News Kadaba Desk

ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ನೀಡುವಂತೆ ಅಶೋಕ್ ಗೆಹಲೋತ್ ಆಗ್ರಹ

(ನ್ಯೂಸ್ ಕಡಬ) newskadaba.com ಜ.02: ಮಣಿಪುರ ಸಿಎಂ ಬಿರೇನ್ ಸಿಂಗ್ ಅವರು ಕೇವಲ ಕ್ಷಮೆ ಕೋರಿದರೆ ಸಾಲುವುದಿಲ್ಲ. ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಅಶೋಕ್ ಗೆಹಲೋತ್ ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಣಿಪುರ ಸಿಎಂ ಜನತೆಯ ಕ್ಷಮೆಯಾಚಿಸಿದ್ದಾರೆ ಅಂದ ಮಾತ್ರಕ್ಕೆ ಅವರು ಮಾಡಿದ ತಪ್ಪನ್ನು ಮರೆಯಲಾಗದು. ಮಣಿಪುರದಲ್ಲಿ ನಡೆದಿರುವುದು ದೇಶದ ಇತಿಹಾಸದಲ್ಲಿ ಬೇರೆ ಯಾವುದೇ ರಾಜ್ಯದಲ್ಲಿ ನಡೆದಿಲ್ಲ. ಆದರೆ, ಕೇಂದ್ರ ಸರ್ಕಾರ ಏನನ್ನೂ ಮಾಡಲಿಲ್ಲ. ಪ್ರಧಾನಿ ಮೋದಿ […]

ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ನೀಡುವಂತೆ ಅಶೋಕ್ ಗೆಹಲೋತ್ ಆಗ್ರಹ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಕ್ಕಳಿಗೆ ‘ನೋ-ಡಿಟೆನ್ಷನ್’ ನೀತಿ ರದ್ದು: ತಜ್ಞರ ವಿರೋಧ

(ನ್ಯೂಸ್ ಕಡಬ) newskadaba.com ಜ.01 ಬೆಂಗಳೂರು: ಕೇಂದ್ರ ಸರ್ಕಾರವು 5 ಮತ್ತು 8 ನೇ ತರಗತಿಗಳಿಗೆ ಬಂಧನವಿಲ್ಲ (No detention)’ ನೀತಿಯನ್ನು ರದ್ದುಗೊಳಿಸುವ ಇತ್ತೀಚಿನ ನಿರ್ಧಾರವನ್ನು ಶಿಕ್ಷಣತಜ್ಞರು ಬಲವಾಗಿ ವಿರೋಧಿಸಿದ್ದಾರೆ, ಇದು ಹಕ್ಕು ಆಧಾರಿತ ಕಾನೂನುಗಳನ್ನು ದುರ್ಬಲಗೊಳಿಸುತ್ತದೆ ಎಂದು ವಾದಿಸಿದ್ದಾರೆ. ತಿದ್ದುಪಡಿಯು ಮಕ್ಕಳು ಹೆಚ್ಚಾಗಿ ಶಾಲೆಯಿಂದ ಹೊರಗುಳಿಯಲು ಕಾರಣವಾಗಬಹುದು ಎಂದಿದ್ದಾರೆ. ಪರಿಷ್ಕೃತ ವ್ಯವಸ್ಥೆಯಡಿಯಲ್ಲಿ, ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎರಡು ತಿಂಗಳೊಳಗೆ ಮರು ಪರೀಕ್ಷೆಯನ್ನು ನೀಡಲಾಗುತ್ತದೆ, ಆದರೆ ಮತ್ತೆ ಅನುತ್ತೀರ್ಣರಾದವರನ್ನು ಅದೇ ತರಗತಿಯಲ್ಲಿ ಮುಂದುವರಿಸಲಾಗುತ್ತದೆ. ತಜ್ಞರು ಈ ಪರಿಕಲ್ಪನೆಯನ್ನು ‘ಸಂಪ್ರದಾಯವಾದಿ

ಮಕ್ಕಳಿಗೆ ‘ನೋ-ಡಿಟೆನ್ಷನ್’ ನೀತಿ ರದ್ದು: ತಜ್ಞರ ವಿರೋಧ Read More »

ರಾಷ್ಟ್ರೀಯ ನ್ಯೂಸ್

ಮತದಾರರ ಗುರುತಿನ ಚೀಟಿಯು ಮತದಾನದ ಹಕ್ಕನ್ನು ಖಾತರಿಪಡಿಸುವುದಿಲ್ಲ: ದಿಲ್ಲಿ ಚುನಾವಣಾ ಆಯೋಗ

(ನ್ಯೂಸ್ ಕಡಬ) newskadaba.com ಜ.01: ಹೊಸದಿಲ್ಲಿ: ಕೇವಲ ಮತದಾರರ ಗುರುತಿನ ಚೀಟಿಯು ಮತದಾನದ ಹಕ್ಕನ್ನು ಖಾತರಿಪಡಿಸುವುದಿಲ್ಲ ಎಂದು ದಿಲ್ಲಿಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ನವೀಕರಿಸಿದ ಮತದಾರರ ಪಟ್ಟಿಯಲ್ಲಿ ಒಬ್ಬ ವ್ಯಕ್ತಿಯ ಹೆಸರನ್ನು ಪಟ್ಟಿ ಮಾಡದ ಹೊರತು ಕೇವಲ ಗುರುತಿನ ಚೀಟಿಯನ್ನು ಹೊಂದಿರುವುದರಿಂದ ಮತದಾನದ ಹಕ್ಕನ್ನು ಖಾತರಿಪಡಿಸುವುದಿಲ್ಲ ಎಂದು ದಿಲ್ಲಿಯ ಮುಖ್ಯ ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಜನವರಿ 1ರಂದು ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯನ್ನು ನಡೆಸಲಾಗುತ್ತಿದ್ದು, ಭಾರತೀಯ ಚುನಾವಣಾ ಆಯೋಗದ ಸೂಚನೆಗಳ ಪ್ರಕಾರ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಮತದಾರರ

ಮತದಾರರ ಗುರುತಿನ ಚೀಟಿಯು ಮತದಾನದ ಹಕ್ಕನ್ನು ಖಾತರಿಪಡಿಸುವುದಿಲ್ಲ: ದಿಲ್ಲಿ ಚುನಾವಣಾ ಆಯೋಗ Read More »

ರಾಷ್ಟ್ರೀಯ ನ್ಯೂಸ್

ಉಳ್ಳಾಲ: ಲಾರಿ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು

(ನ್ಯೂಸ್ ಕಡಬ) newskadaba.com ಜ.01: ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಂಕೊಳಿಗೆ ಸಮೀಪ ಡಿ. ೩೧ರ ತಡರಾತ್ರಿ ಸಂಭವಿಸಿದೆ. ನಾಟೆಕಲ್ ಪನೀರ್ ನಿವಾಸಿ ಉಮ್ಮರ್ ಫಾರೂಕ್ ಯಾನೆ ಅಝರ್(33) ಮೃತ ಸ್ಕೂಟರ್ ಸವಾರ. ಅಝರ್ ಅವರು ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಮಂಗಳವಾರ ರಾತ್ರಿ ತಲಪಾಡಿಗೆ ಫುಡ್ ಡೆಲಿವರಿ ತಲುಪಿಸಿ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ವೇಳೆ ಅದೇ ದಾರಿಯಲ್ಲಿ

ಉಳ್ಳಾಲ: ಲಾರಿ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು Read More »

ಕರಾವಳಿ

ಉಡುಪಿ: ಸ್ಟಾಕ್ ಮಾರ್ಕೆಟ್ ಹೂಡಿಕೆ ನೆಪದಲ್ಲಿ 49 ಲಕ್ಷ ರೂ. ವಂಚನೆ

(ನ್ಯೂಸ್ ಕಡಬ) newskadaba.com ಜ.01: ಅಹಮದಾಬಾದ್: ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದಲ್ಲಿ ಅತ್ಯಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ವೃದ್ಧರೊಬ್ಬರಿಗೆ 49 ಲಕ್ಷ ರೂ. ವಂಚನೆ ಮಾಡಿದ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ಮೂಡುಬೆಳ್ಳೆ ನಿವಾಸಿ ಫ್ರಾನ್ಸಿಸ್ ಕ್ಯಾಸ್ಟಲಿನೋ (72) ಆನ್‌ಲೈನ್ ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ವಂಚನೆಗೊಳಗಾದ ವೃದ್ಧ.ವಂಚಕರು ಕ್ಯಾಸ್ಟೆಲಿನೊ ಅವರ ಮಗನ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು “ಸ್ಟಾಕ್ ಮಾರ್ಕೆಟ್ ನ್ಯಾವಿಗೇಶನ್” ಹೆಸರಿನ ವಾಟ್ಸಾಪ್ ಗುಂಪಿಗೆ ಸೇರಿಸಿದ್ದಾರೆ. ಗುಂಪಿನ ಸದಸ್ಯರು ಷೇರು

ಉಡುಪಿ: ಸ್ಟಾಕ್ ಮಾರ್ಕೆಟ್ ಹೂಡಿಕೆ ನೆಪದಲ್ಲಿ 49 ಲಕ್ಷ ರೂ. ವಂಚನೆ Read More »

ಕರಾವಳಿ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 14.50 ರೂ. ಕಡಿತ

(ನ್ಯೂಸ್ ಕಡಬ) newskadaba.com ಜ.01: ಅಹಮದಾಬಾದ್: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಕಡಿತಗೊಳಿಸಿ ಹೊಸ ವರ್ಷಕ್ಕೆ ಅನಿಲ ಕಂಪೆನಿಗಳು ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದೆ. ಹೊಟೇಲ್‌ ಕೈಗಾರಿಕೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳು 14.50 ರೂ. ಗಳಷ್ಟು ಕಡಿಮೆಯಾಗಿದ್ದು, ಗ್ರಾಹಕರಿಗೆ ಖುಷಿ ನೀಡಿದೆ. ಪ್ರಸ್ತುತ 19 ಕೆಜಿಯ ಎಲ್‌ಪಿಜಿ ಸಿಲಿಂಡರ್‌ 181850 ರೂ. ಗೆ ಲಭ್ಯವಿದ್ದು, ಇಂದಿನಿಂದ 1804 ರೂ. ಗೆ ಲಭ್ಯವಾಗಲಿದೆ. ಇದರ ನಡುವೆ ವಿಮಾನಯಾನ ಸಂಸ್ಥೆಗಳಿಗೂ ಹೊಸ ವರ್ಷದ ಉಡುಗೊರೆ ನೀಡಿರುವ ತೈಲ ಕಂಪೆನಿಗಳು

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 14.50 ರೂ. ಕಡಿತ Read More »

ಬ್ರೇಕಿಂಗ್ ನ್ಯೂಸ್

ಗುಜರಾತ್‌: ಕಚ್‌ನಲ್ಲಿ ಲಘು ಭೂಕಂಪ; ಒಂದು ವಾರದಲ್ಲಿ ಎರಡನೇ ಬಾರಿ ಕಂಪಿಸಿದ ಭೂಮಿ

(ನ್ಯೂಸ್ ಕಡಬ) newskadaba.com ಜ.01: ಅಹಮದಾಬಾದ್: ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪನ ಸಂಶೋಧನಾ ಸಂಸ್ಥೆ ತಿಳಿಸಿದೆ. ಹೊಸ ವರ್ಷದ ಮೊದಲ ದಿನ ಸಂಭವಿಸಿದ ಈ ಕಂಪನದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಕಂಪನವು ಇಂದು ಬೆಳಗ್ಗೆ 10.24ಕ್ಕೆ ದಾಖಲಾಗಿದೆ. ಅದರ ಕೇಂದ್ರಬಿಂದುವು ಭಚೌದಿಂದ ಈಶಾನ್ಯ ಪೂರ್ವಕ್ಕೆ 23 ಕಿಲೋಮೀಟರ್ ದೂರದಲ್ಲಿ ಇದೆ ಎಂದು ಗಾಂಧಿನಗರ ಮೂಲದ ISR ಹೇಳಿದೆ.

ಗುಜರಾತ್‌: ಕಚ್‌ನಲ್ಲಿ ಲಘು ಭೂಕಂಪ; ಒಂದು ವಾರದಲ್ಲಿ ಎರಡನೇ ಬಾರಿ ಕಂಪಿಸಿದ ಭೂಮಿ Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಯುವ ಯಕ್ಷಗಾನ ಕಲಾವಿದ ಮೃತ್ಯು

(ನ್ಯೂಸ್ ಕಡಬ) newskadaba.com ಜ.01: ಭೀಕರ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ, ಯುವ ಯಕ್ಷಗಾನ ಕಲಾವಿದರೊಬ್ಬರು ಮೃತಪಟ್ಟ ಘಟನೆ ನಗರ ಹೊರವಲಯದ ಅರ್ಕುಳ ಜಂಕ್ಷನ್ ಬಳಿ ಡಿ. 31ರ ಸಂಜೆ ಸಂಭವಿಸಿದೆ. ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಸಸಿಹಿತ್ಲು ಭಗವತೀ ಯಕ್ಷಗಾನ ಮೇಳದ ಕಲಾವಿದ ಪ್ರವೀತ್ ಕುಮಾರ್ (22) ಮೃತರು. ಮೇಳದಲ್ಲಿ ಸ್ತ್ರೀವೇಷಧಾರಿಯಾಗಿದ್ದ ಪ್ರವೀತ್ ಅವರು ಡಿ. 31ರಂದು ಬಜಪೆ ಕಂದಾವರ ಬೈಲಿನಲ್ಲಿ ನಿಗದಿಯಾಗಿದ್ದ ಮೇಳದ ಯಕ್ಷಗಾನಕ್ಕೆ ತೆರಳುತ್ತಿದ್ದರು.

ಮಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಯುವ ಯಕ್ಷಗಾನ ಕಲಾವಿದ ಮೃತ್ಯು Read More »

ಕರಾವಳಿ

ಕೃಷಿಯ ನಿರಂತರ ಬೆಳವಣಿಗೆಗೆ ಉತ್ತೇಜನ, ನೀತಿ ಕಾರ್ಯಗಳ ಅಗತ್ಯವಿದೆ: ಆರ್ಥಿಕ ಸಮೀಕ್ಷೆ

(ನ್ಯೂಸ್ ಕಡಬ) newskadaba.com ಜ.01: ರೈತರು ನಮ್ಮ ದೇಶದ ಬೆನ್ನೆಲುಬು ಎಂದು ನಾವು ಕರೆಯುತ್ತೇವೆ. 2025 ಕ್ಕೆ ನಾವು ಕಾಲಿಡುತ್ತಿದ್ದಂತೆ, ರೈತರ ಪರವಾಗಿ ನಮ್ಮ ಕೃಷಿ ನೀತಿಗಳನ್ನು ಪರಿಹರಿಸಬೇಕು, ಹೊಂದಿಸಬೇಕು ಮತ್ತು ನಿರ್ಬಂಧಗಳನ್ನು ಗುರುತಿಸಬೇಕಾಗಿದೆ. 2022-23ರಲ್ಲಿ ಶೇಕಡಾ 1ರಿಂದ 7ರವರೆಗಿನ ಆರ್ಥಿಕ ಸಮೀಕ್ಷೆಯಲ್ಲಿ ಮತ್ತು 2023-24ರಲ್ಲಿ ಶೇಕಡಾ 5ರಿಂದ 6ರವರೆಗೆ ವರದಿ ಮಾಡಿರುವ ಬೆಳೆ ಆರ್ಥಿಕತೆಯಿಂದ ಜಿಎಸ್ ಡಿಪಿಯಲ್ಲಿ ಬೆಳವಣಿಗೆಯ ದರದೊಂದಿಗೆ ಕರ್ನಾಟಕದ ಕೃಷಿ ವಲಯವು ಇತ್ತೀಚೆಗೆ ದುಸ್ತರವಾಗಿ ಕಾಣುತ್ತಿದೆ. 2023-24 ರ ನಮ್ಮ ಆರ್ಥಿಕ ಸಮೀಕ್ಷೆಯನ್ನು

ಕೃಷಿಯ ನಿರಂತರ ಬೆಳವಣಿಗೆಗೆ ಉತ್ತೇಜನ, ನೀತಿ ಕಾರ್ಯಗಳ ಅಗತ್ಯವಿದೆ: ಆರ್ಥಿಕ ಸಮೀಕ್ಷೆ Read More »

ರಾಷ್ಟ್ರೀಯ ನ್ಯೂಸ್

ದೇಶದೆಲ್ಲೆಡೆ ಹೊಸ ವರ್ಷದ ಸಂಭ್ರಮ: ಜನತೆಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ

(ನ್ಯೂಸ್ ಕಡಬ) newskadaba.com ಜ.01 ನವದೆಹಲಿ: ದೇಶದಾದ್ಯಂತ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2025 ರ ವರ್ಷವು ಎಲ್ಲರಿಗೂ ಸಂತೋಷ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲಿ. ಈ ಸಂದರ್ಭದಲ್ಲಿ ಭಾರತ ಮತ್ತು ವಿಶ್ವಕ್ಕೆ ಉಜ್ವಲ, ಅಂತರ್ಗತ

ದೇಶದೆಲ್ಲೆಡೆ ಹೊಸ ವರ್ಷದ ಸಂಭ್ರಮ: ಜನತೆಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top