ಬ್ರೇಕಿಂಗ್ ನ್ಯೂಸ್

ನಾಳೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂಸವಾರಿ

(ನ್ಯೂಸ್ ಕಡಬ) newskadaba.com ಅ. 11. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೀಯ ಜಂಬೂಸವಾರಿ ಮೆರವಣಿಗೆಗೆ ನಾಳೆ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಅಕ್ಟೋಬರ್ 12ರ ಶನಿವಾರ ಸಂಜೆ 4 ರಿಂದ 4:30ರೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಮೈಸೂರು ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮಧ್ಯಾಹ್ನ 1.41ರಿಂದ 2.10ರೊಳಗೆ ಸಲ್ಲುವ ಶುಭ ಮಕರ […]

ನಾಳೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂಸವಾರಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ವಯನಾಡ್ ಗೆ NDRFನಿಂದ ಪರಿಹಾರ ಬಿಡುಗಡೆ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ಸೂಚನೆ

(ನ್ಯೂಸ್ ಕಡಬ)newskadaba.com, ಅ. 11 ಕೇರಳ : ವಯನಾಡಿಗೆ ಎನ್‌ಡಿಆರ್‌ಎಫ್(NDRF) ಮತ್ತು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಹಣಕಾಸು ಒದಗಿಸುವ ಕುರಿತು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಕೇರಳ ಹೈಕೋರ್ಟ್ ಸೂಚಿಸಿದೆ. ನ್ಯಾಯಮೂರ್ತಿ ಎ.ಕೆ. ಜಯಶಂಕರ ನಂಬಿಯಾರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಕುಮಾರ್ ವಿ ಎಂ ಅವರ ವಿಭಾಗೀಯ ಪೀಠವು, ವಯನಾಡು ಭೂಕುಸಿತದ ಬಳಿಕ ನೈಸರ್ಗಿಕ ವಿಕೋಪಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಗೆ ಸಂಬಂಧಿಸಿ ದಾಖಲಾದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ವಯನಾಡ್ ಗೆ NDRFನಿಂದ ಪರಿಹಾರ ಬಿಡುಗಡೆ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ಸೂಚನೆ Read More »

ಬ್ರೇಕಿಂಗ್ ನ್ಯೂಸ್

ರೇಣುಕಾಸ್ವಾಮಿ ಕೊಲೆ ಕೇಸ್‌: ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಆರೋಪಿ ಪ್ರದೋಷ ಸ್ಥಳಾಂತರ

(ನ್ಯೂಸ್ ಕಡಬ)newskadaba.com, ಅ.10 ಬೆಳಗಾವಿ:  ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಚಿತ್ರನಟ ದರ್ಶನ್ ಸಹಚರ ಪ್ರದೋಷ್ ನನ್ನು ಹಿಂಡಲಗಾ ಕಾರಾಗೃಹದಿಂದ ಮರಳಿ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಗುರುವಾರ ಪೊಲೀಸ್ ಭದ್ರತೆಯಲ್ಲಿ ಸ್ಥಳಾಂತರಿಸಲಾಯಿತು. ಬೆಂಗಳೂರು ಕಾರಾಗೃಹದಿಂದ ಬೆಳಗಾವಿ ಜೈಲಿಗೆ ಸ್ಥಳಾಂತರ ಮಾಡಿದ್ದರ ಬಗ್ಗೆ ಪ್ರದೋಷ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವಿಚಾರಣಾ ಕೈದಿ ಪ್ರದೋಷನನ್ನು ಮರಳಿ ಬೆಂಗಳೂರು ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ನಿರ್ದೇಶನ ನೀಡಿದ್ದರು. ಅದರಂತೆ ಆದೇಶ ಪ್ರತಿ ಬಂದ ಬಳಿಕ

ರೇಣುಕಾಸ್ವಾಮಿ ಕೊಲೆ ಕೇಸ್‌: ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಆರೋಪಿ ಪ್ರದೋಷ ಸ್ಥಳಾಂತರ Read More »

ಬ್ರೇಕಿಂಗ್ ನ್ಯೂಸ್

ಭೂ ದಾಖಲೆ ಆಡಿಟ್; ಕಂದಾಯ ಇಲಾಖೆಯಿಂದ ಹೊಸ ಸಾಫ್ಟ್ ವೇರ್ ಅಭಿವೃದ್ದಿ

(ನ್ಯೂಸ್ ಕಡಬ)newskadaba.com, ಅ.10 ಬೆಂಗಳೂರು: ಭೂ ದಾಖಲೆಗಳ ವಾಸ್ತವ ಸ್ಥಿತಿಯನ್ನು ತಿಳಿಯಲು ಕಂದಾಯ ಇಲಾಖೆಯು ಪುರಾತನವಾದ ವಿಧಾನವನ್ನು ನವೀಕರಿಸುತ್ತಿದೆ. ಸಾಂಪ್ರದಾಯಿಕ ವಿಧಾನವನ್ನು ಇತ್ತೀಚಿನ ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಲಾಗುತ್ತಿದೆ. ಲ್ಯಾಂಡ್ ಬೀಟ್ (ಜಮೀನು ಗಸ್ತು ) ವ್ಯವಸ್ಥೆಯನ್ನು ಮರಳಿ ತರಲಾಗುತ್ತಿದ್ದು, ಜಿಲ್ಲೆ ಮತ್ತು ಗ್ರಾಮ ಮಟ್ಟದಲ್ಲಿ ಪ್ರತಿ ಭೂಮಿಯ ವಿವರಗಳನ್ನು ತಿಳಿಯಲು ಹೊಸ ‘ಜಮಾಬಂದಿ’ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ಒತ್ತುವರಿ ಪ್ರಕರಣಗಳು ಮತ್ತು ಭೂ ಹಕ್ಕುಗಳ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಇದನ್ನು ಮಾಡಲಾಗುತ್ತಿದೆ.ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ 6,000 ಎಕರೆ ಜಮೀನು

ಭೂ ದಾಖಲೆ ಆಡಿಟ್; ಕಂದಾಯ ಇಲಾಖೆಯಿಂದ ಹೊಸ ಸಾಫ್ಟ್ ವೇರ್ ಅಭಿವೃದ್ದಿ Read More »

ಬ್ರೇಕಿಂಗ್ ನ್ಯೂಸ್

ಕೇರಳದ 25 ಕೋಟಿ ರೂ ಗೆದ್ದ ಮಂಡ್ಯದ ಮೆಕ್ಯಾನಿಕ್ ಅಲ್ತಾಫ್

(ನ್ಯೂಸ್ ಕಡಬ)newskadaba.com, ಅ. 09ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರದ ಬೈಕ್ ಮೆಕ್ಯಾನಿಕ್‌ ಅಲ್ತಾಫ್‌ಗೆ ಕೇರಳದ ಓಣಂ ಹಬ್ಬದ 25 ಕೋಟಿ ರೂ. ಮೌಲ್ಯದ ಲಾಟರಿ ಹೊಡೆದಿದೆ. ಈ ಮೂಲಕ ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಮಂಡ್ಯದ ವ್ಯಕ್ತಿ ಇದೀಗ ರಾತ್ರೋ ರಾತ್ರಿ ಕೋಟ್ಯಾಧಿಪತಿ ಆಗಿದ್ದಾರೆ. ಲಾಟರಿಯಲ್ಲಿ‌ 25 ಕೋಟಿ ರೂ. ಬಹುಮಾನವನ್ನು ಪಡೆದಿದ್ದಾರೆ. ಇವರು ಕೇರಳ‌ ರಾಜ್ಯ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದ ಅಲ್ತಾಫ್ ಪಾಷಾ ಅವರು ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣ ನಿವಾಸಿ

ಕೇರಳದ 25 ಕೋಟಿ ರೂ ಗೆದ್ದ ಮಂಡ್ಯದ ಮೆಕ್ಯಾನಿಕ್ ಅಲ್ತಾಫ್ Read More »

ಬ್ರೇಕಿಂಗ್ ನ್ಯೂಸ್

ಇಂದಿನ ಚಿನ್ನದ ದರ; ಇಂದೂ ತುಸು ಅಗ್ಗವಾದ ಚಿನ್ನದ ದರ

(ನ್ಯೂಸ್ ಕಡಬ)newskadaba.com, ಅ. 09 ಬೆಂಗಳೂರು: ಬಂಗಾರದ ದರ ಸತತವಾಗಿ 4ನೇ ದಿನವೂ ಕಡಿಮೆಯಾಗಿದೆ. ಇಂದು ಸ್ವಲ್ಪವೇ ಇಳಿಕೆಯಾಗಿದೆ. ಕಳೆದ 3 ದಿನಗಳಿಂದ ಕಡಿಮೆಯಾಗಿದ್ದ ಚಿನ್ನದ ದರ ಇಂದೂ ಅಗ್ಗವಾಗಿದ್ದು ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. ಗುರುವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ ತಲಾ 1 ರೂ. ಕಡಿಮೆಯಾಗಿದೆ. ಈ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,029 ರೂ. ಮತ್ತು 24

ಇಂದಿನ ಚಿನ್ನದ ದರ; ಇಂದೂ ತುಸು ಅಗ್ಗವಾದ ಚಿನ್ನದ ದರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅನಾರೋಗ್ಯದಿಂದ ರತನ್ ಟಾಟ ವಿಧಿವಶ : ಪ್ರಧಾನಿ ಮೋದಿ ಸೇರಿ ಹಲವು ಗಣ್ಯರಿಂದ ಸಂತಾಪ

(ನ್ಯೂಸ್ ಕಡಬ)newskadaba.com, ಅ. 09 ಮುಂಬೈ: ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ಅನಾರೋಗ್ಯದಿಂದ ದಾಖಲಾಗಿದ್ದ ಟಾಟಾ ಸಮೂಹದ ಮುಖ್ಯಸ್ಥ ರತನ್‌ ಟಾಟಾ  ಸಮೂಹದ ಮುಖ್ಯಸ್ಥ ರತನ್‌ ಟಾಟಾ ಅವರು ಬುಧವಾರ ತಡರಾತ್ರಿ ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ಮೋದಿ, ರಾಜ್ಯದ ಪ್ರಮುಖ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ, ಡಿಸಿಎಂ ಡಿ.ಕೆ ಶಿವಕುಮಾರ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಹಲವರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

ಅನಾರೋಗ್ಯದಿಂದ ರತನ್ ಟಾಟ ವಿಧಿವಶ : ಪ್ರಧಾನಿ ಮೋದಿ ಸೇರಿ ಹಲವು ಗಣ್ಯರಿಂದ ಸಂತಾಪ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಟಾಟಾ ಗ್ರೂಪ್‌ನ ಗೌರವಾಧ್ಯಕ್ಷ ರತನ್ ಟಾಟಾ ವಿಧಿವಶ

(ನ್ಯೂಸ್ ಕಡಬ) newskadaba.com ಮುಂಬೈ, ಅ.10. ಭಾರತದ ಅತಿ ದೊಡ್ಡ ಸಮೂಹ ಸಂಸ್ಥೆ ಟಾಟಾ ಗ್ರೂಪ್‌ನ ಗೌರವಾಧ್ಯಕ್ಷ ರತನ್ ಟಾಟಾ ವಯೋಸಹಜ ಖಾಯಿಲೆಯಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. 86 ವರ್ಷದ ರತನ್ ಟಾಟಾ ಅವರನ್ನು ಕಳೆದ ಸೋಮವಾರ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. 1991ರಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿದ್ದ ರತನ್

ಟಾಟಾ ಗ್ರೂಪ್‌ನ ಗೌರವಾಧ್ಯಕ್ಷ ರತನ್ ಟಾಟಾ ವಿಧಿವಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
crime, arrest, suspected

ಬೆಂಗಳೂರು: 12 ಮಂದಿ ಪಾಕಿಗಳ ಸೆರೆ ಹಿಡಿದ ಪೊಲೀಸರು

(ನ್ಯೂಸ್ ಕಡಬ)newskadaba.com, ಅ. 09 ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಪಾಕ್ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರ ನಾಲ್ಕು ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿಸಲಾಗಿತ್ತು. ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ 12 ಮಂದಿ ಪಾಕಿಸ್ತಾನೀಯರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಈ ತಂಡಗಳು ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಹೈದ್ರಾಬಾದ್, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನೀಯರನ್ನು ಪತ್ತೆ ಹಚ್ಚಿ ಬಂಧಿಸಿವೆ. ದೆಹಲಿಯಲ್ಲಿ 5 ಮಂದಿ,ಹೈದ್ರಾಬಾದ್ – ಇಬ್ಬರು,

ಬೆಂಗಳೂರು: 12 ಮಂದಿ ಪಾಕಿಗಳ ಸೆರೆ ಹಿಡಿದ ಪೊಲೀಸರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಸಾಯನಶಾಸ್ತ್ರ ವಿಭಾಗದ ಮೂವರು ವಿಜ್ಣಾನಿಗಳಿಗೆ ನೊಬೆಲ್ ಪ್ರಶಸ್ತಿ

(ನ್ಯೂಸ್ ಕಡಬ)newskadaba.com, ಅ. 09 ಹೊಸದಿಲ್ಲಿ: 2024ರ ಸಾಲಿನ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಬಹುಮಾನಕ್ಕೆ ವಿಜ್ಞಾನಿಗಳಾದ ಡೇವಿಡ್ ಬೇಕರ್, ಡೆಮಿಸ್ ಹಸ್ಸಾಬಿಸ್, ಜಾನ್ ಜಂಪರ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಬುಧವಾರ ರಸಾಯನಶಾಸ್ತ್ರ ವಿಭಾಗದಲ್ಲಿನ 2024ರ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಘೋಷಿಸಿದೆ. ಡೇವಿಡ್ ಬೇಕರ್ ಅವರಿಗೆ “ಕಂಪ್ಯೂಟೇಶನಲ್ ಪ್ರೊಟೀನ್ ಡಿಸೈನ್ʼ ಗಾಗಿ ಮತ್ತು ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರಿಗೆ ʼಪ್ರೊಟಿನ್ ಸ್ಟ್ರಕ್ಚರ್ ಪ್ರಿಡಿಕ್ಸನ್ʼ ಗಾಗಿ ನೊಬೆಲ್ ಪ್ರಶಸ್ತಿಗೆ

ರಸಾಯನಶಾಸ್ತ್ರ ವಿಭಾಗದ ಮೂವರು ವಿಜ್ಣಾನಿಗಳಿಗೆ ನೊಬೆಲ್ ಪ್ರಶಸ್ತಿ Read More »

ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್
Scroll to Top