News Kadaba Desk

ಅರ್ಜೆಂಟೀನಾಗೆ ಶಾಕ್: ವಿಶ್ವಕಪ್ ಎತ್ತಿಹಿಡಿದ ಸ್ಪೇನ್!

(ನ್ಯೂಸ್ ಕಡಬ) newskadaba.com ಜು. 20. ರೋಚಕದಿಂದ ಕೂಡಿದ್ದ ಫಿಫಾ ವಿಶ್ವಕಪ್ 2026ರ ಫೈನಲ್ ಮಹಾಸಮರದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಸ್ಪೇನ್ ತಂಡ ಹೊಸ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಈ ಹೈ–ವೋಲ್ಟೇಜ್ ಪಂದ್ಯದ ನಿಗದಿತ 90 ನಿಮಿಷಗಳ ಅವಧಿಯಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಸಾಧ್ಯವಾಗದಿದ್ದಾಗ ಪಂದ್ಯವು ಹೆಚ್ಚುವರಿ ಸಮಯಕ್ಕೆ ಜಾರಿತು. ಹೆಚ್ಚುವರಿ ಸಮಯದ 106ನೇ ನಿಮಿಷದಲ್ಲಿ ಬದಲಿ ಆಟಗಾರ ಫೆರಾನ್ ಟೊರೆಸ್ ಬಾರಿಸಿದ ಏಕೈಕ ಗೋಲು […]

ಅರ್ಜೆಂಟೀನಾಗೆ ಶಾಕ್: ವಿಶ್ವಕಪ್ ಎತ್ತಿಹಿಡಿದ ಸ್ಪೇನ್! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್

ಜಿಬ್ರಾ ಕ್ರಾಸಿಂಗ್ ಬಳಸಿ ರಸ್ತೆ ದಾಟಿದ ಶಿಸ್ತಿನ ನಾಯಿಗಳು ಜಾಲತಾಣಗಳಲ್ಲಿ ವೀಡಿಯೊ ಸದ್ದು!

(ನ್ಯೂಸ್ ಕಡಬ) newskadaba.com ಜು. 20. ಬೆಂಗಳೂರಿನಲ್ಲಿ ಬೀದಿ ನಾಯಿಗಳ ಗುಂಪೊಂದು ಟ್ರಾಫಿಕ್ ನಿಯಮ ಪಾಲಿಸಿ, ಪಾದಚಾರಿಗಳಿಗಾಗಿ ಮೀಸಲಾದ ಜೀಬ್ರಾ ಕ್ರಾಸಿಂಗ್ ಮೂಲಕವೇ ಕ್ರಮಬದ್ಧವಾಗಿ ರಸ್ತೆ ದಾಟುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣ ‘ಎಕ್ಸ್‘ (X) ನಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. “ಬೆಂಗಳೂರಿನಲ್ಲಿ ಜೀಬ್ರಾ ಕ್ರಾಸಿಂಗ್ ಬಳಸುತ್ತಿರುವ ಡೋಗೇಶ್” ಎಂಬ ತಮಾಷೆಯ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ಈ ವಿಡಿಯೊ ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ. ಜನನಿಬಿಡ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಗಮನಿಸಿ, ಶಿಸ್ತಿನಿಂದ ಜೀಬ್ರಾ ಕ್ರಾಸಿಂಗ್‌ ನಲ್ಲೇ ರಸ್ತೆ ದಾಟಿದ ನಾಯಿಗಳ

ಜಿಬ್ರಾ ಕ್ರಾಸಿಂಗ್ ಬಳಸಿ ರಸ್ತೆ ದಾಟಿದ ಶಿಸ್ತಿನ ನಾಯಿಗಳು ಜಾಲತಾಣಗಳಲ್ಲಿ ವೀಡಿಯೊ ಸದ್ದು! Read More »

ಕರ್ನಾಟಕ, ವೀಡಿಯೋ

ಬಂಟ್ವಾಳದಲ್ಲಿ ಅಗ್ನಿ ಅವಘಡ – ಹಸುವಿನ ಕೊಟ್ಟಿಗೆ ಸುಟ್ಟು ಭಸ್ಮ

(ನ್ಯೂಸ್ ಕಡಬ) newskadaba.com ಜು. 20. ಆಕಸ್ಮಿಕವಾಗಿ ಬೆಂಕಿ ಹೊತ್ತಿ ಉರಿದ ಪರಿಣಾಮ ಮನೆಯ ಹಿಂಭಾಗದಲ್ಲಿದ್ದ ಬಚ್ಚಲು ಮನೆ ಹಾಗೂ ಹಸುವಿನ ಕೊಟ್ಟಿಗೆ ಸಂಪೂರ್ಣ ಭಸ್ಮವಾದ ಘಟನೆ ಬೆಳ್ತಂಗಡಿ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು–ಕುಕ್ಕಾಜೆ ಎಂಬಲ್ಲಿ ಸೋಮವಾರ ಮುಂಜಾನೆ ಘಟನೆ ನಡೆದಿದೆ.     ಬೆಂಕಿಯ ಜ್ವಾಲೆ ಕ್ಷಣಾರ್ಧದಲ್ಲೇ ವ್ಯಾಪಿಸಿದ ಪರಿಣಾಮ ಬಚ್ಚಲು ಮನೆ ಹಾಗೂ ಹಸುವಿನ ಕೊಟ್ಟಿಗೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಸ್ಥಳೀಯ ನಿವಾಸಿಗಳು ಸಮಯಪ್ರಜ್ಞೆ ಮೆರೆದು ಕೊಟ್ಟಿಗೆಯೊಳಗಿದ್ದ ದನಗಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದರಿಂದ ಜಾನುವಾರುಗಳಿಗೆ

ಬಂಟ್ವಾಳದಲ್ಲಿ ಅಗ್ನಿ ಅವಘಡ – ಹಸುವಿನ ಕೊಟ್ಟಿಗೆ ಸುಟ್ಟು ಭಸ್ಮ Read More »

ಕರಾವಳಿ, ಕ್ರೈಮ್ ನ್ಯೂಸ್

ವಂಶವೃಕ್ಷ ಪ್ರಮಾಣಪತ್ರ ವಿತರಣೆಗೆ ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಟ

(ನ್ಯೂಸ್ ಕಡಬ) newskadaba.com ಜು. 20. ಕರ್ನಾಟಕ ಸರಕಾರ ವಂಶವೃಕ್ಷ ದೃಢೀಕರಣ ಪತ್ರ ನೀಡುವ ಕುರಿತು ರಾಜ್ಯಾದ್ಯಂತ ಏಕೀಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸುತ್ತೋಲೆ ಹೊರಡಿಸಿದ್ದು, ಇನ್ನು ಮುಂದೆ ವಂಶವೃಕ್ಷ ದೃಢೀಕರಣ ಪತ್ರವನ್ನು ಆನ್‍ ಲೈನ್ ತಂತ್ರಾಂಶದ ಮೂಲಕ ಮಾತ್ರ ನೀಡಲಾಗುವುದು. ಅರ್ಜಿದಾರರು 100 ರೂ. ಛಾಪಾ ಕಾಗದದಲ್ಲಿ ನೋಟರಿ ದೃಢೀಕೃತ ಅಫಿಡವಿಟ್, ಆಧಾರ್ ಕಾರ್ಡ್ ಹಾಗೂ ಕುಟುಂಬದ ಸದಸ್ಯರ ಗುರುತಿನ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ. ಅರ್ಜಿಯನ್ನು

ವಂಶವೃಕ್ಷ ಪ್ರಮಾಣಪತ್ರ ವಿತರಣೆಗೆ ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಟ Read More »

ಕರ್ನಾಟಕ

ದಾಂಡೇಲಿ ರೆಸಾರ್ಟ್ ಜಿಪ್‌ಲೈನ್ ದುರಂತ: ಪ್ರವಾಸಿಗ ಕುಬೇರ ಸ್ಥಿತಿ ಗಂಭೀರ; ನೆಟ್ಟಿಗರ ಆಕ್ರೋಶ

(ನ್ಯೂಸ್‌ ಕಡಬ) newskadaba.com,  ಜು.20 : ದಾಂಡೇಲಿಯ ಖಾಸಗಿ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಸವಾರಿಯ ಮಧ್ಯೆ ಸುರಕ್ಷತಾ ಲಾಕ್ ವೈಫಲ್ಯಗೊಂಡ ಪರಿಣಾಮ ಪ್ರವಾಸಿಗ ಕುಬೇರ ಅವರು ಸುಮಾರು 40 ಅಡಿ ಎತ್ತರದಿಂದ ನೇರವಾಗಿ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಕುಬೇರ ಅವರ ಕೈ-ಕಾಲುಗಳು ಮುರಿತಕ್ಕೊಳಗಾಗಿದ್ದು, ನರಗಳಿಗೂ ಗಂಭೀರ ಹಾನಿಯಾಗಿದೆ. ಸದ್ಯ ಅವರಿಗೆ ಮಹಾರಾಷ್ಟ್ರದ ಮಿರಜ್‌ನ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.ರೆಸಾರ್ಟ್‌ನ ಜಿಪ್‌ಲೈನ್ ಉಪಕರಣಗಳು ತುಕ್ಕು ಹಿಡಿದಿದ್ದವು ಮತ್ತು ಸಮರ್ಪಕ ನಿರ್ವಹಣೆ ಇರಲಿಲ್ಲ ಎಂದು ಗಾಯಾಳುವಿನ ಕುಟುಂಬಸ್ಥರು ಗಂಭೀರ

ದಾಂಡೇಲಿ ರೆಸಾರ್ಟ್ ಜಿಪ್‌ಲೈನ್ ದುರಂತ: ಪ್ರವಾಸಿಗ ಕುಬೇರ ಸ್ಥಿತಿ ಗಂಭೀರ; ನೆಟ್ಟಿಗರ ಆಕ್ರೋಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಾವಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ ಕೊಲೆ ಶಂಕೆಯಡಿ ಸಹೋದರನ ಬಂಧನ

(ನ್ಯೂಸ್ ಕಡಬ) newskadaba.com ಜು. 20. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟುವಿನ ಕೃಷ್ಣಾಪುರ ಮಠ ಸಮೀಪದ ಬಾವಿಯಲ್ಲಿ 20 ವರ್ಷದ ಯುವಕನ ಮೃತದೇಹ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತನನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಲ್ಲಿಕಾರ್ಜುನ (20) ಎಂದು ಗುರುತಿಸಲಾಗಿದೆ. ಇವರು ಉದ್ಯೋಗ ನಿಮಿತ್ತ ಮಂಗಳೂರಿಗೆ ಬಂದು ಬಾಡಿಗೆ ಮನೆಯಲ್ಲಿದ್ದುಕೊಂಡು ಕೂಲಿ ಕೆಲಸ ಮಾಡುತ್ತಿದ್ದರು. ಮೃತನೊಂದಿಗೆ ವಾಸವಿದ್ದ ಆತನ ಅಣ್ಣ ಸೋಮನಾಥ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆತನೇ ಪ್ರಮುಖ ಶಂಕಿತನೆಂದು

ಬಾವಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ ಕೊಲೆ ಶಂಕೆಯಡಿ ಸಹೋದರನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಚೊಕ್ಕಬೆಟ್ಟು ಮಠದ ಬಳಿ ಕಾರ್ಮಿಕನ ನಿಗೂಢ ಮೃತ್ಯು : ತೀವ್ರಗೊಂಡ ತನಿಖೆ, ಇಬ್ಬರ ವಿಚಾರಣೆ

(ನ್ಯೂಸ್‌ ಕಡಬ) newskadaba.com,  ಜು.20 : ಸುರತ್ಕಲ್‌ನ ಚೊಕ್ಕಬೆಟ್ಟು ಮಠದ ಸಮೀಪವಿರುವ ಬಾಡಿಗೆ ಮನೆಯ ಬಾವಿಯಲ್ಲಿ ಕಾರ್ಮಿಕ ಮಲ್ಲಿಕಾರ್ಜುನ ಅವರ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆ ಎಂದು ಶಂಕಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನೊಂದಿಗೆ ವಾಸವಾಗಿದ್ದ ಆತನ ಅಣ್ಣ ಸೋಮನಾಥ್ (21) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಆತನೇ ಪ್ರಮುಖ ಶಂಕಿತನೆಂದು ತಿಳಿದುಬಂದಿದೆ. ತನಿಖೆಯ ಭಾಗವಾಗಿ ಪಕ್ಕದ ಮನೆಯ ಮತ್ತೋರ್ವ ಯುವಕನನ್ನೂ ಸುರತ್ಕಲ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಚೊಕ್ಕಬೆಟ್ಟು ಮಠದ ಬಳಿ ಕಾರ್ಮಿಕನ ನಿಗೂಢ ಮೃತ್ಯು : ತೀವ್ರಗೊಂಡ ತನಿಖೆ, ಇಬ್ಬರ ವಿಚಾರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡೆಪಾಲದಲ್ಲಿ ಮಹಿಳೆಯ ನಿಗೂಢ ಮೃತ್ಯು ಆತ್ಮಹತ್ಯೆಯೋ? ವ್ಯವಸ್ಥಿತ ಕೊಲೆಯೋ? ತನಿಖೆ ಆರಂಭಿಸಿದ ಸುಳ್ಯ ಪೊಲೀಸ್

(ನ್ಯೂಸ್‌ ಕಡಬ) newskadaba.com,  ಜು.20   :  ಸಂಪಾಜೆ ಕಡೆಪಾಲದಲ್ಲಿ 22 ವರ್ಷದ ವಿವಾಹಿತ ಮಹಿಳೆ ಫಾತಿಮತ್ ನಿಶಾನ ಜುಲೈ 18ರಂದು ರಾತ್ರಿ ತೀವ್ರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. 4 ವರ್ಷಗಳ ಹಿಂದೆ ಕಡೆಪಾಲದ ಅನ್ಸಾರ್ ಅವರೊಂದಿಗೆ ಮದುವೆಯಾಗಿದ್ದ ನಿಶಾನ ಅವರಿಗೆ 2.5 ವರ್ಷದ ಮಗುವಿದೆ. ಘಟನೆಯ ರಾತ್ರಿ ನಿಶಾನ ಅವರು ತಮ್ಮ ತಾಯಿ ಜುಬೈದಾ ಅವರಿಗೆ ಕರೆ ಮಾಡಿ ಗಂಡನ ಮನೆಯವರಿಂದ ಕಿರುಕುಳವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ತಕ್ಷಣ ತಾಯಿ ಮಗಳ ಮನೆಗೆ ಧಾವಿಸಿದಾಗ ನಿಶಾನ ಮೃತದೇಹ

ಕಡೆಪಾಲದಲ್ಲಿ ಮಹಿಳೆಯ ನಿಗೂಢ ಮೃತ್ಯು ಆತ್ಮಹತ್ಯೆಯೋ? ವ್ಯವಸ್ಥಿತ ಕೊಲೆಯೋ? ತನಿಖೆ ಆರಂಭಿಸಿದ ಸುಳ್ಯ ಪೊಲೀಸ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ: ‘ಡಿಜಿಟಲ್ ಸಾಕ್ಷರತೆ’ಯ ಮಹತ್ವ ಸಾರುವ ತುಳು ಚಿತ್ರ ‘ಇಂಬು’ಗೆ ಸಂದ ಗೌರವ

(ನ್ಯೂಸ್‌ ಕಡಬ) newskadaba.com,  ಜು.20 : ಪ್ರಶಸ್ತಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ,ವಿಜೇತ ಚಿತ್ರ: ಇಂಬು (ಅತ್ಯುತ್ತಮ ತುಳು ಚಲನಚಿತ್ರ),ನಿರ್ದೇಶನ: ಶಿವಧ್ವಜ್ ಶೆಟ್ಟಿ | ನಿರ್ಮಾಣ: ಪ್ರಶಾಂತ್ ರೈ ಗ್ರಾಮೀಣ ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನದ ನಡುವಿನ ಸಂಘರ್ಷವನ್ನು ಹೊಂದಿರುವ ಈ ಚಿತ್ರವು, ಇಂದಿನ ಡಿಜಿಟಲ್ ಯುಗದಲ್ಲಿ ‘ಡಿಜಿಟಲ್ ಸಾಕ್ಷರತೆ’ಯ ಮಹತ್ವವನ್ನು ಸಾರುತ್ತದೆ. ಹಿರಿಯ ನಟ ನವೀನ್ ಡಿ. ಪಡೀಲ್ ಅವರು ಗ್ರಾಮೀಣ ಅರ್ಚಕ ‘ಬಾಲಣ್ಣ’ ಎಂಬ ಪ್ರಮುಖ ಪಾತ್ರದಲ್ಲಿದ್ದಾರೆ. ಮೊಬೈಲ್ ಫೋನ್ ಖರೀದಿಸಿದ ಬಳಿಕ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ: ‘ಡಿಜಿಟಲ್ ಸಾಕ್ಷರತೆ’ಯ ಮಹತ್ವ ಸಾರುವ ತುಳು ಚಿತ್ರ ‘ಇಂಬು’ಗೆ ಸಂದ ಗೌರವ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹೊಳೆಯಿಂದ ಅಕ್ರಮವಾಗಿ ಮರಳು ಎತ್ತುತ್ತಿದ್ದ ಸ್ಥಳಕ್ಕೆ ವಿಟ್ಲ ಪೊಲೀಸರ ಎಂಟ್ರಿ: ಇಬ್ಬರು ಆರೋಪಿಗಳ ವಿರುದ್ಧ ಕೇಸ್

(ನ್ಯೂಸ್‌ ಕಡಬ) newskadaba.com,  ಜು.20 : ವಿಟ್ಲ ಕಸಬಾ ಗ್ರಾಮದ ಕಂಬಳಬೆಟ್ಟುವಿನ ನೆಕ್ಕರೆಯಲ್ಲಿ ಹೊಳೆಯಿಂದ ಅಕ್ರಮವಾಗಿ ಮರಳು ಹೊರತೆಗೆದು ಗೋಣಿ ಚೀಲಗಳಿಗೆ ತುಂಬಿಸುತ್ತಿದ್ದ ಸ್ಥಳದ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ. ಕುಳಾ ಗ್ರಾಮದ ಕಾರ್ಯಾಡಿ ನಿವಾಸಿ ಮೊಹಮ್ಮದ್ ಮತ್ತು ಒಕ್ಕೆತ್ತೂರು ನಿವಾಸಿ ಶರೀಫ್.ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 60 ಚೀಲ ಮರಳು. ವಿಶ್ವಾಸಾರ್ಹ ಮಾಹಿತಿ ಆಧರಿಸಿ ವಿಟ್ಲ ಸಬ್-ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಹೊಳೆಯಿಂದ ಅಕ್ರಮವಾಗಿ ಮರಳು ಎತ್ತುತ್ತಿದ್ದ ಸ್ಥಳಕ್ಕೆ ವಿಟ್ಲ ಪೊಲೀಸರ ಎಂಟ್ರಿ: ಇಬ್ಬರು ಆರೋಪಿಗಳ ವಿರುದ್ಧ ಕೇಸ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top