ಬ್ರೇಕಿಂಗ್ ನ್ಯೂಸ್

ಮೂಡಬಿದಿರೆ: ನಗ- ನಗದು ಎಗರಿಸಿ ವಂಚಿಸಿದ ಯುವಕ- ನೊಂದ ಮಹಿಳೆ ಆತ್ಮಹತ್ಯೆ

(ನ್ಯೂಸ್‌ ಕಡಬ) newskadaba.com, ಆಗಸ್ಟ್ 30 ಮೂಡಬಿದಿರೆ: ಮಂಕುಬೂದಿ ಎರಚಿ ಮಹಿಳೆಯೊಬ್ಬರಿಂದ ನಗ-ನಗದು ಎಗರಿಸಿಕೊಂಡು ವಂಚಿಸಿದ ಯುವಕನ ವರ್ತಿನೆಯಿಂದ ನೊಂದ ಮಹಿಳೆ ಬದುಕಿಗೆ ಅಂತ್ಯ‌ಹೇಳಿದ ಘಟನೆ ಮೂಡುಬಿದಿರೆ ತೋಡಾರಿನಲ್ಲಿ ನಡೆದಿದೆ.‌ ಮಂಗಳೂರು ಉಳ್ಳಾಲದ ಕಲ್ಲಾಪು ಮೂಲದ ಮಹಿಳೆ ಶಫ್ರೀನಾ ಬಾನು(31) ಘಟನೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡವರು. ಕಳೆದ 14 ವರ್ಷಗಳ ಹಿಂದೆ ಮೂಡುಬಿದಿರೆ ಬೆಳುವಾಯಿ ನವಾಝ್ ರೊಂದಿಗೆ‌ ದಾಂಪತ್ಯ‌ ಜೀವನಕ್ಕೆ ಕಾಲಿರಿಸಿದ ಶಫ್ರೀನಾ ಬಾನು ತೋಡಾರು ಗ್ರಾಮದ ಏರ್ ಇಂಡಿಯಾ ನಾಮಾಂಕಿತದ ಅಪಾರ್ಟ್ ಮೆಂಟ್ ನಲ್ಲಿರುವ ಫ್ಲಾಟ್ […]

ಮೂಡಬಿದಿರೆ: ನಗ- ನಗದು ಎಗರಿಸಿ ವಂಚಿಸಿದ ಯುವಕ- ನೊಂದ ಮಹಿಳೆ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು: ತಲಪಾಡಿನ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದ ಕೆಎಸ್‌ಆರ್‌ಟಿಸಿ

(ನ್ಯೂಸ್‌ ಕಡಬ) newskadaba.com, ಆಗಸ್ಟ್ 30 ಮಂಗಳೂರು: ಕರ್ನಾಟಕ-ಕೇರಳ ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಬಳಿ ಗುರುವಾರ ಸಂಭವಿಸಿದ ಅಪಘಾತಕ್ಕೆ ಬಸ್‌ನ ಬ್ರೇಕ್ ವೈಫಲ್ಯ ಕಾರಣವಲ್ಲ, ಬದಲಾಗಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ. ಅಧಿಕಾರಿಗಳ ಪ್ರಕಾರ, ಮಂಗಳೂರು-1ನೇ ಘಟಕದ ಚಾಲಕ ನಿಜಲಿಂಗಪ್ಪ ಚಲವಾದಿ ಅವರು ಕಾಸರಗೋಡಿನಿಂದ ಮಂಗಳೂರಿಗೆ ಬಸ್ ಚಲಾಯಿಸುತ್ತಿದ್ದರು. ಮಧ್ಯಾಹ್ನ 1:45ರ ಸುಮಾರಿಗೆ, ಇಳಿಜಾರಿನಲ್ಲಿ ತಲಪಾಡಿ ಟೋಲ್ ಗೇಟ್ ಸಮೀಪಿಸುತ್ತಿದ್ದಾಗ ಅವರು ಬಸ್ ಅನ್ನು ಅತಿ ವೇಗವಾಗಿ ಚಲಾಯಿಸಿದ್ದಾರೆ. ಆಟೋರಿಕ್ಷಾವೊಂದಕ್ಕೆ ಡಿಕ್ಕಿ

ಮಂಗಳೂರು: ತಲಪಾಡಿನ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದ ಕೆಎಸ್‌ಆರ್‌ಟಿಸಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು : ಪ್ರತಿಷ್ಠಿತ ಕಾಲೇಜುಗಳಿಗೆ ನಿಷೇದಿತ ಮಾದಕವಸ್ತು ಸರಬರಾಜು – ಕೇರಳದ ವ್ಯಕ್ತಿ ಸೆರೆ

(ನ್ಯೂಸ್‌ ಕಡಬ) newskadaba.com, ಆಗಸ್ಟ್ 30 ಮಂಗಳೂರು :  ಕಾಲೇಜುಗಳಿಗೆ ನಿಷೇದಿತ ಮಾದಕವಸ್ತುವನ್ನು ಸರಬರಾಜು ಮಾಡುತ್ತಿದ್ದ ಓರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಆರೋಪಿ ಮೊಹಮ್ಮದ್ ಅರ್ಷದ್ ಖಾನ್ (29) ಎಂದು ಗುರುತಿಸಲಾಗಿದ್ದು, ಕೇರಳದ ಎರ್ನಾಕುಲಂ ಜಿಲ್ಲೆಯ ಕೊಚ್ಚಿಯ ಮಟ್ಟಂಚೇರಿಯ ಮೌಲಾನಾ ಆಜಾದ್ ರಸ್ತೆಯವನಾಗಿದ್ದು, ಇತನು  ಮಂಗಳೂರಿನ ದೇರಳಕಟ್ಟೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ. ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ನ್ನು ಬೆಂಗಳೂರಿನಿಂದ ಖರೀದಿಸಿಕೊಂಡು ಮಂಗಳೂರು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕವಸ್ತು ಎಮ್.ಡಿ.ಎಂ.ಎ, ಹೈಡ್ರೋವಿಡ್

ಮಂಗಳೂರು : ಪ್ರತಿಷ್ಠಿತ ಕಾಲೇಜುಗಳಿಗೆ ನಿಷೇದಿತ ಮಾದಕವಸ್ತು ಸರಬರಾಜು – ಕೇರಳದ ವ್ಯಕ್ತಿ ಸೆರೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಕೊಂಕಣಿ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ಶ್ರೇಷ್ಠ ಕಲಾವಿದ ಎರಿಕ್ ಒಜಾರಿಯೊ ನಿಧನ

(ನ್ಯೂಸ್‌ ಕಡಬ) newskadaba.com, ಆಗಸ್ಟ್ 29 ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಕೊಂಕಣಿ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ಶ್ರೇಷ್ಠ ಕಲಾವಿದ ಎರಿಕ್ ಅಲೆಕ್ಸಾಂಡರ್ ಒಜಾರಿಯೊ(76) ಅವರು ಆಗಸ್ಟ್ 29 ರಂದು ನಗರದಲ್ಲಿ ನಿಧನರಾದರು. ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎರಿಕ್ ಒಜಾರಿಯೊ ಎಂದು ಜನಪ್ರಿಯರಾಗಿದ್ದ ಇವರು ಮೇ 18, 1949 ರಂದು ಮಂಗಳೂರಿನ ಜೆಪ್ಪುವಿನಲ್ಲಿ ಜನಿಸಿದರು. ಇವರು ಪ್ರಸಿದ್ಧ ಕೊಂಕಣಿ ಸಂಗೀತ ಸಂಯೋಜಕ, ಸಾಂಸ್ಕೃತಿಕ ಕಾರ್ಯಕರ್ತ ಮತ್ತು ಕೊಂಕಣಿ ಸಮುದಾಯದ ಬಗ್ಗೆ ಅಪಾರ

ಮಂಗಳೂರು: ಕೊಂಕಣಿ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ಶ್ರೇಷ್ಠ ಕಲಾವಿದ ಎರಿಕ್ ಒಜಾರಿಯೊ ನಿಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉತ್ತರಾಖಂಡ: ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ- ಹಲವು ಮಂದಿ ಕಲ್ಮರೆ

(ನ್ಯೂಸ್‌ ಕಡಬ) newskadaba.com, ಆಗಸ್ಟ್ 29 ಡೆಹ್ರಾಡೂನ್ : ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿ, ಜಿಲ್ಲೆಗಳಲ್ಲಿ ಭಾರೀ ಮೇಘಸ್ಫೋಟ ಸಂಭವಿಸಿದೆ. ಪರಿಣಾಮ ಹಲವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಮೇಘಸ್ಫೋಟದಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ದೇವಲ್‌ನ ಮೊಪಾಟಾ ಪ್ರದೇಶದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಇನ್ನೂ 15ಕ್ಕೂ ಹೆಚ್ಚು ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ರುದ್ರಪ್ರಯಾಗ ಜಿಲ್ಲೆಯಲ್ಲಿ ಅಲಕನಂದಾ ಮತ್ತು ಮಂದಾಕಿನಿ ನದಿಗಳ ಸಂಗಮದಲ್ಲಿ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಹನುಮಾನ್ ದೇವಾಲಯ ಮುಳುಗಡೆಯಾಗಿದೆ. ಶ್ರೀನಗರ ಮತ್ತು ರುದ್ರಪ್ರಯಾಗ ನಡುವಿನ ಬದರಿನಾಥ ಹೆದ್ದಾರಿ

ಉತ್ತರಾಖಂಡ: ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ- ಹಲವು ಮಂದಿ ಕಲ್ಮರೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಡುಪಿ: ತೊಟ್ಟಂ ಬೀಚ್ ಹತ್ತಿರ ಮಗುಚಿದ ದೋಣಿ; ನಾಲ್ವರು ಮೀನುಗಾರರ ರಕ್ಷಣೆ

(ನ್ಯೂಸ್‌ ಕಡಬ) newskadaba.com, ಆಗಸ್ಟ್ 29 ಉಡುಪಿ : ಸಮುದ್ರದ ಪ್ರಕ್ಷುಬ್ಧತೆಯಿಂದಾಗಿ ಮೀನುಗಾರಿಕಾ ದೋಣಿ ಮಗುಚಿ ಬಿದ್ದ ಘಟನೆ ಮಲ್ಪೆಯ ತೊಟ್ಟಂ ಬೀಚ್ ಬಳಿ ಆಗಸ್ಟ್ 29 ರಂದು ನಡೆದಿದೆ. ಸಮುದ್ರಕ್ಕೆ ಇಳಿದಿದ್ದ ನಾಲ್ವರು ಮೀನುಗಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೊಟ್ಟಂ ವಾರ್ಡ್ ಪುರಸಭೆ ಸದಸ್ಯ ಯೋಗೇಶ್ ಅವರು ತಕ್ಷಣ ವೃತ್ತಿಪರ ಸಮಾಜ ಸೇವಕ ಈಶ್ವರ್ ಮಲ್ಪೆ ಮತ್ತು ಅವರ ತಂಡಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಈಶ್ವರ್ ಅವರು, ಸ್ಥಳೀಯರಾದ ಪ್ರವೀಣ್ ಮತ್ತು ಉದಯ್

ಉಡುಪಿ: ತೊಟ್ಟಂ ಬೀಚ್ ಹತ್ತಿರ ಮಗುಚಿದ ದೋಣಿ; ನಾಲ್ವರು ಮೀನುಗಾರರ ರಕ್ಷಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಆರ್‌ಬಿಐನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ನೇಮಕ

ನ್ಯೂಸ್‌ ಕಡಬ) newskadaba.com, ಆಗಸ್ಟ್ 29  ನವದೆಹಲಿ : ಐಎಂಎಫ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ. ಊರ್ಜಿತ್ ಪಟೇಲ್ ಅವರನ್ನು 3 ವರ್ಷಗಳ ಅವಧಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ. ಅವರು 1992 ರಿಂದ ಆರ್‌ಬಿಐ ಗವರ್ನರ್ ಆಗಿ ಕೆಲಸ ಮಾಡಿದ್ದಾರೆ. ಇದಲ್ಲದೆ, ಅವರು ನೋಟು ಅಮಾನ್ಯೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಊರ್ಜಿತ್ ಪಟೇಲ್ ಅವರು ಸೆಪ್ಟೆಂಬರ್ 4, 2014 ರಂದು ಭಾರತೀಯ

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಆರ್‌ಬಿಐನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ನೇಮಕ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಡೈಮಂಡ್‌ ಲೀಗ್ ಫೈನಲ್‌: ಮೂರನೇ ಸಲ ಬೆಳ್ಳಿ ಗೆದ್ದ ನೀರಜ್ ಚೋಪ್ರಾ.!

(ನ್ಯೂಸ್‌ ಕಡಬ) newskadaba.com ಆ. 29. ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಈ ಬಾರಿ ಡೈಮಂಡ್‌ ಲೀಗ್‌ ಫೈನಲ್‌ ಗೆಲ್ಲಲು ವಿಫಲರಾಗಿದ್ದಾರೆ. 2022ರಲ್ಲಿ ಚಾಂಪಿಯನ್‌ ಆಗಿದ್ದ ನೀರಜ್‌, ಸ್ವಿಜರ್‌ಲೆಂಡ್‌ನ ಜ್ಯುರಿಚ್‌ನಲ್ಲಿ ನಡೆದ 2025ರ ಫೈನಲ್‌ನಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಇದು ಅವರಿಗೆ ಸತತ 3ನೇ ಡೈಮಂಡ್‌ ಲೀಗ್‌ ಬೆಳ್ಳಿಯಾಗಿದೆ. 2022ರ ಫೈನಲ್‌ ಜ್ಯುರಿಚ್‌ನಲ್ಲೇ ನಡೆದಿತ್ತು. ಅದರಲ್ಲಿ ನೀರಜ್‌ ಚಿನ್ನ ಗೆದ್ದಿದ್ದರು. ಬಳಿಕ 2023, 2024ರ ಫೈನಲ್‌ಗಳಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಈ ಬಾರಿ ಚಿನ್ನದ

ಡೈಮಂಡ್‌ ಲೀಗ್ ಫೈನಲ್‌: ಮೂರನೇ ಸಲ ಬೆಳ್ಳಿ ಗೆದ್ದ ನೀರಜ್ ಚೋಪ್ರಾ.! Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬೆಂಗಳೂರು- ಗುರುದ್ವಾರಕ್ಕೆ ಬಾಂಬ್ ಸ್ಫೋಟ ಬೆದರಿಕೆ

(ನ್ಯೂಸ್‌ ಕಡಬ) newskadaba.com, ಆಗಸ್ಟ್ 29  ಬೆಂಗಳೂರು:ಗು ರುದ್ವಾರಕ್ಕೆ ಬಾಂಬ್ ಬೆದರಿಕೆ  ಇ-ಮೇಲ್ ಸಂದೇಶ ಬಂದಿದೆ. ಕಳೆದ ನಾಲ್ಕು ದಿನಗಳ ಹಿಂದೆಯೇ ಇ-ಮೇಲ್ ಮೂಲಕ ಗುರುದ್ವಾರಕ್ಕೆ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು. ನಾಲ್ಕು ಆರ್‌ಡಿ ಎಕ್ಸ್ ಐ ಇ ಡಿ ಯಿಂದ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶ ಬಂದಿತ್ತು. ಹೀಗಾಗಿ ಸ್ಥಳದಲ್ಲಿ ಆತಂಕ ಉಂಟಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಿಖ್ ಗುರುದ್ವಾರದ ಶೌಚಾಲಯದಲ್ಲಿ ಬಾಂಬೆ ಇಟ್ಟಿದ್ದಾಗಿ ಈ ಮೇಲ್ ಸಂದೇಶ ಬಂದಿತ್ತು. ರಾಜಗಿರಿ ಎಂಬ ಹೆಸರಿನಲ್ಲಿ ಈ ಒಂದು

ಬೆಂಗಳೂರು- ಗುರುದ್ವಾರಕ್ಕೆ ಬಾಂಬ್ ಸ್ಫೋಟ ಬೆದರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು; ಉದ್ಘಾಟನಾ ಪಂದ್ಯದಲ್ಲಿ ಟೈಟಾನ್ಸ್‌ಗೆ ತಮಿಳ್ ತಲೈವಾಸ್ ಚಾಲೆಂಜ್

(ನ್ಯೂಸ್‌ ಕಡಬ) newskadaba.com ವಿಶಾಖಪಟ್ಟಣಂ, ಆ. 29. ಪ್ರೊ ಕಬಡ್ಡಿ ಲೀಗ್‌ ನ 12ನೇ ಆವೃತ್ತಿಗೆ ವಿಶಾಖಪಟ್ಟಣಂ ನ ವಿಶ್ವನಾಥ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಇಂದು ಚಾಲನೆ ದೊರೆಯಲಿದೆ.   7 ವರ್ಷಗಳ ಬಳಿಕ ನಗರದಲ್ಲಿ ಪಿಕೆಎಲ್‌ ನಡೆಯಲಿದೆ. ಈ ಸಲವೂ 12 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು, ಕೆಲ ಬದಲಾವಣೆಯೊಂದಿಗೆ ಈ ಟೂರ್ನಿ ನಡೆಯಲಿದೆ. ಲೀಗ್‌ ಹಂತದಲ್ಲಿ ಈ ಬಾರಿ 108 ಪಂದ್ಯಗಳು ಇರಲಿದ್ದು, ಪ್ಲೇ-ಇನ್‌ನಲ್ಲಿ 2, ಪ್ಲೇ-ಆಫ್‌ನಲ್ಲಿ ಫೈನಲ್‌ ಸೇರಿ 7 ಪಂದ್ಯಗಳು ಇರಲಿವೆ. ಒಟ್ಟಾರೆ 119

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು; ಉದ್ಘಾಟನಾ ಪಂದ್ಯದಲ್ಲಿ ಟೈಟಾನ್ಸ್‌ಗೆ ತಮಿಳ್ ತಲೈವಾಸ್ ಚಾಲೆಂಜ್ Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top