News Kadaba Desk

ಸಂವಿಧಾನವನ್ನು ಬದಲಾಯಿಸಲೆಂದೇ ನಾವು ಬಂದಿದ್ದೇವೆ ► ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿವಾದಿತ ಭಾಷಣ

(ನ್ಯೂಸ್ ಕಡಬ) newskadaba.com ಕೊಪ್ಪಳ, ಡಿ.25. ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಲ್ಲಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಇದೀಗ ಸಂವಿಧಾನವನ್ನು ಬದಲಾಯಿಸಲು ನಾವು ಬಂದಿದ್ದೇವೆ ಎಂದು ಹೇಳುವುದರ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅವರು ಕೊಪ್ಪಳದ ಯಲಬುರ್ಗಾ ತಾಲೂಕಿನ ಕೊಕನೂರಿನಲ್ಲಿ ಬ್ರಾಹ್ಮಣ ಯುವ ಪರಿಷತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ವೇಳೆ, ಜಾತ್ಯಾತೀತರು ಎಂದರೆ ಯಾರೆಂದು ಗೊತ್ತಾಗುವುದಿಲ್ಲ. ಅಪ್ಪ ಅಮ್ಮನ ಗುರುತು ಇಲ್ಲದವರನ್ನು ಜಾತ್ಯಾತೀತರು ಎನ್ನಬಹುದು. ನಾವು ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದ್ರೆ […]

ಸಂವಿಧಾನವನ್ನು ಬದಲಾಯಿಸಲೆಂದೇ ನಾವು ಬಂದಿದ್ದೇವೆ ► ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿವಾದಿತ ಭಾಷಣ Read More »

ಕರಾವಳಿ

ದ.ಕ. ಕೇಂದ್ರ ಸಹಕಾರಿ ಬ್ಯಾಂಕ್ ಮೂಲಕ ಮಲೇಷ್ಯಾ ಮರಳು ವಿತರಣೆ: ರಾಜೇಂದ್ರ ಕುಮಾರ್ ► ಕಡಬ ಸಿ.ಎ.ಬ್ಯಾಂಕ್ ನೂತನ ಕಟ್ಟಡ ‘ಯೋಗಕ್ಷೇಮ’ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಡಿ.24. ಮಲೇಷಿಯಾದಿಂದ ಮರಳನ್ನು ಆಮದು ಮಾಡಿಕೊಂಡು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮೂಲಕ ಜನಸಾಮಾನ್ಯರಿಗೆ ವಿತರಿಸಲು ನಿರ್ಧರಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು. ಅವರು ಭಾನುವಾರದಂದು ಕಡಬ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸುಮಾರು ಎರಡು ಕೋಟಿ ರೂ. ವೆಚ್ಚದ ಸುಸಜ್ಜಿತ ನೂತನ ಕಟ್ಟಡ ‘ಯೋಗ ಕ್ಷೇಮ’ ಸಹಕಾರಿ ಭವನವನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಸರಕಾರದ ಈಗಿನ ಮರಳು ನೀತಿಯಿಂದಾಗಿ ಜಿಲ್ಲೆಯಲ್ಲಿ ಮರಳಿನ ಅಭಾವ ತಲೆದೋರಿದೆ. ಹೊಸ

ದ.ಕ. ಕೇಂದ್ರ ಸಹಕಾರಿ ಬ್ಯಾಂಕ್ ಮೂಲಕ ಮಲೇಷ್ಯಾ ಮರಳು ವಿತರಣೆ: ರಾಜೇಂದ್ರ ಕುಮಾರ್ ► ಕಡಬ ಸಿ.ಎ.ಬ್ಯಾಂಕ್ ನೂತನ ಕಟ್ಟಡ ‘ಯೋಗಕ್ಷೇಮ’ ಲೋಕಾರ್ಪಣೆ Read More »

ಕರಾವಳಿ

ಮೂರೇ ತಿಂಗಳಲ್ಲಿ ತುಳು ಕಲಿತ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ► ತುಳು ಭಾಷೆಯ ವ್ಯಾಮೋಹದಿಂದ ಮನೆಯಲ್ಲೂ ತುಳುಭಾಷೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24. ತುಳುನಾಡಿನ ಜನಪ್ರಿಯ ಭಾಷೆಯಾದ ತುಳುವನ್ನು ಕೇವಲ ಮೂರು ತಿಂಗಳಲ್ಲಿ ಕಲಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿಯವರು ಮಾದರಿಯಾಗಿದ್ದಾರೆ. ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾದ ಸುಧೀರ್ ಕುಮಾರ್ ರೆಡ್ಡಿಯವರು ಕಳೆದ ಆರು ತಿಂಗಳ ಹಿಂದೆ ಜಿಲ್ಲಾ ಎಸ್ಪಿಯಾಗಿ ಅಧಿಕಾರ ಸ್ವೀಕರಿಸುವಾಗ ತೆಲುಗು, ತಮಿಳು, ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಪರಿಣತಿಯನ್ನು ಹೊಂದಿದ್ದರು. ಆದರೆ ಕೆಲವು ಹಿರಿಯರು ಕನ್ನಡ ಭಾಷೆ ಮಾತನಾಡಲಾಗದೆ ತಮ್ಮ ಸಮಸ್ಯೆಗಳನ್ನು ತಿಳಿಸಲು ಚಡಪಡಿಸುತ್ತಿದ್ದುದನ್ನು

ಮೂರೇ ತಿಂಗಳಲ್ಲಿ ತುಳು ಕಲಿತ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ► ತುಳು ಭಾಷೆಯ ವ್ಯಾಮೋಹದಿಂದ ಮನೆಯಲ್ಲೂ ತುಳುಭಾಷೆ Read More »

ಕರಾವಳಿ

ಉಪ್ಪಿನಂಗಡಿ: ಬೃಹತ್ ಪ್ರಮಾಣದ ಗಾಂಜಾ ಸಾಗಾಟ ಪತ್ತೆ ► 80 ಕೆಜಿ ಗಾಂಜಾ ಸಹಿತ ಕಾರು ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ.24. ಕಾರೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 80 ಕಿಲೋಗ್ರಾಂ ಗಾಂಜಾವನ್ನು ಪತ್ತೆಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಗಾಂಜಾ ಸಹಿತ ಕಾರನ್ನು ವಶಪಡಿಸಿಕೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಹೋಂಡಾ ಸಿಟಿ ಕಾರಿನಲ್ಲಿ ಸುಮಾರು ಆರು ಲಕ್ಷ ರೂ. ಮೌಲ್ಯದ 80 ಕೆ.ಜಿ. ಗಾಂಜಾವನ್ನು ಸಾಗಿಸುತ್ತಿದ್ದ ಆರೋಪಿಗಳು ಪೊಲೀಸರ ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್

ಉಪ್ಪಿನಂಗಡಿ: ಬೃಹತ್ ಪ್ರಮಾಣದ ಗಾಂಜಾ ಸಾಗಾಟ ಪತ್ತೆ ► 80 ಕೆಜಿ ಗಾಂಜಾ ಸಹಿತ ಕಾರು ವಶಕ್ಕೆ Read More »

ಕರಾವಳಿ

ಏರ್ ಟೆಲ್ ನಿಂದ ಭರ್ಜರಿ ಆಫರ್

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.24.‌ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಏರ್ ಟೆಲ್ ಹೊಸ ಪ್ರಿಪೇಯ್ಡ್ ಯೋಜನೆ ಪರಿಚಯಿಸಿದ್ದು, 49 ರೂ. ಗೆ 1 ಜಿಬಿ ಡೇಟಾ ನೀಡಲು ಮುಂದಾಗಿದೆ. 49 ರೂ. ಪ್ಲಾನ್ ನಲ್ಲಿ ದಿನವೊಂದಕ್ಕೆ 1 ಜಿಬಿ 4ಜಿ ಡೇಟಾ, ಉಚಿತ ಕರೆ ಸೌಲಭ್ಯವನ್ನು 7 ದಿನಗಳ ಅವಧಿಗೆ ಏರ್ ಟೆಲ್ ನೀಡಿದೆ. ಆದರೆ ಈ ಪ್ಲಾನ್ ಆಯ್ದ ಗ್ರಾಹಕರಿಗೆ ಮಾತ್ರ ಸಿಗಲಿದ್ದು, ಮೈ ಏರ್ ಟೆಲ್ ಆ್ಯಪ್ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಏರ್ ಟೆಲ್ ನಿಂದ ಭರ್ಜರಿ ಆಫರ್ Read More »

ತಂತ್ರಜ್ಞಾನ

ಮುಲ್ಕಿ: ಉದ್ಯಮಿಯ ಮನೆಯಲ್ಲಿ ಶೂಟೌಟ್ ► ಮನೆಗೆ ಹಾಗೂ ಕಾರಿಗೆ ಹಾನಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24. ಉದ್ಯಮಿಯೋರ್ವರ ಮನೆಗೆ 3 ಸುತ್ತು ಗುಂಡು ಹಾರಾಟ ನಡೆಸಿರುವ ಘಟನೆ ನಗರದ ಹೊರವಲಯದ ಮುಲ್ಕಿ ಬಸ್ ನಿಲ್ದಾಣದ ಬಳಿ ಶನಿವಾರ ರಾತ್ರಿ ನಡೆದಿದೆ. ಬೈಕಿನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ಮುಲ್ಕಿ ನಿವಾಸಿ ಉದ್ಯಮಿಯಾಗಿ ಗುರುತಿಸಿಕೊಂಡಿರುವ ನಾಗರಾಜ್ ಮನೆಗೆ ಶೂಟೌಟ್ ನಡೆಸಿದ್ದು, ಇದರಿಂದಾಗಿ ಮನೆಯ ಬಾಗಿಲಿಗೆ ಹಾಗೂ ಕಾರಿಗೆ ಗುಂಡು ತಗುಲಿ ಹಾನಿಯಾಗಿವೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ಅಪರಾಧ ವಿಭಾಗದ ಡಿಸಿಪಿ ಉಮಾಪ್ರಶಾಂತ್ ಮತ್ತಿತರ ಹಿರಿಯ ಅಧಿಕಾರಿಗಳು

ಮುಲ್ಕಿ: ಉದ್ಯಮಿಯ ಮನೆಯಲ್ಲಿ ಶೂಟೌಟ್ ► ಮನೆಗೆ ಹಾಗೂ ಕಾರಿಗೆ ಹಾನಿ Read More »

ಕರಾವಳಿ

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23. ದಕ್ಷಿಣ ಕನ್ನಡ ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಖಾಲಿ ಇರುವ 9 ಅಂಗನವಾಡಿ ಕಾರ್ಯಕರ್ತೆ ಹಾಗೂ 23 ಅಂಗನವಾಡಿ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 22 ದಿನವಾಗಿದ್ದು, ಆಸಕ್ತರು ಕೆಳಗಿನ ವೆಬ್‍ಸೈಟ್ ವಿಳಾಸವನ್ನು ಸಂಪರ್ಕಿಸಬಹುದಾಗಿದೆ. http://www.anganwadirecruit.kar.nic.in ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾ ಕಛೇರಿಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ Read More »

ಕರಾವಳಿ

ಬೆದ್ರಾಳ: ಕೆಎಸ್ಸಾರ್ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ► ತಾಯಿ-ಮಗಳು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.23. ಕೆಎಸ್ಸಾರ್ಟಿಸಿ ಬಸ್ಸೊಂದು ಹೀರೋ ಪ್ಲೆಶರ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ತಾಯಿ – ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಇಲ್ಲಿಗೆ ಸಮೀಪದ ಬೆದ್ರಾಳ ಎಂಬಲ್ಲಿ ನಡೆದಿದೆ. ಪುತ್ತೂರಿನಿಂದ ಶಾಂತಿಗೋಡು ತೆರಳುತ್ತಿದ್ದ‌ ಕೆಎಸ್ಸಾರ್ಟಿಸಿ ಬಸ್ ಬೆದ್ರಾಳ ರೈಲ್ವ ಮೇಲ್ಸೇತುವೆ ಸಮೀಪ ದ್ವಿಚಕ್ರ ವಾಹನವನ್ನು ಓವರ್ ಟೇಕ್ ಮಾಡಿ ಮುಂದುಗಡೆ ಹೋಗುವ ಧಾವಂತದಲ್ಲಿ ಬಸ್ಸಿನ ಹಿಂಭಾಗ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ವಾಹನದಿಂದ ರಸ್ತೆಗೆ ಎಸೆಯಲ್ಪಟ್ಟ ತಾಯಿ-ಮಗು ಸ್ಥಳದಲ್ಲೇ

ಬೆದ್ರಾಳ: ಕೆಎಸ್ಸಾರ್ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ► ತಾಯಿ-ಮಗಳು ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ನಾಳೆ ಕಡಬ ಸಿ.ಎ. ಬ್ಯಾಂಕ್ ನೂತನ ಸುಸಜ್ಜಿತ ಕಟ್ಟಡ ಉದ್ಘಾಟನೆ ► 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ‘ಯೋಗಕ್ಷೇಮ’ ಸಹಕಾರ ಸೌಧ

(ನ್ಯೂಸ್ ಕಡಬ) newskadaba.com ಕಡಬ, ಡಿ.23. ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ‘ಯೋಗಕ್ಷೇಮ’ ಸಹಕಾರ ಸೌಧದ ಉದ್ಘಾಟನಾ ಸಮಾರಂಭವು ನಾಳೆ (ಡಿಸೆಂಬರ್ 24 ನೇ ಭಾನುವಾರ) ನಡೆಯಲಿದೆ. ನೂತನ ಕಟ್ಟಡವನ್ನು ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರಕುಮಾರ್ ಉದ್ಘಾಟಿಸಲಿದ್ದು, ಸುಳ್ಯ ಶಾಸಕ ಎಸ್.ಅಂಗಾರ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಆಡಳಿತ ಸಭಾ ಭವನವನ್ನು

ನಾಳೆ ಕಡಬ ಸಿ.ಎ. ಬ್ಯಾಂಕ್ ನೂತನ ಸುಸಜ್ಜಿತ ಕಟ್ಟಡ ಉದ್ಘಾಟನೆ ► 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ‘ಯೋಗಕ್ಷೇಮ’ ಸಹಕಾರ ಸೌಧ Read More »

ಕರಾವಳಿ

ಪುತ್ತೂರು: ಚೂರಿ ತೋರಿಸಿ ಬೆದರಿಸಿ, ಮನೆಯವರನ್ನು ಕಟ್ಟಿಹಾಕಿ ದರೋಡೆ ► ಹಣ, ಚಿನ್ನಾಭರಣ ದೋಚಿದ ದರೋಡೆಕೋರರು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.23. ಇಲ್ಲಿಗೆ ಸಮೀಪದ ಕೆದಿಲ ದೈವಸ್ಥಾನದ ಬಳಿಯ ಮನೆಯೊಂದಕ್ಕೆ ನುಗ್ಗಿರುವ ಮೂವರು ಅಪರಿಚಿತರ ತಂಡ ಪಿಸ್ತೂಲು ಹಾಗೂ ಚೂರಿ ತೋರಿಸಿ ಮನೆಯವರನ್ನು ಬೆದರಿಸಿ, ಚಿನ್ನಾಭರಣ, ನಗದು ದೋಚಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕೆದಿಲ ನಿವಾಸಿ ಶಿವಶಂಕರ ಪುತ್ತೂರಾಯ ಎಂಬವರ ಮನೆಗೆ ರಾತ್ರಿ ಆಗಮಿಸಿದ ಮೂವರು ತಂಡ, ಪಿಸ್ತೂಲು, ಚೂರಿ ತೋರಿಸಿ ಬೆದರಿಸಿ ಮನೆಯವರನ್ನು ಕಟ್ಟಿಹಾಕಿ ನೆಕ್ಲೇಸ್, ಕರಿಮಣಿ ಸರ, ಚೈನ್, ಕಿವಿಯೋಲೆ ಪಡೆದುಕೊಂಡಿದ್ದಲ್ಲದೆ ಬೆಡ್ ರೂಮಿನ ಕಪಾಟಿನಲ್ಲಿದ್ದ ನಗದು, ಮೊಬೈಲ್

ಪುತ್ತೂರು: ಚೂರಿ ತೋರಿಸಿ ಬೆದರಿಸಿ, ಮನೆಯವರನ್ನು ಕಟ್ಟಿಹಾಕಿ ದರೋಡೆ ► ಹಣ, ಚಿನ್ನಾಭರಣ ದೋಚಿದ ದರೋಡೆಕೋರರು Read More »

ಕರಾವಳಿ
Scroll to Top