ಬ್ರೇಕಿಂಗ್ ನ್ಯೂಸ್

‘ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶದ ಸುಧಾರಣೆಗೆ ಶಿಕ್ಷ ಕೋಪೈಲಟ್ ಯೋಜನೆ’- ಮಧು ಬಂಗಾರಪ್ಪ

(ನ್ಯೂಸ್ ಕಡಬ) newskadaba.com ಅ.18,ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಶಿಕ್ಷಣ ಫೌಂಡೇಶನ್ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯೊಂದಿಗೆ ಶಿಕ್ಷ ಕೋಪೈಲಟ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸ್ಥಳೀಯ ಪಠ್ಯಕ್ರಮ, ಭಾಷೆ ಮತ್ತು ಸಂದರ್ಭವನ್ನು ಆಧರಿಸಿ ಸಮಗ್ರ ಬೋಧನಾ ಸಂಪನ್ಮೂಲಗಳು ಮತ್ತು ಕಲಿಕೆಯ ಅನುಭವಗಳನ್ನು ರಚಿಸಲು ಶಿಕ್ಷ ಕೋಪೈಲಟ್ ಯೋಜನೆ ಶಿಕ್ಷಕರನ್ನು ಸಶಕ್ತಗೊಳಿಸುತ್ತದೆ. ಕರ್ನಾಟಕ ರಾಜ್ಯದ ನಗರ ಮತ್ತು ಗ್ರಾಮೀಣ ಭಾಗಗಳ […]

‘ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶದ ಸುಧಾರಣೆಗೆ ಶಿಕ್ಷ ಕೋಪೈಲಟ್ ಯೋಜನೆ’- ಮಧು ಬಂಗಾರಪ್ಪ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬ್ರಿಕ್ಸ್ ಶೃಂಗಸಭೆ – ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ಅ.18, ಬೆಂಗಳೂರು: ಕಜಾನ್‌ನಲ್ಲಿ ನಡೆಯಲಿರುವ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 22-23 ರವರೆಗೆ ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ . ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನ ಮಂತ್ರಿಗಳು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ತಮ್ಮ ಸಹವರ್ತಿಗಳೊಂದಿಗೆ ಮತ್ತು ಕಜಾನ್‌ನಲ್ಲಿ ಆಹ್ವಾನಿತ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.ಈ ವರ್ಷದ ಶೃಂಗಸಭೆಯ ಥೀಮ್ “ಕೇವಲ

ಬ್ರಿಕ್ಸ್ ಶೃಂಗಸಭೆ – ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ Read More »

ಬ್ರೇಕಿಂಗ್ ನ್ಯೂಸ್

ಕೋಲ್ಕತ್ತಾ: ಆಸ್ಪತ್ರೆಯಲ್ಲಿ ಬೆಂಗಿ ಅವಘಡ: ಐಸಿಯುನಲ್ಲಿದ್ದ ರೋಗಿ ಮೃತ್ಯು

(ನ್ಯೂಸ್ ಕಡಬ) newskadaba.com ಅ.18, ಬೆಂಗಳೂರು: ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಐಸಿಯುನಲ್ಲಿದ್ದ ಓರ್ವ ರೋಗಿ ಸಾವನ್ನಪ್ಪಿದ್ದಾನೆ. ಕೋಲ್ಕತ್ತಾದ ಸೀಲ್ದಾಹ್ ಪ್ರದೇಶದಲ್ಲಿರುವ ಇಎಸ್‌ಐ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು  ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಈ ವೇಳೆ ಕೇವಲ 20 ನಿಮಿಷದಲ್ಲಿ 80 ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಐಸಿಯುನಲ್ಲಿದ್ದ ಓರ್ವ ರೋಗಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.ಮೊದಲು ಆಸ್ಪತ್ರೆಯ ಒಂದು ಕೋಣೆಯಲ್ಲಿ ಬೆಂಕಿ

ಕೋಲ್ಕತ್ತಾ: ಆಸ್ಪತ್ರೆಯಲ್ಲಿ ಬೆಂಗಿ ಅವಘಡ: ಐಸಿಯುನಲ್ಲಿದ್ದ ರೋಗಿ ಮೃತ್ಯು Read More »

ಬ್ರೇಕಿಂಗ್ ನ್ಯೂಸ್

ಇಶಾ ಫೌಂಡೇಶನ್ ವಿರುದ್ದದ ಪ್ರಕರಣ ವಜಾ; ಸುಪ್ರೀಂ ಮಹತ್ವದ ತೀರ್ಪು

(ನ್ಯೂಸ್ ಕಡಬ) newskadaba.com ಅ.18, ನವದೆಹಲಿ: ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದ್ದು, ಅವರ ಕೊಯಮತ್ತೂರ್‌ನ ಇಶಾ ಫೌಂಡೇಶನ್‌ನ ವಿರುದ್ಧ ಆರೋಪಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಆ‍ಶ್ರಮದಲ್ಲಿ ಅಕ್ರಮವಾಗಿ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಬಂಧನದಲ್ಲಿಟ್ಟಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ. ಕಾಮರಾಜ್ ಎಂಬವವರ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಅದನ್ನು ವಜಾಗೊಳಿಸಿದೆ. ಇನ್ನು ಇದಕ್ಕೂ ಮುನ್ನ ಇಶಾ ಫೌಂಡೇಶನ್‌ ವಿರುದ್ಧದ ಆರೋಪಗಳಿಗೆ ಪೂರಕವಾದ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ತಮಿಳುನಾಡು

ಇಶಾ ಫೌಂಡೇಶನ್ ವಿರುದ್ದದ ಪ್ರಕರಣ ವಜಾ; ಸುಪ್ರೀಂ ಮಹತ್ವದ ತೀರ್ಪು Read More »

ಬ್ರೇಕಿಂಗ್ ನ್ಯೂಸ್

ಕಾಫಿ ಬೆಲೆ ಹೆಚ್ಚಳ ; ದಾಖಲೆ ನಿರ್ಮಿಸಿದ ಬೆಲೆ

(ನ್ಯೂಸ್ ಕಡಬ) newskadaba.com ಅ.18, ಚಿಕ್ಕಮಗಳೂರು. ಭಾರತದ ಕಾಫಿಗೆ ಐತಿಹಾಸಿಕ ಧಾರಣೆ ಸಿಗುವ ಮೂಲಕ ದಾಖಲೆ ನಿರ್ಮಿಸಿದೆ. ಅರೆಬಿಕಾ ಕಾಫಿಗಿಂತ ಕಡಿಮೆ ಧಾರಣೆ ಹೊಂದಿರುತ್ತಿದ್ದ ರೊಬಸ್ಟಾ ಪಾರ್ಚ್ಮೆಂಟ್‌ ಈ ವರ್ಷ 20,000 ರೂ.ಗಳಿಗೆ ತಲುಪುವ ಮೂಲಕ ಭಾರತದ ಕಾಫಿ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ, ಇದರ ಲಾಭ ಕಾಫಿ ದಾಸ್ತಾನು ಇರಿಸಿಕೊಂಡಿದ್ದ ಕೆಲವೇ ಕೆಲವು ಬೆಳೆಗಾರರು ಮತ್ತು ವರ್ತಕರಿಗೆ ಮಾತ್ರ ಲಭ್ಯವಾಗಿದೆ. ಕಾಫಿಧಾರಣೆ ಹೆಚ್ಚಾಗುತ್ತಿದ್ದಂತೆ ಇತ್ತ ಕಾಫಿಪುಡಿ ಬೆಲೆಯೂ ಗಗನಕ್ಕೇರಿದೆ.  

ಕಾಫಿ ಬೆಲೆ ಹೆಚ್ಚಳ ; ದಾಖಲೆ ನಿರ್ಮಿಸಿದ ಬೆಲೆ Read More »

ಬ್ರೇಕಿಂಗ್ ನ್ಯೂಸ್

ಇನ್ಮುಂದೆ 60 ದಿನದ ಮೊದಲೇ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ

(ನ್ಯೂಸ್ ಕಡಬ) newskadaba.com ಅ.17. ಇನ್ನುಮುಂದೆ ರೈಲ್ವೇ ಪ್ರಯಾಣಿಕರಿಗೆ ಪ್ರಯಾಣದ 60 ದಿನದ ಮೊದಲೇ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದ್ದು, ಈ ಮೂಲಕ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ವರದಿಗಳ ಪ್ರಕಾರ, ಇನ್ಮುಂದೆ 60 ದಿನದ ಮೊದಲೇ ರೈಲು ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದ್ದು, ನವೆಂಬರ್ 1 ರಿಂದ ಈ ನಿಯಮ ಜಾರಿಗೆ ಬರಲಿದೆ. ಮುಂಗಡ ರೈಲು ಟಿಕೆಟ್ ಕಾಯ್ದಿರಿಸಲು ಅಸ್ತಿತ್ವದಲ್ಲಿರುವ ಸಮಯ ಮಿತಿಯನ್ನು ಕಡಿಮೆ ಮಾಡುವುದಾಗಿ ಭಾರತೀಯ ರೈಲ್ವೆ ಘೋಷಿಸಿದೆ ಎಂದು

ಇನ್ಮುಂದೆ 60 ದಿನದ ಮೊದಲೇ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

Online shopping; ಬಟ್ಟೆ ರಿಟರ್ನ್ ತೆಗೆದುಕೊಳ್ಳದೇ ಆಟವಾಡಿಸುತ್ತಿದ್ದ ಕಂಪನಿಗೆ ಬಿಗ್ ಶಾಕ್..!

(ನ್ಯೂಸ್ ಕಡಬ) newskadaba.com ಅ. 16. ಆನ್​ಲೈನ್​ನಲ್ಲಿ ಖರೀದಿಸಿದ ಬಟ್ಟೆಯನ್ನು ವಾಪಸ್ ತೆಗೆದುಕೊಳ್ಳದ ಕಂಪನಿಯೊಂದಕ್ಕೆ ಎರ್ನಾಕುಲಂ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ನ್ಯಾಯಾಲಯವು ದಂಡ ವಿಧಿಸಿರುವ ಕುರಿತು ವರದಿಯಾಗಿದೆ. ಪ್ರಾಡಕ್ಟ್​ ಬೆಲೆ, ಪರಿಹಾರ ಮತ್ತು ನ್ಯಾಯಾಲಯದ ವೆಚ್ಚ ಸೇರಿದಂತೆ ಒಟ್ಟು 9,395 ರೂ.ಗಳನ್ನು ಪಾವತಿಸಲು ಕೋರ್ಟ್ ಆದೇಶಿಸಿರುವುದಾಗಿ ತಿಳಿದುಬಂದಿದೆ.   ಕೇರಳದ ಆಲಪ್ಪುಝದಲ್ಲಿರುವ ಇಹಾ ಡಿಸೈನ್ಸ್ ಬ್ರೈಡಲ್ ಸ್ಟುಡಿಯೋ ಎಂಬ ಆನ್ ಲೈನ್ ಶಾಪಿಂಗ್ ಸೆಂಟರ್ ವಿರುದ್ಧ ಎಡಪ್ಪಲ್ಲಿ ಮೂಲದ ಕೆ.ಜಿ. ಲಿಸಾ ಎಂಬವರು ನೀಡಿದ ದೂರಿನನ್ವಯ

Online shopping; ಬಟ್ಟೆ ರಿಟರ್ನ್ ತೆಗೆದುಕೊಳ್ಳದೇ ಆಟವಾಡಿಸುತ್ತಿದ್ದ ಕಂಪನಿಗೆ ಬಿಗ್ ಶಾಕ್..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಾಯುಭಾರ ಕುಸಿತ- ಅ.19ರ ವರೆಗೆ ಮಳೆ ಸಾಧ್ಯತೆ; ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಅ.16. ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನಲೆ ಅ.16ರಿಂದ 19ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ, ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಸೂಚಿಸಿದೆ. ಜೊತೆಗೆ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರರು ಕೂಡಲೇ ದಡ ಸೇರುವಂತೆಯೂ ತಿಳಿಸಿದೆ. ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಭಾರೀ ಮಳೆ ಹಾಗೂ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನೀರು

ವಾಯುಭಾರ ಕುಸಿತ- ಅ.19ರ ವರೆಗೆ ಮಳೆ ಸಾಧ್ಯತೆ; ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮದ್ಯ ಅಕ್ರಮ ದಾಸ್ತಾನು- ದಾಳಿ

(ನ್ಯೂಸ್ ಕಡಬ) newskadaba.com ಅ.16. ಪಯಸ್ವಿನಿ ರಿಫ್ರೆಶ್‌ ಮೆಂಟ್ ಆಯಂಡ್ ಕೂಲ್ ಜೋನ್ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಒಟ್ಟು 111.750 ಲೀಟರ್ ಕೂರ್ಗ್ ವಿಂಟೇಜ್ ಹೋಮ್ ಮೇಡ್ ವೈನ್‌ನ್ನು ಅಬಕಾರಿ ಇಲಾಖಾ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿರುವ ಘಟನೆ ಸುಳ್ಯದಿಂದ ವರದಿಯಾಗಿದೆ. ಸುಳ್ಯ ವಲಯ ವಾಪ್ತಿಯ ಅರಂತೋಡು ಗ್ರಾಮದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ದೊರೆತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮದ್ಯವನ್ನು ಪತ್ತೆ ಹಚ್ಚಿ ಅಂಗಡಿ ಮಾಲಿಕ ಮುರಾರಿ ಎಂಬಾತನ ವಿರುದ್ಧ

ಮದ್ಯ ಅಕ್ರಮ ದಾಸ್ತಾನು- ದಾಳಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top