News Kadaba Desk

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೊೖಲ ► ಸಬಳೂರು ಅಯೋಧ್ಯಾನಗರ ಶಾಖಾ ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜ.02. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೊೖಲ ಗ್ರಾಮದ ಸಬಳೂರು ಅಯೋಧ್ಯಾನಗರ ಶಾಖಾ ವಾರ್ಷಿಕೋತ್ಸವ ಕಾರ್ಯಕ್ರಮವು ಭಾನುವಾರ ಸಂಜೆ ಅಯೋಧ್ಯಾನಗರ ಶ್ರೀ ರಾಮ ಭಜನಾ ಮಂದಿರದ ಕ್ರೀಡಾಂಗಣದಲ್ಲಿ ನಡೆಯಿತು. ಶಾರೀರಿಕ ಆಟೋಟಗಳ ಬಳಿಕ ನಡೆದ ಸಭೆಯಲ್ಲಿ ಭೌದ್ಧಿಕ್ ನೀಡಿದ ಆರ್ಎಸ್ಎಸ್ ಮುಖಂಡ ಆಲಂಕಾರು ಶ್ರೀ ಭಾರತಿ ಶಾಲಾ ಶಿಕ್ಷಕ ಯಧುಶ್ರೀ ಆನೆಗುಂಡಿ ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಡೀ ವಿಶ್ವದಲ್ಲಿ ಶಾಖೆಗಳನ್ನು ಹೊಂದಿದ್ದು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. […]

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೊೖಲ ► ಸಬಳೂರು ಅಯೋಧ್ಯಾನಗರ ಶಾಖಾ ವಾರ್ಷಿಕೋತ್ಸವ Read More »

ಕರಾವಳಿ

ಪಿಲಿಕುಳ: ಎಂಜಾಯ್ ಮಾಡುತ್ತಿದ್ದ ಭಿನ್ನ ಕೋಮಿನ ಜೋಡಿಗಳು ► ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ನಾಲ್ವರಿಗೆ ಥಳಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.02. ವಾಟರ್ ಪಾರ್ಕ್ ನಲ್ಲಿ ಎಂಜಾಯ್ ಮಾಡುತ್ತಿದ್ದ ಭಿನ್ನ ಕೋಮಿನ ನಾಲ್ವರಿಗೆ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಪಿಲಿಕುಳದಲ್ಲಿ ಮಂಗಳವಾರದಂದು ನಡೆದಿದೆ. ಐಕಳ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳೆನ್ನಲಾದ ಇಬ್ಬರು ಯುವತಿಯರು ಹಾಗೂ ಇಬ್ಬರು ಭಿನ್ನ ಕೋಮಿನ ಯುವಕರು ಪಿಲಿಕುಳದ ಮಾನಸ ವಾಟರ್ ಪಾರ್ಕ್ ನಲ್ಲಿ ಎಂಜಾಯ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ನಾಲ್ವರಿಗೂ ಹಲ್ಲೆಗೈಯುವ ಮೂಲಕ ನೈತಿಕ ಪೋಲಿಸ್ ಗಿರಿ ನಡೆಸಿದ್ದಾರೆ. ವಿಷಯ

ಪಿಲಿಕುಳ: ಎಂಜಾಯ್ ಮಾಡುತ್ತಿದ್ದ ಭಿನ್ನ ಕೋಮಿನ ಜೋಡಿಗಳು ► ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ನಾಲ್ವರಿಗೆ ಥಳಿತ Read More »

ಕರಾವಳಿ

ಇಂದು ದೇಶಾದ್ಯಂತ ವೈದ್ಯರ ಮುಷ್ಕರ

(ನ್ಯೂಸ್ ಕಡಬ) newskadaba.com ನವದೆಹಲಿ, ಜ.02. ರಾಷ್ಟ್ರೀಯ ವೈದ್ಯಕೀಯ ಆಯೋಗ ರಚನೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, ಇಂದು ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ದೇಶಾದ್ಯಂತ ಈಗಾಗಲೇ ಹೊರ ರೋಗಿಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಸಂಜೆ 6 ಗಂಟೆಯವರೆಗೆ ತುರ್ತು ಸೇವೆ ಚಿಕಿತ್ಸೆ ಹೊರತುಪಡಿಸಿ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಭಾರತೀಯ ವೈದ್ಯಕೀಯ ಪರಿಷತ್ ಬದಲಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸಲು ಮುಂದಾಗಿರುವ ಕ್ರಮಕ್ಕೆ ವಿರೋಧ ವ್ಯಕ್ತವಾಗಿದ್ದು, ಇದರ ಬದಲಿಗೆ ವೈದ್ಯಕೀಯ ಪರಿಷತ್ ಅನ್ನೇ

ಇಂದು ದೇಶಾದ್ಯಂತ ವೈದ್ಯರ ಮುಷ್ಕರ Read More »

ರಾಷ್ಟ್ರೀಯ ನ್ಯೂಸ್

ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಪಡೆಯುವ ಯಂತ್ರಗಳಾಗಬಾರದು: ಶಕುಂತಲಾ ಶೆಟ್ಟಿ ► ಕಡಬದ ಏಮ್ಸ್ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಜ. 01. ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ಒಳ್ಳೆಯ ಅಂಕಗಳನ್ನು ಪಡೆಯಬೇಕೇ ವಿನಹಃ ಅಂಕಗಳನ್ನು ಪಡೆಯುವ ಯಂತ್ರಗಳಾಗಬಾರದು ಎಂದು ರಾಜ್ಯ ಸರಕಾರದ ಸಂಸದೀಯ ಕಾರ್ಯದರ್ಶಿ ಶ್ರೀಮತಿ ಶಕುಂತಲಾ ಶೆಟ್ಟಿ ಹೇಳಿದರು. ಅವರು ಸೋಮವಾರದಂದು ಕಡಬ ಏಮ್ಸ್ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕೆ ಬೇಕಾಗಿರುವುದು ಪದವಿ ಅಲ್ಲ‌. ಬದಲಾಗಿ ತಾನು ಪಡೆದಿರುವ ಪದವಿಯಲ್ಲಿ ಸಮಾಜಕ್ಕೆ ಏನು ಕೊಟ್ಟಿದ್ದೇನೆ ಎನ್ನುವುದನ್ನು ತಿಳಿದುಕೊಂಡು ಉತ್ತಮ ಪ್ರಜೆಗಳಾಗಿ

ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಪಡೆಯುವ ಯಂತ್ರಗಳಾಗಬಾರದು: ಶಕುಂತಲಾ ಶೆಟ್ಟಿ ► ಕಡಬದ ಏಮ್ಸ್ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ Read More »

ಕರಾವಳಿ

ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದ ► ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.01. ಪ್ರೇಮ ವೈಫಲ್ಯಗೊಂಡ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಎಂಬಲ್ಲಿ ಸೋಮವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಮಂಗಳೂರಿನ ಪಿಯು ಕಾಲೇಜು ವಿದ್ಯಾರ್ಥಿನಿ ರುಬೀನಾ(17) ಎಂದು ಗುರುತಿಸಲಾಗಿದೆ. ನವೆಂಬರ್ ತಿಂಗಳಿನಲ್ಲಿ ತನ್ನದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆಯ ಪ್ರಿಯಕರ ಪಿಲಾರು ನಿವಾಸಿ ಅರ್ಫಾಝ್ ಆತ್ಮಹತ್ಯೆ ಮಾಡಿಕೊಂಡಿದ್ದನೆನ್ನಲಾಗಿದ್ದು, ಅದರಿಂದ ಮನನೊಂದ ರುಬೀನಾ ಸೋಮವಾರದಂದು ತನ್ನ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದ ► ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ

ಹೊಸ ವರ್ಷದಂದು ಜನಿಸಿದ ಮೊದಲ ಮಗುವಿಗೆ ಸಿಕ್ಕಿತು ಬಂಪರ್ ಗಿಫ್ಟ್ ► 5 ಲಕ್ಷ ರೂ. ವಿತರಿಸಿದ ಮೇಯರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.01. ಈ ಮೊದಲೇ ಘೋಷಿಸಿದ್ದಂತೆ ರಾಜಾಜಿನಗರದ ಭಾಷ್ಯಂ ಸರ್ಕಲ್ ನಲ್ಲಿರುವ ಡಾ. ನಾಗರಾಜ್ ಸ್ಮಾರಕ ಆಸ್ಪತ್ರೆಯಲ್ಲಿ ರಾತ್ರಿ 12 ಗಂಟೆ 5 ನಿಮಿಷಕ್ಕೆ ಜನಿಸಿದ ಮೊದಲ ಹೆಣ್ಣು ಮಗುವಿಗೆ ಬೆಂಗಳೂರು ಮೇಯರ್ ಸಂಪತ್ ರಾಜ್ ಅವರು 5 ಲಕ್ಷ ರೂ. ಮೌಲ್ಯದ ಚೆಕ್ ವಿತರಣೆ ಮಾಡಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡುವ ಉದ್ದೇಶದಿಂದ 2018ನೇ ವರ್ಷದ ಸಹಜ ಹೆರಿಗೆಯ ಮೂಲಕ ಜನಿಸುವ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿ ಮೇಯರ್ ರವರು

ಹೊಸ ವರ್ಷದಂದು ಜನಿಸಿದ ಮೊದಲ ಮಗುವಿಗೆ ಸಿಕ್ಕಿತು ಬಂಪರ್ ಗಿಫ್ಟ್ ► 5 ಲಕ್ಷ ರೂ. ವಿತರಿಸಿದ ಮೇಯರ್ Read More »

ಕರ್ನಾಟಕ

ಬೆಳ್ತಂಗಡಿ: ಹೊಸ ವರ್ಷಾಚರಣೆ ಮುಗಿಸಿ ಮನೆಗೆ ಬಂದ ಮಗ ► ಕುಡಿದ ಮತ್ತಿನಲ್ಲಿ ತಂದೆಗೆ ಗಾಜಿನ ಚೂರಿನಿಂದ ಇರಿತ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ.01. ಹೊಸ ವರ್ಷದ ಸಂತೋಷ ಕೂಟ ಮುಗಿಸಿ ಕಂಠ ಮೂರ್ತಿ ಕುಡಿದು ಬಂದ ಮಗನೋರ್ವ ಕುಡಿತದ ಮತ್ತಿನಲ್ಲಿ ತಂದೆಗೆ ಗಾಜಿನ ಚೂರಿನಿಂದ ಇರಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಇರಿತಕ್ಕೊಳಗಾದವರನ್ನು ಬೆಳ್ತಂಗಡಿಯ ಚರ್ಚ್ ಕ್ರಾಸ್ ಬಳಿಯ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ. ತನ್ನ ಪುತ್ರ ನವೀನ್ ಎಂಬಾತ ಡಿಸೆಂಬರ್ 31 ರ ತಡರಾತ್ರಿ ಕುಡಿತದ ಅಮಲಿನಲ್ಲಿ ಮನೆಗೆ ಬಂದು ಕೈಗೆ ಸಿಕ್ಕ ವಸ್ತುಗಳಿಂದ ಕಿಟಕಿ-ಗಾಜು, ಟಿವಿಗಳನ್ನು ಹಾನಿಗೊಳಿಸಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಆತನ ತಂದೆ

ಬೆಳ್ತಂಗಡಿ: ಹೊಸ ವರ್ಷಾಚರಣೆ ಮುಗಿಸಿ ಮನೆಗೆ ಬಂದ ಮಗ ► ಕುಡಿದ ಮತ್ತಿನಲ್ಲಿ ತಂದೆಗೆ ಗಾಜಿನ ಚೂರಿನಿಂದ ಇರಿತ Read More »

ಕರಾವಳಿ

ಹೊಸ ವರ್ಷದಂದೇ ನಡೆಯಿತು ಭೀಕರ ಅಪಘಾತ ► ನಿಂತಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದು ಐವರು ಮೃತ್ಯು

(ನ್ಯೂಸ್ ಕಡಬ)‌ newskadaba.com ಬೆಂಗಳೂರು, ಜ.01. ನಿಂತಿದ್ದ ಕ್ಯಾಂಟರ್ ಗೆ ಹಿಂದಿನಿಂದ ಕಾರೊಂದು ಢಿಕ್ಕಿಯಾದ ಪರಿಣಾಮವಾಗಿ ಒಂದೇ ಕುಟುಂಬದ ಐವರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗವಿಮಠ ಬಳಿ ಸೋಮವಾರದಂದು ಬೆಳಗ್ಗಿನ ಜಾವ ನಡೆದಿದೆ. ಮೃತ ದುರ್ದೈವಿಗಳನ್ನು ಚೌಡನಕುಪ್ಪೆ ಮದ್ದೂರು ನಿವಾಸಿಗಳಾದ ಸಿದ್ದೋಜಿ ರಾವ್(65), ಉಷಾಬಾಯಿ(35), ಕೀರ್ತನಾ(7),ಹಿತೇಶ್(3), ಭುವನಾ(16) ಎಂದು ಗುರುತಿಸಲಾಗಿದೆ. ಇವರು ಹೊಸ ವರ್ಷದ ಅಂಗವಾಗಿ ಇಂದು ಮುಂಜಾನೆ ಕೊರಟಗೆರೆ ಗೊರವನಹಳ್ಳಿ ಲಕ್ಷ್ಮೀ ದೇವಸ್ಥಾನಕ್ಕೆ ಪೂಜೆಗಾಗಿ ತೆರಳುತ್ತಿದ್ದಾಗ ಈ

ಹೊಸ ವರ್ಷದಂದೇ ನಡೆಯಿತು ಭೀಕರ ಅಪಘಾತ ► ನಿಂತಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದು ಐವರು ಮೃತ್ಯು Read More »

ಕರ್ನಾಟಕ

ಇಂದು(ಜ.01) ಕಡಬದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ► ರಾಜ್ಯ ಕಾರ್ಯದರ್ಶಿ ಬಿ.ಎಂ.ಫಾರೂಕ್ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಜ.01. ಇಲ್ಲಿನ ಅನುಗ್ರಹ ಸಭಾಭವನದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಪಕ್ಷದ ಕಾರ್ಯಕರ್ತರ ಸಭೆಯು ಅನುಗ್ರಹ ಸಭಾಭವನದಲ್ಲಿ ಜ.1ರಂದು ಸಂಜೆ ನಡೆಯಲಿದೆ.   ಸಭೆಗೆ  ಜಾತ್ಯಾತೀತ ಜನತಾದಳದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್, ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞ, ರಾಜ್ಯ ಉಪಾಧ್ಯಕ್ಷ ಕೆ. ಅಮರನಾಥ ಶೆಟ್ಟಿ, ಎಂ.ಬಿ. ಸದಾಶಿವ, ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಾಕೆ ಮಾಧವ ಗೌಡ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಲಿದ್ದಾರೆ ಕಡಬ ತಾಲೂಕು ಜಾತ್ಯಾತಿತ ಜನತಾದಳದ ಅಧ್ಯಕ್ಷ ಸೈಯದ್

ಇಂದು(ಜ.01) ಕಡಬದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ► ರಾಜ್ಯ ಕಾರ್ಯದರ್ಶಿ ಬಿ.ಎಂ.ಫಾರೂಕ್ ಭೇಟಿ Read More »

ಕರಾವಳಿ

ಬಿಳಿನೆಲೆ ಪರಿಸರದಲ್ಲಿ ವ್ಯಾಪಕ ಕಾಡಾನೆ ಹಾವಳಿ ► ಭಯದ ವಾತಾವರಣದಲ್ಲಿ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಕಡಬ, ಡಿ.31. ಸಮೀಪದ ಬಿಳಿನೆಲೆ ಗ್ರಾಮದ ಪುತ್ತಿಲ ಬೈಲು, ಚಿದ್ಗಲ್ ಪರಿಸರದಲ್ಲಿ ಕಳೆದ ಕೆಲವು ದಿಗಳಿಂದ ಕಾಡಾನೆ ಲಗ್ಗೆ ಇಟ್ಟು ಕೃಷಿ ನಾಶವಾಗುತ್ತಿದೆ. ಇದರಿಂದಾಗಿ ಪರಿಸರದ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪುತ್ತಿಲಬೈಲು ಹರಿಯಪ್ಪ ಗೌಡ, ಹಿರಿಯಣ್ಣ ಗೌಡ, ನಾಗಪ್ಪ ಗೌಡ, ಕೇಶವ ಗೌಡ, ಮುಂತಾದವರ ತೋಟಕ್ಕೆ ದಾಳಿ ನಡೆಸಿರುವ ಆನೆ 15 ಕ್ಕಿಂತಲೂ ಹೆಚ್ಚು ತೆಂಗಿನ ಮರ, 20 ಕ್ಕಿಂತಳು ಹೆಚ್ಚು ಅಡಕೆ ಮರ, ತೋಟದಲ್ಲಿ ನೀರಾವರಿಗಾಗಿ ಬಳಸುವ ಸ್ಪ್ರಿಂಕ್ಲರ್, ಪೈಪು

ಬಿಳಿನೆಲೆ ಪರಿಸರದಲ್ಲಿ ವ್ಯಾಪಕ ಕಾಡಾನೆ ಹಾವಳಿ ► ಭಯದ ವಾತಾವರಣದಲ್ಲಿ ಗ್ರಾಮಸ್ಥರು Read More »

ಕರಾವಳಿ
Scroll to Top