತಿಳಿದು ಬಂದಿದೆ. ಹುಚ್ಚು ನಾಯಿ ರಂಪಾಟದಿಂದ ಸ್ಥಳೀಯರು ಭಯಭೀತಗೊಂಡಿದ್ದು ಮನೆಯಿಂದ ಹೊರಬರಲೂ

ಸವಣೂರು: ಹುಚ್ಚುನಾಯಿ ಕಡಿತ ➤ ಇಬ್ಬರಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಳ್ಳಾಲದ ಅನ್ಯಕೋಮಿನ ಜೋಡಿ ಬೈಂದೂರು ಲಾಡ್ಜ್ ನಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಬೈಂದೂರು, ಜು. 22. ಅನ್ಯಕೋಮಿನ ಜೋಡಿಯೊಂದು ಉಪ್ಪುಂದ ನಂದನವನ ವಸತಿ ಗೃಹಕ್ಕೆ ತೆರಳಿದ ಮಾಹಿತಿ ತಿಳಿದ ಹಿಂದೂ ಸಂಘಟನಾ ಕಾರ್ಯಕರ್ತರು ಬೈಂದೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.   ಉಳ್ಳಾಲದ ನಿವಾಸಿ ಅಮೀರ್ (45) ಎಂಬಾತ 28 ವರ್ಷದ ಯುವತಿಯೊಂದಿಗೆ ಬೈಂದೂರು ಲಾಡ್ಜ್ ಗೆ ತೆರಳಿದ್ದಾರೆ ಎಂದೆನ್ನಲಾಗಿದೆ. ಅಮೀರ್ ಗುಜರಿ ವ್ಯಾಪಾರಿಯಾಗಿದ್ದು, ಯುವತಿಯು ಆತನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು ಎನ್ನಲಾಗಿದೆ. ಇದೀಗ ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಉಳ್ಳಾಲದ ಅನ್ಯಕೋಮಿನ ಜೋಡಿ ಬೈಂದೂರು ಲಾಡ್ಜ್ ನಲ್ಲಿ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪುತ್ತೂರು: ಅಂತರಾಜ್ಯ ಸರಗಳ್ಳರ ಬಂಧನ ➤ 2 ದ್ವಿಚಕ್ರ ವಾಹನ ಹಾಗೂ ಚಿನ್ನಾಭರಣ ವಶಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 22. ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂ.7ರಂದು ನಿಡ್ಪಳ್ಳಿ ಗ್ರಾಮದ ಚೂರಿಪದವು ನಿವಾಸಿ ರತ್ನಾ ಎಂಬವರ ಕುತ್ತಿಗೆಯಿಂದ ಕೋನಡ್ಕ ಎಂಬಲ್ಲಿ ಚಿನ್ನದ ಕರಿಮಣಿ ಸರ ಎಳೆದು ಬೈಕ್‌ನಲ್ಲಿ ಪರಾರಿಯಾಗಿದ್ದ ಕಳ್ಳರಿಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.   ಬಂಧಿತ ಆರೋಪಿಗಳನ್ನು ಕಾಸರಗೋಡು ಕುಂಬ್ಳೆ ಬಂಬ್ರಾಣ ಲಕ್ಷಂ ವೀಡು ಕಾಲೋನಿ ದಿ.ಬಡುವ ಕುಂಞಿ ಅವರ ಪುತ್ರ ಫಝಲ್ ಎ ಯಾನೆ ಫೈಜಲ್ ಯಾನೆ ಪಗ್ಗು (37ವ) ಮತ್ತು ಕಾಸರಗೋಡು ಸೀತಾಂಗೋಳಿ ರಾಜೀವ

ಪುತ್ತೂರು: ಅಂತರಾಜ್ಯ ಸರಗಳ್ಳರ ಬಂಧನ ➤ 2 ದ್ವಿಚಕ್ರ ವಾಹನ ಹಾಗೂ ಚಿನ್ನಾಭರಣ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟ ಬಿಎಸ್ ವೈ ➤ ಇನ್ಮುಂದೆ ಚುನಾವಣೆಯಲ್ಲಿ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ…!

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಜು. 22. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಶಿಕಾರಿಪುರದ ಅಂಜನಾಪುರ ಡ್ಯಾಮ್ ಗೆ ಬಾಗಿನ ಸಲ್ಲಿಸಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಪುತ್ರ ಬಿ.ವೈ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ. ಶಿಕಾರಿಪುರ ತಾಲೂಕಿನ ಜನತೆ ನನಗಿಂತ ಹೆಚ್ಚು ಮತಗಳ ಅಂತರದಿಂದ ವಿಜಯೇಂದ್ರನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಹಳೆ ಮೈಸೂರು ಭಾಗದಿಂದ ಸ್ಪರ್ಧಿಸುವಂತೆ ಒತ್ತಡ ಕೇಳಿಬರುತ್ತಿದೆ

ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟ ಬಿಎಸ್ ವೈ ➤ ಇನ್ಮುಂದೆ ಚುನಾವಣೆಯಲ್ಲಿ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ…! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top