ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ದ್ವಿಚಕ್ರ ವಾಹನ ಕಳ್ಳತನ ಪ್ರಕರಣ – ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com, ಎ.07: ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಭೇದಿಸಿಧ ಬಂಟ್ವಾಳ ಪಟ್ಟಣ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಈ ಘಟನೆ ಮಾರ್ಚ್ 21, 2026 ರಂದು ಪರ್ಲಿಯಾದಲ್ಲಿರುವ ವಸತಿಗೃಹದ ಶೆಡ್‌ನಲ್ಲಿ ನಿಲ್ಲಿಸಿದ್ದ ಸ್ಕೂಟರ್ ಅನ್ನು ಕಳವು ಮಾಡಲಾಗಿತ್ತು. ಬಿಎನ್ಎಸ್, 2023 ರ ಸೆಕ್ಷನ್ 303(2) ರ ಅಡಿಯಲ್ಲಿ ಅಪರಾಧ ಸಂಖ್ಯೆ 37/2026 ಎಂದು ಪ್ರಕರಣ ದಾಖಲಿಸಲಾಗಿದ್ದು, ಬಂಟ್ವಾಳ ಪಟ್ಟಣ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯ ವೇಳೆ ಬಂಟ್ವಾಳದ […]

ಬಂಟ್ವಾಳ: ದ್ವಿಚಕ್ರ ವಾಹನ ಕಳ್ಳತನ ಪ್ರಕರಣ – ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

“ಪಿಯುಸಿ ವಿದ್ಯಾರ್ಥಿಗಳ ಗಮನಕ್ಕೆ: ಇಂದು ಫಲಿತಾಂಶವಿಲ್ಲ; ಆಯೋಗದ ಗ್ರೀನ್ ಸಿಗ್ನಲ್‌ಗೆ ಕಾದಿದೆ ಮಂಡಳಿ

(ನ್ಯೂಸ್‌ ಕಡಬ) newskadaba.com,  ಎ.07:  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಂಗಳವಾರ(ಏ.7) ಪ್ರಕಟಿಸಬೇಕಿದ್ದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶವನ್ನು ಮುಂದೂಡಿದೆ. ಫಲಿತಾಂಶ ಪ್ರಕಟಣೆ ಯಾವಾಗ ಎಂಬುದನ್ನು ಶೀಘ್ರ ಪ್ರಕಟಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಮೊದಲ ಬಾರಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಕ್ಕೂ ಮೊದಲೇ ಫಲಿತಾಂಶ ಪ್ರಕಟಣೆಗೆ ಸಂಭಾವ್ಯ ದಿನಾಂಕವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರೇ ಪ್ರಕಟಿಸಿದ್ದರು. ಆದರೆ, ದಾವಣಗೆರೆ, ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ

“ಪಿಯುಸಿ ವಿದ್ಯಾರ್ಥಿಗಳ ಗಮನಕ್ಕೆ: ಇಂದು ಫಲಿತಾಂಶವಿಲ್ಲ; ಆಯೋಗದ ಗ್ರೀನ್ ಸಿಗ್ನಲ್‌ಗೆ ಕಾದಿದೆ ಮಂಡಳಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಸ್‌ಸಿಡಿಸಿಸಿ ಬ್ಯಾಂಕ್ ಐತಿಹಾಸಿಕ ಸಾಧನೆ: 20,226 ಕೋಟಿ ರೂ. ವ್ಯವಹಾರದೊಂದಿಗೆ ಹೊಸ ದಾಖಲೆ!

(ನ್ಯೂಸ್‌ ಕಡಬ) newskadaba.com,  ಎ.07: ಮಂಗಳೂರು: ಆಧುನಿಕ ತಂತ್ರಜ್ಞಾನ ಮತ್ತು ಗ್ರಾಹಕಸ್ನೇಹಿ ಸೇವೆಯೊಂದಿಗೆ ಮುನ್ನಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, 2025-26ನೇ ಹಣಕಾಸು ವರ್ಷದಲ್ಲಿ 20,226.19 ಕೋಟಿ ರೂ. ಗಳ ಬೃಹತ್ ವಹಿವಾಟು ನಡೆಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬ್ಯಾಂಕಿನ ವ್ಯವಹಾರದಲ್ಲಿ ಶೇ. 16.47 ರಷ್ಟು ಪ್ರಗತಿ ಕಂಡುಬಂದಿದ್ದು, ಇದು ರಾಜ್ಯದ ಸಹಕಾರಿ ಬ್ಯಾಂಕಿಂಗ್ ವಲಯದಲ್ಲೇ ಅತ್ಯುನ್ನತ ದಾಖಲೆಯಾಗಿದೆ. ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ

ಎಸ್‌ಸಿಡಿಸಿಸಿ ಬ್ಯಾಂಕ್ ಐತಿಹಾಸಿಕ ಸಾಧನೆ: 20,226 ಕೋಟಿ ರೂ. ವ್ಯವಹಾರದೊಂದಿಗೆ ಹೊಸ ದಾಖಲೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಏಪ್ರಿಲ್ 10 ರಿಂದ ಟೋಲ್‌ಗಳಲ್ಲಿ ನಗದು ಪಾವತಿ ವ್ಯವಸ್ಥೆ ಸಂಪೂರ್ಣ ಬಂದ್

(ನ್ಯೂಸ್‌ ಕಡಬ) newskadaba.com,  ಎ.07: ದೇಶದ ಎಲ್ಲಾ ಟೋಲ್ ಗಳನ್ನ ಡಿಜಿಟಲೀಕರಣಗೊಳಿಸುವತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಈ ಹಿನ್ನೆಲೆ ಏಪ್ರಿಲ್ 10 ರಿಂದ ಜಾರಿಯಾಗುವಂತೆ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ವ್ಯವಸ್ಥೆಯನ್ನ ಸಂಪೂರ್ಣ ಬಂದ್ ಮಾಡಲಾಗಿದೆ. ಟೋಲ್ ಪ್ಲಾಜಾ ಹಾದು ಹೋಗಲು ಇಲ್ಲದ ವಾಹನಗಳಿಗೆ ಯುಪಿಐ ಮೂಲಕ ಪಾವತಿಸುವ ಪರ್ಯಾಯ ಆಯ್ಕೆ ನೀಡಲಾಗಿದೆ. ಆದರೆ, ಈ ಸೌಲಭ್ಯಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಅಂದರೆ, ಯುಪಿಐ ವಹಿವಾಟು ನಡೆಸಿದಲ್ಲಿ ಸಾಮಾನ್ಯ ಟೋಲ್ ಶುಲ್ಕಕ್ಕಿಂತ ಶೇ.25

ಏಪ್ರಿಲ್ 10 ರಿಂದ ಟೋಲ್‌ಗಳಲ್ಲಿ ನಗದು ಪಾವತಿ ವ್ಯವಸ್ಥೆ ಸಂಪೂರ್ಣ ಬಂದ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಎ.07: ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಏಪ್ರಿಲ್ 11ರವರೆಗೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಹಾಗೂ ನಾಳೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಿಂಚು ಹಾಗೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಸೂಚಿಸಿದೆ… ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದ್ವಿತೀಯ ಪಿಯುಸಿ ಫಲಿತಾಂಶ ಡಿಜಿ ಲಾಕರ್‌ನಲ್ಲಿ ಲಭ್ಯ

(ನ್ಯೂಸ್‌ ಕಡಬ) newskadaba.com,  ಎ.06 : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಶೀಘ್ರದಲ್ಲೇ ಕೇಂದ್ರ ಸರ್ಕಾರದ ಅಧಿಕೃತ ಅಪ್ಲಿಕೇಶನ್‌ ಆದ ಡಿಜಿಲಾಕರ್‌ನಲ್ಲಿ ಲಭ್ಯವಾಗಲಿದೆ. ಈ ಕುರಿತು ಎಕ್‌್ಸಖಾತೆಯಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿರುವ ಡಿಜಿಲಾಕರ್‌, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ 12ನೇ ತರಗತಿಯ ಫಲಿತಾಂಶ 2026 ಶೀಘ್ರದಲ್ಲೇ ಡಿಜಿಲಾಕರ್‌ನಲ್ಲಿ ಲಭ್ಯವಾಗಲಿದೆ. ಯಾವುದೇ ಸಾಲುಗಟ್ಟಿ ನಿಲ್ಲುವ ಅಗತ್ಯವಿಲ್ಲ, ಯಾವುದೇ ಕಾಗದಪತ್ರಗಳ ಜಂಜಾಟವಿಲ್ಲ. ನಿಮ ಫಲಿತಾಂಶಗಳನ್ನು

ದ್ವಿತೀಯ ಪಿಯುಸಿ ಫಲಿತಾಂಶ ಡಿಜಿ ಲಾಕರ್‌ನಲ್ಲಿ ಲಭ್ಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

14 ದಿನಗಳಲ್ಲಿ ಸೈಕಲ್‌ನಲ್ಲಿ ಎವರೆಸ್ಟ್ ತಲುಪಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡ ದಿವ್ಯಾ ಸಿಂಗ್‌

(ನ್ಯೂಸ್‌ ಕಡಬ) newskadaba.com,  ಎ.06 : ಉತ್ತರ ಪ್ರದೇಶ ದ ಗೋರಖ್‌ಪುರ ದ 28 ವರ್ಷದ ಶಿಕ್ಷಕಿ ದಿವ್ಯಾ ಸಿಂಗ್ ಅವರು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ ಗೆ ಸೈಕಲ್ ಮೂಲಕ ತಲುಪುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಹಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತ ದ ಮೊದಲ ಮಹಿಳೆ ಮತ್ತು ಜಾಗತಿಕವಾಗಿ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಕಠ್ಮಂಡು ವಿನಿಂದ ತನ್ನ ಪಯಣ ಆರಂಭಿಸಿದ ದಿವ್ಯಾ, ಕೇವಲ 14 ದಿನಗಳಲ್ಲಿ 17,560 ಅಡಿ ಎತ್ತರದ ಬೇಸ್ ಕ್ಯಾಂಪ್ ತಲುಪಿ ಭಾರತದ ತ್ರಿವರ್ಣ

14 ದಿನಗಳಲ್ಲಿ ಸೈಕಲ್‌ನಲ್ಲಿ ಎವರೆಸ್ಟ್ ತಲುಪಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡ ದಿವ್ಯಾ ಸಿಂಗ್‌ Read More »

ಕರಾವಳಿ, ಕರ್ನಾಟಕ, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ | ಮಹಿಳೆಗೆ ಹಲ್ಲೆ, ಜೀವ ಬೆದರಿಕೆ: ಆರೋಪಿಯ ವಿರುದ್ಧ ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ಎ.06 : ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಪ್ರಕರಣದ ಫಿರ್ಯಾದುದಾರರಾದ ಮಹಿಳೆ ಕಳೆದ ಸುಮಾರು 3 ವರ್ಷಗಳಿಂದ ತನ್ನ ಗಂಡನಿಂದ ಪ್ರತ್ಯೇಕವಾಗಿ ಮಗಳೊಂದಿಗೆ ವಾಸವಾಗಿದ್ದರು. ಈ ನಡುವೆ ಆರೋಪಿತ ಪ್ರಭಾಕರ ಪಿ ಅವರೊಂದಿಗೆ ಪರಿಚಯವಾಗಿ ಆತ್ಮೀಯತೆ ಬೆಳೆದಿತ್ತು ಎನ್ನಲಾಗಿದೆ. ದಿನಾಂಕ 03.04.2026 ರಂದು ಫಿರ್ಯಾದುದಾರರು ಆರೋಪಿಯೊಂದಿಗೆ ಮಾತನಾಡಲು ಅವರ ಮನೆಗೆ ತೆರಳಿದ ವೇಳೆ, ಆರೋಪಿಯು ಹಲ್ಲೆ ನಡೆಸಿ ಆವಾಚ್ಯ

ಕಡಬ | ಮಹಿಳೆಗೆ ಹಲ್ಲೆ, ಜೀವ ಬೆದರಿಕೆ: ಆರೋಪಿಯ ವಿರುದ್ಧ ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ

(ನ್ಯೂಸ್‌ ಕಡಬ) newskadaba.com,  ಎ.06 ಚಿನ್ನದ ಬೆಲೆಯ ಏರಿಳಿತದ ಆಟ ಮುಂದುವರಿದಿದೆ. ಕಳೆದ ವಾರ 260 ರೂಗಳಷ್ಟು ಏರಿದ್ದ ಚಿನ್ನದ ಬೆಲೆ ಇವತ್ತು ಸೋಮವಾರ ಒಂದೇ ದಿನ 165 ರೂ ಕಡಿಮೆಗೊಂಡಿದೆ. ಅಪರಂಜಿ ಚಿನ್ನದ ಬೆಲೆ (Gold Rates) 15,000 ರೂ ಗಡಿಯೊಳಗೆ ಬಂದಿದೆ. ವಿದೇಶಗಳಲ್ಲಿ ಕೆಲವೆಡೆ ಏರಿಳಿತಗಳಾಗಿವೆ. ಹಲವು ಕಡೆ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ. ಸೋಮವಾರ ಇದರ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ

ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ಮೂರು ದಿನ ಬಾವಿಯೊಳಗಿದ್ದು ಪವಾಡದಂತೆ ಬದುಕಿ ಬಂದ ವೃದ್ದ!

(ನ್ಯೂಸ್‌ ಕಡಬ) newskadaba.com,  ಎ.06 ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ವೃದ್ದರೊಬ್ಬರು ಪವಾಡಸದೃಶವಾಗಿ ಬದುಕುಳಿದವರನ್ನು ಕಂಬಳಕಟ್ಟೆ ನಿವಾಸಿ ಶ್ರೀನಿವಾಸ ಆಚಾರ್ಯ (ಸುಮಾರು 62 ವರ್ಷ) ಎಂದು ಗುರುತಿಸಲಾಗಿದೆ. ಸುಮಾರು 20 ಅಡಿ ಆಳದ ನೀರಿನ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಬದುಕಿ ಬಂದಿದ್ದಾರೆ. ಒಂಟಿಯಾಗಿ ವಾಸಿಸುವ ಶ್ರೀನಿವಾಸ ಆಚಾರ್ಯ ಎರಡು ತಿಂಗಳ ಹಿಂದೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಆದರೆ ಚೇತರಿಸಿಕೊಂಡಿದ್ದರು. ಕಳೆದ ಶನಿವಾರ

ಉಡುಪಿ: ಮೂರು ದಿನ ಬಾವಿಯೊಳಗಿದ್ದು ಪವಾಡದಂತೆ ಬದುಕಿ ಬಂದ ವೃದ್ದ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top