News Kadaba Desk

ಯಡಿಯೂರಪ್ಪರಿದ್ದ ಕಾರು ನಿಲ್ಲಿಸದೇ ಇದ್ದುದಕ್ಕೆ ಆಕ್ರೋಶ ► ಬಿಜೆಪಿಯ ಪರಿವರ್ತನಾ ಯಾತ್ರೆಯ ವಾಹನಕ್ಕೆ ಕಲ್ಲು ತೂರಾಟ

(ನ್ಯೂಸ್ ಕಡಬ) newskadaba.com ತುಮಕೂರು, ನ,03. ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಬಾಣಸಂದ್ರದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ವಾಹನದ ಮೇಲೆ ಮೇಲೆ ಶುಕ್ರವಾರದಂದು ಕಲ್ಲು ತೂರಲಾಗಿದೆ. ಬಿಜೆಪಿ ಅತೃಪ್ತರು ಹಾಗೂ ಜೆಡಿಎಸ್ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಕಲ್ಲೇಟಿನಿಂದ ಪರಿವರ್ತನಾ ಯಾತ್ರೆ ವಾಹನದ ಗಾಜು ಪುಡಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿದ್ದ ಕಾರು ಬಾಣಸಂದ್ರ ಬಳಿ ನಿಲ್ಲಿಸದೇ ಇರುವುದರಿಂದ ಆಕ್ರೋಶಗೊಂಡ ಪಕ್ಷದ ಕಾರ್ಯಕರ್ತರು ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಉಚ್ಛಾಟಿತ ಮುಖಂಡ ಚೌಧರಿ ನಾಗೇಶ್ […]

ಯಡಿಯೂರಪ್ಪರಿದ್ದ ಕಾರು ನಿಲ್ಲಿಸದೇ ಇದ್ದುದಕ್ಕೆ ಆಕ್ರೋಶ ► ಬಿಜೆಪಿಯ ಪರಿವರ್ತನಾ ಯಾತ್ರೆಯ ವಾಹನಕ್ಕೆ ಕಲ್ಲು ತೂರಾಟ Read More »

ಕರ್ನಾಟಕ

ಇಂದು ಖಾಸಗಿ ಆಸ್ಪತ್ರೆಗಳ ಮುಷ್ಕರ ► ಆರೋಗ್ಯ ಸೇವೆಗಳಲ್ಲಿ ಉಂಟಾಗಲಿದೆ ವ್ಯತ್ಯಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.03. ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಖಾಸಗಿ ಆಸ್ಪತ್ರೆಯ ವೈದ್ಯರು ರಾಜ್ಯ ಸರಕಾರದ ವಿರುದ್ಧ ಮುಷ್ಕರಕ್ಕೆ ಇಳಿದಿದ್ದು, ರೋಗಿಗಳಿಗೆ ತೊಂದರೆಯಾಗಲಿದೆ. ಕಳೆದ ಜುಲೈನಲ್ಲಿ ಮುಷ್ಕರಕ್ಕೆ ಇಳಿದಿದ್ದ ವೈದ್ಯರು ಈಗ ಮತ್ತೆ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಹೊರಟ ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಭಟನೆ ನಡೆಸಲಿದ್ದಾರೆ. ಕ್ಲಿನಿಕ್‍ನಿಂದ ಹಿಡಿದು ಕಾರ್ಪೊರೇಟ್ ಆಸ್ಪತ್ರೆಗಳು ಇಂದು ಬಂದ್ ಆಗಲಿವೆ. ಒಪಿಡಿ, ಒಟಿ ಸಂಪೂರ್ಣ ಸ್ಥಗಿತವಾಗಲಿದೆ. ಕೇವಲ ಆಕ್ಸಿಡೆಂಟ್ ಹಾಗೂ ಗರ್ಭಿಣಿಯರ

ಇಂದು ಖಾಸಗಿ ಆಸ್ಪತ್ರೆಗಳ ಮುಷ್ಕರ ► ಆರೋಗ್ಯ ಸೇವೆಗಳಲ್ಲಿ ಉಂಟಾಗಲಿದೆ ವ್ಯತ್ಯಯ Read More »

ಕರ್ನಾಟಕ

ನಿಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಿಲ್ಲವೇ…? ► ಮನೆಯಲ್ಲಿಯೇ ಕುಳಿತು ಮಾಡಬಹುದು ಆಧಾರ್ ಜೋಡಣೆ

(ನ್ಯೂಸ್ ಕಡಬ) newskadaba.com ನವದೆಹಲಿ, ನ.2. ಆಧಾರ್ ನಂಬರ್‌ಗೆ ಫೋನ್ ನಂಬರ್ ಜೋಡಿಸಲು ಇನ್ನು ಮುಂದೆ ಮೊಬೈಲ್ ಅಂಗಡಿಗೆ ತೆರಳಿ ಬಯೋಮೆಟ್ರಿಕ್ ವಿವರ ನೀಡುವ ಅಗತ್ಯವಿಲ್ಲ. ಜನರು ತಮ್ಮ ಮೊಬೈಲ್‌ನಲ್ಲೇ ಒಟಿಪಿ ಮೂಲಕ ಆಧಾರ್‌ಗೆ ಮೊಬೈಲ್ ನಂಬರ್ ಜೋಡಿಸಬಹುದಾಗಿದೆ. ಟೆಲಿಕಾಂ ಇಲಾಖೆ ಡಿಸೆಂಬರ್ 01 ರಿಂದ ಈ‌ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಜನರು ತಮ್ಮ ಆಧಾರ್‌ಕಾರ್ಡ್‌ನಲ್ಲಿ ನೋಂದಣಿಯಾಗಿರುವ ಒನ್ ಟೈಮ್ ಪಾಸ್‌ವರ್ಡ್(ಒಟಿಪಿ) ಬಳಸಿ ತಮ್ಮ ಮೊಬೈಲ್ ಮೂಲಕವೇ ಈ ಕಾರ್ಯ ಮಾಡಬಹುದಾಗಿದೆ. ಇದರ ಜೊತೆಗೆ ಆ್ಯಪ್ ಬಳಸಿ

ನಿಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಿಲ್ಲವೇ…? ► ಮನೆಯಲ್ಲಿಯೇ ಕುಳಿತು ಮಾಡಬಹುದು ಆಧಾರ್ ಜೋಡಣೆ Read More »

ರಾಷ್ಟ್ರೀಯ ನ್ಯೂಸ್

ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ (ರಿ.) ► ರಾಜ್ಯ ಸಂಯೋಜಕರಾಗಿ ಎ.ಸಿ.ಕುರಿಯನ್ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ನ.02. ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್(ರಿ.) ಇದರ ರಾಜ್ಯ ಸಂಯೋಜಕರನ್ನಾಗಿ ಉದ್ಯಮಿ ಎ.ಸಿ. ಕುರಿಯನ್ ರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಸಂಘದ ನಿಬಂಧನೆಗಳ ಅನುಸಾರ ರಾಜ್ಯದಲ್ಲಿರುವ ಕ್ರೈಸ್ತ ಧರ್ಮದ ವಿವಿಧ ಧರ್ಮ ಸಭೆಗಳಲ್ಲಿರುವ ಕ್ರೈಸ್ತ ಬಾಂಧವರನ್ನು ಸಂಘಟಿಸಿ ಸಂಘದ ಸದಸ್ಯರನ್ನಾಗಿಸುವ ಮೂಲಕ ಮಲೆಯಾಳಿ ಕ್ರೈಸ್ತ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವಂತೆ ಕೋರಿ ಎ.ಸಿ.ಕುರಿಯನ್ ರವರನ್ನು ನೇಮಿಸಿ‌ ಅಧ್ಯಕ್ಷರಾದ ಎ.ಸಿ.ಜಯರಾಜ್ ರವರು ಆದೇಶಿಸಿದ್ದಾರೆ.

ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ (ರಿ.) ► ರಾಜ್ಯ ಸಂಯೋಜಕರಾಗಿ ಎ.ಸಿ.ಕುರಿಯನ್ ನೇಮಕ Read More »

ಕರಾವಳಿ

ಮರ್ಧಾಳದಲ್ಲಿ ನಡೆಯುತ್ತಿದೆ ಮದ್ಯದಂಗಡಿ ತೆರೆಯುವ ಹುನ್ನಾರ ► ಪ್ರಬಲಗೊಳ್ಳುತ್ತಿದೆ ಮದ್ಯದಂಗಡಿ ವಿರೋಧಿ ಹೋರಾಟ

(ನ್ಯೂಸ್ ಕಡಬ) newskdaba.com ಕಡಬ, ನ.01. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಂಟ್ರ ಗ್ರಾಮದ ಮರ್ಧಾಳ ಸಮೀಪ ಚಾಕಟೆಕರೆ ಎಂಬಲ್ಲಿ ಮದ್ಯದಂಗಡಿ ತೆರೆಯುವ ಹುನ್ನಾರ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ತಾಲೂಕು ಪಂಚಾಯತ್ ಸದಸ್ಯೆ ಕುಸುಮಾರವರು ಅಬಕಾರಿ ಇಲಾಖೆಗೆ ಸೂಚಿಸಿದ್ದಾರೆ. ಅವರು ಪುತ್ತೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿ, ಮರ್ಧಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದೆಂದು ಅಬಕಾರಿ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಸುಜಾತ್ರವರಲ್ಲಿ

ಮರ್ಧಾಳದಲ್ಲಿ ನಡೆಯುತ್ತಿದೆ ಮದ್ಯದಂಗಡಿ ತೆರೆಯುವ ಹುನ್ನಾರ ► ಪ್ರಬಲಗೊಳ್ಳುತ್ತಿದೆ ಮದ್ಯದಂಗಡಿ ವಿರೋಧಿ ಹೋರಾಟ Read More »

ಕರಾವಳಿ

ಮರ್ಧಾಳ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ನ.01. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರದಂದು ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಐತ್ತೂರು ಗ್ರಾಮದ 72 ಕಾಲನಿ ನಿವಾಸಿ ಕೆ.ಎಫ್.ಡಿ.ಸಿ ನಿವೃತ್ತ ಉದ್ಯೋಗಿ ಪನ್ನಯ್ಯ(64) ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಒಬ್ಬಂಟಿಯಾಗಿದ್ದು, ಕೆಲವು ವರ್ಷಗಳಿಂದ ಅನಾರೋಗ್ಯಕ್ಕೊಳಗಾಗಿದ್ದರು. ಇದರಿಂದಾಗಿ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರ್ಧಾಳ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ

ಕಡಬದ ಮೃತ ಬಾಲೆಯ ಹೆಸರಲ್ಲಿ ಕಲೆಕ್ಷನ್ ಮಾಡಿ ಸಿಕ್ಕಿಬಿದ್ದ ಭೂಪ ► ಬಡ ಮಕ್ಕಳ ಚಿಕಿತ್ಸೆಗೆ ನೆರವು ನೀಡುವಾಗ ಎಚ್ಚರವಿರಲಿ

(ನ್ಯೂಸ್ ಕಡಬ) newskadaba.com ಪುತ್ತೂರು, ನ.01. ಹೆತ್ತವರು ಚಿಕಿತ್ಸೆಗೆ ನೆರವು ಯಾಚಿಸಿದ್ದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಕಳೆದ ಶುಕ್ರವಾರ ಮಂಗಳೂರಿನ ಆಸ್ಪತ್ರೆಯೊಂದ ರಲ್ಲಿ ಮೃತಪಟ್ಟಿದ್ದರೂ, ಆ ಬಾಲಕಿಯ ಹೆಸರು ಹೇಳಿಕೊಂಡು ಚಿಕಿತ್ಸೆಯ ನೆರವಿನ ನೆಪದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿದ್ದ ವ್ಯಕ್ತಿಯೊಬ್ಬನ ವಂಚನೆ ಮಂಗಳವಾರ ಬಹಿರಂಗಗೊಂಡಿದ್ದು, ಆತನನ್ನು ಬಂಟ್ವಾಳ ತಾಲೂಕಿನ ಕಲ್ಲಡ್ಕದ ಯುವಕರು ಪತ್ತೆಹಚ್ಚಿ, ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ಕಡಬ ಸಮೀಪದ ಕೋಡಿಂಬಾಳ ಗ್ರಾಮದ ಕಲ್ಲಂದಡ್ಕ ಕುತ್ಯಾಡಿ ನಿವಾಸಿ ಕೂಲಿ ಕಾರ್ಮಿಕ ಇಸಾಕ್ ಎಂಬವರ ಪುತ್ರಿ

ಕಡಬದ ಮೃತ ಬಾಲೆಯ ಹೆಸರಲ್ಲಿ ಕಲೆಕ್ಷನ್ ಮಾಡಿ ಸಿಕ್ಕಿಬಿದ್ದ ಭೂಪ ► ಬಡ ಮಕ್ಕಳ ಚಿಕಿತ್ಸೆಗೆ ನೆರವು ನೀಡುವಾಗ ಎಚ್ಚರವಿರಲಿ Read More »

ಕರಾವಳಿ

► ಬೆಳ್ತಂಗಡಿ: ಕಾಡುಹಂದಿ ದಾಳಿಗೆ ವ್ಯಕ್ತಿ ಬಲಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ನ.01. ಕಾಡು ಹಂದಿಯ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲ್ಲೂಕಿನ ತಣ್ಣೀರುಪಂತ ಗ್ರಾಮದ ಮಡಪ್ಪಾಡಿ‌ ಎಂಬಲ್ಲಿ ಮಂಗಳವಾರದಂದು ನಡೆದಿದೆ. ಹಂದಿ ದಾಳಿಗೆ ಬಳಿಯಾದವರನ್ನು ಬೆಳ್ತಂಗಡಿ ತಾಲ್ಲೂಕಿನ ತಣ್ಣೀರುಪಂತ ಗ್ರಾಮದ ಮಡಪ್ಪಾಡಿ‌ ನಿವಾಸಿ ಗಂಗಾಧರ(45 ) ಎಂದು ಗುರುತಿಸಲಾಗಿದೆ. ಇವರ ಮನೆ ಸಮೀಪದಲ್ಲಿ ಅರಣ್ಯ ಇಲಾಖೆಗೆ ಸೇರಿದ ರಕ್ಷಿತಾರಣ್ಯವಿದ್ದು, ಈ ಕಾಡಿನಿಂದ ಬಂದ ಕಾಡು ಹಂದಿ ಗಂಗಾಧರ ಅವರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ವಲಯ

► ಬೆಳ್ತಂಗಡಿ: ಕಾಡುಹಂದಿ ದಾಳಿಗೆ ವ್ಯಕ್ತಿ ಬಲಿ Read More »

ಕರಾವಳಿ

ಕಡಬ ಸಂಯುಕ್ತ ಕ್ರಿಸ್‌ಮಸ್ ಆಚರಣಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ► ಅಧ್ಯಕ್ಷರಾಗಿ ರೆ|ಫಾ| ಪೀಟರ್ ಜಾನ್ ಒಐಸಿ, ಕಾರ್ಯದರ್ಶಿಯಾಗಿ ಜೋಯಲ್ ಜೋಸ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ.01. ಕಡಬ ಸಂಯುಕ್ತ ಕ್ರಿಸ್‌ಮಸ್ ಆಚರಣಾ ಸಮಿತಿಯ ಪೂರ್ವಭಾವಿ ಸಭೆಯು ಕಡಬದ ಬೆಥನಿ ಆಶ್ರಮದಲ್ಲಿ ರೆ| ಫಾ| ಪಿ.ಕೆ.ಅಬ್ರಹಾಂ ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ‌ ರೆ|ಫಾ| ರೊನಾಲ್ಡ್ ಲೋಬೊ, ಅಧ್ಯಕ್ಷರಾಗಿ ರೆ|ಫಾ| ಪೀಟರ್ ಜಾನ್ ಒ.ಐ.ಸಿ, ಉಪಾಧ್ಯಕ್ಷರಾಗಿ ರೆ|ಫಾ|ಪಿ.ಕೆ.ಅಬ್ರಹಾಂ, ಕಾರ್ಯದರ್ಶಿಯಾಗಿ ಜೋಯಲ್ ಜೋಸ್ ಹಾಗೂ ಕೋಶಾಧಿಕಾರಿಯಾಗಿ ಎ.ಎಸ್. ಪೈಲಿಯವರನ್ನು ಆರಿಸಲಾಯಿತು. ಇದರ ಜೊತೆಗೆ ಹಲವು ಉಪ ಸಮಿತಿಗಳನ್ನು ರಚಿಸಲಾಯಿತು. ರೆ|ಫಾ| ಪಿ.ಕೆ. ಅಬ್ರಹಾಂ ಸ್ವಾಗತಿಸಿ

ಕಡಬ ಸಂಯುಕ್ತ ಕ್ರಿಸ್‌ಮಸ್ ಆಚರಣಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ► ಅಧ್ಯಕ್ಷರಾಗಿ ರೆ|ಫಾ| ಪೀಟರ್ ಜಾನ್ ಒಐಸಿ, ಕಾರ್ಯದರ್ಶಿಯಾಗಿ ಜೋಯಲ್ ಜೋಸ್ ಆಯ್ಕೆ Read More »

ಕರಾವಳಿ

ನೇಣು ಬಿಗಿದ ಸ್ಥಿತಿಯಲ್ಲಿ ಜೆಡಿಎಸ್ ಮುಖಂಡನ ಶವ ಪತ್ತೆ ► ಕೊಲೆ ಶಂಕೆ

(ನ್ಯೂಸ್ ಕಡಬ) newskadaba.com ಹಾಸನ, ನ.01. ಜೆಡಿಎಸ್ ಮುಖಂಡರೋರ್ವರು  ಮರಕ್ಕೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮೃತರನ್ನು ಹಾಸನ ಜಿಲ್ಲೆಯ ಅಕ್ಕನಹಳ್ಳಿ ಗ್ರಾಮದ ಪಿಎಸಿಸಿ ಸೊಸೈಟಿ ಸದಸ್ಯ ಕನ್ನಂಬಾಡಿ ರವಿ(47) ಎಂದು ಗುರುತಿಸಲಾಗಿದ್ದು, ಚನ್ನರಾಯಪಟ್ಟಣದ ಕಬ್ಬಳಿ ದೇವಸ್ಥಾನದ ಬಳಿಯ ಮರದಲ್ಲಿ ಶವ ಪತ್ತೆಯಾಗಿದೆ. ಮರದ ಪಕ್ಕದಲ್ಲೇ ರವಿಯವರ ಬೈಕ್ ಮಗುಚಿಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಇದೊಂದು ಕೊಲೆ ಆಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ನುಗ್ಗೆಹಳ್ಳಿ ಪೊಲೀಸರು ಸ್ಥಳ ಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು

ನೇಣು ಬಿಗಿದ ಸ್ಥಿತಿಯಲ್ಲಿ ಜೆಡಿಎಸ್ ಮುಖಂಡನ ಶವ ಪತ್ತೆ ► ಕೊಲೆ ಶಂಕೆ Read More »

ಕರ್ನಾಟಕ
Scroll to Top