ಕಡಬ: ಜೀಪು ಹಾಗೂ ಕಾರು ನಡುವೆ ಢಿಕ್ಕಿ ➤ ಇಬ್ಬರಿಗೆ ಗಂಭೀರ ಗಾಯ
(ನ್ಯೂಸ್ ಕಡಬ) newskadaba.com ಕಡಬ, ಅ.30. ಕಾರು ಹಾಗೂ ಜೀಪ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಸುಬ್ರಹ್ಮಣ್ಯದಿಂದ ಕಡಬ ಕಡೆಗೆ ಆಗಮಿಸುತ್ತಿದ್ದ ಜೀಪ್ ಹಾಗೂ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಹ್ಯುಂಡೈ ಕಾರು ನಡುವೆ ಬಿಳಿನೆಲೆ ಸೇತುವೆಯ ಸಮೀಪ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಕಡಬ: ಜೀಪು ಹಾಗೂ ಕಾರು ನಡುವೆ ಢಿಕ್ಕಿ ➤ ಇಬ್ಬರಿಗೆ ಗಂಭೀರ ಗಾಯ Read More »
ಕರಾವಳಿ, ಬ್ರೇಕಿಂಗ್ ನ್ಯೂಸ್







