ಬ್ರೇಕಿಂಗ್ ನ್ಯೂಸ್

ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬೆದರಿಕೆ ಆರೋಪ-ದೂರು ದಾಖಲು

(ನ್ಯೂಸ್ ಕಡಬ)newskadaba.com, ಬೆಂಗಳೂರು(ಅ.02): ಜೆಡಿಎಸ್ ಪಕ್ಷದ ನಾಯಕ ಮತ್ತು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮತ್ತು ಎಂಎಲ್‌ಸಿ ರಮೇಶ್ ಗೌಡ ವಿರುದ್ಧ ಜೆಡಿಎಸ್ ಸಾಮಾಜಿಕ ಮಾಧ್ಯಮ ಉಪಾಧ್ಯಕ್ಷ ವಿಜಯ್ ಟಾಟಾ ಅವರು ಸುಲಿಗೆ ಮತ್ತು ಜೀವ ಬೆದರಿಕೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಭದ್ರತೆಯನ್ನೂ ಕೋರಿದ್ದಾರೆ. ಜೆಡಿಎಸ್‌ನ ಸಾಮಾಜಿಕ ಜಾಲತಾಣ ಉಪಾಧ್ಯಕ್ಷರು ತಮ್ಮ ದೂರಿನಲ್ಲಿ ಹೆಚ್‌ಡಿ ಕುಮಾರಸ್ವಾಮಿ ಮತ್ತು ರಮೇಶ್‌ಗೌಡ ಅವರಿಗೆ 50 ಕೋಟಿ ಬೇಡಿಕೆ ಇಟ್ಟಿದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.ಹಣವನ್ನು ನೀಡದಿದ್ದರೆ […]

ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬೆದರಿಕೆ ಆರೋಪ-ದೂರು ದಾಖಲು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ವಿಧಾನಪರಿಷತ್ ಉಪಚುನಾವಣೆ

(ನ್ಯೂಸ್ ಕಡಬ)newskadaba.com, ಮಂಗಳೂರು(ಅ.02): ವಿಧಾನ ಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ರಾಜು ಪೂಜಾರಿಯವರಿಗೆ ಕಾಂಗ್ರೆಸ್ ಪಕ್ಷ ಉಪ ಚುನಾವಣೆ ಟಿಕೆಟ್ ನೀಡಿದೆ. ವಿಧಾನ ಪರಿಷತ್ ನಲ್ಲಿ ತೆರವಾದ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಆಯ್ಕೆ ಮಾಡಲಾಗಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆಯಾದ ನಂತರ ರಾಜೀನಾಮೆ ನೀಡಿದ್ದರು.

ಮಂಗಳೂರು: ವಿಧಾನಪರಿಷತ್ ಉಪಚುನಾವಣೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮೈಸೂರು ದಸರಾಕ್ಕೆ ಹಿರಿಯ ಸಾಹಿತಿಹಂಪಾ ನಾಗರಾಜಯ್ಯರವರಿಂದ ಅಧಿಕೃತ ಚಾಲನೆ

(ನ್ಯೂಸ್ ಕಡಬ)newskadaba.com, ಮೈಸೂರು(ಅ.02): ಇಂದು ಬೆಳಗ್ಗೆ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿ, ದೇವಿ ದರ್ಶನ ಪಡೆದು ಬಳಿಕ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದಸರಾ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ ಗಣ್ಯರು ಭಾಗಿಯಾಗಿದ್ದರು. ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

ಮೈಸೂರು ದಸರಾಕ್ಕೆ ಹಿರಿಯ ಸಾಹಿತಿಹಂಪಾ ನಾಗರಾಜಯ್ಯರವರಿಂದ ಅಧಿಕೃತ ಚಾಲನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ :ಸೌತ್ ಕೆನರಾ ಪೆಂಟೆಕೋಸ್ಟಲ್ ಕೇರ್ ಹ್ಯಾಂಡ್ಸ್ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಮತ್ತು ಸಹಾಯ ಹಸ್ತ

(ನ್ಯೂಸ್ ಕಡಬ)newskadaba.com, ಕಡಬ(ಅ.02): ಸ್ವಚ ಭಾರತ ಅಭಿಯಾನವು ಒಂದು ಬೃಹತ್ ಸಮೂಹ ಚಳುವಳಿ ಆಗಿದೆ. ಇದು 2019 ನೇ ಇಸವಿಯ ಹೊತ್ತಿಗೆ ಭಾರತವನ್ನು ಸ್ವಚ ಭಾರತವನ್ನಾಗಿಸುವ ಗುರಿಹೊಂದಿತು .ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಯಾವಾಗಲು ಸ್ವಚತೆಯ ಬಗ್ಗೆ ಒತ್ತು ನೀಡುತ್ತಿದರು. ಸ್ವಚತೆಯಿಂದ ಜೀವನದಲ್ಲಿ ಅರೋಗ್ಯ ಮತ್ತು ಅಭಿವೃಧಿಯನ್ನು ಹೊಂದಬಹುದು ಎಂದು ನುಡಿಯುತ್ತಿದರು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಭಾರತ ಸರ್ಕಾರವು 2014 ರ ಅಕ್ಟೋಬರ್ 2 ರಂದು ಸ್ವಚ ಭಾರತ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿತು.ಈ ಧ್ಯೇಯವು ಎಲ್ಲಾ ಗ್ರಾಮೀಣ ಮತ್ತು

ಕಡಬ :ಸೌತ್ ಕೆನರಾ ಪೆಂಟೆಕೋಸ್ಟಲ್ ಕೇರ್ ಹ್ಯಾಂಡ್ಸ್ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಮತ್ತು ಸಹಾಯ ಹಸ್ತ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಸಿಎಂ ಗೆ ತಪ್ಪಿನ ಅರಿವಾದಂತಿದೆ-ಸಂಸದ ಚೌಟ

(ನ್ಯೂಸ್ ಕಡಬ)newskadaba.com, ನವದೆಹಲಿ(ಅ.02): ಸಿಎಂ ಸಿದ್ದರಾಮಯ್ಯ ಅವರು 14 ಸೈಟ್‌ ವಾಪಸ್‌ ಕೊಟ್ಟಿರುವುದು ಅವರಿಗೆ ಬುದ್ಧಿ ಬಂದ ಹಾಗೆ ಕಾಣುತ್ತದೆ. ತನ್ನ ತಪ್ಪಿನ ಅರಿವಾದಂತೆ ಇದೆ, ಇನ್ನಾದರೂ ರಾಜೀನಾಮೆ ಕೊಡಲಿ ಎಂದು ಸಂಸದ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಒತ್ತಾಯಿಸಿದ್ದಾರೆ.  ಸಿಎಂ ಅವರು ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಂವಿಧಾನದ ಆಶಯಗಳಿಗೆ ಗೌರವ ಕೊಡಲಿ. ಅವೈಜ್ಞಾನಿಕ ನೀತಿಯಿಂದಾಗಿ ರಾಜ್ಯವನ್ನೇ ದಿವಾಳಿ ಹಂತಕ್ಕೆ ಸಿದ್ದರಾಮಯ್ಯ ತಂದಿಟ್ಟಿದ್ದಾರೆ. ಒಂದಿಂಚು ಅಭಿವೃದ್ಧಿ ಇಲ್ಲದೆ ಜನ ಕಂಗೆಟ್ಟಿದ್ದಾರೆ. ವಾಲ್ಮೀಕಿ ನಿಗಮದಿಂದಲೇ ನೇರವಾಗಿ

ಮಂಗಳೂರು: ಸಿಎಂ ಗೆ ತಪ್ಪಿನ ಅರಿವಾದಂತಿದೆ-ಸಂಸದ ಚೌಟ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಭಾರೀ ಮಾದಕ ವಸ್ತು ಜಾಲ ಬಯಲು; 2000 ಕೋಟಿ ಮೌಲ್ಯದ ಕೊಕೇನ್ ಸೀಜ್

(ನ್ಯೂಸ್ ಕಡಬ)newskadaba.com, ನವದೆಹಲಿ(ಅ.02): ಮಾದಕ ವಸ್ತು ಜಾಲ ವನ್ನು ದೆಹಲಿ ಪೊಲೀಸರು ಬೇಧಿಸಿದ್ದು, ಬರೋಬ್ಬರಿ 2,000 ಕೋಟಿ ರೂ. 500ಕೆ.ಜಿ ಕೊಕೇನ್‌ ಸೀಜ್‌ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ದಕ್ಷಿಣ ದೆಹಲಿಯಲ್ಲಿ ಪೊಲೀಸರು ರೈಡ್‌ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅರೆಸ್ಟ್‌ ಮಾಡಲಾಗಿದೆ. ಇನ್ನು ಈ ಬೃಹತ್‌ ಮಾದಕ ವಸ್ತು ಜಾಲದ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಸಿಂಡಿಕೇಟ್‌ ಇರುವಂತೆ ಮೇಲ್ನೋಟಕ್ಕೆ ಕಂಡು ಬಂದಿದೆ. ಇನ್ನು ಪ್ರಕರಣದಲ್ಲಿ ಇಬ್ಬರು ಆಫ್ಘನ್‌ ಪ್ರಜೆಗಳನ್ನು ಅರೆಸ್ಟ್‌ ಮಾಡಲಾಗಿದೆ. ಇವರ ಬಳಿ 400 ಗ್ರಾಂ

ಭಾರೀ ಮಾದಕ ವಸ್ತು ಜಾಲ ಬಯಲು; 2000 ಕೋಟಿ ಮೌಲ್ಯದ ಕೊಕೇನ್ ಸೀಜ್ Read More »

ಬ್ರೇಕಿಂಗ್ ನ್ಯೂಸ್

ಪ್ರವಾಹ ಪೀಡಿತ ಪ್ರದೇಶಗಳಿಗೆ 5858.60 ಕೋಟಿ ಪರಿಹಾರ

(ನ್ಯೂಸ್ ಕಡಬ)newskadaba.com,ನವದೆಹಲಿ (ಅ.02)  ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆಯಿಂದ ಪರಿಹಾರ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ಬಳಿಕ 5858.60 ಕೋಟಿ ರೂ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ ಕೇಂದ್ರ ಪಾಲು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ ಮುಂಗಡವಾಗಿ ಬಿಡುಗಡೆ ಮಾಡಿದೆ. ಇದರಲ್ಲಿ ಮಹಾರಾಷ್ಟ್ರಕ್ಕೆ 1,492 ಕೋಟಿ ರೂ., ಆಂಧ್ರಪ್ರದೇಶಕ್ಕೆ 1,036 ಕೋಟಿ ರೂ., ಅಸ್ಸಾಂಗೆ 716 ಕೋಟಿ ರೂ., ಬಿಹಾರಕ್ಕೆ 655.60 ಕೋಟಿ ರೂ., ಗುಜರಾತ್‌ಗೆ 600 ಕೋಟಿ

ಪ್ರವಾಹ ಪೀಡಿತ ಪ್ರದೇಶಗಳಿಗೆ 5858.60 ಕೋಟಿ ಪರಿಹಾರ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಾಳೆ ವಿಶ್ವಪ್ರಖ್ಯಾತ ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆ

(ನ್ಯೂಸ್ ಕಡಬ)newskadaba.com,ಮೈಸೂರು (ಅ.02) : ಮೈಸೂರು ಸಮೀಪದ ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಳೆ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಚಾಮುಂಡೇಶ್ವರಿ ದೇವಿಗೆ ನಾಳೆ ಬೆಳಗ್ಗೆ 9.15 ರಿಂದ 9.45 ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ನಾಡೋಜ, ಖ್ಯಾತ ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರು ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ

ನಾಳೆ ವಿಶ್ವಪ್ರಖ್ಯಾತ ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಮಾರ ಪರ್ವತ ಚಾರಣಕ್ಕೆ ನಾಳೆಯಿಂದ ಆನ್ಲೈನ್ ಟಿಕೆಟ್ ಗೆ ಚಾಲನೆ

(ನ್ಯೂಸ್ ಕಡಬ)newskadaba.com, (ಅ.02) : ಕುಮಾರ ಪರ್ವತಕ್ಕೆ ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸಲು ಸ್ಥಗಿತಗೊಳಿಸಲಾಗಿದ್ದ ಚಾರಣ ನಾಳೆಯಿಂದ ಆರಂಭವಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ  ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರಕಟಿಸಿದ್ದಾರೆ. 70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಬೆಂಗಳೂರು ಕಬ್ಬನ್ ಉದ್ಯಾನದಿಂದ ಲಾಲ್ ಬಾಗ್ ವರೆಗೆ ಅರಣ್ಯಇಲಾಖೆ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣೆಗಾಗಿ ನಡಿಗೆಯಲ್ಲಿ ಪಾಲ್ಗೊಂಡು ಲಾಲ್ ಬಾಗ್ ನಲ್ಲಿ ಮಾತನಾಡಿದ ಸಚಿವರು, ರಾಜ್ಯದ ಎಲ್ಲ ಚಾರಣ ಪಥಗಳಿಗೂ ಒಂದೇ ಅಂತರ್ಜಾಲ ತಾಣದಲ್ಲಿ ಟಿಕೆಟ್ ಖರೀದಿಸಲು

ಕುಮಾರ ಪರ್ವತ ಚಾರಣಕ್ಕೆ ನಾಳೆಯಿಂದ ಆನ್ಲೈನ್ ಟಿಕೆಟ್ ಗೆ ಚಾಲನೆ Read More »

ಬ್ರೇಕಿಂಗ್ ನ್ಯೂಸ್

ಯುರೋಪ್ ದೇಶಗಳಿಗೆ ಪೂರೈಕೆಯಾಗಲಿವೆ ಭಾರತದ 2000 ಮಷಿನ್ ಗನ್

(ನ್ಯೂಸ್ ಕಡಬ)newskadaba.com, ಕಾನ್ಪುರ(ಅ.02) : ಕಾನ್ಪುರದಲ್ಲಿರುವ ಸ್ಮಾಲ್ ಆರ್ಮ್ಸ್ ಫ್ಯಾಕ್ಟರಿಗೆ ಯುರೋಪಿಯನ್ ದೇಶಗಳಿಂದ ಮೆಷಿನ್ ಗನ್‌ಗಳಿಗಾಗಿ ದೊಡ್ಡ ಆರ್ಡರ್ ಬಂದಿದೆ. ಒಂದು ನಿಮಿಷದಲ್ಲಿ 1000 ಸುತ್ತು ಗುಂಡು ಹಾರಿಸಬಲ್ಲ ಅತ್ಯಾಧುನಿಕ ಮೀಡಿಯಂ ಮೆಷಿನ್ ಗನ್‌ಗಳ 2000 ಯುನಿಟ್‌ಗಳನ್ನು ಈ ಕಾರ್ಖಾನೆ ಪೂರೈಸಲಿದೆ. ಮುಂದಿನ ಮೂರು ವರ್ಷಗಳಲ್ಲಿ ಹಲವು ಹಂತಗಳಲ್ಲಿ ಈ ಆರ್ಡರ್ ಪೂರ್ಣಗೊಳ್ಳಲಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಸರ್ಕಾರಿ ಸ್ವಾಮ್ಯದ ಆರ್ಡಿನೆನ್ಸ್ ಕಂಪನಿ ಸ್ಮಾಲ್ ಆರ್ಮ್ಸ್ ಫ್ಯಾಕ್ಟರಿಯಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಬೇಡಿಕೆಯ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತದೆ.

ಯುರೋಪ್ ದೇಶಗಳಿಗೆ ಪೂರೈಕೆಯಾಗಲಿವೆ ಭಾರತದ 2000 ಮಷಿನ್ ಗನ್ Read More »

ಬ್ರೇಕಿಂಗ್ ನ್ಯೂಸ್
Scroll to Top