ಬ್ರೇಕಿಂಗ್ ನ್ಯೂಸ್

ಕಡಬ: ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು – ಲಕ್ಷಾಂತರ ರೂ. ಮೌಲ್ಯದ ನಗ, ನಗದು ಕಳ್ಳತನ

(ನ್ಯೂಸ್ ಕಡಬ) newskadaba.com ಕಡಬ, ಜ.05. ಮನೆಗೆ ಬೀಗ ಹಾಕಿ ಮನೆ ಮಂದಿ ಆತೂರು ದ್ಸಿಕ್ರ್ ಹಲ್ಕಾ ವಾರ್ಷಿಕ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ, ನಗದನ್ನು ದೋಚಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಆತೂರು ಕೊಯಿಲ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಆತೂರು ಕೊಯಿಲ ಸಮೀಪದ ಕಲಾಯಿ ನಿವಾಸಿ ಯಾಕುಬ್ ಎಂಬವರ ಮನೆಯ ಬೀಗ ಮುರಿದ ಕಳ್ಳರು, ನಗ ಹಾಗೂ ನಗದನ್ನು ದೋಚಿದ್ದಾರೆ. ಪಕ್ಕದಲ್ಲಿರುವ ಮನೆಯೊಂದರ […]

ಕಡಬ: ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು – ಲಕ್ಷಾಂತರ ರೂ. ಮೌಲ್ಯದ ನಗ, ನಗದು ಕಳ್ಳತನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಪಾನ್‌ನಲ್ಲಿ 155 ಬಾರಿ ಕಂಪಿಸಿದ ಭೂಮಿ – 12 ಮಂದಿ ಮೃತ್ಯು..!

(ನ್ಯೂಸ್ ಕಡಬ) newskadaba.com ಟೋಕಿಯೊ, ಜ. 02. ಸರಣಿ ಭೂಕಂಪಗಳಿಂದಾಗಿ ಜಪಾನ್ ದೇಶವು ನಲುಗಿ ಹೋಗಿದ್ದು, ಇಂದಿನವರೆಗೆ 155 ಭೂಕಂಪಗಳು ಸಂಭವಿಸಿವೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರದಂದು 7.6 ಮತ್ತು 6 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದು, ಭೂಕಂಪನದಿಂದ ಕನಿಷ್ಠ 12 ಮಂದಿ ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ. ಇನ್ನು ಭೂಕಂಪದ ತೀವ್ರತೆಗೆ ಸಮುದ್ರದಲ್ಲಿ ಸುನಾಮಿ ಭೀತಿ ಆವರಿಸಿದ್ದು ಅಲೆಗಳ ಹೊಡೆತಕ್ಕೆ ಅನೇಕ ಮನೆಗಳು ನೆಲಸಮವಾಗಿರುವುದಾಘಿ ವರದಿ ತಿಳಿಸಿದೆ.

ಜಪಾನ್‌ನಲ್ಲಿ 155 ಬಾರಿ ಕಂಪಿಸಿದ ಭೂಮಿ – 12 ಮಂದಿ ಮೃತ್ಯು..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಳ್ಯ: ಕಾರು ಹಾಗೂ ಲಾರಿ ನಡುವೆ ಅಪಘಾತ- ಓರ್ವನಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 07. ಕಾರು ಹಾಗೂ ಲಾರಿ ಮಧ್ಯೆ ಪರಸ್ಪರ ಅಪಘಾತ ಸಂಭವಿಸಿದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ನಡೆದಿದೆ. ಗಾಯಗೊಂಡ ಕಾರು ಚಾಲಕನನ್ನು ಶಿವಪ್ಪ ಎಂದು ಗುರುತಿಸಲಾಗಿದೆ. ಇವರು ತನ್ನ ಕಾರಿನಲ್ಲಿ ಸಂಪಾಜೆಯಿಂದ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭ ಗೂನಡ್ಕದಲ್ಲಿ ಲಾರಿಯೊಂದು ಢಿಕ್ಕಿ ಹೊಡೆದಿದ್ದು, ಪರಿಣಾಮ ಚಾಲಕ ಶಿವಪ್ಪರವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸುಳ್ಯ: ಕಾರು ಹಾಗೂ ಲಾರಿ ನಡುವೆ ಅಪಘಾತ- ಓರ್ವನಿಗೆ ಗಾಯ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನವೆಂಬರ್ 27ರಂದು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಪ್ರಧಾನಿ ಮೋದಿ ಭೇಟಿ- ಭರದ ಸಿದ್ದತೆ

(ನ್ಯೂಸ್ ಕಡಬ) newskadaba.com ತಿರುಪತಿ, ನ. 25. ಪ್ರಧಾನಿ ನರೇಂದ್ರ ಮೋದಿಯವರು ನ. 27 ರಂದು ವಿಶ್ವವಿಖ್ಯಾತ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಪ್ರಧಾನಿ ಮೋದಿಯವರು ನ. 26ರ ರಾತ್ರಿ ತಿರುಪತಿಯಲ್ಲಿ ವಾಸ್ತವ್ಯ ಹೂಡಲಿದ್ದು, ನ.27 ರಂದು ಬೆಳಗ್ಗೆ 8 ಗಂಟೆಗೆ ತಿರುಪತಿಯ ಭಗವಾನ್‌ ಬಾಲಾಜಿಯ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ಪ್ರಧಾನಿ ಜೊತೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಮತ್ತು ರಾಜ್ಯ ಸಚಿವರು ಹಾಗೂ ಸಂಸದರು ಪೂಜೆಯಲ್ಲಿ ಭಾಗವಹಿಸಲಿದ್ದಾರೆ ಎಂದು

ನವೆಂಬರ್ 27ರಂದು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಪ್ರಧಾನಿ ಮೋದಿ ಭೇಟಿ- ಭರದ ಸಿದ್ದತೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸಂಚರಿಸುತ್ತಿದ್ದ ವಿಮಾನದಲ್ಲೇ ಪ್ರಯಾಣಿಕ ನಿಧನ – ತುರ್ತು ಭೂಸ್ಪರ್ಶ ಮಾಡಿದ ಇಂಡಿಗೋ ವಿಮಾನ

(ನ್ಯೂಸ್ ಕಡಬ) newskadaba.com ಹೈದರಾಬಾದ್, ನ. 24. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರೊಬ್ಬರು ಮೃತಪಟ್ಟಿರುವ ಘಟನೆ ಜೆಡ್ಡಾದಿಂದ ಹೈದರಾಬಾದ್ ಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಸಂಭವಿಸಿದೆ. ಪ್ರಯಾಣಿಕ ಮೃತಪಟ್ಟ ಹಿನ್ನೆಲೆ ಇಂಡಿಗೋ ವಿಮಾನವನ್ನು ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಪ್ರಯಾಣಿಕನಿಗೆ ಸೂಕ್ತ ಚಿಕಿತ್ಸೆ ನೀಡಿದರೂ ಆತ ಬದುಕುಳಿಯಲಿಲ್ಲ. ಇಂಡಿಗೋ ಅಧಿಕಾರಿಗಳು ಮೃತನ ಕುಟುಂಬಕ್ಕೆ ಮಾಹಿತಿ ನೀಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ವೈದ್ಯಕೀಯ ತುರ್ತು ಪರಿಸ್ಥಿತಿ ಕಾರಣಕ್ಕೆ ವಿಮಾನವನ್ನು ಕರಾಚಿಯಲ್ಲಿ ಸುದೀರ್ಘ ಕಾಲ ತುರ್ತು ಭೂಸ್ಪರ್ಶ ಮಾಡಲಾಗಿದೆ. ಪ್ರಯಾಣಿಕ ಮೃತಪಟ್ಟಿದ್ದು

ಸಂಚರಿಸುತ್ತಿದ್ದ ವಿಮಾನದಲ್ಲೇ ಪ್ರಯಾಣಿಕ ನಿಧನ – ತುರ್ತು ಭೂಸ್ಪರ್ಶ ಮಾಡಿದ ಇಂಡಿಗೋ ವಿಮಾನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಶೂಟಿಂಗ್ ಮಾಡುವವರಿಗೆ BMRCL ಗುಡ್ ನ್ಯೂಸ್ – ಇನ್ಮುಂದೆ ಮೆಟ್ರೋದಲ್ಲಿ ಚಿತ್ರೀಕರಣಕ್ಕೆ ಅವಕಾಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 24. ಇಷ್ಟುದಿನ ಮೆಟ್ರೋ ಆವರಣದಲ್ಲಿ ಕ್ಯಾಮರಾ ಬಳಕೆ, ಚಿತ್ರೀಕರಣಕ್ಕೆ ಕಾಯುತ್ತಿದ್ದ ಚಿತ್ರರಂಗದ ಮಂದಿಗೆ ಬಿಎಂಆರ್‌ಸಿಎಲ್‌ ಗುಡ್‌ನ್ಯೂಸ್‌ ನೀಡಿದೆ. ದೆಹಲಿ ಹಾಗೂ ಚೆನ್ನೈ ಮೆಟ್ರೋ ಬಳಿಕ ಬೆಂಗಳೂರಿನ ‘ನಮ್ಮ ಮೆಟ್ರೋ’ದಲ್ಲೂ ಸಿನಿಮಾ ಹಾಗೂ ಸೀರಿಯಲ್‌ ಶೂಟಿಂಗ್‌ಗೆ ಅನುಮತಿ ನೀಡಲು BMRCL ಮುಂದಾಗಿದ್ದು, ಇನ್ಮುಂದೆ ಬೆಂಗಳೂರಿನ ಮೆಟ್ರೋ ನಿಲ್ದಾಣ ಹಾಗೂ ಮೆಟ್ರೋ ರೈಲುಗಳಲ್ಲಿ ಬಣ್ಣದ ಲೋಕದ ಗದ್ದಲ ಕೇಳುವ ಕಾಲ ಸನ್ನಿಹಿತವಾಗಲಿದೆ ಎಂದರೂ ತಪ್ಪಾಗಲಾರದು. ಸದ್ಯ ಬೆಂಗಳೂರಿನ ಮೆಟ್ರೋಗಳಲ್ಲಿ ಇದೀಗ ಚಿತ್ರೀಕರಣಕ್ಕೆ ಅವಕಾಶ

ಶೂಟಿಂಗ್ ಮಾಡುವವರಿಗೆ BMRCL ಗುಡ್ ನ್ಯೂಸ್ – ಇನ್ಮುಂದೆ ಮೆಟ್ರೋದಲ್ಲಿ ಚಿತ್ರೀಕರಣಕ್ಕೆ ಅವಕಾಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಟಿ20 ಕ್ರಿಕೆಟ್ ಗೆ ರೋಹಿತ್‌ ಶರ್ಮಾ ಶೀಘ್ರ ವಿದಾಯ..!

(ನ್ಯೂಸ್ ಕಡಬ) newskadaba.com ಮುಂಬೈ, ನ. 23. ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಕೊನೆಯ ಹಂತದಲ್ಲಿ ಸೋಲಾಯಿತು. ಈ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಟಿ 20 ಕ್ರಿಕೆಟ್ ಗೆ ರೋಹಿತ್ ಶರ್ಮ ವಿದಾಯ ಹೇಳುವ ಸುದ್ದಿ ಹೊರಬಿದ್ದಿದೆ. ಹಿಟ್​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದ್ದು, ಏಕದಿನ ವಿಶ್ವಕಪ್ ಟೂರ್ನಿಗೂ ಮೊದಲು ಬಿಸಿಸಿಐ ಜೊತೆ ಈ ಕುರಿತು ರೋಹಿತ್

ಟಿ20 ಕ್ರಿಕೆಟ್ ಗೆ ರೋಹಿತ್‌ ಶರ್ಮಾ ಶೀಘ್ರ ವಿದಾಯ..! Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಸುಪ್ರೀಂ ಕೋರ್ಟ್ ನ ಮೊದಲ ನ್ಯಾಯಾಧೀಶೆ ಫಾತಿಮಾ ಬೀವಿ ವಿಧಿವಶ

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ನ. 23. ಸುಪ್ರೀಂ ಕೋರ್ಟ್‌ನ ಮೊದಲ ನ್ಯಾಯಾಧೀಶೆ ಮತ್ತು ತಮಿಳುನಾಡಿನ ಮಾಜಿ ರಾಜ್ಯಪಾಲರಾಗಿದ್ದ ಫಾತಿಮಾ ಬೀವಿ(96) ಅವರು ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರದಂದು ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿದ್ದಾರೆ. ಫಾತಿಮಾ ಬೀವಿ ನಿಧನಕ್ಕೆ ಅನೇಕ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಫಾತಿಮಾ ಬೀವಿ ಅವರು ಧೈರ್ಯಶಾಲಿ ಮಹಿಳೆಯಾಗಿದ್ದು, ಅವರ ಹೆಸರಿನಲ್ಲಿ ಅನೇಕ ದಾಖಲೆಗಳಿವೆ. ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾಸ ಗಟ್ಟಿಯಾಗಿದ್ದರೆ ಯಾವುದೇ ಪ್ರತಿಕೂಲತೆಯನ್ನು ಜಯಿಸಬಹುದು ಎಂಬುದಕ್ಕೆ ಫಾತಿಮಾ ಬೀವಿ ಸಾಕ್ಷಿ

ಸುಪ್ರೀಂ ಕೋರ್ಟ್ ನ ಮೊದಲ ನ್ಯಾಯಾಧೀಶೆ ಫಾತಿಮಾ ಬೀವಿ ವಿಧಿವಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆನ್ಲೈಿನ್ ರಮ್ಮಿ ಗೇಮ್ ನ ಸಾಲ ತೀರಿಸಲು ಎಳನೀರು ಕಳ್ಳತನಗೈದ ಭೂಪ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 23. ಆನ್‍ಲೈನ್ ಗೇಮಿನಲ್ಲಿ ಮಾಡಿಕೊಂಡಿದ್ದ ಸಾಲ ತೀರಿಸಲು ಎಳನೀರು ಕಳ್ಳತನ ಮಾಡಿ ಬೆಳಗ್ಗೆ ಮಾರಾಟ ಮಾಡುತ್ತಿದ್ದ ಟ್ಯಾಕ್ಸಿ ಚಾಲಕನೋರ್ವನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ. ಬಂಧಿತನನ್ನು ತಮಿಳುನಾಡು ಮೂಲದ ಮೋಹನ್ ಎಂದು ಗುರುತಿಸಲಾಗಿದೆ. ಈ ಹಿಂದೆ ಎಳನೀರು ವ್ಯಾಪಾರ ಮಾಡುತ್ತಿದ್ದ ಈತ, ಬಿಡುವಿನ ಸಮಯದಲ್ಲಿ ಆನ್‍ಲೈನ್‍ನಲ್ಲಿ ರಮ್ಮಿ ಆಟವಾಡಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಕಾರು ಬಾಡಿಗೆ ಪಡೆದು ಟ್ಯಾಕ್ಸಿ ಚಾಲಕ ವೃತ್ತಿ ಮಾಡುತ್ತಿದ್ದನು.

ಆನ್ಲೈಿನ್ ರಮ್ಮಿ ಗೇಮ್ ನ ಸಾಲ ತೀರಿಸಲು ಎಳನೀರು ಕಳ್ಳತನಗೈದ ಭೂಪ..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಯಾರೋ ಮಾಡಿದ ತಪ್ಪಿಗೆ ವಿದೇಶದ ಜೈಲಿನಲ್ಲಿದ್ದ ಕಡಬದ ಯುವಕ – ಗೆಳೆಯರ ಸಹಾಯದಿಂದ ಇಂದು ತಾಯ್ನಾಡಿಗೆ ಆಗಮನ

(ನ್ಯೂಸ್ ಕಡಬ) newskadaba.com ಕಡಬ, ನ. 20. ಸೌದಿ ಅರೇಬಿಯಾದ ರಿಯಾದ್‌ನ ಜೈಲಿನಲ್ಲಿ ಬ್ಯಾಂಕ್‌ ಖಾತೆ ಹ್ಯಾಕರ್‌ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ಒಳಗಾಗಿ ಕಳೆದ 11 ತಿಂಗಳಿನಿಂದ ಬಂಧಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್‌ ಕೊನೆಗೂ ಬಂಧನ ಮುಕ್ತರಾಗಿ ಇಂದು ಊರಿಗೆ ಆಗಮಿಸಲಿದ್ದಾರೆ. ಸೌದಿಯ ರಿಯಾದ್‌ನಿಂದ ಅಲ್ಲಿನ ಪೊಲೀಸರು ಚಂದ್ರಶೇಖರ್‌ ಅವರನ್ನು ಇಂದು ವಿಮಾನದಲ್ಲಿ ಮುಂಬಯಿಗೆ ಕಳುಹಿಸಿಕೊಡಲಿದ್ದು, ಅಲ್ಲಿಂದ ಅವರು ಬಹುತೇಕ ಸಂಜೆ ಸುಮಾರು ಏಳು ಗಂಟೆ

ಯಾರೋ ಮಾಡಿದ ತಪ್ಪಿಗೆ ವಿದೇಶದ ಜೈಲಿನಲ್ಲಿದ್ದ ಕಡಬದ ಯುವಕ – ಗೆಳೆಯರ ಸಹಾಯದಿಂದ ಇಂದು ತಾಯ್ನಾಡಿಗೆ ಆಗಮನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top