News Kadaba Desk

ಮಂಗಳೂರು: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣ ► ಸಿಓಡಿ ತನಿಖೆಗಾಗ್ರಹಿಸಿ ಅರೆಬೆತ್ತಲೆ ಮೆರವಣಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.23. ಇತ್ತೀಚೆಗೆ ನಡೆದ ಮೂಡುಬಿದಿರೆ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾಳ ಆತ್ಯಹತ್ಯೆ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಜಸ್ಟಿಸ್ ಫಾರ್ ಕಾವ್ಯಾ ಹೋರಾಟ ಸಮಿತಿಯ ವತಿಯಿಂದ ಶನಿವಾರ ಅರೆಬೆತ್ತಲೆ ಮೆರವಣಿಗೆಯ ನಡೆಯಿತು. ನಗರದ ಹಂಪನಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಎ.ಬಿ.ಶೆಟ್ಟಿ ವೃತ್ತದ ಬಳಿ ಅರೆಬೆತ್ತಲೆ ಮೆರವಣಿಗೆಗೆ ಯತ್ನಿಸಿದ ಕೆಲವರ ಸಹಿತ ಕಾವ್ಯಾಳ ಪೋಷಕರಾದ ಲೋಕೇಶ್ ಪೂಜಾರಿ, ಬೇಬಿ ಪೂಜಾರಿ, ಸಹೋದರಿ ರಮ್ಯಾ, ಕರವೇ ಜಿಲ್ಲಾಧ್ಯಕ್ಷ ಅನಿಲ್‌ರಾಜ್ ಸೇರಿದಂತೆ […]

ಮಂಗಳೂರು: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣ ► ಸಿಓಡಿ ತನಿಖೆಗಾಗ್ರಹಿಸಿ ಅರೆಬೆತ್ತಲೆ ಮೆರವಣಿಗೆ Read More »

ಕರಾವಳಿ

ರೈಸಿಂಗ್ ಸ್ಟಾರ್ ವಿಜ್ಞಾನ ಮೇಳ ► ವಿಜ್ಞಾನ ಮಾದರಿಯಲ್ಲಿ ರೆಂಜಿಲಾಡಿಯ ಪ್ರಜ್ವಲ್ ಕೇಪುಂಜ ಪ್ರಥಮ

(ನ್ಯೂಸ್ ಕಡಬ) newskadaba.com ಕಡಬ, ಸೆ.23. ಬೆಂಗಳೂರಿನ ಸಿಸ್ಕೋ ಸಂಭ್ರಮ ತಂಡದ ಪ್ರಾಯೋಜಕತ್ವದಲ್ಲಿ ಆಗಸ್ತ್ಯ ಫೌಂಡೇಶನ್ನ ಸಹಕಾರದೊಂದಿಗೆ ಇತ್ತೀಚೆಗೆ ಶ್ರೀರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ನಡೆದ ರೈಸಿಂಗ್ ಸ್ಟಾರ್ ವಿಜ್ಞಾನ ಮೇಳದಲ್ಲಿ ಸೋಲಾರ್ ಗ್ರಾಸ್ ಕಟ್ಟರ್, ವೀಡ್ ಕಿಲ್ಲರ್ ವಿಜ್ಞಾನ ಮಾದರಿಯಲ್ಲಿ ರಾಮಕುಂಜೇಶ್ವರ ಪದವಿ ಪುರ್ವ ಕಾಲೇಜಿನ ಪ್ರಥಮ ಪಿಸಿಎಂಸಿ ವಿಭಾಗದ ಪ್ರಜ್ವಲ್ ಕೇಪುಂಜರವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇವರು ರೆಂಜಿಲಾಡಿ ಗ್ರಾಮದ ಕೇಪುಂಜ ಪದ್ಮನಾಭ ಮತ್ತು ನೂಜಿಬಾಳ್ತಿಲ ಗ್ರಾ.ಪಂ.ಸದಸ್ಯೆ ರಜಿತಾ ಪದ್ಮನಾಭರವರ ಪುತ್ರ. ಇವರಿಗೆ ಕಾಲೇಜಿನ ವಿದ್ಯಾರ್ಥಿ ನಿರಂಜನ್ ಎನ್.

ರೈಸಿಂಗ್ ಸ್ಟಾರ್ ವಿಜ್ಞಾನ ಮೇಳ ► ವಿಜ್ಞಾನ ಮಾದರಿಯಲ್ಲಿ ರೆಂಜಿಲಾಡಿಯ ಪ್ರಜ್ವಲ್ ಕೇಪುಂಜ ಪ್ರಥಮ Read More »

ಕರಾವಳಿ

ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಾಳೆ ಕುಕ್ಕೇ ಸುಬ್ರಹ್ಮಣ್ಯಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.23. ಇಂಧನ ಖಾತೆ ಹಾಗೂ ರಾಮನಗರ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನಾಳೆ ರಾತ್ರಿ ಮಂಗಳೂರಿಗೆ ಆಗಮಿಸಲಿದ್ದು, ಸೆಪ್ಟೆಂಬರ್ 24ರಂದು ಕುಕ್ಕೇ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿದ್ದಾರೆ. ನಾಳೆ ರಾತ್ರಿ 8.15 ಕ್ಕೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದು, ಸೆಪ್ಟಂಬರ್ 24 ರಂದು ಬೆಳಿಗ್ಗೆ ಮಂಗಳೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ತೆರಳಲಿದ್ದಾರೆ. ಸಂಜೆ 4.30 ಕ್ಕೆ ಮಂಗಳೂರಿಗೆ ಹಿಂತಿರುಗಿ ಮಂಗಳೂರು, ಕಾರ್ಪೋರೇಟ್ ಕಛೇರಿಯಲ್ಲಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಾಳೆ ಕುಕ್ಕೇ ಸುಬ್ರಹ್ಮಣ್ಯಕ್ಕೆ Read More »

ಕರ್ನಾಟಕ

ಕೊನೆಗೂ ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ► ಕಲ್ಲುಗುಡ್ಡೆ: ಅಕ್ರಮ ಕಟ್ಟಡದಲ್ಲಿನ ಮದ್ಯದಂಗಡಿ ಮುಚ್ಚಲು ಆದೇಶ

(ನ್ಯೂಸ್ ಕಡಬ) newskadaba.com ಕಡಬ, ಸೆ.22. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಸರಕಾರಿ ಸ್ಥಳದ ಅನಧಿಕೃತ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದ ಮದ್ಯದಂಗಡಿಗೆ ಇದೀಗ ಮೂರನೇ ಬಾರಿಗೆ ಅಬಕಾರಿ ಇಲಾಖಾ ಅಧಿಕಾರಿಗಳು ಬೀಗ ಜಡಿದಿದ್ದಾರೆ. ತೀವ್ರ ಆಕ್ಷೇಪಗಳ ನಡುವೆ ಇತ್ತೀಚೆಗೆ ಆರಂಭವಾಗಿದ್ದ ಮದ್ಯದಂಗಡಿಯನ್ನು ಹಲವು ಜಂಜಾಟಗಳ ನಡುವೆ ಜಿಲ್ಲಾಧಿಕಾರಿಗಳ ಆದೇಶದಂತೆ ಅಬಕಾರಿ ಅಧಿಕಾರಿಗಳು ಶುಕ್ರವಾರ ಬೀಗ ಜಡಿದಿದ್ದಾರೆ. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿ ಸೆ.11 ರಂದು ಮದ್ಯದಂಗಡಿ ಆರಂಭವಾಗಿರುವುದನ್ನು ವಿರೋಧಿಸಿ ಕಳೆದ ಭಾನುವಾರದಿಂದ ಈ ಭಾಗದ ಬಾರ್ ವಿರೋಧಿ ಹೋರಾಟ ಸಮಿತಿಯವರು

ಕೊನೆಗೂ ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ► ಕಲ್ಲುಗುಡ್ಡೆ: ಅಕ್ರಮ ಕಟ್ಟಡದಲ್ಲಿನ ಮದ್ಯದಂಗಡಿ ಮುಚ್ಚಲು ಆದೇಶ Read More »

ಕರಾವಳಿ

ನಿಮ್ಮಲ್ಲಿ 2 ರೂ. ನಾಣ್ಯಗಳು ಇವೆಯೇ.‌.‌.? ► ನೀವೂ ಲಕ್ಷಾಧಿಪತಿಗಳಾಗಬಹುದು

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.22. ನಿಮ್ಮ ಬಳಿ ಹಳೆಯ, ವಿಭಿನ್ನ ರೀತಿಯ ಎರಡು ರೂಪಾಯಿಯ ನಾಣ್ಯವಿದೆಯೇ…? ಹಾಗಿದ್ರೆ ಈ ಎರಡು ರೂಪಾಯಿಯ ಹಳೆ ನಾಣ್ಯವು ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡಬಹುದು. ಎರಡು ರೂಪಾಯಿಯ ಈ ವಿಶಿಷ್ಟ ನಾಣ್ಯಗಳು ಈಗ ಬಹಳ ಜನಪ್ರಿಯವಾಗಿದ್ದು ಬಹಳ ಬೇಡಿಕೆ ಬಂದಿದೆ. ಇತ್ತೀಚಿಗೆ 2 ರೂಪಾಯಿ ಹಳೆಯ ನಾಣ್ಯವನ್ನು 3 ಲಕ್ಷ ರೂಪಾಯಿಗೆ ಹೈದರಾಬಾದ್ ನ ಆರ್ಟ್ ಗ್ಯಾಲರಿಯ ಹೊರಗೆ ಹರಾಜು ಮಾಡಲಾಗಿತ್ತು. 1990ರ ಹಿಂದಿನ ಎರಡು ರುಪಾಯಿಯ ನಾಣ್ಯಗಳು ಮುಂಬೈನಲ್ಲಿ ಜನಪ್ರಿಯವಾಗಿವೆ.

ನಿಮ್ಮಲ್ಲಿ 2 ರೂ. ನಾಣ್ಯಗಳು ಇವೆಯೇ.‌.‌.? ► ನೀವೂ ಲಕ್ಷಾಧಿಪತಿಗಳಾಗಬಹುದು Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ತಪ್ಪಿದ ಭಾರೀ ವಿಮಾನ ದುರಂತ ► ಕತಾರ್ ತೆರಳಬೇಕಿದ್ದ ವಿಮಾನಕ್ಕೆ ಆಕಾಶದಲ್ಲಿ ತಾಂತ್ರಿಕ ದೋಷ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.22. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೋಹಾ ಕತಾರ್ ಗೆ ಹೊರಟ ವಿಮಾನವು ಕೆಲವೇ ನಿಮಿಷಗಳಲ್ಲಿ ಎಂಜಿನ್ ನಲ್ಲಿ ಉಂಟಾದ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ಗುರುವಾರದಂದು ನಡೆದಿದೆ. ಕತರ್ ಪ್ರಯಾಣಿಸಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಸಂಜೆ ಆರು ಗಂಟೆ ವೇಳೆಗೆ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಿಂದ ಹೊರಟಿತ್ತು. ಹೊರಟ ಕೆಲವೇ ಕ್ಷಣಗಳಲ್ಲಿ ಬೃಹತ್ ಶಬ್ದವೊಂದು ಕೇಳಿಬಂದಿದ್ದು ಎಂಜಿನ್ ನಡುವೆ ದೋಷವಿರುವುದನ್ನು ಅರಿತ ಪೈಲಟ್ ಸಮಯ ಪ್ರಜ್ಞೆ ಮೆರೆದು ವಿಮಾನವನ್ನು

ಮಂಗಳೂರು: ತಪ್ಪಿದ ಭಾರೀ ವಿಮಾನ ದುರಂತ ► ಕತಾರ್ ತೆರಳಬೇಕಿದ್ದ ವಿಮಾನಕ್ಕೆ ಆಕಾಶದಲ್ಲಿ ತಾಂತ್ರಿಕ ದೋಷ Read More »

ಕರಾವಳಿ

ಕಲ್ಲುಗುಡ್ಡೆ: ಇಂದು ಬೆಳಿಗ್ಗೆ ಪುನಃ ತೆರೆದ ಮದ್ಯದಂಗಡಿ ► ಗ್ರಾಮಸ್ಥರಿಂದ ತೀವ್ರಗೊಂಡ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.21. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಗ್ರಾಮಸ್ಥರ ತೀವ್ರ ವಿರೋಧದ ನಡುವೆ ಇತ್ತೀಚೆಗೆ ಆರಂಭಗೊಂಡ ಮದ್ಯದಂಗಡಿಯನ್ನು ತೆರವಿಗೆ ಪಟ್ಟು ಹಿಡಿದು ಭಾನುವಾರದಿಂದ ನಡೆಸುತ್ತಿದ್ದ ಪ್ರತಿಭಟನೆಗೆ ಮಣಿದು ಬುಧವಾರದಂದು ಪುತ್ತೂರು ಸಹಾಯಕ ವಿಭಾಗಿಯ ಅಧಿಕಾರಿ ಡಾ.ರಘುನಂದನ್ ಮೂರ್ತಿ ಸ್ಥಳಕ್ಕಾಗಮಿಸಿ ಬಂದ್ ಮಾಡಿಸಿದ್ದ ಮದ್ಯದಂಗಡಿಯನ್ನು ಇಂದು ಬೆಳಿಗ್ಗೆ ಪುನಃ ತೆರೆದಿದ್ದು, ಸ್ಥಳಕ್ಕೆ ಗ್ರಾಮಸ್ಥರು ಜಮಾವಣೆಗೊಳ್ಳುತ್ತಿದ್ದಾರೆ. ಬುಧವಾರ ಸಂಜೆ ಅಧಿಕಾರಿಗಳು ಮುಚ್ಚಿ ಹೋಗಿದ್ದ ಮದ್ಯದಂಗಡಿಯನ್ನು ಗುರುವಾರ ಬೆಳಿಗ್ಗೆ ತೆರೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಹಾಗಾದರೆ ಪುತ್ತೂರು

ಕಲ್ಲುಗುಡ್ಡೆ: ಇಂದು ಬೆಳಿಗ್ಗೆ ಪುನಃ ತೆರೆದ ಮದ್ಯದಂಗಡಿ ► ಗ್ರಾಮಸ್ಥರಿಂದ ತೀವ್ರಗೊಂಡ ಪ್ರತಿಭಟನೆ Read More »

ಕರಾವಳಿ

ಕೊನೆಗೂ ಬಿತ್ತು ಕಲ್ಲುಗುಡ್ಡೆ ಮದ್ಯದಂಗಡಿಗೆ ಬೀಗ ► ನಾಲ್ಕು ದಿನಗಳ ಅನಿರ್ದಿಷ್ಟಾವಧಿ ಮುಷ್ಕರ ತಾತ್ಕಾಲಿಕ ಅಂತ್ಯ

(ನ್ಯೂಸ್ ಕಡಬ) newskadaba.com ಕಡಬ, ಸೆ.20. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಇತ್ತೀಚೆಗೆ ಆರಂಭಗೊಂಡ ಮದ್ಯದಂಗಡಿ ತೆರವಿಗೆ ಪಟ್ಟು ಹಿಡಿದು ಭಾನುವಾರದಿಂದ ಆರಂಭಗೊಂಡಿದ್ದ ಪ್ರತಿಭಟನೆಯು ನಾಲ್ಕನೇ ದಿನವಾದ ಬುಧವಾರ ಮುಂದುವರಿದು ಸಾಯಂಕಾಲ ಪುತ್ತೂರು ಸಹಾಯಕ ವಿಭಾಗಿಯ ಅಧಿಕಾರಿ ಡಾ.ರಘುನಂದನ್ ಮೂರ್ತಿ ಸ್ಥಳಕ್ಕಾಗಮಿಸಿ ಮದ್ಯದಂಗಡಿಯ ಸ್ಥಳ ಮಹಜರು ನಡೆಸಿ ಮುಂದಿನ ಆದೇಶದವರೆಗೆ ಬಂದ್ ಮಾಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎ.ಸಿ ಪ್ರಸ್ತುತವಿರುವ ಮದ್ಯದಂಗಡಿಯ ಕಟ್ಟಡದ ವಿಚಾರದಲ್ಲಿ ಗೊಂದಲವಿದ್ದು ಕಂದಾಯ ಇಲಾಖೆಯ ಸರ್ವೆ ಅಧಿಕಾರಿಗಳು

ಕೊನೆಗೂ ಬಿತ್ತು ಕಲ್ಲುಗುಡ್ಡೆ ಮದ್ಯದಂಗಡಿಗೆ ಬೀಗ ► ನಾಲ್ಕು ದಿನಗಳ ಅನಿರ್ದಿಷ್ಟಾವಧಿ ಮುಷ್ಕರ ತಾತ್ಕಾಲಿಕ ಅಂತ್ಯ Read More »

ಕರಾವಳಿ

ಕಟ್ಟಡ ನಿರ್ಮಾಣ ಪರವಾನಿಗೆಗೆ ಬಿಳಿನೆಲೆ ಗ್ರಾ.ಪಂ.ನಿಂದ ವಿಳಂಬ ನೀತಿ ► ಸೆ. 25 ರಿಂದ ಗ್ರಾ.ಪಂ. ಎದುರು ಗಂಡ-ಹೆಂಡತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ

(ನ್ಯೂಸ್ ಕಡಬ) newskadaba.com ಕಡಬ, ಸೆ.20. ಅವಶ್ಯ ಎಲ್ಲಾ ದಾಖಲೆಗಳನ್ನು ನೀಡಿದರೂ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡದೆ ಸತಾಯಿಸುತ್ತಿರುವ ಬಿಳಿನೆಲೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅನಗತ್ಯ ಕಿರುಕುಳ ನೀಡುತ್ತಿದೆ. ಸೆ 24 ರ ಒಳಗೆ ಪರವಾನಿಗೆ ನೀಡದಿದ್ದರೆ ಪಂಚಾಯಿತಿ ಎದುರು ಸೆ 25 ರಿಂದ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಉದ್ಯಮಿ ಕೆ.ಟಿ.ತೋಮ್ಸ್‌ನ್ ಎಚ್ಚರಿಕೆ ನೀಡಿದ್ದಾರೆ. ಅವರು ಕಡಬ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿಳಿನೆಲೆ ಗ್ರಾಮ ಪಂಚಾಯಿತಿ ಕಟ್ಟಡ ಪರವಾನಿಗೆ ನೀಡುವಲ್ಲಿ ಯಾರದೋ ಪಿತೂರಿಗೆ

ಕಟ್ಟಡ ನಿರ್ಮಾಣ ಪರವಾನಿಗೆಗೆ ಬಿಳಿನೆಲೆ ಗ್ರಾ.ಪಂ.ನಿಂದ ವಿಳಂಬ ನೀತಿ ► ಸೆ. 25 ರಿಂದ ಗ್ರಾ.ಪಂ. ಎದುರು ಗಂಡ-ಹೆಂಡತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ Read More »

ಕರಾವಳಿ

ನಾಲ್ಕನೇ ದಿನಕ್ಕೆ ಮುಂದುವರಿದ ಮದ್ಯದಂಗಡಿ ವಿರೋಧಿ ಹೋರಾಟ

(ನ್ಯೂಸ್ ಕಡಬ) newskadaba.com ಕಡಬ, ಸೆ.20. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಸರಕಾರಿ ಜಮೀನಿನಲ್ಲಿರುವ ಕಟ್ಟಡದಲ್ಲಿ ಗ್ರಾಮಸ್ಥರ ಪ್ರಬಲ ವಿರೋಧದ ನಡುವೆಯೂ ಸೆಪ್ಟೆಂಬರ್ 11 ರಂದು ಪ್ರಾರಂಭಗೊಂಡ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಭಾನುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಗೊಂಡಿದ್ದು, ಬುಧವಾರದಂದು ತೀವ್ರ ರೂಪದಲ್ಲಿ ಮುಂದುವರಿದಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಲಿತ ಸಂಘಟನೆ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರವರು ಜಮಾಯಿಸಿ ಮದ್ಯದಂಗಡಿಯ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಇಂದು

ನಾಲ್ಕನೇ ದಿನಕ್ಕೆ ಮುಂದುವರಿದ ಮದ್ಯದಂಗಡಿ ವಿರೋಧಿ ಹೋರಾಟ Read More »

ಕರಾವಳಿ
Scroll to Top