News Kadaba Desk

ಕಲ್ಲಡ್ಕ ಭಟ್ ಅಧೀನದ ಶಾಲಾ ಅನುದಾನ ರದ್ದು ► ರಾಜ್ಯ ಸರಕಾರದ ವಿರುದ್ಧ ತಟ್ಟೆ ಹಿಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ.11. ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀದೇವಿ ಶಾಲೆಗಳಿಗೆ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ದತ್ತು ಯೋಜನೆಯಡಿ ನೀಡಲಾಗುತ್ತಿದ್ದ ಅನುದಾನವನ್ನು ರದ್ದುಗೊಳಿಸಿರುವ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ಶುಕ್ರವಾರದಂದು ವಿದ್ಯಾರ್ಥಿಗಳು ಮತ್ತು ಪೋಷಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಮುಂಭಾಗದಲ್ಲಿ ಬಟ್ಟಲು ಹಿಡಿದು ಪ್ರತಿಭಟನೆಗೆ ಕುಳಿತ ವಿದ್ಯಾರ್ಥಿಗಳಿಗೆ ಪೋಷಕರು, ಸಂಘಟನೆಯ ಮುಖಂಡರು ಸಾಥ್ ನೀಡಿದರು. ವಿವಿಧ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾತನಾಡಿ ಸಿದ್ದರಾಮಯ್ಯ ಸರಕಾರದ […]

ಕಲ್ಲಡ್ಕ ಭಟ್ ಅಧೀನದ ಶಾಲಾ ಅನುದಾನ ರದ್ದು ► ರಾಜ್ಯ ಸರಕಾರದ ವಿರುದ್ಧ ತಟ್ಟೆ ಹಿಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ Read More »

ಕರಾವಳಿ

ಪ್ರಧಾನಿ ಮೋದಿಯಿಂದ ಬಿಜೆಪಿ ಸಂಸದರಿಗೆ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ.11. ಸಂಸತ್ತಿನ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ ಇದ್ದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಪ್ರಧಾನಿ ಮೋದಿ ಬಿಜೆಪಿ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಮೋದಿ, ನಮಗೆ ಪಕ್ಷ ಮುಖ್ಯವಾಗಿದ್ದು, ನೀವು ನಿಮ್ಮ ಇಷ್ಟದಂತೆ ನಡೆದುಕೊಂಡರೆ 2019ಕ್ಕೆ ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದು ಪ್ರಧಾನಿ ಸೂಚಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಿಂದುಳಿದ ವರ್ಗಗಳ ತಿದ್ದುಪಡಿ ಮಸೂದೆ ಅಂಗೀಕಾರ ವೇಳೆ ರಾಜ್ಯಸಭೆಯಲ್ಲಿ 88

ಪ್ರಧಾನಿ ಮೋದಿಯಿಂದ ಬಿಜೆಪಿ ಸಂಸದರಿಗೆ ಎಚ್ಚರಿಕೆ Read More »

ರಾಷ್ಟ್ರೀಯ ನ್ಯೂಸ್

ಬೋಳಿಯಾರು: ಬಿಜೆಪಿ ಸಭೆಯಲ್ಲಿ ಮುಸ್ಲಿಂ ಧರ್ಮಗುರುಗಳು ಭಾಗಿ ► ಭಾಷಣ ಮಾಡಿದ ಧರ್ಮಗುರುಗಳಿಗೆ ಜೀವ ಬೆದರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.11. ಸ್ವಾಮೀಜಿಗಳು, ಯೋಗಿಗಳು ಮುಖ್ಯಮಂತ್ರಿಯಾಗುತ್ತಾರೆ. ಆದರೆ ಮುಸ್ಲಿಮರಲ್ಲಿರುವ ಉಸ್ತಾದರುಗಳು, ಧಾರ್ಮಿಕ ಮುಂದಾಳುಗಳು ಕನಿಷ್ಠ ಗ್ರಾಮ ಪಂಚಾಯತ್ ಹಂತಕ್ಕೆ ಕೂಡಾ ತಲುಪುತ್ತಿಲ್ಲ. ಇದು ನಿಜಕ್ಕೂ ವಿಷಾದನೀಯವಾಗಿದ್ದು, ಇದಕ್ಕಾಗಿ ನಿಮಗೆ ಭಾರತೀಯ ಜನತಾ ಪಾರ್ಟಿಯು ವೇದಿಕೆ ಕಲ್ಪಿಸಿ ಕೊಡುತ್ತದೆ ಎಂದು ಫಝಲ್ ಅಸೈಗೋಳಿ ಹೇಳಿದರು. ಅವರು ಗುರುವಾರದಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾ ವತಿಯಿಂದ ಬೋಳಿಯಾರಿನಲ್ಲಿ ನಡೆದ ಮುಸ್ಲಿಮ್ ಧಾರ್ಮಿಕ ಗುರುಗಳ ಸಭೆಯಲ್ಲಿ ಮಾತನಾಡುತ್ತಿದ್ದರು. ಮುಸ್ಲಿಮರಿಗೆ ಬಿಜೆಪಿ ಎಂದರೆ ಆಗುವುದಿಲ್ಲ. ಕಾಂಗ್ರೆಸ್ ಅಂಥಹಾ ಒಂದು ಮನೋಭಾವವನ್ನು

ಬೋಳಿಯಾರು: ಬಿಜೆಪಿ ಸಭೆಯಲ್ಲಿ ಮುಸ್ಲಿಂ ಧರ್ಮಗುರುಗಳು ಭಾಗಿ ► ಭಾಷಣ ಮಾಡಿದ ಧರ್ಮಗುರುಗಳಿಗೆ ಜೀವ ಬೆದರಿಕೆ Read More »

ಕರಾವಳಿ

ಸರಕಾರಿ ವಸತಿ ನಿಲಯದಲ್ಲಿ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ವಿಜಯಪುರ, ಆ.11. ನಗರದ ಭೂತನಾಳ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕರ ಸರ್ಕಾರಿ ವಸತಿ ನಿಲಯದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿಯನ್ನು ಯಾದಗಿರ ಜಿಲ್ಲೆಯ ಸುರಪುರ ತಾಲೂಕಿನ ಚಂದಾಪುರ ಎಲ್ ಟಿ ನಿವಾಸಿ ಶಂಕರ್ ತಿಪ್ಪಣ್ಣ ರಾಠೋಡ್(19) ಎಂದು ಗುರುತಿಸಲಾಗಿದೆ. ಈತ ಸುರಪುರದಲ್ಲಿ ಡಿಎಡ್ ಓದುತ್ತಿದ್ದು, ಎರಡು ದಿನಗಳ ಹಿಂದೆ ಆತನ ಸ್ನೇಹಿತನನ್ನು ಭೇಟಿಯಾಗಲು ಬಂದು ನಿನ್ನೆ ರಾತ್ರಿ ಹಾಸ್ಟೇಲ್ ನಲ್ಲೇ ಸ್ನೇಹಿತರೊಂದಿಗೆ ಉಳಿದುಕೊಂಡಿದ್ದ ಎನ್ನಲಾಗಿದೆ. ಶಂಕರ್

ಸರಕಾರಿ ವಸತಿ ನಿಲಯದಲ್ಲಿ ವಿದ್ಯಾರ್ಥಿ ಮೃತ್ಯು Read More »

ಕರ್ನಾಟಕ

ಆಸ್ತಿ ಮಗನಿಗೆ ಬರೆದುಕೊಟ್ಟು ಬೀದಿಗೆ ಬಂದ ದೇಶದ ಶ್ರೀಮಂತ ವ್ಯಕ್ತಿ ► ಮನೆ ಬಾಡಿಗೆ ಕಟ್ಟಲು ಹೆಣಗಾಡುತ್ತಿರುವ ರೇಮಂಡ್ ಕಂಪನಿ ಮಾಲೀಕ

(ನ್ಯೂಸ್ ಕಡಬ) newskadaba.com ಮುಂಬೈ, ಆ.11. ಸಾವಿರಾರು ಕೋಟಿ ರುಪಾಯಿಗಳ ಒಡೆಯ, ದೇಶದ ಸಿರಿವಂತರಲ್ಲಿ ಒಬ್ಬರಾಗಿದ್ದ ರೇಮಂಡ್ ವಸ್ತ್ರ ಕಂಪನಿಯ ಮಾಲೀಕ ದೇಶದ ಅತಿ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾದ ವಿಜಯಪತ್ ಸಿಂಗಾನಿಯಾ ಅವರು ಇದೀಗ ‘ದಿವಾಳಿ’ಯಾಗಿ ಬೀದಿಗೆ ಬಂದಿದ್ದು, ಹಣಕಾಸು ನೆರವಿಗಾಗಿ ಮಗನ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದಾರೆ. ರೇಮಂಡ್ಸ್ ಲಿಮಿಟೆಡ್ ಎಂಬ ವಸ್ತ್ರೋದ್ಯಮ ಸ್ಥಾಪಿಸಿ ಪುರುಷರ ಮನೆ ಮಾತಾಗಿದ್ದ ರೇಮಂಡ್ ಕಂಪೆನಿಯ ಮಾಲೀಕ ಇಂದು ಮಗನ ನಿರ್ಲಕ್ಷದಿಂದ ಬಾಡಿಗೆ ಮನೆಯಲ್ಲಿ ವಾಸ ಮಾಡುವಂತಾಗಿದೆ ಎಂದು ಮುಂಬೈ ಮಿರರ್

ಆಸ್ತಿ ಮಗನಿಗೆ ಬರೆದುಕೊಟ್ಟು ಬೀದಿಗೆ ಬಂದ ದೇಶದ ಶ್ರೀಮಂತ ವ್ಯಕ್ತಿ ► ಮನೆ ಬಾಡಿಗೆ ಕಟ್ಟಲು ಹೆಣಗಾಡುತ್ತಿರುವ ರೇಮಂಡ್ ಕಂಪನಿ ಮಾಲೀಕ Read More »

ರಾಷ್ಟ್ರೀಯ ನ್ಯೂಸ್

ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುತ್ತಿದ್ದವರ ಕಾರು ಅಪಘಾತ ► ಐವರು ಸ್ಥಳದಲ್ಲೇ ಮೃತ್ಯು, ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಕಾರವಾರ, ಆ.10. ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಸ್ವಿಫ್ಟ್ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಕಾರವಾರದ ಅಂಕೋಲಾ ತಾಲೂಕಿನ ಹೊನ್ನಳ್ಳಿ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಕುಕ್ಕೇ ಸುಬ್ರಹ್ಮಣ್ಯ ದೇವರ ದರ್ಶನಕ್ಕೆಂದು ಬಿಜಾಪುರ ಜಿಲ್ಲೆಯ ಜಮನಾಳ ನಿವಾಸಿಗಳು 9 ಮಂದಿ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಲಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಪುರುಷರು, ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟರೆನ್ನಲಾಗಿದೆ.

ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುತ್ತಿದ್ದವರ ಕಾರು ಅಪಘಾತ ► ಐವರು ಸ್ಥಳದಲ್ಲೇ ಮೃತ್ಯು, ನಾಲ್ವರು ಗಂಭೀರ Read More »

ಕರ್ನಾಟಕ

ಕತರ್ ಗೆ ಹೋಗಲು ಇನ್ಮುಂದೆ ವೀಸಾ ಬೇಡ ► ಉಚಿತ ಪ್ರವೇಶ ನೀಡಿದ ಕತರ್ ಸರಕಾರ

(ನ್ಯೂಸ್ ಕಡಬ) newskadaba.com ದೋಹಾ ಕತರ್, ಆ.09. ಪ್ರವಾಸೋದ್ಯಮ ಮತ್ತು ವಾಯುಯಾನಕ್ಕೆ ಒತ್ತು ನೀಡಿ ಪ್ರವಾಸಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಕತರ್ ದೇಶವು ಭಾರತ ಸೇರಿದಂತೆ 80 ದೇಶಗಳಿಗೆ ವೀಸಾ ಇಲ್ಲದೆ ಪ್ರವೇಶಿಸಲು ಅನುಮತಿ ಘೋಷಿಸಿದೆ. ಯೂರೋಪ್ ನ ದೇಶಗಳು, ಭಾರತ, ಲೆಬನಾನ್, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕಾ, ಅಮೆರಿಕ, ಬ್ರಿಟನ್, ಕೆನಡ ಸೇರಿದಂತೆ 80 ದೇಶಗಳ ಪ್ರಜೆಗಳು ಇನ್ಮುಂದೆ ಕತರ್ ದೇಶಕ್ಕೆ ತೆರಳಲು ಪಾಸ್‌ಪೋರ್ಟ್ ಕೈಯಲ್ಲಿ ಇದ್ದರೆ ಸಾಕಾಗುತ್ತದೆ. ನೇರವಾಗಿ ಟಿಕೆಟ್ ತೆಗೆದುಕೊಂಡು ಪ್ರಯಾಣಿಸಬಹುದಾಗಿದೆ‌. ಎರಡು ತಿಂಗಳ ಹಿಂದೆ

ಕತರ್ ಗೆ ಹೋಗಲು ಇನ್ಮುಂದೆ ವೀಸಾ ಬೇಡ ► ಉಚಿತ ಪ್ರವೇಶ ನೀಡಿದ ಕತರ್ ಸರಕಾರ Read More »

ಅಂತರ್ರಾಷ್ಟ್ರೀಯ ನ್ಯೂಸ್

ಪೋಷಕರ ವಿರೋಧದ ಮಧ್ಯೆಯೂ ಪ್ರೀತಿಸಿ ಮದುವೆ ► ಎರಡೇ ವಾರದಲ್ಲಿ ಗಂಡನನ್ನು ಬಿಟ್ಟುಹೋದ ಹೆಂಡತಿ

(ನ್ಯೂಸ್ ಕಡಬ) newskadaba.com ಹಾಸನ, ಆ.09. ಕೇವಲ ಮೂರು ತಿಂಗಳ ಹಿಂದೆ ಆದ ಪರಿಚಯ ಪ್ರೇಮಕ್ಕೆ ತಿರುಗಿ ಹುಡುಗಿ ಮನೆಯವರ ತೀವ್ರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹವಾಗಿ ಕೇವಲ 12 ದಿನದಲ್ಲಿ ಗಂಡನನ್ನು ತೊರೆದು ಹೆಂಡತಿ ಮನೆಯವರೊಂದಿಗೆ ತೆರಳಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆದಿದೆ. ಹಾಸನ ರಸ್ತೆಯ ನಿವಾಸಿ ಶೇಖರಪ್ಪ ಎಂಬುವರ ಪುತ್ರ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಗುರು ಹಾಗೂ ಪಟ್ಟಣದ ಮಾರುತಿ ನಗರದ ಚಂದ್ರೇಗೌಡ ಎಂಬುವರ ಪುತ್ರಿ ಅಂತಿಮ ಬಿ.ಎ. ಓದುತ್ತಿದ್ದ ಶೋಭಾ ಪರಸ್ಪರ ಪ್ರೀತಿಸಿ ಹುಡುಗಿ ಮನೆಯವರ

ಪೋಷಕರ ವಿರೋಧದ ಮಧ್ಯೆಯೂ ಪ್ರೀತಿಸಿ ಮದುವೆ ► ಎರಡೇ ವಾರದಲ್ಲಿ ಗಂಡನನ್ನು ಬಿಟ್ಟುಹೋದ ಹೆಂಡತಿ Read More »

ಕರ್ನಾಟಕ

ಕಳಾರ: ಬೈಕ್ – ಆ್ಯಕ್ಟಿವಾ ಢಿಕ್ಕಿ ► ಸವಾರರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಆ.09. ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಳಾರ ಎಂಬಲ್ಲಿ ಬೈಕ್ ಹಾಗೂ ಹೋಂಡಾ ಆ್ಯಕ್ಟಿವಾ ಮಧ್ಯೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ಬುಧವಾರ ಅಪರಾಹ್ನ ನಡೆದಿದೆ. ಘಟನೆಯಲ್ಲಿ ಹೋಂಡಾ ಆ್ಯಕ್ಟಿವಾ ಸವಾರ ಕಡಬ ಕುಟ್ರುಪ್ಪಾಡಿ ನಿವಾಸಿ ಪದ್ಮಯ್ಯ ಗೌಡ(48) ಹಾಗೂ ಬೈಕ್ ಸವಾರ ಕಾಣಿಯೂರು ಸಮೀಪದ ಬರೆಪ್ಪಾಡಿ ಕಾೖಮಣ ನಿವಾಸಿ ಪದ್ಮಯ್ಯ(55) ರವರು ಗಾಯಗೊಂಡಿದ್ದು, ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಳಾರ: ಬೈಕ್ – ಆ್ಯಕ್ಟಿವಾ ಢಿಕ್ಕಿ ► ಸವಾರರಿಗೆ ಗಾಯ Read More »

ಕರಾವಳಿ

ಕಾವ್ಯಾ ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹ ► ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.09. ಮೂಡಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ 30ಕ್ಕೂ ಅಧಿಕ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ‘ಜಸ್ಟೀಸ್ ಫಾರ್ ಕಾವ್ಯಾ’ ಹೋರಾಟ ಸಮಿತಿ ದ.ಕ. ಜಿಲ್ಲೆಯ ವತಿಯಿಂದ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರದಂದು ಬೃಹತ್ ಪ್ರತಿಭಟನೆ ನಡೆಯಿತು. ಜ್ಯೋತಿ ವೃತ್ತದಿಂದ ಡಿಸಿ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಹಲವು ಕಾಲೇಜುಗಳ ವಿದ್ಯಾರ್ಥಿಗಳು, ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಕಾವ್ಯಾ ಸಾವಿನ ಪ್ರಕರಣದ

ಕಾವ್ಯಾ ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹ ► ಜಿಲ್ಲಾಧಿಕಾರಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ Read More »

ಕರಾವಳಿ
Scroll to Top