ಬ್ರೇಕಿಂಗ್ ನ್ಯೂಸ್

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿ; 20ಕ್ಕೂ ಹೆಚ್ಚು ಜನರಿಗೆ ಗಾಯ

(ನ್ಯೂಸ್ ಕಡಬ) newskadaba.com ಫೆ. 13. ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ರಾಜ್ಯ ಸಾರಿಗೆ ಬಸ್ (ಕೆಎಸ್ಆರ್‌ಟಿಸಿ) ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಲ್ಲ ಗಾಯಾಳುಗಳನ್ನು ಕೆ.ಆರ್. ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಐವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ ಆಲೇನಹಳ್ಳಿಯಿಂದ ಕೆ.ಆರ್.ಪೇಟೆ ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ಬರುತ್ತಿದ್ದ […]

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿ; 20ಕ್ಕೂ ಹೆಚ್ಚು ಜನರಿಗೆ ಗಾಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉತ್ತರಕನ್ನಡದಲ್ಲಿ ಮತ್ತೆ ಭೂಕುಸಿತ, 3 ಕಿ.ಮೀ ದೂರ ಕೇಳಿಸಿದ ಭಾರಿ ಸದ್ದು

(ನ್ಯೂಸ್ ಕಡಬ) newskadaba.com ಫೆ. 13. ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಭೂಕುಸಿತ ನಡೆದ ಜಾಗದಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದೆ. ಅಂಕೋಲ ತಾಲೂಕಿನ ಕೊಡ್ಲಗದ್ದೆ ಗ್ರಾಮದಲ್ಲಿ ಭೂ ಕುಸಿತದಿಂದ ಗುಡ್ಡ ಕುಸಿದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೊಡ್ಲಗದ್ದೆ ಗ್ರಾಮದಲ್ಲಿ ಗುಡ್ಡ ಕುಸಿತ ಪರಿಣಾಮ ಸ್ಥಳಿಯರ ತೋಟಕ್ಕೆ ದೊಡ್ಡ ದೊಡ್ಡ ಪ್ರಮಾಣದ ಬಂಡೆಕಲ್ಲು ಹಾಗೂ ಮಣ್ಣಿನ ರಾಶಿ ಉರುಳಿ ಬಂದಿವೆ. ಕಳೆದ ಎರಡು ತಿಂಗಳ ಹಿಂದೆ

ಉತ್ತರಕನ್ನಡದಲ್ಲಿ ಮತ್ತೆ ಭೂಕುಸಿತ, 3 ಕಿ.ಮೀ ದೂರ ಕೇಳಿಸಿದ ಭಾರಿ ಸದ್ದು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರಯಾಣ ದರ ತಗ್ಗಿಸಿ ಪ್ರಯಾಣಿಕರ ಹಿತ ಕಾಪಾಡಿ: ಮೆಟ್ರೊ MDಗೆ ಸಿಎಂ ಸಿದ್ದರಾಮಯ್ಯ ಸಲಹೆ

(ನ್ಯೂಸ್ ಕಡಬ) newskadaba.com ಫೆ. 13. ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆಯಾಗಿರುವುದು ರಾಜಧಾನಿ ಜನರನ್ನು ಹೈರಾಣಾಗಿಸಿದೆ. ಪ್ರತಿನಿತ್ಯ ಕಚೇರಿಗೆ, ವ್ಯವಹಾರಕ್ಕೆ ಮೆಟ್ರೊದಲ್ಲಿ ಸಂಚರಿಸುತ್ತಿದ್ದವರು ಅದಕ್ಕಿಂತ ನಮ್ಮ ಟೂ ವೀಲರೇ ಬೆಸ್ಟ್ ಎಂದು ಸ್ವಂತ ಗಾಡಿಯಲ್ಲಿ ಓಡಾಡುವ ಪರಿಸ್ಥಿತಿ ಬಂದಿದೆ. ಮೆಟ್ರೊ ಪ್ರಯಾಣ ದರ ಏರಿಸಿದ್ದು ಕೇಂದ್ರ ಸರ್ಕಾರ ಎನ್ನುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಸ್ಯೆ ಕುರಿತು ಇದೀಗ ಮಧ್ಯ ಪ್ರವೇಶಿಸಿದ್ದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(BMRCL) ವ್ಯವಸ್ಥಾಪಕ ನಿರ್ದೇಶಕ ಎಂ ಮಹಾಬಲೇಶ್ವರ ರಾವ್ ಅವರ ಜೊತೆ

ಪ್ರಯಾಣ ದರ ತಗ್ಗಿಸಿ ಪ್ರಯಾಣಿಕರ ಹಿತ ಕಾಪಾಡಿ: ಮೆಟ್ರೊ MDಗೆ ಸಿಎಂ ಸಿದ್ದರಾಮಯ್ಯ ಸಲಹೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಉಪ್ಪಳದಲ್ಲಿ ಕಾವಲುಗಾರನ ಕೊಲೆ ಪ್ರಕರಣ: ಆರೋಪಿ ಅರೆಸ್ಟ್‌

(ನ್ಯೂಸ್ ಕಡಬ) newskadaba.com ಫೆ. 13. ಕಾಸರಗೋಡು: ಉಪ್ಪಳದಲ್ಲಿ ಕಾವಲುಗಾರನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಪತ್ವಾಡಿಯ ಸವಾದ್ (23) ಬಂಧಿತ ಆರೋಪಿ. ಪಯ್ಯನ್ನೂರಿನ ಸುರೇಶ್ (45) ರನ್ನು ಕೊಲೆ ಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ. ಸವಾದ್ ಆಂಬ್ಯುಲೆನ್ಸ್ ಕಳವು ಸೇರಿದಂತೆ ಮೂರಕ್ಕೂ ಅಧಿಕ ಪ್ರಕರಣಗಳ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಉಪ್ಪಳ ಪೇಟೆಯಲ್ಲಿ ಕೊಲೆ ನಡೆದಿತ್ತು. ಕ್ಷುಲ್ಲಕ ಕಾರಣಕ್ಕೆ ಜಗಳ ವಿಕೋಪಕ್ಕೆ ತಿರುಗಿ ಕೊಲೆ

ಕಾಸರಗೋಡು: ಉಪ್ಪಳದಲ್ಲಿ ಕಾವಲುಗಾರನ ಕೊಲೆ ಪ್ರಕರಣ: ಆರೋಪಿ ಅರೆಸ್ಟ್‌ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಇಂದಿನಿಂದ ಸಾರ್ವಜನಿಕರಿಗೆ ಏರ್‌ ಶೋ ವೀಕ್ಷಣೆಗೆ ಅವಕಾಶ

(ನ್ಯೂಸ್ ಕಡಬ) newskadaba.com ಫೆ. 13. ಬೆಂಗಳೂರು: ಇಂದಿನಿಂದ ಸಾರ್ವಜನಿಕರಿಗೆ ಏರ್‌ ಶೋ ವೀಕ್ಷಣೆಗೆ ಅವಕಾಶ ಸಿಗಲಿದೆ.ಯಲಹಂಕದಲ್ಲಿ ನಡೆಯುತ್ತಿರುವ ಏರ್‌ ಶೋಗೆ ಇಂದು, ನಾಳೆ ಲಕ್ಷಾಂತರ ಜನ ಭಾಗಿಯಾಗುವ ಸಾಧ್ಯತೆ ಇದೆ. ಮೊದಲ ಮೂರು ದಿನ ಕೇವಲ ಅಡ್ವಾ ಪ್ರದೇಶಕ್ಕೆ ಮಾತ್ರ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಇಂದಿನಿಂದ ಎರಡು ದಿನ ಸಂಪೂರ್ಣ ಏರೋ ಇಂಡಿಯಾ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ. ಒಂದು ಸಾವಿರ, ಎರಡೂವರೆ ಸಾವಿರಕ್ಕೆ ಟಿಕೆಟ್ ಪಡೆದವರು ಸಂಪೂರ್ಣ ಏರೋ ಇಂಡಿಯಾ ವೀಕ್ಷಣೆಗೆ ಅವಕಾಶ ಇರಲಿದೆ. ಇಂದು

ಇಂದಿನಿಂದ ಸಾರ್ವಜನಿಕರಿಗೆ ಏರ್‌ ಶೋ ವೀಕ್ಷಣೆಗೆ ಅವಕಾಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹಾಲಕ್ಕಿ ಜನಾಂಗದ ಜಾನಪದ ಕೋಗಿಲೆ ‘ಪದ್ಮಶ್ರೀ’ ಪುರಸ್ಕೃತ ಹಿರಿಯ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ ವಿಧಿವಶ

(ನ್ಯೂಸ್ ಕಡಬ) newskadaba.com ಫೆ. 13. ಕಾರವಾರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಲಕ್ಕಿ ಸಮುದಾಯದ ಸಾಕ್ಷಿ ಪ್ರಜ್ಞೆಯಂತಿದ್ದ ಜನಪದ ಹಾಡುಗಳನ್ನು ಹಾಡುವ ಜೊತೆಗೆ ಮದ್ಯಪಾನ ವಿರೋಧಿ ಹೋರಾಟದಿಂದ ಖ್ಯಾತಿಗಳಿಸಿದ್ದ ಅಂಕೋಲಾ ತಾಲ್ಲೂಕು ಬಡಗೇರಿಯ ಸುಕ್ರಿ ಬೊಮ್ಮ ಗೌಡ (88) ಗುರುವಾರ ನಸುಕಿನ ಜಾವ ನಿಧನರಾಗಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಸುಕ್ರಜ್ಜಿ ಎಂದೇ ಪ್ರಸಿದ್ದರಾಗಿದ್ದ ಸುಕ್ರಿ ಬೊಮ್ಮಗೌಡ ಅವರಿಗೆ 91 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲವು ದಿನದ ಹಿಂದೆ ಉಸಿರಾಟ ಸಮಸ್ಯೆಯಿಂದ ಉಡುಪಿಯಲ್ಲಿ ಚಿಕಿತ್ಸೆ

ಹಾಲಕ್ಕಿ ಜನಾಂಗದ ಜಾನಪದ ಕೋಗಿಲೆ ‘ಪದ್ಮಶ್ರೀ’ ಪುರಸ್ಕೃತ ಹಿರಿಯ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ ವಿಧಿವಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಹಾರಾಷ್ಟ್ರ : ನಕ್ಸಲ್‌ ದಾಳಿಗೆ ಯೋಧ ಹುತಾತ್ಮ

(ನ್ಯೂಸ್ ಕಡಬ) newskadaba.com, ಫೆ.12. ಮುಂಬೈ: ಗಡ್ಚಿರೋಲಿ ಜಿಲ್ಲೆಯಲ್ಲಿ ನಕ್ಸಲೀಯರೊಂದಿಗಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕಾನ್‌ಸ್ಟೆಬಲ್‌ ಮಹೇಶ್‌ ನಾಗುಲ್ವಾರ್‌ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 2 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌‍ ಘೋಷಿಸಿದ್ದಾರೆ. ನಿನ್ನೆ ಗಡ್‌ಚಿರೋಲಿಯಲ್ಲಿ ನಕ್ಸಲೀಯರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ವಿಶೇಷ ಕಮಾಂಡೋ ಘಟಕ ಸಿ-60 ನ 39 ವರ್ಷದ ಕಾನ್‌ಸ್ಟೆಬಲ್‌ ಸಾವನ್ನಪ್ಪಿದ್ದರು. ನಕ್ಸಲೀಯರ ವಿರುದ್ಧದ ಕಾರ್ಯಾಚರಣೆಯ ವೇಳೆ ಸಿ-60 ಕಮಾಂಡೋ ಘಟಕದ ಸಿಬ್ಬಂದಿ ಗಡ್ಚಿರೋಲಿಯ ಭಮ್ರಗಡ ತಾಲೂಕಿನ

ಮಹಾರಾಷ್ಟ್ರ : ನಕ್ಸಲ್‌ ದಾಳಿಗೆ ಯೋಧ ಹುತಾತ್ಮ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಹಿಳಾ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನಿಯಮ ಜಾರಿಗೆ ಮುಂದಾದ ಆಂದ್ರಪ್ರದೇಶ

(ನ್ಯೂಸ್ ಕಡಬ) newskadaba.com, ಫೆ.12. ಆಂಧ್ರಪ್ರದೇಶ ಸರ್ಕಾರವು ಮಹಿಳಾ ಐಟಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ವರ್ಕ್​ ಫ್ರಂ ಹೋಂ ನೀತಿಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಈ ಕುರಿತು ಮಾತನಾಡಿ, . ಕೋವಿಡ್ 19 ಸಮಯದಲ್ಲಿ ಕೆಲಸದ ಸಂಸ್ಕೃತಿ ಬದಲಾಗಿರುವುದನ್ನು ಉಲ್ಲೇಖಿಸಿರುವ ಅವರು ತಂತ್ರಜ್ಞಾನದ ಲಭ್ಯತೆಯು ಮನೆಯಿಂದಲೇ ಕೆಲಸ ಮಾಡುವ ಪರಿಕಲ್ಪನೆಯನ್ನು ಉತ್ತೇಜಿಸಿದೆ ಎಂದು ಹೇಳಿದರು. ಆಂಧ್ರಪ್ರದೇಶ ಐಟಿ ಮತ್ತು ಜಿಸಿಸಿ ನೀತಿ 4.0 ಅಡಿಯಲ್ಲಿ, ಸರ್ಕಾರವು ಪ್ರತಿ ನಗರ,

ಮಹಿಳಾ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ನಿಯಮ ಜಾರಿಗೆ ಮುಂದಾದ ಆಂದ್ರಪ್ರದೇಶ Read More »

ಬ್ರೇಕಿಂಗ್ ನ್ಯೂಸ್

ಟಿವಿಎಸ್ ಮೋಟಾರ್ ಕಂಪನಿಯಿಂದ ರಾಜ್ಯದಲ್ಲಿ 2 ಸಾವಿರ ಕೋಟಿ ರೂ. ಹೂಡಿಕೆ

(ನ್ಯೂಸ್ ಕಡಬ) newskadaba.com, ಫೆ.12. ಬೆಂಗಳೂರು: ಮೈಸೂರಿನಲ್ಲಿ ತನ್ನ ಉತ್ಪಾದನೆ ಮತ್ತು ಎಂಜಿನಿಯರಿಂಗ್ ಕಾರ್ಯಾಚರಣೆಗಳನ್ನು ವಿಸ್ತರಿಸುವುದರ ಜೊತೆಗೆ ಕರ್ನಾಟಕದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರವನ್ನು ಸ್ಥಾಪಿಸುವುದಾಗಿ ಟಿವಿಎಸ್ ಮೋಟಾರ್ ಕಂಪನಿ ಹೇಳಿದೆ. ಕಂಪನಿಯು ರಾಜ್ಯದಲ್ಲಿ ಪರೀಕ್ಷಾ ಟ್ರ್ಯಾಕ್ ಅನ್ನು ನಿರ್ಮಿಸುತ್ತದೆ ಮತ್ತು ರಾಜ್ಯದಲ್ಲಿ ಹೊಸ ಕೇಂದ್ರಗಳನ್ನು ಆರಂಭಿಸಲು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಿದೆ ಎಂದು ಟಿವಿಎಸ್ ಹೇಳಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶ(ಜಿಐಎಂ) ಇನ್ವೆಸ್ಟ್ ಕರ್ನಾಟಕ 2025 ಉದ್ಘಾಟನಾ ಸಮಾರಂಭದಲ್ಲಿ ಟಿವಿಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಅವರು ಕಂಪನಿಯ

ಟಿವಿಎಸ್ ಮೋಟಾರ್ ಕಂಪನಿಯಿಂದ ರಾಜ್ಯದಲ್ಲಿ 2 ಸಾವಿರ ಕೋಟಿ ರೂ. ಹೂಡಿಕೆ Read More »

ಬ್ರೇಕಿಂಗ್ ನ್ಯೂಸ್

ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ವಿಧಿವಶ

(ನ್ಯೂಸ್ ಕಡಬ) newskadaba.com, ಫೆ.12. ಲಖನೌ: ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬುಧವಾರ ಬೆಳಿಗ್ಗೆ 7 ಗಂಟೆಗೆ ಲಕ್ನೋದ ಸಂಜಯ್ ಗಾಂಧಿ ಪಿಜಿಐನಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಬಾಬರಿ ಮಸೀದಿ ಧ್ವಂಸದಿಂದ ಹಿಡಿದು ಭವ್ಯವಾದ ರಾಮಮಂದಿರ ನಿರ್ಮಾಣದವರೆಗೆ ಎಲ್ಲದಕ್ಕೂ ಸಾಕ್ಷಿಯಾಗಿದ್ದ ಆಚಾರ್ಯ ಸತ್ಯೇಂದ್ರ ದಾಸ್ ಅವರು 1993 ರಿಂದ ರಾಮಲಾಲಾ ಅವರ ಸೇವೆಯಲ್ಲಿ ನಿರತರಾಗಿದ್ದರು. ಅವರು ಭವ್ಯ ದೇವಾಲಯದಲ್ಲಿ ರಾಮಲಲ್ಲಾಗೆ ಸೇವೆ

ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ವಿಧಿವಶ Read More »

ಬ್ರೇಕಿಂಗ್ ನ್ಯೂಸ್
Scroll to Top