ಬ್ರೇಕಿಂಗ್ ನ್ಯೂಸ್

ರಾಮಮಂದಿರ ಸ್ಫೋಟಿಸಲು ಸಂಚು: ಶಂಕಿತ ಉಗ್ರ ಅಬ್ದುಲ್ ರೆಹಮಾನ್ ಬಂಧಿಸಿದ ಗುಜರಾತ್ ಎಟಿಎಸ್, ಗ್ರನೇಡ್ ವಶ

(ನ್ಯೂಸ್ ಕಡಬ) newskadaba.com ಮಾ. 03: ಅಹಮದಾಬಾದ್: ಗುಜರಾತ್ ಎಟಿಎಸ್ ನಡೆಸಿದ ಪ್ರಮುಖ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಶಂಕಿತ ಉಗ್ರ 19 ವರ್ಷದ ಅಬ್ದುಲ್ ರೆಹಮಾನ್‌ನನ್ನು ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಸಂಗ್ರಹಿಸಲಾದ ಗುಪ್ತಚರ ಮಾಹಿತಿಯ ಮೇರೆಗೆ ದಾಳಿ ನಡೆಸಿ ಅಬ್ದುಲ್ ರೆಹಮಾನ್ ನನ್ನು ಬಂಧಿಸಲಾಗಿದೆ. ದಾಳಿ ವೇಳೆ ಪಾಳುಬಿದ್ದ ಮನೆಯೊಂದರಲ್ಲಿ ಎರಡು ಜೀವಂತ ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಫರಿದಾಬಾದ್ ಪೊಲೀಸರ ಸಹಾಯದಿಂದ, ಎಟಿಎಸ್ ಸಂಪೂರ್ಣ ಶೋಧ ನಡೆಸಿ, ಸಂಭಾವ್ಯ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದೆ. ಅಬ್ದುಲ್ ರೆಹಮಾನ್‌ನ ಭಯೋತ್ಪಾದಕ ಸಂಪರ್ಕಗಳ ಕುರಿತು […]

ರಾಮಮಂದಿರ ಸ್ಫೋಟಿಸಲು ಸಂಚು: ಶಂಕಿತ ಉಗ್ರ ಅಬ್ದುಲ್ ರೆಹಮಾನ್ ಬಂಧಿಸಿದ ಗುಜರಾತ್ ಎಟಿಎಸ್, ಗ್ರನೇಡ್ ವಶ Read More »

ಬ್ರೇಕಿಂಗ್ ನ್ಯೂಸ್

ದೃಷ್ಟಿಹೀನರು ನ್ಯಾಯಾಧೀಶರಾಗಲು ಸುಪ್ರೀಂ ಕೋರ್ಟ್ ಅನುಮತಿ

(ನ್ಯೂಸ್ ಕಡಬ) newskadaba.com ಮಾ. 03: ಸೋಮವಾರ ಸುಪ್ರೀಂ ಕೋರ್ಟ್, ದೃಷ್ಟಿಹೀನರು ನ್ಯಾಯಾಧೀಶರಾಗಲು ಅರ್ಹರು ಎಂದು ತೀರ್ಪು ನೀಡಿದ್ದು, ಮಧ್ಯಪ್ರದೇಶ ನ್ಯಾಯಾಂಗ ಸೇವೆಗಳ ನಿಯಮವನ್ನು ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರ ಪೀಠವು, ಅಂಗವೈಕಲ್ಯದ ಕಾರಣ ಯಾವುದೇ ಅಭ್ಯರ್ಥಿಗೆ ನ್ಯಾಯಾಂಗ ಸೇವೆಗಳಲ್ಲಿ ನೇಮಕಾತಿಗೆ ಹಾಜರಾಗಲು ಅವಕಾಶವನ್ನು ನಿರಾಕರಿಸಲಾಗುವುದಿಲ್ಲ ಎಂದು ಹೇಳಿದೆ. ನ್ಯಾಯಾಂಗ ಸೇವೆಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ದೃಷ್ಟಿಹೀನ ವ್ಯಕ್ತಿಗಳು ಭಾಗವಹಿಸುವುದನ್ನು ನಿಷೇಧಿಸಲಾಗಿರುವ ಮಧ್ಯಪ್ರದೇಶ ನ್ಯಾಯಾಂಗ ಸೇವೆಗಳ ನಿಯಮಗಳನ್ನು (6A) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್

ದೃಷ್ಟಿಹೀನರು ನ್ಯಾಯಾಧೀಶರಾಗಲು ಸುಪ್ರೀಂ ಕೋರ್ಟ್ ಅನುಮತಿ Read More »

ಬ್ರೇಕಿಂಗ್ ನ್ಯೂಸ್

’ಅನೋರಾ’ಗೆ ಆಸ್ಕರ್‌ ಅವಾರ್ಡ್‌

(ನ್ಯೂಸ್ ಕಡಬ) newskadaba.com ಮಾ. 03: ವಾಷಿಂಗ್ಟನ್:‌ 97ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆದಿದೆ. ಹಾಲಿವುಡ್‌ ಸೇರಿದಂತೆ ಅನೇಕ ತಾರೆಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಿರೂಪಕ ಕಾನನ್ ಒ’ಬ್ರೇನ್ ಕಾರ್ಯಕ್ರಮದ ನಿರೂಪಣೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ನಡೆದಿದ್ದು, ಹಲವರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ ಅವಾರ್ಡ್ ಕಾರ್ಯಕ್ರಮ ಆರಂಭ ಆಯಿತು. ಅನೋರಾ ಚಿತ್ರ ಅತ್ಯುತ್ತಮ ಸಿನಿಮಾ ಎನಿಸಿಕೊಂಡಿದ್ದು, ಇದು

’ಅನೋರಾ’ಗೆ ಆಸ್ಕರ್‌ ಅವಾರ್ಡ್‌ Read More »

ಬ್ರೇಕಿಂಗ್ ನ್ಯೂಸ್

2,000 ರೂಪಾಯಿ ಬಳಿಕ ಮತ್ತೆ ಇಳಿಕೆಯಾದ ಚಿನ್ನದ ದರ

(ನ್ಯೂಸ್ ಕಡಬ) newskadaba.com ಮಾ. 03 ಮಾರ್ಚ್  1ರಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ,ಗಳಷ್ಟು ಇಳಿಕೆಯಾಗಿತ್ತು. ಭಾನುವಾರ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ. ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂ: 7,939 ರೂಪಾಯಿ 8 ಗ್ರಾಂ: 63,512 ರೂಪಾಯಿ 10 ಗ್ರಾಂ: 79,390 ರೂಪಾಯಿ 100 ಗ್ರಾಂ: 7,93,900 ರೂಪಾಯಿ 24 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂ: 8,661 ರೂಪಾಯಿ

2,000 ರೂಪಾಯಿ ಬಳಿಕ ಮತ್ತೆ ಇಳಿಕೆಯಾದ ಚಿನ್ನದ ದರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸೂಟ್‌ಕೇಸ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಶವ ಪತ್ತೆ ಪ್ರಕರಣ – ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಮಾ. 03: ಶನಿವಾರ ಸೂಟ್‌ಕೇಸ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಹದ್ದೂರ್‌ಗಢ ನಿವಾಸಿಯಾದ ಶಂಕಿತ ವ್ಯಕ್ತಿ ನರ್ವಾಲ್‌ನ ಸ್ನೇಹಿತ ಬಂಧಿತ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಆಕೆಯ ಮೊಬೈಲ್ ಫೋನ್ ಮತ್ತು ಆಭರಣಗಳನ್ನು ಸಹ ಆತನಿಂದ ವಶಪಡಿಸಿಕೊಳ್ಳಲಾಗಿದೆ. 20ರ ಹರೆಯದ ನರ್ವಾಲ್ ಅವರ ಮೃತದೇಹ ರೋಹ್ಟಕ್‌ನಲ್ಲಿ ಸೂಟ್‌ಕೇಸ್‌ನಲ್ಲಿ ತುಂಬಿ ಪತ್ತೆಯಾಗಿದ್ದು, ನಂತರ ಹರಿಯಾಣ ಪೊಲೀಸರು ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದರು. ರೋಹ್ಟಕ್‌ನ

ಸೂಟ್‌ಕೇಸ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಶವ ಪತ್ತೆ ಪ್ರಕರಣ – ಓರ್ವನ ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಿಜೆಪಿ ರಾಜ್ಯಾಧ್ಯಕ್ಷ BY ವಿಜಯೇಂದ್ರ ಕಾರಿಗೆ ಲಾರಿ ಢಿಕ್ಕಿ

(ನ್ಯೂಸ್ ಕಡಬ) newskadaba.com ಮಾ. 01 ಚಿಕ್ಕಮಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಕಾರಿಗೆ ಲಾರಿಯೊಂದು ಢಿಕ್ಕಿ ಹೊಡೆದಿದೆ. ಚಿಕ್ಕಮಗಳೂರು ತಾಲೂಕಿನ ಲಕ್ಯಾ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದ್ದು, ಶುಕ್ರವಾರ ಬಸವ ತತ್ವ ಕಾರ್ಯಕ್ರಮ ಮುಗಿಸಿ ವಾಪಸ್ ಚಿಕ್ಕಮಗಳೂರು ನಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಲಾರಿ ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನು ಅಪಘಾತದಲ್ಲಿ ಅದೃಷ್ಟವಶಾತ್​ವಿಜಯೇಂದ್ರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯೇಂದ್ರ ಅವರು ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರಿಂದ ಅವರು ಅಪಘಾತದಿಂದ

ಬಿಜೆಪಿ ರಾಜ್ಯಾಧ್ಯಕ್ಷ BY ವಿಜಯೇಂದ್ರ ಕಾರಿಗೆ ಲಾರಿ ಢಿಕ್ಕಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಕೇಸ್‌: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

(ನ್ಯೂಸ್ ಕಡಬ) newskadaba.com ಫೆ. 28 ಬೆಂಗಳೂರು: ದೆಹಲಿ ರೈಲ್ವೆ ನಿಲ್ದಾಣದಲ್ಲಿಸಂಭವಿಸಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಜನಸಂದಣಿ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಈ ಕಾಲ್ತುಳಿತ ಪ್ರಕರಣದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಇಲಾಖೆ ಹೇಳಿದೆ. ಹೀಗಾಗಿ ಎಲ್ಲ ರಾಜ್ಯಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಜನಸಂದಣಿ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವಂತೆ ಮತ್ತು ನಿರ್ದೇಶನ ನೀಡುವಂತೆ ಆನಂದ್ ಕಾನೂನು ನೆರವು

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಕೇಸ್‌: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್ Read More »

ಬ್ರೇಕಿಂಗ್ ನ್ಯೂಸ್

ಉತ್ತರಾಖಂಡದಲ್ಲಿ ಹಿಮಪಾತ- 50ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಫೆ. 28 ಬೆಂಗಳೂರು:  ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಪಾತ ಸಂಭವಿಸಿದ್ದು, ಮಾನಾ ಗ್ರಾಮದಲ್ಲಿ 57 ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. 10 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿದ್ದಾರೆ. ಇನ್ನುಳಿದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಜಿಲ್ಲಾಡಳಿತ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಡಿಬಿಪಿ) ಮತ್ತು ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ತಂಡಗಳು ಸ್ಥಳದಲ್ಲಿ ಕಾರ್ಮಿಕರ ಕಾರ್ಯಾಚರಣೆ ನಡೆಸುತ್ತಿವೆ.

ಉತ್ತರಾಖಂಡದಲ್ಲಿ ಹಿಮಪಾತ- 50ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಸಾಧ್ಯತೆ Read More »

ಬ್ರೇಕಿಂಗ್ ನ್ಯೂಸ್

ಸೆಬಿ ಮುಖ್ಯಸ್ಥರಾಗಿ ತುಹಿನ್ ಕಾಂತ ಪಾಂಡೆ ನೇಮಕ

(ನ್ಯೂಸ್ ಕಡಬ) newskadaba.com ಫೆ. 28 ಬೆಂಗಳೂರು: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ) ಮುಖ್ಯಸ್ಥರಾಗಿ ತುಹಿನ್ ಕಾಂತ ಪಾಂಡೆ ಅವರನ್ನು ಕೇಂದ್ರ ಸರ್ಕಾರ ಗುರುವಾರ ನೇಮಕ ಮಾಡಿದೆ. ಒಡಿಶಾ ಕೇಡರ್ ನ 1987ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ತುಹಿನ್ ಕಾಂತ ಪಾಂಡೆ ಅವರನ್ನು ಸೆಬಿಯ 11ನೇ ಮುಖ್ಯಸ್ಥರಾಗಲಿದ್ದಾರೆ. ಸಂಪುಟದ ನೇಮಕಾತಿ ಸಮಿತಿಯ ಅನುಮೋದನೆಯ ನಂತರ, ಹಣಕಾಸು ಕಾರ್ಯದರ್ಶಿ ಪಾಂಡೆ ಅವರನ್ನು ಮೂರು ವರ್ಷಗಳ ಅವಧಿಗೆ ಸೆಬಿ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಸೆಬಿ ಹಾಲಿ ಮುಖ್ಯಸ್ಥರಾಗಿರುವ ಮಾಧಬಿ ಪುರಿ

ಸೆಬಿ ಮುಖ್ಯಸ್ಥರಾಗಿ ತುಹಿನ್ ಕಾಂತ ಪಾಂಡೆ ನೇಮಕ Read More »

ಬ್ರೇಕಿಂಗ್ ನ್ಯೂಸ್

ಆಭರಣ ಪ್ರಿಯರಿಗೆ ಸಿಹಿಸುದ್ದಿ: ಚಿನ್ನ, ಬೆಳ್ಳಿ ದರ ಕುಸಿತ, ಇಂದಿನ ಬೆಲೆ ಎಷ್ಟಿದೆ?

(ನ್ಯೂಸ್ ಕಡಬ) newskadaba.com ಫೆ. 27 ನವದೆಹಲಿ: ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ದರವು 723 ರೂಪಾಯಿ ಕಡಿಮೆಯಾಗಿದೆ. ಫ್ಯೂಚರ್ಸ್ ವಹಿವಾಟಿನಲ್ಲಿ 10 ಗ್ರಾಂಗೆ 723 ರೂಪಾಯಿ ಅಥವಾ ಶೇ 0.84ರಷ್ಟು ಕುಸಿತ ಕಂಡಿದ್ದು, 85,151 ರೂಪಾಯಿಗೆ ತಲುಪಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಕಡಿಮೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗಿದ್ದು, ಹಳದಿ ಲೋಹದ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಆಭರಣ ಪ್ರಿಯರಿಗೆ ಸಿಹಿಸುದ್ದಿ: ಚಿನ್ನ, ಬೆಳ್ಳಿ ದರ ಕುಸಿತ, ಇಂದಿನ ಬೆಲೆ ಎಷ್ಟಿದೆ? Read More »

ಬ್ರೇಕಿಂಗ್ ನ್ಯೂಸ್
Scroll to Top