News Kadaba Desk

‘KGF Chapter 3 ಡ್ರಾಫ್ಟ್ ರೆಡಿ

(ನ್ಯೂಸ್‌ ಕಡಬ) newskadaba.com,  ಅ.15: ರಾಕಿಂಗ್ ಸ್ಟಾರ್ ಯಶ್ ರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್ 3 ಕುರಿತು ಕೊನೆಗೂ ದೊಡ್ಡ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ಹೌದು.. ಕನ್ನಡ ಸಿನಿಮಾರಂಗವನ್ನು ಭಾರತೀಯ ಸಿನಿರಂಗದಲ್ಲಿ ಮತ್ತೊಂದು ಹಂತಕ್ಕೇರಿಸಿದ್ದ ಕೆಜಿಎಫ್ ಚಿತ್ರದ ಮೂರನೇ ಭಾಗದ ಕುರಿತು ಮಹತ್ವದ ಮಾಹಿತಿ ದೊರೆತಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಕೊನೆಗೂ ಕೆಜಿಎಫ್ ಭಾಗ 3ರ ಕುರಿತು ದೊಡ್ಡ ಸುಳಿವು ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ‘ಕೆಜಿಎಫ್ 2’ […]

‘KGF Chapter 3 ಡ್ರಾಫ್ಟ್ ರೆಡಿ Read More »

ಸಿನಿಮಾ

ಸಮುದ್ರದಲ್ಲಿ ಮುಳುಗಿ ಮೂವರು ಬಾಲಕರು ಮೃತ್ಯು..!

(ನ್ಯೂಸ್‌ ಕಡಬ) newskadaba.com ಅ. 15. ಸಮುದ್ರದಲ್ಲಿ ಈಜಲು ಹೋಗಿ ಮೂವರು ಅಪ್ರಾಪ್ತ ಬಾಲಕರು ಮುಳುಗಿ ಮೃತಪಟ್ಟಿರುವ ಘಟನೆ ಬೈಂದೂರು ತಾಲ್ಲೂಕಿನ ಕಿರಿಮಂಜೇಶ್ವರ ಗ್ರಾಮದ ಬಳಿಯ ಕೊಡೇರಿ ಹೊಸಹಿತ್ಲುವಿನ ಕರಾವಳಿಯಲ್ಲಿ ನಡೆದಿದೆ.   ಮೃತ ಬಾಲಕರನ್ನು ಸಂಕೇತ್‌ (16), ಸೂರಜ್‌ (15) ಮತ್ತು ಆಶಿಶ್‌ (14) ಎಂದು ಗುರುತಿಸಲಾಗಿದೆ. ನಾಲ್ವರು ಅಪ್ರಾಪ್ತ ಬಾಲಕರು ಆಟವಾಡುತ್ತಾ ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಮುಳುಗಿದ್ದು, ಹೊರಗೆ ಬರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆದರೆ ಓರ್ವ ಬಾಲಕ ಈಜಿ ದಡ ಸೇರಿದ ನಂತರ ಪೊಲೀಸರಿಗೆ

ಸಮುದ್ರದಲ್ಲಿ ಮುಳುಗಿ ಮೂವರು ಬಾಲಕರು ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಹೃದಯಸ್ತಂಭನ: ಚಿಕಿತ್ಸೆಗೆಂದು ಕೇರಳಕ್ಕೆ ಬಂದಿದ್ದ ಕೀನ್ಯಾ ಮಾಜಿ ಪ್ರಧಾನಿ ನಿಧನ..!

(ನ್ಯೂಸ್‌ ಕಡಬ) newskadaba.com ಅ. 15. ಆಯುರ್ವೇದ ಚಿಕಿತ್ಸೆಗೆಂದು ಕೇರಳಕ್ಕೆ ಬಂದಿದ್ದ ಕೀನ್ಯಾ ಮಾಜಿ ಪ್ರಧಾನಿ ರೈಲಾ ಒಡಿಂಗಾ(80) ಹೃದಯಸ್ತಂಭನದಿಂದ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ರೈಲಾ ಒಡಿಂಗಾ ಅವರು ಆಯುರ್ವೇದ ಚಿಕಿತ್ಸೆಗೆಂದು ಕೇರಳದ ಎರ್ನಾಕುಲಂ ಜಿಲ್ಲೆಯ ಕೂಥಾಟುಕುಳಂಗೆ ಬಂದಿದ್ದರು. ಇಂದು ಮುಂಜಾನೆ ವಾಕಿಂಗ್ ಮಾಡುತ್ತಿದ್ದ ವೇಳೆ ಹಠಾತ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕೂಥಾಟುಕುಳಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೃದಯಸ್ತಂಭನ: ಚಿಕಿತ್ಸೆಗೆಂದು ಕೇರಳಕ್ಕೆ ಬಂದಿದ್ದ ಕೀನ್ಯಾ ಮಾಜಿ ಪ್ರಧಾನಿ ನಿಧನ..! Read More »

ರಾಷ್ಟ್ರೀಯ ನ್ಯೂಸ್

ಮಂಗಳೂರಿನಲ್ಲಿ ನವೆಂಬರ್ 1 ಮತ್ತು 2 ರಂದು ನಗರದಲ್ಲಿ ಮಿಲ್ಲೆಟ್ಸ್ ಉತ್ಸವ

(ನ್ಯೂಸ್‌ ಕಡಬ) newskadaba.com,  ಅ.15  ಮಂಗಳೂರು :  ನವೆಂಬರ್ 1 ,2 ರಂದು ಸೇಂಟ್ ಆಗ್ನೆಸ್ ಕಾಲೇಜಿನ ಪಕ್ಕದಲ್ಲಿರುವ ಬೆಂದೂರ್‌ವೆಲ್‌ನಲ್ಲಿರುವ ಸೇಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಸಭಾಂಗಣದಲ್ಲಿ ಎರಡು ದಿನಗಳ ಮಿಲ್ಲೆಟ್ಸ್ ಉತ್ಸವವನ್ನು ಆಯೋಜಿಸಲಾಗಿದೆ.ಈ ಕಾರ್ಯಕ್ರಮವನ್ನು ಹನಿಜೆನಿಕ್ಸ್ ಬೀ ಫಾರ್ಮ್ಸ್, ರೋ ಇಂಟರ್ನ್ಯಾಷನಲ್, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ಪರಿವರ್ತನೆ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸುತ್ತಿದೆ. ಈ ಉತ್ಸವದಲ್ಲಿ ಕರ್ನಾಟಕದಾದ್ಯಂತದ ವಿವಿಧ ಆರೋಗ್ಯಕರ ಭಕ್ಷ್ಯಗಳನ್ನು ನೀಡುವ ರಾಗಿ ಆಧಾರಿತ ಆಹಾರ ಮಳಿಗೆಗಳು, ಸ್ಥಳೀಯ ಸಾವಯವ ಉತ್ಪನ್ನಗಳನ್ನು ಉತ್ತೇಜಿಸುವ

ಮಂಗಳೂರಿನಲ್ಲಿ ನವೆಂಬರ್ 1 ಮತ್ತು 2 ರಂದು ನಗರದಲ್ಲಿ ಮಿಲ್ಲೆಟ್ಸ್ ಉತ್ಸವ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಕಿ ಅನಾಹುತ; ಚಲಿಸುತ್ತಿದ್ದ ಬಸ್ ಗೆ ಬೆಂಕಿ ,20 ಜನ ಸಜೀವ ದಹನ

(ನ್ಯೂಸ್‌ ಕಡಬ) newskadaba.com,  ಅ.15  ಜೈಸಲೇರ್‌: ರಾಜಸ್ಥಾನದ ಜೈಸಲ್ಮೇರ್‌ನಿಂದ ಜೋಧ್‌ಪುರಕ್ಕೆ ಹೋಗುತ್ತಿದ್ದ ಖಾಸಗಿ ಬಸ್‌‍ ಹಠಾತ್ತನೆ ಹೊತ್ತಿ ಉರಿದು 20 ಜನರು ಸಜೀವ ದಹನವಾಗಿದ್ದು, 16 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 57 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌‍ ಜೈಸಲ್ಮೇರ್‌ನಿಂದ ಜೋಧ್‌ಪುರ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ವಾಹನದ ಹಿಂಭಾಗದಿಂದ ಹೊಗೆ ಹೊರಬರಲು ಪ್ರಾರಂಭಿಸಿತು.ಇದನ್ನು ಗಮನಿಸಿದ ಚಾಲಕ ಬಸ್‌‍ ಅನ್ನು ನಿಲ್ಲಿಸಿದನು, ಆದರೆ ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆ ಇಡಿ ಬಸ್‌‍ಗೆ ಆವರಿಸಿತು. ಸ್ಥಳೀಯರು ಮತ್ತು ದಾರಿಹೋಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಗಳಿಗೆ

ಬೆಂಕಿ ಅನಾಹುತ; ಚಲಿಸುತ್ತಿದ್ದ ಬಸ್ ಗೆ ಬೆಂಕಿ ,20 ಜನ ಸಜೀವ ದಹನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಜಾತಿಗಣತಿಗೆ ಗೈರಾದ 2,300 ಸಿಬ್ಬಂದಿ ವಿರುದ್ಧ ‘No Work No Pay’ ಆದೇಶ

(ನ್ಯೂಸ್‌ ಕಡಬ) newskadaba.com,  ಅ.15: ಯಾವುದೇ ಕಾರಣಗಳ ನೀಡದೆ ಸಾಮಾಜಿಕ-ಆರ್ಥಿಕ ಸಮೀಕ್ಷೆಯಿಂದ ದೂರ ಉಳಿದ 2,300 ಸಿಬ್ಬಂದಿ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರು ‘ನೋ ವರ್ಕ್ ನೋ ಪೇ’ ಆದೇಶ ಹೊರಡಿಸಿದ್ದಾರೆ. ಪದೇ ಪದೇ ನೋಟಿಸ್ ಮತ್ತು ಎಸ್‌ಎಂಎಸ್ ಕಳುಹಿಸಿದರೂ ಈ ಗಣತಿದಾರರು ಕೆರ್ತವ್ಯಕ್ಕೆ ಹಾಜರಾಗಿಲ್ಲ. ಯಾವುದೇ ಕಾರಣ ನೀಡದೆ, ಅನಧಿಕೃತವಾಗಿ ಗೈರುಹಾಜರಿದ್ದಾರೆ. ಇದು ಗಂಭೀರ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ಅನಧಿಕೃತ ಗೈರುಹಾಜರಿ ಅವಧಿಯ ವೇತನ ನೀಡದಂತೆ

ಜಾತಿಗಣತಿಗೆ ಗೈರಾದ 2,300 ಸಿಬ್ಬಂದಿ ವಿರುದ್ಧ ‘No Work No Pay’ ಆದೇಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
crime, arrest, suspected

35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್..!

(ನ್ಯೂಸ್‌ ಕಡಬ) newskadaba.com ಅ. 15. 35 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ.   ಬಂಧಿತ ಆರೋಪಿಯನ್ನು ಕೇರಳದ ತ್ರಿಶೂರ್‌ ಜಿಲ್ಲೆಯ ನಾಟಿ ಮನೆಯ ಬಾಲನ್(73) ಎಂದು ಗುರುತಿಸಲಾಗಿದೆ. 1990 ನೇ ವರ್ಷದಲ್ಲಿ ಸುಳ್ಯ ತಾಲ್ಲೂಕಿನ ಅಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿ ಅಕ್ರಮ ಕೂಟ ಸೇರಿ ಶಾಂತಪ್ಪ ಮತ್ತು ಸುಬ್ಬಯ್ಯ ರವರಿಗೆ ತಲ್ವಾರ್ ನಿಂದ ಕಡಿದು ತೀವ್ರ ಸ್ವರೂಪದ ರಕ್ತ ಗಾಯ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್‌ ರಾಣೆಯಲ್ಲಿ ಪ್ರಕರಣ

35 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ವರ್ಷದ ಅಂತ್ಯದಲ್ಲಿ ಡಬಲ್‌ ಆಗುತ್ತೆ ನಿಮ್ಮ ಹಣ..?

(ನ್ಯೂಸ್‌ ಕಡಬ) newskadaba.com ಅ. 15. ಹೂಡಿಕೆ ಮಾಡುವವರಿಗೆ ಪೋಸ್ಟ್‌ ಆಫೀಸ್‌ ಯೋಜನೆಗಳು ಉತ್ತಮ ಆಯ್ಕೆಯಾಗಿರುತ್ತದೆ. ಇದು ಅತ್ಯಂತ ಸುರಕ್ಷಿತವೂ ಕೂಡಾ. ಹಾಗಾದ್ರೆ ಪೋಸ್ಟ್‌ ಆಫೀಸ್‌ನ ಬೆಸ್ಟ್‌ ಐದು ಹೂಡಿಕೆ ಯೋಜನೆಯ ಬಗ್ಗೆ ನೋಡುವುದಾದರೆ, ಮೊದಲನೆಯದಾಗಿ ಸುಕನ್ಯಾ ಸಮೃದ್ಧಿ ಯೋಜನೆ (SSA): ಇದು ಹೆಣ್ಣುಮಕ್ಕಳಿಗೆ ಅಂತಾನೇ ಕೇಂದ್ರ ಸರ್ಕಾರ ಶುರು ಮಾಡಿದ ಯೋಜನೆ. ಈ ಯೋಜನೆಯಲ್ಲಿ, ಪೋಷಕರು ತಮ್ಮ ಮಗಳ ಹೆಸರಿನಲ್ಲಿ ಖಾತೆಯನ್ನು ತೆರೆದು, ಹೂಡಿಕೆ ಮಾಡಬಹುದು. ಈ ಯೋಜನೆಯು ವಾರ್ಷಿಕವಾಗಿ 8.2% ಬಡ್ಡಿಯನ್ನು ನೀಡುತ್ತದೆ. ಹೆಣ್ಣು

ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ವರ್ಷದ ಅಂತ್ಯದಲ್ಲಿ ಡಬಲ್‌ ಆಗುತ್ತೆ ನಿಮ್ಮ ಹಣ..? Read More »

ರಾಷ್ಟ್ರೀಯ ನ್ಯೂಸ್

ಇಂದಿನ ಹವಾಮಾನ ವರದಿ

(ನ್ಯೂಸ್‌ ಕಡಬ) newskadaba.com,  ಅ.15: ರಾಜ್ಯಾದ್ಯಂತ ಇಂದು (ಅ.15) ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಿಸಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಭಾಗಶಃ ಮೋಡ ಕವಿದ ಆಕಾಶವು ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ  ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29° C ಮತ್ತು 21° C ಆಗಿರಬಹುದು. ಅ.15ರಂದು ಕರಾವಳಿ ಜಿಲ್ಲೆಗಳಲ್ಲಿ ಬುಧವಾರ ಹಗುರ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಬೀದರ್,

ಇಂದಿನ ಹವಾಮಾನ ವರದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇನ್ಮುಂದೆ ಎಸ್‌ಎಸ್‌ಎಲ್‌ಸಿಯಲ್ಲಿ 33% ಅಂಕ ಪಡೆದರೆ ಉತ್ತೀರ್ಣ

(ನ್ಯೂಸ್‌ ಕಡಬ) newskadaba.com,  ಅ.15  ಬೆಂಗಳೂರು : ಈ ವರ್ಷದಿಂದ ಎಸ್‌ಎಸ್‌ಎಲ್‌ಸಿಯಲ್ಲಿ 33% ಅಂಕ ಪಡೆದರೆ ಪಾಸ್ ಎಂದು ಘೋಷಿಸಲಾಗುವುದು. ಈ ವರ್ಷದಿಂದಲೇ ಖಾಸಗಿ ಶಾಲೆಗಳಿಗೂ ಇದು ಅನ್ವಯ ಆಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ವರ್ಷದಿಂದ 33% ಅಂಕ ಪಡೆದರೆ ಎಸ್‌ಎಸ್‌ಎಲ್‌ಸಿ ಪಾಸ್‌ ಎಂದು ಘೋಷಿಸಲಾಗುವುದು. ಅಲ್ಲಿಗೆ 625ಕ್ಕೆ 206 ಅಂಕ ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣ ಆಗಲಿದ್ದಾರೆ. ಆಂತರಿಕ ಅಂಕ, ಬಾಹ್ಯ

ಇನ್ಮುಂದೆ ಎಸ್‌ಎಸ್‌ಎಲ್‌ಸಿಯಲ್ಲಿ 33% ಅಂಕ ಪಡೆದರೆ ಉತ್ತೀರ್ಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top