News Kadaba Desk

ನೈರುತ್ಯ ಕ್ಷೇತ್ರದ ಮತದಾರರ ಕರಡು ಪಟ್ಟಿ ನ.21ರಂದು ಪ್ರಕಟ: ಅಪರ ಜಿಲ್ಲಾಧಿಕಾರಿ ► ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿದೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.08. ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಕರಡು ಪಟ್ಟಿಯು ನವೆಂಬರ್ 21ರಂದು ಪ್ರಕಟವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಮುಂದಿನ ವರ್ಷ ಜೂನ್‍ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮತದಾರರ ಪಟ್ಟಿ ತಯಾರಿಸಲಾಗುತ್ತಿದೆ. ಈ ಹಿಂದಿನ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ […]

ನೈರುತ್ಯ ಕ್ಷೇತ್ರದ ಮತದಾರರ ಕರಡು ಪಟ್ಟಿ ನ.21ರಂದು ಪ್ರಕಟ: ಅಪರ ಜಿಲ್ಲಾಧಿಕಾರಿ ► ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿದೆ Read More »

ಕರಾವಳಿ

ಸಂಪೂರ್ಣ ಹದಗೆಟ್ಟ ರಾ.ಹೆ. 75 ► ಶೀಘ್ರ ಸರಿಪಡಿಸುವಂತೆ ಸಾರ್ವಜನಿಕ ಹಿತಾಸಕ್ತಿ ವೇದಿಕೆಯಿಂದ ಸಂಸದರಿಗೆ ಮನವಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.08. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಪಾಣೆಮಂಗಳೂರಿನಿಂದ ಬೋಳಂಗಡಿಯ ನರಹರಿ ಪರ್ವತದವರೆಗೆ ಸಂಪೂರ್ಣ ಹದಗೆಟ್ಟ ಪರಿಣಾಮ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದ್ದು, ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಪಾಣೆಮಂಗಳೂರು ಸಾರ್ವಜನಿಕ ಹಿತಾಸಕ್ತಿ ವೇದಿಕೆಯ ವತಿಯಿಂದ ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ರವರಿಗೆ ಮಂಗಳವಾರದಂದು ಮನವಿ ಸಲ್ಲಿಸಲಾಯಿತು. ರಸ್ತೆಯ ಅಗಲೀಕರಣದ ಹಿನ್ನೆಲೆಯಲ್ಲಿ ರಸ್ತೆಯ ಬದಿಯಲ್ಲಿದ್ದ ಮರಗಳನ್ನು ಕಡಿದು ಹಾಕಲಾಗಿದ್ದರೂ, ಸಂಪೂರ್ಣವಾಗಿ ಇನ್ನೂ ತೆರವು ಮಾಡಿಲ್ಲ. ಅಲ್ಲದೇ,

ಸಂಪೂರ್ಣ ಹದಗೆಟ್ಟ ರಾ.ಹೆ. 75 ► ಶೀಘ್ರ ಸರಿಪಡಿಸುವಂತೆ ಸಾರ್ವಜನಿಕ ಹಿತಾಸಕ್ತಿ ವೇದಿಕೆಯಿಂದ ಸಂಸದರಿಗೆ ಮನವಿ Read More »

ಕರಾವಳಿ

ಭಾರತ – ನ್ಯೂಝಿಲೆಂಡ್ ಟ್ವೆಂಟಿ-20 ಸರಣಿ ಪಂದ್ಯ ► 6 ರನ್‌ಗಳ ಜಯದೊಂದಿಗೆ ಸರಣಿ ಗೆದ್ದ ಭಾರತ

(ನ್ಯೂಸ್ ಕಡಬ) newskadaba.com ತಿರುವನಂತಪುರ, ನ.07. ನ್ಯೂಝಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಭಾರತ 6 ರನ್‌ಗಳ ಜಯ ಗಳಿಸಿದ್ದು, 2-1 ಅಂತರದಲ್ಲಿ ವಿಜಯದ ನಗೆ ಬೀರಿದೆ. ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಇಂದು ನಡೆದ ಟ್ವೆಂಟಿ-20 ಪಂದ್ಯವನ್ನು ಭಾರೀ ಮಳೆಯಿಂದಾಗಿ ತಲಾ 8 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಟಾಸ್ ಜಯಿಸಿದ ನ್ಯೂಝಿಲೆಂಡ್ ತಂಡ ಫೀಲ್ಡಿಂಗ್ ಆಯ್ದುಕೊಂಡು ಗೆಲುವಿಗೆ 68 ರನ್ ಗಳ ಸವಾಲನ್ನು ಪಡೆದು ನಿಗದಿತ 8 ಓವರ್ ಗಳಲ್ಲಿ 6 ವಿಕೆಟ್

ಭಾರತ – ನ್ಯೂಝಿಲೆಂಡ್ ಟ್ವೆಂಟಿ-20 ಸರಣಿ ಪಂದ್ಯ ► 6 ರನ್‌ಗಳ ಜಯದೊಂದಿಗೆ ಸರಣಿ ಗೆದ್ದ ಭಾರತ Read More »

ಕ್ರೀಡಾ ನ್ಯೂಸ್

ಮಂಗಳೂರು: ಖಾಸಗಿ ಜಮೀನಿನಲ್ಲಿ ಗಾಂಜಾ ಗಿಡ ಪತ್ತೆ ► ಪ್ರಕರಣ ದಾಖಲಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಮಂಗಳೂರು, ನ.07. ತನ್ನ‌ ಖಾಸಗಿ ಜಮೀನಿನಲ್ಲಿ ವ್ಯಕ್ತಿಯೋರ್ವರು ಗಾಂಜಾ ಗಿಡವನ್ನು ಬೆಳೆಸಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಮಂಗಳವಾರದಂದು ಮಂಗಳೂರಿನಲ್ಲಿ ನಡೆದಿದೆ. ಆರೋಪಿಯನ್ನು ಕೋಡಿಕಲ್ ನಿವಾಸಿ ವಿನಿತ್ ಎಂದು ಗುರುತಿಸಲಾಗಿದ್ದು, ಇವರು ತನ್ನ ಜಮೀನಿನಲ್ಲಿ ಗಾಂಜಾ ಗಿಡವನ್ನು ಬೆಳೆಸಿದ್ದರೆನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿದ ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರು: ಖಾಸಗಿ ಜಮೀನಿನಲ್ಲಿ ಗಾಂಜಾ ಗಿಡ ಪತ್ತೆ ► ಪ್ರಕರಣ ದಾಖಲಿಸಿದ ಪೊಲೀಸರು Read More »

ಕರಾವಳಿ

ತಲಪಾಡಿ: ಸೊಸೈಟಿಯೊಳಗಡೆ ಅನುಮಾನಾಸ್ಪದವಾಗಿ ಮೂವರು ಮೃತ್ಯು ► ಸಿಡಿಲು ಬಡಿದಿರಬಹುದೆಂಬ ಶಂಕೆ

(ನ್ಯೂಸ್ ಕಡಬ) newskadaba.com ತಲಪಾಡಿ, ನ.07. ಇಲ್ಲಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಮಂಗಳವಾರದಂದು ಬೆಳಕಿಗೆ ಬಂದಿದೆ. ಮೃತರನ್ನು ಉಮೇಶ್, ಸಂತೋಷ್ ಮತ್ತು ಸೋಮನಾಥ್ ಎಂದು ಗುರುತಿಸಲಾಗಿದೆ. ಮೃತರಲ್ಲಿ ಇಬ್ಬರು ಕೋಟೆಕಾರು ಶಾಖೆಯ ಕಾವಲು ಸಿಬ್ಬಂದಿಗಳೆನ್ನಲಾಗಿದೆ. ಇವರು ಹೇಗೆ ಶಾಖೆಯ ಒಳಭಾಗದಲ್ಲಿ ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ಸಂಶಯ ಮೂಡಿದೆ. ಜೂನ್‌ 23 ರಂದು ಈ‌ ಶಾಖೆಯಲ್ಲಿ ಚಿನ್ನಾಭರಣ ದರೋಡೆಗೆ ವಿಫಲ ಯತ್ನ ನಡೆದಿತ್ತು. ಆ ನಿಟ್ಟಿನಲ್ಲಿ ಯಾರಾದರೂ ಕೊಲೆ‌ ಮಾಡಿರಬಹುದಾ

ತಲಪಾಡಿ: ಸೊಸೈಟಿಯೊಳಗಡೆ ಅನುಮಾನಾಸ್ಪದವಾಗಿ ಮೂವರು ಮೃತ್ಯು ► ಸಿಡಿಲು ಬಡಿದಿರಬಹುದೆಂಬ ಶಂಕೆ Read More »

ಕರಾವಳಿ

ಫಲ್ಗುಣಿ ನದಿಗಿಳಿದ ಐವರು ವಿದ್ಯಾರ್ಥಿಗಳು ನೀರುಪಾಲು ಶಂಕೆ ► ಓರ್ವನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.07. ಸೋಮವಾರ ಶಾಲೆಗೆ ರಜೆ ಇದ್ದ ಕಾರಣ ಆಟ ಆಡಲೆಂದು ನದಿಗಿಳಿದಿದ್ದ ಐವರು ಮಕ್ಕಳು ನಾಪತ್ತೆಯಾಗಿದ್ದು ಓರ್ವ ಬಾಲಕನ ಮೃತದೇಹ ಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಮುಲಾರಪಟ್ನದಲ್ಲಿ ಎಂಬಲ್ಲಿ ಸೋಮವಾರದಂದು ನಡೆದಿದೆ. ನಾಪತ್ತೆಯಾದವರನ್ನು ಮುಲಾರಪಟ್ನ ಶುಂಟಿಹಿತ್ಲು ನಿವಾಸಿಗಳಾದ ಆಶ್ರಪ್ ಎಂಬವರ ಪುತ್ರ ಪಿಯುಸಿ ವಿದ್ಯಾರ್ಥಿ ಅಸ್ಲಮ್ (೧೭), ಶರೀಫ್ ಎಂಬವರ ಪುತ್ರ ರಮೀಝ್(೧೭), ಹಂಝ ಎಂಬವರ ಪುತ್ರ ಅಜಮಾತ್(೧೮), ಶರೀಫ್ ಎಂಬವರ ಪುತ್ರ ಮುಬಶ್ಶಿರ್ (೧೭), ಮಹಮ್ಮದ್ ಎಂಬವರ

ಫಲ್ಗುಣಿ ನದಿಗಿಳಿದ ಐವರು ವಿದ್ಯಾರ್ಥಿಗಳು ನೀರುಪಾಲು ಶಂಕೆ ► ಓರ್ವನ ಮೃತದೇಹ ಪತ್ತೆ Read More »

ಕರಾವಳಿ

ಕಡಬ ಯುವಕ ಮಂಡಲದ ಕಟ್ಟಡದ ಸುತ್ತ ಮದ್ಯದ ಬಾಟಲಿಗಳ ಹುತ್ತ ► ಸ್ವಚ್ಛ ಗ್ರಾಮ ಕಡಬದಲ್ಲಿ ಮರೀಚಿಕೆಯಾಗುತ್ತಿರುವ ಸ್ವಚ್ಚತೆ

(ನ್ಯೂಸ್ ಕಡಬ) newskadaba.com ಕಡಬ, ನ.06. ಕಳೆದ ಕೆಲವು ವರ್ಷಗಳಿಂದ ಸ್ವಚ್ಚತೆಗೆ ಹೆಸರುವಾಸಿಯಾಗಿದ್ದ ಕಡಬದಲ್ಲಿ ಇದೀಗ ಸ್ವಚ್ಚತೆ ಮರೀಚಿಕೆ ಆಗುವ ಸಾಧ್ಯತೆ ಕಾಣುತ್ತಿದ್ದು, ಸಂಜೆಯಾಗುತ್ತಿದ್ದಂತೆ ಕುಡುಕರು ರಸ್ತೆ ಬದಿ ಮದ್ಯ ಸೇವನೆ ಮಾಡುವುದಲ್ಲದೆ ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದರ ಮೂಲಕ ಪೇಟೆಯ ಸ್ವಚ್ಚತೆಯನ್ನು ಹಾಳು ಮಾಡುತ್ತಿದ್ದಾರೆ.   ಈ ಬಗ್ಗೆ ಹಲವು ಬಾರಿ ಗ್ರಾ.ಪಂ. ಹಾಗೂ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಪೇಟೆಯ ಸ್ವಚ್ಛತೆಯನ್ನು ಹಾಳುಮಾಡುವುದಕ್ಕೆ ಉದಾಹರಣೆಯೆಂಬಂತೆ ಕಡಬ ಪಂಜ ರಸ್ತೆಯಲ್ಲಿರುವ

ಕಡಬ ಯುವಕ ಮಂಡಲದ ಕಟ್ಟಡದ ಸುತ್ತ ಮದ್ಯದ ಬಾಟಲಿಗಳ ಹುತ್ತ ► ಸ್ವಚ್ಛ ಗ್ರಾಮ ಕಡಬದಲ್ಲಿ ಮರೀಚಿಕೆಯಾಗುತ್ತಿರುವ ಸ್ವಚ್ಚತೆ Read More »

ಕರಾವಳಿ

ಪುತ್ತೂರು: ಸಿಡಿಲಿನ ಆರ್ಭಟಕ್ಕೆ ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ನ.07. ಸಿಡಿಲು ಬಡಿದು ಕೂಲಿ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ತಾಲೂಕಿನ ಆರ್ಯಾಪು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೃತ ಕೂಲಿ ಕಾರ್ಮಿಕನನ್ನು ಆರ್ಯಾಪು ನಿವಾಸಿ ಸುಂದರ (54) ಎಂದು ಗುರುತಿಸಲಾಗಿದೆ. ಸುಂದರ ಅವರು ಸಿಡಿಲು ಬರುತ್ತಿದ್ದ ವೇಳೆ ತನ್ನ ಮನೆಯಲ್ಲಿದ್ದರು ಎನ್ನಲಾಗಿದ್ದು, ಈ ವೇಳೆ ಸಿಡಿಲಿನ ಆಘಾತಕ್ಕೆ ಒಳಗಾಗಿ ಮೃತಪಟ್ಟರು ಎಂದು ತಿಳಿದುಬಂದಿದೆ. ಇವರು ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದು, ಹವ್ಯಾಸಿ ನಾಟಕಗಾರನಾಗಿ ಹಲವು ತುಳು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಮೃತರು ಪತ್ನಿ, ಓರ್ವ

ಪುತ್ತೂರು: ಸಿಡಿಲಿನ ಆರ್ಭಟಕ್ಕೆ ಓರ್ವ ಮೃತ್ಯು Read More »

ಕರಾವಳಿ

ಕಂಬಳ ತಡೆಯಾಜ್ಞೆ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ನ.06. ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಕಂಬಳ ಕ್ರೀಡೆಗೆ ತಡೆಯಾಜ್ಞೆ ನೀಡುವಂತೆ ಪೆಟಾ(ಪಿಇಟಿಎ) ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಕಂಬಳಕ್ಕೆ ತಡೆಯಾಜ್ಞೆ ನೀಡುವ ಮನವಿಯನ್ನು ತಿರಸ್ಕರಿಸಿದೆ. ಮುಂದಿನ ವಿಚಾರಣೆಯನ್ನು ನ.13ಕ್ಕೆ ನಿಗದಿಪಡಿಸಿದೆ. ಈ ಸಂಬಂಧ ಕೇಂದ್ರ ಸರಕಾರ, ಕರ್ನಾಟಕ ಸರಕಾರಕ್ಕೆ ನೋಟಿಸು ನೀಡಿದ್ದು, ಮುಂದಿನ

ಕಂಬಳ ತಡೆಯಾಜ್ಞೆ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ Read More »

ರಾಷ್ಟ್ರೀಯ ನ್ಯೂಸ್

ರಾಷ್ಟ್ರ ಪ್ರಶಸ್ತಿ ವಿಜೇತ ಧಾರ್ಮಿಕ ಮುಖಂಡ ► ಕಡಬದ ಹಿರಿಯ ಸಾಹಿತಿ ಗೋಪಾಲ್ ರಾವ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಕಡಬ, ನ.06. ಕಡಬದ ಹಿರಿಯ ಸಾಹಿತಿ, ರಾಷ್ಟ್ರ ಪ್ರಶಸ್ತಿ ವಿಜೇತ ಧಾರ್ಮಿಕ ಮುಂದಾಳು, ನಿವೃತ್ತ ಶಿಕ್ಷಕ ಗೋಪಾಲ್ ರಾವ್ ಅವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಒಂದು ವಾರದ ಹಿಂದೆ ತೀವ್ರ ಅನಾರೋಗ್ಯದ ಕಾರಣದಿಂದ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಾಗಿದ್ದ ಇವರು ಇಂದು ಸಂಜೆ ಕೊನೆಯುಸಿರೆಳೆದರು. ಹಲವು ಪುಸ್ತಕಗಳನ್ನು ಬರೆದಿರುವ ಇವರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದ್ದರು.

ರಾಷ್ಟ್ರ ಪ್ರಶಸ್ತಿ ವಿಜೇತ ಧಾರ್ಮಿಕ ಮುಖಂಡ ► ಕಡಬದ ಹಿರಿಯ ಸಾಹಿತಿ ಗೋಪಾಲ್ ರಾವ್ ಇನ್ನಿಲ್ಲ Read More »

ಕರಾವಳಿ
Scroll to Top