ಬ್ರೇಕಿಂಗ್ ನ್ಯೂಸ್

ಇಲ್ಲಿದೆ ನೋಡಿ ..! ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ

(ನ್ಯೂಸ್‌ ಕಡಬ) newskadaba.com,ಡಿ.29  ಬೆಂಗಳೂರು: ಚಿನ್ನದ ಬೆಲೆ ನಾಗಾಲೋಟದಲ್ಲಿ ಏರಿಕೆ ಆಗಿ, ದಾಖಲೆ ಮಟ್ಟಕ್ಕೆ ಹೆಚ್ಚಾಗಿರುವ ಚಿನ್ನದ ಬೆಲೆಯಲ್ಲಿ ದಿಢೀರ್ ಇಂದು ಇಳಿಕೆ ಆಗಿದೆ. ಶುದ್ಧ ಚಿನ್ನದ ಇಂದಿನ ದರ ಡಿ. 29 ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 14,121 ರೂಪಾಯಿ ಇದ್ದು, ಇಂದು 121 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,41,210 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 1210 ರೂಪಾಯಿ […]

ಇಲ್ಲಿದೆ ನೋಡಿ ..! ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,ಡಿ.29:  ಮುಂದಿನ 3 ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಶೀತ ಗಾಳಿಯಿರಲಿದ್ದು, ತಾಪಮಾನದಲ್ಲಿ ಇಳಿಕೆಯಾಗಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆ ಚಳಿ ಮುಂದುವರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಟನೆಗೆ ಗುಡ್ ಬೈ ಹೇಳಿದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್

(ನ್ಯೂಸ್‌ ಕಡಬ) newskadaba.com,ಡಿ.29 ಚೆನ್ನೈ: ತಮಿಳು ಚಿತ್ರರಂಗದ  ದಳಪತಿ ವಿಜಯ್ ಅಧಿಕೃತವಾಗಿ ನಟನೆಯಿಂದ ನಿವೃತ್ತಿ ಘೋಷಿಸಿದ್ದಾರೆ. ಸುಮಾರು 33 ವರ್ಷಗಳ ಕಾಲ ನಾಯಕನಾಗಿ ಸಿನಿಪಯಣ ನಡೆಸಿದ ವಿಜಯ್, ಅಭಿಮಾನಿಗಳ ಭಾರೀ ಬೆಂಬಲದ ನಡುವೆ ಈ ನಿರ್ಧಾರ ಪ್ರಕಟಿಸಿ ಭಾವುಕರಾದರು. 51 ವರ್ಷದ ನಟ ಇನ್ನು ಮುಂದೆ ಸಂಪೂರ್ಣವಾಗಿ ರಾಜಕೀಯದತ್ತ ಗಮನ ಹರಿಸಲಿದ್ದಾರೆ.ಮಲೇಷ್ಯಾದಲ್ಲಿ ನಡೆದ ‘ಜನ ನಾಯಗನ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್, ಈ ಚಿತ್ರದ ನಂತರ ನಟನೆಯಿಂದ ದೂರ ಸರಿಯುವುದಾಗಿ ಘೋಷಿಸಿದರು. “ಜನರು ನನಗಾಗಿ

ನಟನೆಗೆ ಗುಡ್ ಬೈ ಹೇಳಿದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಟಾಟಾನಗರ್-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲಿನ ಎರಡು ಭೋಗಿಗಳಿಗೆ ಬೆಂಕಿ ಅವಘಡ; ಓರ್ವ ಮೃತ್ಯು

(ನ್ಯೂಸ್‌ ಕಡಬ) newskadaba.com,ಡಿ.29 ಹೈದರಾಬಾದ್‌: ವಿಶಾಖಪಟ್ಟಣಂ-ದುವ್ವಾಡ ಮೂಲಕ ಎರ್ನಾಕುಲಂಗೆ ಹೋಗುತ್ತಿದ್ದ ಟಾಟಾನಗರ್-ಎರ್ನಾಕುಲಂ ಎಕ್ಸ್ಪ್ರೆಸ್ ರೈಲಿನ 2 ಭೋಗಿಗಳಿಗೆ ಅಗ್ನಿ ಹೊತ್ತಿಕೊಂಡ ಪರಿಣಾಮ ಒಬ್ಬಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರೈಲು ಬೆಂಕಿ ಹೊತ್ತಿಕೊಂಡಾಗ ಒಂದು ಬೋಗಿಯಲ್ಲಿ 82 ಪ್ರಯಾಣಿಕರು ಹಾಗೂ ಇನ್ನೊಂದು ಬೋಗಿಯಲ್ಲಿ 76 ಪ್ರಯಾಣಿಕರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿ 12:45 ರ ಸುಮಾರಿಗೆ ಈ ಬೆಂಕಿ ದುರಂತ ಘಟನೆ ನಡೆದಿದೆ.. ರೈಲಿನ ಪ್ಯಾಂಟ್ರಿ ಕಾರಿನ ಪಕ್ಕದಲ್ಲಿರುವ ಬಿ1 ಮತ್ತು ಎಂ2 ಎಸಿ ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು

ಟಾಟಾನಗರ್-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲಿನ ಎರಡು ಭೋಗಿಗಳಿಗೆ ಬೆಂಕಿ ಅವಘಡ; ಓರ್ವ ಮೃತ್ಯು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

60 ದಿನಗಳ ಬಳಿಕ ಮತ್ತೆ ಮೈದಾನಕ್ಕೆ ಮರಳಿದ ಶ್ರೇಯಸ್ ಅಯ್ಯರ್

(ನ್ಯೂಸ್‌ ಕಡಬ)com,ಡಿ.26: ಭಾರತ ಏಕದಿನ ಕ್ರಿಕೆಟ್ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಸುಮಾರು 60 ದಿನಗಳ ಬಳಿಕ ಮತ್ತೆ ಮೈದಾನಕ್ಕೆ ಮರಳಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಅಯ್ಯರ್ ಇದೀಗ ಬೆಂಗಳೂರಿನ ಸಿಒಇ ಮೈದಾನದಲ್ಲಿ ನೆಟ್ಸ್ ಅಭ್ಯಾಸ ಆರಂಭಿಸಿದ್ದಾರೆ. ಅಕ್ಟೋಬರ್ 25ರಂದು ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಯ್ಯರ್ ಗಾಯಗೊಂಡಿದ್ದರು. ಹರ್ಷಿತ್ ರಾಣಾ ಎಸೆತದಲ್ಲಿ ಅಲೆಕ್ಸ್ ಕ್ಯಾರಿ ಹೊಡೆದ ಭರ್ಜರಿ ಶಾಟ್‌ಗೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ಅಯ್ಯರ್ ವೇಗವಾಗಿ ಓಡಿ ಡೈವಿಂಗ್ ಕ್ಯಾಚ್ ಹಿಡಿದಿದ್ದರು. ಈ

60 ದಿನಗಳ ಬಳಿಕ ಮತ್ತೆ ಮೈದಾನಕ್ಕೆ ಮರಳಿದ ಶ್ರೇಯಸ್ ಅಯ್ಯರ್ Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ದೆಹಲಿ: ಮತ್ತೆ ಅತೀ ಕಳಪೆ ಶ್ರೇಣಿಗೆ ಇಳಿದ ವಾಯುಗುಣಮಟ್ಟ

(ನ್ಯೂಸ್‌ ಕಡಬ)com,ಡಿ.26: ವಾರದ ಆರಂಭದಲ್ಲಿ ಸ್ವಲ್ಪ ಸುಧಾರಣೆ ಕಂಡಿದ್ದ ದೆಹಲಿಯ ಗಾಳಿಯ ಗುಣಮಟ್ಟ ಶನಿವಾರ ಮತ್ತೆ ಹದಗೆಟ್ಟಿದ್ದು, ನಗರದ ಹಲವಾರು ಭಾಗಗಳು ಮಾಲಿನ್ಯ ಮಟ್ಟವನ್ನು ‘ತುಂಬಾ ಕಳಪೆ’ ಮತ್ತು ‘ತೀವ್ರ’ ವರ್ಗಗಳಲ್ಲಿ ದಾಖಲಿಸಿವೆ. ಇದರಿಂದಾಗಿ ವಾತಾವರಣದಲ್ಲಿ ಕನಿಷ್ಠ ತಾಪಮಾನ 7.7 ಡಿಗ್ರಿ ಸೆಂಟಿಗ್ರೇಡ್‌ಗೆ ಸಾಧಾರಣ ಏರಿಕೆಯಾಗಿದೆ. ಸೋಮವಾರದದವರೆಗೆ ತಾಪಮಾನವು 5ರಿಂದ 8 ಡಿಗ್ರಿ ಸೆಂಟಿಗ್ರೇಡ್‌ವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ದತ್ತಾಂಶದ ಪ್ರಕಾರ, ಧೌಲಾ ಕುವಾನ್‌ನಲ್ಲಿ ಗಾಳಿಯ ಗುಣಮಟ್ಟವು 252

ದೆಹಲಿ: ಮತ್ತೆ ಅತೀ ಕಳಪೆ ಶ್ರೇಣಿಗೆ ಇಳಿದ ವಾಯುಗುಣಮಟ್ಟ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮತ್ತೆ ಏರಿಕೆಗೊಂಡ ಚಿನ್ನದ ದರ-ಇಂದಿನ ದರ ಎಷ್ಟಿದೆ ಚೆಕ್ ಮಾಡಿ

(ನ್ಯೂಸ್‌ ಕಡಬ)com,ಡಿ.26: ಚಿನ್ನದ ಬೆಲೆಯಲ್ಲಿ ಇಂದೂ ಸಹ ಭಾರೀ ಏರಿಕೆ ಕಂಡು ಬಂದಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 110 ರೂ. ಏರಿಕೆ ಕಂಡು ಬಂದಿದ್ದು, ಬೆಲೆ 12,945 ರೂ. ಆಗಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 120 ರೂ. ಏರಿಕೆ ಕಂಡು ಬಂದು 14,122 ರೂ . ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,03,560 ಆದರೆ, 10 ಗ್ರಾಂಗೆ ನೀವು 1,29,450 ರೂ. ಮತ್ತು 100 ಗ್ರಾಂಗೆ

ಮತ್ತೆ ಏರಿಕೆಗೊಂಡ ಚಿನ್ನದ ದರ-ಇಂದಿನ ದರ ಎಷ್ಟಿದೆ ಚೆಕ್ ಮಾಡಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಮುಂದುವರಿದ ಚಳಿ

(ನ್ಯೂಸ್‌ ಕಡಬ)com,ಡಿ.26: ರಾಜ್ಯದಲ್ಲಿ ಮಾಗಿಚಳಿಯ ತೀವ್ರತೆ ಮುಂದುವರೆದಿದ್ದು, ಬೀದರ್‌ನಲ್ಲಿ ಕನಿಷ್ಠ ತಾಪಮಾನ 6.3 ಡಿ.ಸೆಂ.ನಷ್ಟು ದಾಖಲಾಗಿದೆ.ನಿನ್ನೆಯಿಂದೀಚೆಗೆ ಕನಿಷ್ಠ ತಾಪಮಾನದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಆದರೆ ವಾಡಿಕೆಗಿಂತಲೂ ಹೆಚ್ಚು ಚಳಿ ಕಂಡುಬರುತ್ತಿದೆ. 29 ರಿಂದ ಮೂರ್ನಾಲ್ಕು ದಿನಗಳ ಕಾಲ ಕನಿಷ್ಠ ತಾಪಮಾನದಲ್ಲಿ ಅಲ್ಪ ಹೆಚ್ಚಳ ಕಂಡುಬರಲಿದೆ. ಆದರೆ ಶೀತ ಗಾಳಿ ಮಾತ್ರ ಮುಂದುವರೆಯಲಿದೆ. ಇದರಿಂದ ಹಗಲು-ರಾತ್ರಿ ಎನ್ನದೆ ಚಳಿ ಜನರನ್ನು ಕಾಡತೊಡಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನಿಷ್ಠ

ರಾಜ್ಯದಲ್ಲಿ ಮುಂದುವರಿದ ಚಳಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ರೈಲು ಬಡಿದು ಕೊಡಗು ನಿವಾಸಿ ಮೃತ್ಯು

(ನ್ಯೂಸ್‌ ಕಡಬ)com,ಡಿ.26: ರೈಲು ಬಡಿದು ಕೊಡಗು ನಿವಾಸಿಯೋರ್ವ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಕಾಸರಗೋಡು ನಿಲ್ದಾಣದಲ್ಲಿ ನಡೆದಿದೆ. ಕೊಡಗು ನಿವಾಸಿ ರಾಜೇಶ್ (35) ಮೃತಪಟ್ಟವರು. ರೈಲಿನಿಂದಿಳಿದು ಹಳಿಯ ಮೂಲಕ ಅಡ್ಡದಾಟಿ ಫ್ಲಾಟ್ ಫೋರ್ಮ್ ಹತ್ತಲು ಯತ್ನಿಸುತ್ತಿದ್ದಾಗ ಗೂಡ್ಸ್ ರೈಲು ಬಡಿದು ಘಟನೆ ನಡೆದಿದೆ. ಅಫಘಾತಕ್ಕೀಡಾದ ವ್ಯಕ್ತಿಯ ತಲೆ ಸಂಪೂರ್ಣ ಜಜ್ಜಿ ಹೋಗಿದೆ. ಮೃತದೇಹ ಧರಿಸಿದ್ದ ಅಂಗಿಯ ಜೇಬಿನಿಂದ ದೊರೆತ ಆಧಾರ್ ಕಾರ್ಡಿನಲ್ಲಿ ಮಾಹಿತಿಯಂತೆ ಮೃತ ವ್ಯಕ್ತಿಯನ್ನು ಗುರುತಿಸಲಾಗಿದೆ. ಮೃತ ಶರೀರದ ಅವಶೇಷಗಳನ್ನು ಸಂಗ್ರಹಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಕಾಸರಗೋಡು: ರೈಲು ಬಡಿದು ಕೊಡಗು ನಿವಾಸಿ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ನೆಟ್ಟಣ: ಬಾರ್ ಮಾಲಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿ ಸಿಬ್ಬಂದಿ ಪರಾರಿ-ಪ್ರಕರಣ ದಾಖಲು

(ನ್ಯೂಸ್‌ ಕಡಬ)com,ಡಿ.26:  ವ್ಯವಹಾರದಲ್ಲಿ ವಂಚಿಸಿ ಬಾರ್ ಸಿಬ್ಬಂದಿಯೋರ್ವ ಪರಾರಿಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಳಿನೆಲೆ ಗ್ರಾಮದ ವಿಶಾಲ್ ಸ್ಟೀಫನ್ (25) ಎಂಬವರು ಠಾಣೆಗೆ ದೂರು ನೀಡಿದ್ದಾರೆ. ಸ್ಟೀಫನ್ ಅವರ ತಾಯಿ ನೆಟ್ಟಣ ಎಂಬಲ್ಲಿ ಬಾರ್ ಹೊಂದಿದ್ದು, ಬಾರ್ ನಲ್ಲಿ ಕಡಬದ ಹರ್ಷಿತ್ ಬಿ.ಕೆ. ಎಂಬಾತ ಸುಮಾರು 7 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆತನೇ ನಿತ್ಯದ ಹಣಕಾಸಿನ ವ್ಯವಹಾರ, ಸ್ಟಾಕ್ ನಿರ್ವಹಣೆ ಹಾಗೂ ಮೇಲ್ವಿಚಾರಣೆ ನಿರ್ವಹಿಸುತ್ತಿದ್ದ. ಡಿ.21ರಂದು ಸ್ಟೀಫನ್ ಅವರು ಬಾರಿನ ವಹಿವಾಟು ಬಗ್ಗೆ

ನೆಟ್ಟಣ: ಬಾರ್ ಮಾಲಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿ ಸಿಬ್ಬಂದಿ ಪರಾರಿ-ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top