News Kadaba Desk

ಅಫ್ಘಾನಿಸ್ತಾನ: 6.3 ತೀವ್ರತೆಯ ಭೂಕಂಪ : 20 ಮಂದಿ ಸಾವು

(ನ್ಯೂಸ್‌ ಕಡಬ) newskadaba.com,  ನ.03: ಅಫ್ಘಾನಿಸ್ತಾನದಲ್ಲಿ ಮಧ್ಯರಾತ್ರಿ 6.3 ತೀವ್ರತೆಯ ಭೂಕಂಪನ ಸಂಭವಿಸಿದ್ದು ಸುಮಾರು 20 ಮಂದಿ ಸಾವನ್ನಪ್ಪಿ,320ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಕಾಲಮಾನ ಮಧ್ಯರಾತ್ರಿ 1 ಗಂಟೆಗೆ ಭೂಕಂಪದ ಸಂಭವಿಸಿದೆ ಎಂದು ಅಮೆರಿಕದ ಜಿಯೋಲಾಜಿಕಲ್‌ ಸರ್ವೆಹೇಳೆದೆ. ಅಫ್ಘಾನಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯು ಸಾವುನೋವುಗಳು ಮತ್ತು ಹಾನಿಗಳ ಮೌಲ್ಯಮಾಪನಗಳನ್ನು ನಂತರ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಹೇಳಿದೆ. ಸಾಮಾಜಿಕ ಮಾಧ್ಯಮದ ವೀಡಿಯೊದಿಂದ ಪಡೆದ ಚಿತ್ರದಲ್ಲಿ ಅಫ್ಘಾನಿಸ್ತಾನದ ಮಜರ್‌ ಇ ಷರೀಫ್‌ನಲ್ಲಿ ಭೂಕಂಪದ ನಂತರ ಬ್ಲೂ ಮಸೀದಿ […]

ಅಫ್ಘಾನಿಸ್ತಾನ: 6.3 ತೀವ್ರತೆಯ ಭೂಕಂಪ : 20 ಮಂದಿ ಸಾವು Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ | ಮೀನು ಮಾರಾಟ ವಿಚಾರದಲ್ಲಿ ಹೊಡೆದಾಟ: ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ನ.03 ಕಡಬ: ಮೀನು ಮಾರಾಟದ ವಿಚಾರವಾಗಿ ಎರಡು ಅಂಗಡಿಯವರಿಗೆ ಮಾತಿನ ಚಕಮಕಿ ನಡೆದು ಬಳಿಕ ಪರಸ್ಪರ ಹೊಡೆದಾಡಿಕೊಂಡ ಘಟನೆ ಕಡಬ ಗ್ರಾಮದ ಸಂತೆಕಟ್ಟೆ ಬಳಿ ಮೀನು ಮಾರುಕಟ್ಟೆಯಲ್ಲಿ ಶನಿವಾರ ನಡೆದಿದೆ. ಈ ಬಗ್ಗೆ ವೈರಲ್ ವೀಡಿಯೊ ಆಧರಿಸಿ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತೆಕಟ್ಟೆ ಬಳಿಯ ಮೀನು ಮಾರುಕಟ್ಟೆಯಲ್ಲಿ ಶನಿವಾರ ಮೀನು ಮಾರಾಟದ ವಿಚಾರವಾಗಿ ರಾಜು ಮ್ಯಾಥ್ಯೂ ಹಾಗೂ ಆದಂ ಎಂಬವರ ಎರಡು ಅಂಗಡಿಯವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದರು. ಹೊಡೆದಾಟದ

ಕಡಬ | ಮೀನು ಮಾರಾಟ ವಿಚಾರದಲ್ಲಿ ಹೊಡೆದಾಟ: ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ʼಜಗತ್ತನ್ನು 150 ಬಾರಿ ಸ್ಫೋಟಿಸುವಷ್ಟು ಪರಮಾಣು ಶಸ್ತ್ರಾಸ್ತ್ರ ಇದೆ; ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

(ನ್ಯೂಸ್‌ ಕಡಬ) newskadaba.com,  ನ.03 ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು 1992 ರಲ್ಲಿ ಸ್ಥಗಿತಗೊಳಿಸಿದ್ದ ಪರಮಾಣು ಶಸ್ತ್ರಾಸ್ತ್ರ ಪುನರ್ ಆರಂಭಿಸುವುದಾಗಿ ಘೋಷಣೆ ಮಾಡಿದ ಕೆಲವೇ ದಿನಗಳ ಬಳಿಕ ಜಗತ್ತನ್ನು 150 ಬಾರಿ ಸ್ಫೋಟಿಸಲು ನಮ್ಮಲ್ಲಿ ಸಾಕಷ್ಟು ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. ಎಂದು ಆರೋಪಿಸುತ್ತಿರುವ ಮಧ್ಯೆ ಈ ಹೇಳಿಕೆಗಳು ಬಂದಿವೆ. ಬೀಜಿಂಗ್ ಅಮೆರಿಕದ ಬೌದ್ಧಿಕ ಆಸ್ತಿ ಮತ್ತು ಅಮೆರಿಕನ್ನರ ವೈಯಕ್ತಿಕ ಡೇಟಾವನ್ನು ಕದ್ದ ಆರೋಪವನ್ನೂ ಹೊಂದಿದೆ. ಚೀನಾ ಬಗ್ಗೆ ಮಾತನಾಡಿದ ಅವರು ಇದು ತುಂಬಾ ಸ್ಪರ್ಧಾತ್ಮಕ

ʼಜಗತ್ತನ್ನು 150 ಬಾರಿ ಸ್ಫೋಟಿಸುವಷ್ಟು ಪರಮಾಣು ಶಸ್ತ್ರಾಸ್ತ್ರ ಇದೆ; ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಳಪೆ ಮಟ್ಟಕ್ಕೆ ಕುಸಿದ ಗಾಳಿಗುಣಮಟ್ಟ; ಶ್ವಾಸಕೋಶ ಸಮಸ್ಯೆ ಇರೋರು ದೆಹಲಿ ಬಿಟ್ಟು ಹೋಗುವಂತೆ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com,  ನ.03: ದೆಹಲಿಯಲ್ಲಿ ವಾಯುಗುಣಮಟ್ಟವು ಕಳಪೆ ಮಟ್ಟಕ್ಕೆ ಕುಸಿಯುತ್ತಿದ್ದು, ಉಸಿರಾಡುವ ಗಾಳಿ ವಿಷವಾಗುತ್ತಿದೆ. ಜನರ ಶ್ವಾಸಕೋಶ, ಹೃದಯ ಹಾಗೂ ಮೆದುಳಿಗೆ ನಿರಂತರ ಹಾನಿಯುಂಟು ಮಾಡುತ್ತಿದೆ. ಹೀಗಾಗಿ ಶ್ವಾಸಕೋಶ ಸಮಸ್ಯೆ ಇರೋರು ಈ ಕೂಡಲೇ ದೆಹಲಿ ಬಿಟ್ಟು ಹೋಗಿ ಎಂದುAIIMS ಮಾಜಿ ನಿರ್ದೇಶಕ ಮತ್ತು ಶ್ವಾಸಕೋಶ ಶಾಸ್ತ್ರಜ್ಞ ಡಾ. ರಂದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, “ದೆಹಲಿ ಗುಣಮಟ್ಟವು ಅತ್ಯಂತ ಅಪಾಯ ಮಟ್ಟಕ್ಕೆ ತಲುಪುತ್ತಿದೆ. ಶ್ವಾಸಕೋಶ ದುರ್ಬಲ ಇರೋರು ಸಾಧ್ಯವಾದ್ರೆ ಕೂಡಲೇ ನಗರವನ್ನು

ಕಳಪೆ ಮಟ್ಟಕ್ಕೆ ಕುಸಿದ ಗಾಳಿಗುಣಮಟ್ಟ; ಶ್ವಾಸಕೋಶ ಸಮಸ್ಯೆ ಇರೋರು ದೆಹಲಿ ಬಿಟ್ಟು ಹೋಗುವಂತೆ ಎಚ್ಚರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾರ್ಕಳ: ಇಬ್ಬರನ್ನು ಬಲಿ ಪಡೆದ ಕಾಡಾನೆ ಕೊನೆಗೂ ಸೆರೆ

(ನ್ಯೂಸ್‌ ಕಡಬ) newskadaba.com,  ನ.03: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ಸಮೀಪ ಇಬ್ಬರು ರೈತರನ್ನು ಬಲಿ ಪಡೆದಿದ್ದ ಕಾಡಾನೆಯನ್ನು, ಅರಣ್ಯ ಇಲಾಖೆಯು ಎರಡು ದಿನಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಕೊನೆಗೂ ಸೆರೆಹಿಡಿಯಲಾಗಿದೆ. ಈ ಆನೆಯು ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಭಗವತಿ ಶಿಬಿರದ ಸಮೀಪದ ಅರಣ್ಯದಲ್ಲಿ ಅಡಗಿತ್ತು. ಮಂಗಳೂರು ಅರಣ್ಯ ವಿಭಾಗ ಮತ್ತು ಕುದುರೆಮುಖ ವನ್ಯಜೀವಿ ವಿಭಾಗದ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಈ ಬೃಹತ್ ಸೆರೆ ಕಾರ್ಯಾಚರಣೆ ನಡೆಸಲಾಯಿತು. ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು, ಕೊಡಗು ಜಿಲ್ಲೆಯ ದುಬಾರೆ ಮತ್ತು

ಕಾರ್ಕಳ: ಇಬ್ಬರನ್ನು ಬಲಿ ಪಡೆದ ಕಾಡಾನೆ ಕೊನೆಗೂ ಸೆರೆ Read More »

ಕರಾವಳಿ, ಕರ್ನಾಟಕ

ಬೆಳಗಾವಿ: ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆಗಳು ಸಾವು

(ನ್ಯೂಸ್‌ ಕಡಬ) newskadaba.com,  ನ.03 ಬೆಳಗಾವಿ: ಜುಲೈಯಲ್ಲಿ ಚಾಮರಾಜನಗರದ ಹನೂರು ತಾಲೂಕಿನ ಮೀಣ್ಯಂ ಸಮೀಪದ ಅರಣ್ಯದಲ್ಲಿ ಒಂದೇ ದಿನ 5 ಹುಲಿಗಳು ಮೃತಪಟ್ಟ ಘಟನೆ ಭಾರಿ ಸುದ್ದಿಯಾಗಿತ್ತು. ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಆ ಕಹಿ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುಳೆಗಾಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆಗಳು ಸಾವನ್ನಪ್ಪಿವೆ. ಜಮೀನಿನ ಬಳಿ ತಂತಿ ಬೇಲಿಗೆ ವಿದ್ಯುತ್ ಕನೆಕ್ಷನ್ ನೀಡಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ .

ಬೆಳಗಾವಿ: ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆಗಳು ಸಾವು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪ್ರಧಾನಿ ಮೋದಿ, ಅಮಿತ್ ಶಾ, ಯೋಗಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಕಿಡಿಗೇಡಿ ಬಂಧನ

(ನ್ಯೂಸ್‌ ಕಡಬ) newskadaba.com,  ನ.03: ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಮಾಡಿದ್ದ ವ್ಯಕ್ತಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಈ ಮೂವರು ನಾಯಕರ ಚಿತ್ರಗಳು ಮತ್ತು ಅಶ್ಲೀಲ ಹಾಡನ್ನು ಹೊಂದಿರುವ ಪೋಸ್ಟ್‌ ನವೆಂಬರ್‌ 1 ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಆ ಪ್ರದೇಶದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಪ್ರಧಾನಿ ಮೋದಿ, ಅಮಿತ್ ಶಾ, ಯೋಗಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಕಿಡಿಗೇಡಿ ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ; ಜಮೀರ್ ಅಹ್ಮದ್ ಖಾನ್

(ನ್ಯೂಸ್‌ ಕಡಬ) newskadaba.com,  ನ.03 ಹೊಸಪೇಟೆ : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿ ಆಗುತ್ತದೆಂಬ ಆರೋಪ ಸುಳ್ಳಾಗಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲುವುದಿಲ್ಲ. ಗ್ಯಾರಂಟಿ ನಿಲ್ಲಿಸಲು ನಮ್ಮವರೇ ಹೇಳಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸುತಾರಾಂ ಒಪ್ಪಿಲ್ಲ. ಪಂಚ ಗ್ಯಾರಂಟಿಗಳು ಅಬಾಧಿತವಾಗಿ ಮುಂದುವರೆಯಲಿವೆ ಎಂದು ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಹೇಳಿದರು.ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಜಿಪಂನಿಂದ ಶನಿವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಚ ಗ್ಯಾರಂಟಿಯಿಂದ

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ; ಜಮೀರ್ ಅಹ್ಮದ್ ಖಾನ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ತೆಲಂಗಾಣ: ಬಸ್-ಟ್ರಕ್ ನಡುವೆ ಭೀಕರ ಅಪಘಾತ-20 ಮಂದಿ ಮೃತ್ಯು

(ನ್ಯೂಸ್‌ ಕಡಬ) newskadaba.com,  ನ.03: ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್‌ ಲಾರಿಯೊಂದು ಸಾರಿಗೆ ಬಸ್‌‍ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ 20 ಜನರು ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ತೆಲಂಗಾಣಾದ ರಂಗಾ ರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿ ನಡೆದಿದೆ. ಟಿಪ್ಪರ್‌ ತೆಲಂಗಾಣ ರಸ್ತೆ ಸಾರಿಗೆ ನಿಗಮ (ಆರ್‌ಟಿಸಿ) ವಾಹನಕ್ಕೆ ಡಿಕ್ಕಿ ಹೊಡೆದ ಡಿಕ್ಕಿ ರಭಸಕ್ಕೆ ಬಸ್‌‍ ಬಸ್‌‍ ಒಳಗೆ ಜಲ್ಲಿಕಲ್ಲು ಬಿದ್ದಿದ್ದು ಸ್ಥಳದಲ್ಲೇ 16 ಜನರು ಸಾವನ್ನಪ್ಪಿದರು, ಎಂಟು ಮಂದಿ ಗಾಯಗೊಂಡರು ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೆಲಂಗಾಣ: ಬಸ್-ಟ್ರಕ್ ನಡುವೆ ಭೀಕರ ಅಪಘಾತ-20 ಮಂದಿ ಮೃತ್ಯು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮೆಕ್ಸಿಕೋ ಸೂಪರ್ ಮಾರ್ಕೆಟ್‌ನಲ್ಲಿ ಭೀಕರ ಬೆಂಕಿ ಅವಘಡ – 23 ಜನ ಸಾವು

(ನ್ಯೂಸ್‌ ಕಡಬ) newskadaba.com,  ನ.03 ಮೆಕ್ಸಿಕೋ: ಮೆಕ್ಸಿಕೋದ ಸೊನಾರಾ ರಾಜ್ಯದಲ್ಲಿರುವ ಒಂದು ಸೂಪರ್ ಮಾರ್ಕೆಟ್‌ನಲ್ಲಿ ಗುರುವಾರ ರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 23 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಸಂಭವಿಸಿದ ಸಮಯದಲ್ಲಿ ಮಾರ್ಕೆಟ್ ಒಳಗೆ ಗ್ರಾಹಕರು ಹಾಗೂ ಸಿಬ್ಬಂದಿ ಇದ್ದರೆಂದು ವರದಿಯಾಗಿದೆ. ಬೆಂಕಿ ಅಷ್ಟರ ಮಟ್ಟಿಗೆ ಉಗ್ರವಾಗಿ ಹೊತ್ತಿಕೊಂಡಿತ್ತು ಎಂಬುದಾಗಿ ಪ್ರತ್ಯಕ್ಷ ಸಾಕ್ಷಿಗಳು ತಿಳಿಸಿದ್ದಾರೆ. ಮಾರ್ಕೆಟ್ ಹೊರಗೆ ನಿಲ್ಲಿಸಿದ್ದ ಹಲವು ಕಾರುಗಳಿಗೂ ಬೆಂಕಿ ತಗುಲಿ ಅವು ಸಂಪೂರ್ಣ

ಮೆಕ್ಸಿಕೋ ಸೂಪರ್ ಮಾರ್ಕೆಟ್‌ನಲ್ಲಿ ಭೀಕರ ಬೆಂಕಿ ಅವಘಡ – 23 ಜನ ಸಾವು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top