News Kadaba Desk

ಜೂನ್ 14 – “ಇಂದು ವಿಶ್ವ ರಕ್ತದಾನಿಗಳ ದಿನ” ಡಾ|| ಮುರಲೀ ಮೋಹನ್ ಚೂಂತಾರುರವರ ಲೇಖನ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜೂ.14. ಪ್ರತಿ ವರ್ಷ ಜೂನ್ 14 ರಂದು “ವಿಶ್ವ ರಕ್ತದಾನಿಗಳ ದಿನ” ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬರೂ ಇದರಿಂದ ಪ್ರೇರಿತರಾಗಿ ಹೆಚ್ಚು ಹೆಚ್ಚು ಜನರು ರಕ್ತದಾನಕ್ಕೆ ಪ್ರೇರಣೆಗೊಳ್ಳಬೇಕೆಂಬುದು ನಮ್ಮೆಲ್ಲರ ಆಶಯ. ಜಗತ್ತಿನ ಅತೀ ದೊಡ್ಡ ಸಂಶೋಧನೆ ಎಂದರೆ, ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡುವುದಕ್ಕೆ “ರಕ್ತದಾನ” ಎನ್ನುವರು. ರಕ್ತಕ್ಕೆ […]

ಜೂನ್ 14 – “ಇಂದು ವಿಶ್ವ ರಕ್ತದಾನಿಗಳ ದಿನ” ಡಾ|| ಮುರಲೀ ಮೋಹನ್ ಚೂಂತಾರುರವರ ಲೇಖನ Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಬಲ್ಯ: ಸೋಲಾರ್ ಪ್ಯಾನೆಲ್ ಕಳವು

(ನ್ಯೂಸ್ ಕಡಬ) newskadaba.com ಕಡಬ, ಜೂ.13. ಇಲ್ಲಿಗೆ ಸಮೀಪದ ಬಲ್ಯ ಗ್ರಾಮದ ಗೋವಿಂದಕಟ್ಟೆಯಲ್ಲಿ ಪಂಚಾಯಿತಿ ವತಿಯಿಂದ ಅಳವಡಿಸಲಾಗಿದ್ದ ಸೋಲಾರ್ ದೀಪದ ಪ್ಯಾನೆಲ್ಗಳನ್ನು ಕಿಡಿಗೇಡಿಗಳು ಸೋಮವಾರ ಕಳವುಗೈದಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಕುಟ್ರುಪ್ಪಾಡಿ ಗ್ರಾ.ಪಂ. ಹಾಗೂ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೇ ಭಾಗದಲ್ಲಿ ಈ ಹಿಂದೆ ಕಳ್ಳರು ಸೋಲಾರ್ ಪ್ಯಾನೆಲ್ ಹಾಗೂ ಬ್ಯಾಟರಿಗಳನ್ನು ಕಳವು ಮಾಡಿದ್ದರು. ಈ ಬಾರಿ ಮತ್ತೆ ಕಳವಾಗಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ದೂರುದಾರ ಗ್ರಾಮಸ್ಥರಾದ ಶಿಜೋ ಜಾರ್ಜ್, ಜೋಯಲ್, ಭರತ್

ಬಲ್ಯ: ಸೋಲಾರ್ ಪ್ಯಾನೆಲ್ ಕಳವು Read More »

ಕರಾವಳಿ

ಯುವಕನಿಗೆ ಚೂರಿ ಇರಿತ: ಕಲ್ಲಡ್ಕ ಮತ್ತೆ ಉದ್ವಿಘ್ನ

(ನ್ಯೂಸ್ ಕಡಬ) newskadaba.com ಕಲ್ಲಡ್ಕ, ಜೂ.13. ಮನೆಗೆ ಹಣ್ಣುಹಂಪಲು ತೆಗೆದುಕೊಂಡು ಹೋಗುತ್ತಿದ್ದ ಯುವಕನಿಗೆ ತಂಡವೊಂದು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಕಲ್ಲಡ್ಕದಲ್ಲಿ ಮಂಗಳವಾರ ಸಂಜೆ ನಡೆದಿದೆ. ಕಲ್ಲಡ್ಕ ನಿವಾಸಿ ಅಬೂಸಾಲಿ ಎಂಬವರ ಪುತ್ರ ಖಲೀಲ್ ಚೂರಿ ಇರಿತಕ್ಕೊಳಗಾಗಿ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರತ್ನಾಕರ್ ಶೆಟ್ಟಿ ಹಾಗೂ ರವಿಭಂಡಾರಿ ಎಂಬವರು ಚೂರಿಯಿಂದ ಇರಿದಿದ್ದಾರೆ ಎಂದು ತಿಳಿದುಬಂದಿದೆ. ರತ್ನಾಕರ ಶೆಟ್ಟಿಯ ಕೈಗಳಿಗೂ ಗಾಯಗಳಾಗಿದ್ದು, ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ಬಳಿಕ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಕಂಡುಬಂದಿದ್ದು,

ಯುವಕನಿಗೆ ಚೂರಿ ಇರಿತ: ಕಲ್ಲಡ್ಕ ಮತ್ತೆ ಉದ್ವಿಘ್ನ Read More »

ಕರಾವಳಿ

ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆಗೆ ಅರ್ಜಿ ಆಹ್ವಾನ

 (ನ್ಯೂಸ್ ಕಡಬ) newskadaba.com ಮ0ಗಳೂರು, ಜೂ.13. ಅರಿವು ಯೊಜನೆಯಡಿಯಲ್ಲಿ ವೃತ್ತಿನಿರತ ವಿದ್ಯಾಭ್ಯಾಸಕ್ಕಾಗಿ ಅಂದರೆ ಎಂ.ಬಿ.ಬಿ.ಎಸ್, ಇಂಜಿನಿಯರಿಂಗ್, ಎಂ.ಬಿ.ಎ, ಎಂಸಿ.ಎ, ಎಂ.ಟೆಕ್, ಪಿ.ಹೆಚ್.ಡಿ, ಎಂ.ಇ, ಎಂ.ಎಸ್ (ಡಿಗ್ರಿ), ಎಂ.ಡಿ, ಎಂ.ಎಫ್.ಎ, ಎಂ.ಡಿ.ಎಸ್, ಎಂ.ಟಿ.ಎ, ಎಂ.ಐ.ಬಿ, ಬಿ.ಎ, ಬಿ.ಕಾಂ, ಡಿ.ಎಡ್, ಐ.ಟಿ.ಐ, ಡಿಪ್ಲೊಮೊ, ನಸಿರ್ಂಗ್, ಬಿ.ಡಿ.ಎಸ್, ಎಂ.ಎ, ಬಿ.ಎಸ್ಸಿ, ಬಿ.ಎ, ಬಿ.ಕಾಂ, ಏರ್ ಕ್ರಾಫ್ಟ್, ಮಂಟನೆನ್ಸ್ ಇಂಜಿನಿಯರಿಂಗ್, ಟೆಕ್ನಿಕಲ್ ಮ್ಯಾನೆಜ್ಮೆಂಟ್ ಇತ್ಯಾದಿ ವಿದ್ಯಾಭ್ಯಾಸಕ್ಕಾಗಿ ಅಭ್ಯರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷಕ್ಕೆ ರೂ. 10 ಸಾವಿರ ದಿಂದ ರೂ. 75 ಸಾವಿರದವರೆಗೆ

ಅರಿವು (ವಿದ್ಯಾಭ್ಯಾಸ) ಸಾಲ ಯೋಜನೆಗೆ ಅರ್ಜಿ ಆಹ್ವಾನ Read More »

ಕರಾವಳಿ

ನಾಳೆ ನಡುಮಜಲು ಮಹಾವಿಷ್ಣು ದೇವಸ್ಥಾನದಲ್ಲಿ ಅಗೇಲು ಸೇವೆ

(ನ್ಯೂಸ್ ಕಡಬ) newskadaba.com ಕಡಬ, ಜೂ.13. ಹಲವು ಕಾರಣಿಕಗಳೊಂದಿಗೆ ಪ್ರಸಿದ್ಧಿಯನ್ನು ಪಡೆದಿರುವ ಪುತ್ತೂರು ತಾಲೂಕಿನ ನಡುಮಜಲು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜೂ.14ನೇ ಬುಧವಾರ ಸಂಕ್ರಾಂತಿಯಂದು ದೇವಾಲಯದ ವಠಾರದಲ್ಲಿ ಭಜನಾ ಕಾರ್ಯಕ್ರಮ ಹಾಗೂ ಶ್ರೀ ಹೊಸಮ್ಮ ದೇವಿ ಸನ್ನಿಧಾನದಲ್ಲಿ ಶ್ರೀದೇವಿಗೆ ಅಗೇಲು ಸೇವೆ ನಡೆಯಲಿದೆ. ಅಗೇಲು ಸೇವೆ ಸಲ್ಲಿಸುವ ಭಕ್ತಾಧಿಗಳು ಮುಂಚಿತವಾಗಿ ತಿಳಿಸಬೇಕಾಗಿ ದೇವಾಲಯದ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಅಶೋಕ್ ಹೆಗ್ಡೆ: 9449107356 ಹಾಗೂ ರತ್ನಕುಮಾರ್: 9902601639 ಸಂಖ್ಯೆಗಳನ್ನು ಸಂಪರ್ಕಿಸಬಹುದು.

ನಾಳೆ ನಡುಮಜಲು ಮಹಾವಿಷ್ಣು ದೇವಸ್ಥಾನದಲ್ಲಿ ಅಗೇಲು ಸೇವೆ Read More »

ಕರಾವಳಿ

ಲಾರಿ-ಬೈಕ್ ಢಿಕ್ಕಿ: ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ.13. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಕಡಂಬು ಎಂಬಲ್ಲಿ ಲಾರಿ ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಮೃತ ಸವಾರನನ್ನು ಕಡೇಶಿವಾಲಯ ನಿವಾಸಿ ಕಾಂತಪ್ಪ ಪೂಜಾರಿ ಎಂಬವರ ಪುತ್ರ ಗುರುಪ್ರಸಾದ್ ಎಂದ್ ಗುರುತಿಸಲಾಗಿದೆ. ಉಪ್ಪಿನಂಗಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಹಾಗೂ ಕಡೇಶಿವಾಲಯದಿಂದ ಉಪ್ಪಿನಂಗಡಿಗೆ ಬರುತ್ತಿದ್ದ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಪುತ್ತೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಾರಿ-ಬೈಕ್ ಢಿಕ್ಕಿ: ಯುವಕ ಮೃತ್ಯು Read More »

ಕರಾವಳಿ

 ಅಡಿಕೆಗೆ ಕೊಳೆರೋಗ ಬಾಧಿಸಿದೆಯೇ…? ಹತೋಟಿಗೆ ಮುಂಜಾಗ್ರತಾ ಕ್ರಮ

(ನ್ಯೂಸ್ ಕಡಬ) newskadaba.com ಮ0ಗಳೂರು ಜೂ.12. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯು ಚುರುಕುಗೊಂಡಿದ್ದು, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗೆ ಕೊಳೆರೋಗವು ಬಾಧಿಸಿ ಹೆಚ್ಚಿಗೆ ನಷ್ಟವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ರೋಗವನ್ನು ಹತೋಟಿ ಮಾಡಲು ರೈತರು ಮುಂಗಾರು ಪ್ರಾರಂಭವಾದಾಗಲೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇರುತ್ತದೆ. ಇದರ ಭಾಗವಾಗಿ ಎಲ್ಲಾ ರೈತರು ಅಡಿಕೆ ಬೆಳೆಗೆ ಬೋರ್ಡೋ ದ್ರಾವಣವನ್ನು ತಯಾರಿಸಿ ಸಿಂಪರಣೆ ಮಾಡಲು ಕೋರಲಾಗಿದ್ದು, ವೈಜ್ಞಾನಿಕವಾಗಿ ಬೋರ್ಡೋ ದ್ರಾವಣ ತಯಾರಿಕೆ ವಿಧಾನ ಈ ಕೆಳಗಿನಂತಿದೆ. ಶೇ.

 ಅಡಿಕೆಗೆ ಕೊಳೆರೋಗ ಬಾಧಿಸಿದೆಯೇ…? ಹತೋಟಿಗೆ ಮುಂಜಾಗ್ರತಾ ಕ್ರಮ Read More »

ಕರಾವಳಿ

ಮುಂದಿನ ನಾಲ್ಕು ದಿನ ಭಾರೀ ಮಳೆ ಸಂಭವ: ಸಾರ್ವಜನಿಕರು ತಗ್ಗು ಪ್ರದೇಶ/ನದಿ ತೀರಕ್ಕೆ ತೆರಳದಂತೆ ಸೂಚನೆ

(ನ್ಯೂಸ್ ಕಡಬ) newskadaba.com ಮ0ಗಳೂರು, ಜೂ.12. ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಜೂನ್ 13 ರಿಂದ 16 ರವರೆಗೆ ಭಾರೀ ಮಳೆ ಬೀಳುವ ಸಂಭವವಿರುವುದರಿಂದ ಭಾರತ ಹವಾಮಾನ ಇಲಾಖೆ, ಬೆಂಗಳೂರು ಇವರು ಕರಾವಳಿ ಪ್ರದೇಶದಲ್ಲಿ ಯಾವುದೇ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಅಥವಾ ನದಿ ಪಾತ್ರಕ್ಕೆ ತೆರಳದಂತೆ ಸೂಚಿಸಿದ್ದಾರೆ. ತಗ್ಗು ಪ್ರದೇಶದಲ್ಲಿ ಹಾಗೂ ನದಿ ತೀರದಲ್ಲಿ ವಾಸಿಸುವ ಸಾರ್ವಜನಿಕರು ಸಹ ತಗ್ಗು ಪ್ರದೇಶ/ನದಿ ತೀರಕ್ಕೆ ತೆರಳದಂತೆ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಮುಂದಿನ ನಾಲ್ಕು ದಿನ ಭಾರೀ ಮಳೆ ಸಂಭವ: ಸಾರ್ವಜನಿಕರು ತಗ್ಗು ಪ್ರದೇಶ/ನದಿ ತೀರಕ್ಕೆ ತೆರಳದಂತೆ ಸೂಚನೆ Read More »

ಕರಾವಳಿ

ಸಿಬಿಎಸ್ಸಿ ಪರೀಕ್ಷೆ: ಕಡಬದ ಹಾಜಿರಾ ನಸೀರ್ 100% ದಲ್ಲಿ ಉತ್ತೀರ್ಣ

(ನ್ಯೂಸ್ ಕಡಬ) newskadaba.com ಕಡಬ, ಜೂ.12. ಮಂಗಳೂರಿನ ಪ್ರತಿಷ್ಠಿತ ಸಿಬಿಎಸ್ಸಿ ವಿದ್ಯಾಸಂಸ್ಥೆಯಾದ ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕಡಬದ ವಿದ್ಯಾರ್ಥಿನಿಯೋರ್ವಳು 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಅಂಕ ಗಳಿಸುವುದರ ಮೂಲಕ ಕಡಬಕ್ಕೆ ಕೀರ್ತಿಯನ್ನು ತಂದಿದ್ದಾಳೆ. ಈಕೆಯು ಕಡಬದ ಕಳಾರ ನಿವಾಸಿ ಪ್ರಸ್ತುತ ವಿದೇಶದಲ್ಲಿ ಉದ್ಯಮವನ್ನು ಹೊಂದಿರುವ ಅಬ್ದುಲ್ ನಸೀರ ಹಾಗೂ ಜಮೀಳಾ ದಂಪತಿಯ ಪುತ್ರಿ.

ಸಿಬಿಎಸ್ಸಿ ಪರೀಕ್ಷೆ: ಕಡಬದ ಹಾಜಿರಾ ನಸೀರ್ 100% ದಲ್ಲಿ ಉತ್ತೀರ್ಣ Read More »

ಕರಾವಳಿ
Scroll to Top