News Kadaba Desk

ಹೆತ್ತ ತಾಯಿಯನ್ನೇ ಟೆರೇಸಿನಿಂದ ತಳ್ಳಿಹಾಕಿ ಕೊಂದ ವಿದ್ಯಾವಂತ ಮಗ ► ಆರೋಪಿ ಸಹಾಯಕ ಪ್ರೊಫೆಸರ್ ಬಂಧನ

(ನ್ಯೂಸ್ ಕಡಬ) newskadaba.com ರಾಜ್ ಕೋಟ್, ಜ.06. ವೃದ್ಧ ತಾಯಿಯನ್ನು ಪಾಲನೆ ಮಾಡಲು ಕಷ್ಟವಾಗುತ್ತದೆ ಎಂದು ವಿದ್ಯಾವಂತ ಮಗನೇ ಟೆರೇಸ್ ನಿಂದ ತಳ್ಳಿ ಹಾಕಿ ಕೊಂದ ಹೃದಯ ವಿದ್ರಾವಕ ಘಟನೆ ರಾಜ್ ಕೋಟ್ ನಲ್ಲಿ ನಡೆದಿದೆ. ತಾಯಿಯನ್ನು ಕೊಂದ ಮಗನನ್ನು ರಾಜ್ ಕೋಟ್ ನ ಫಾರ್ಮಸಿ ಕಾಲೇಜ್ನ ಸಹಾಯಕ ಪ್ರೊಫೆಸರ್ ಸಂದೀಪ್ ನಾಥ್ವಾನಿ ಎಂದು ಗುರುತಿಸಲಾಗಿದೆ. ಈತ ತನ್ನ ತಾಯಿ ಜಯಶ್ರೀ ಬೆನ್ ರನ್ನು ಟೆರೆಸ್ ನಿಂದ ತಳ್ಳಿ ಹಾಕಿ ಕೊಂದ‌ ನಂತರ ಬಾಲ್ಕಣಿಯಲ್ಲಿ ಕುಳಿತಿದ್ದ ತಾಯಿ […]

ಹೆತ್ತ ತಾಯಿಯನ್ನೇ ಟೆರೇಸಿನಿಂದ ತಳ್ಳಿಹಾಕಿ ಕೊಂದ ವಿದ್ಯಾವಂತ ಮಗ ► ಆರೋಪಿ ಸಹಾಯಕ ಪ್ರೊಫೆಸರ್ ಬಂಧನ Read More »

ರಾಷ್ಟ್ರೀಯ ನ್ಯೂಸ್

ನಾಳೆ(ಜ.07) ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ ► 200 ಕೋಟಿ ರೂ‌. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.06. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನವರಿ 7ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಬೆಳ್ತಂಗಡಿ, ಪುತ್ತೂರು ಹಾಗೂ ಮೂಡಬಿದ್ರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 200 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಭಾನುವಾರ ಬೆಳಿಗ್ಗೆ 10.40ಕ್ಕೆ ಬೆಳ್ತಂಗಡಿಗೆ ಆಗಮಿಸುವ ಮುಖ್ಯಮಂತ್ರಿಗಳು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಮಧ್ಯಾಹ್ನ 12.45 ಕ್ಕೆ  ಬೆಳ್ತಂಗಡಿಯಿಂದ ಹೆಲಿಕಾಪ್ಟರ್ ಮೂಲಕ ಹೊರಟು 1.05

ನಾಳೆ(ಜ.07) ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ ► 200 ಕೋಟಿ ರೂ‌. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ Read More »

ಕರ್ನಾಟಕ

ಶೀಘ್ರದಲ್ಲೇ ಬರಲಿದೆ 10 ರೂ‌. ನೂತನ ನೋಟು ► ನೂತನ ನೋಟಿನ ವಿನ್ಯಾಸ ಹೇಗಿದೆ ಎಂದು ತಿಳಿಯಬೇಕೆ…?

(ನ್ಯೂಸ್ ಕಡಬ) newskadaba.com ನವದೆಹಲಿ, ಜ.05. ಹತ್ತು ರೂ. ಮುಖಬೆಲೆಯ ನೂತನ ನೋಟನ್ನು ಶೀಘ್ರದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸಲಿದೆ ಎಂದು ಆರ್ ಬಿ ಐ ಪ್ರಕಟಿಸಿದೆ. 12.3 ಸೆಂ.ಮೀ. ಉದ್ದ ಹಾಗೂ 6.3 ಸೆಂ.ಮೀ. ಅಗಲ ನೂತನ ನೋಟಿನಲ್ಲಿ ಕೋನಾರ್ಕ್ ಪ್ರಸಿದ್ಧ ಸೂರ್ಯ ದೇವಸ್ಥಾನದ ವಿಶೇಷ ಚಿತ್ರಣ ಇರಲಿದೆ‌. ಚಾಕೊಲೇಟ್ ಕಂದು ಬಣ್ಣದಲ್ಲಿ ಮುದ್ರಣಗೊಳ್ಳಲಿರುವ ಈ ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಚಿತ್ರವಿರಲಿದ್ದು, ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ರವರ ಸಹಿ ಇರಲಿದೆ ಎಂದು ಆರ್ಬಿಐ

ಶೀಘ್ರದಲ್ಲೇ ಬರಲಿದೆ 10 ರೂ‌. ನೂತನ ನೋಟು ► ನೂತನ ನೋಟಿನ ವಿನ್ಯಾಸ ಹೇಗಿದೆ ಎಂದು ತಿಳಿಯಬೇಕೆ…? Read More »

ರಾಷ್ಟ್ರೀಯ ನ್ಯೂಸ್

ಕಡಬ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ ► ಅಧ್ಯಕ್ಷರಾಗಿ ಕೆ.ಎಸ್.ಬಾಲಕೃಷ್ಣ ಕೊೖಲ, ಪ್ರ.ಕಾರ್ಯದರ್ಶಿಯಾಗಿ ನಾಗರಾಜ್ ಎನ್.ಕೆ. ಪುನರಾಯ್ಕೆ

(ನ್ಯೂಸ್ ಕಡಬ) newskadaba.com  ಕಡಬ, ಜ.05. ತಾಲೂಕು ಪರ್ತಕರ್ತರ ಸಂಘದ ಅಧ್ಯಕ್ಷರಾಗಿ ವಿಜಯಕರ್ನಾಟಕ ಪತ್ರಿಕೆಯ ಕಡಬ ವರದಿಗಾರ ಕೆ.ಎಸ್.ಬಾಲಕೃಷ್ಣ ಕೊೖಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉದಯವಾಣಿ ಪತ್ರಿಕೆಯ ಕಡಬ ವರದಿಗಾರ ನಾಗರಾಜ್ ಎನ್.ಕೆ ಪುನರಾಯ್ಕೆಯಾಗಿದ್ದಾರೆ. ಶುಕ್ರವಾರದಂದು ಕಡಬದ ಪ್ರೆಸ್ ಕ್ಲಬ್ನಲ್ಲಿ ಬಾಲಕೃಷ್ಣ ಕೊೖಲ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಹೊಸದಿಗಂತ ಹಾಗೂ ಉದಯವಾಣಿಯ ಸವಣೂರು ವರದಿಗಾರ ಪ್ರವೀಣ್ ಚೆನ್ನಾವರ, ಜತೆ ಕಾರ್ಯದರ್ಶಿಯಾಗಿ ವಾರ್ತಾಭಾರತಿ ಪತ್ರಿಕೆಯ ಕಡಬ ವರದಿಗಾರ ತಸ್ಲೀಂ ಮರ್ಧಾಳ, ಕೋಶಾಧಿಕಾರಿಯಾಗಿ

ಕಡಬ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ ► ಅಧ್ಯಕ್ಷರಾಗಿ ಕೆ.ಎಸ್.ಬಾಲಕೃಷ್ಣ ಕೊೖಲ, ಪ್ರ.ಕಾರ್ಯದರ್ಶಿಯಾಗಿ ನಾಗರಾಜ್ ಎನ್.ಕೆ. ಪುನರಾಯ್ಕೆ Read More »

ಕರಾವಳಿ

ಬಿಳಿನೆಲೆ: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನ

(ನ್ಯೂಸ್ ಕಡಬ) newskadaba.com ಕಡಬ, ಜ.05. ಕೃಷಿಗೆಂದು ತಂದಿರಿಸಲಾಗಿದ್ದ ಕೀಟನಾಶಕವನ್ನು ಸೇವಿಸಿ ವ್ಯಕ್ತಿಯೋರ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರದಂದು ಠಾಣಾ ವ್ಯಾಪ್ತಿಯ ಬಿಳಿನೆಲೆ ಎಂಬಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದವರನ್ನು ಬಿಳಿನೆಲೆ ಬೈಲು ನಿವಾಸಿ ಪುಟ್ಟಣ್ಣ ಗೌಡ (65) ಎಂದು ಗುರುತಿಸಲಾಗಿದೆ. ಇವರು ತನ್ನ ಮನೆಯಲ್ಲಿ ಕೃಷಿಗೆಂದು ತಂದಿರಿಸಲಾಗಿದ್ದ ಕೀಟನಾಶಕವನ್ನು ಸೇವಿಸಿದ್ದು, ತಕ್ಷಣವೇ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ,‌ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಳಿನೆಲೆ: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನ Read More »

ಕರಾವಳಿ

ಕಡಬದ ಯಶೋದಾ ಜನರಲ್ ಸ್ಟೋರ್‌ನಲ್ಲಿ ಬೃಹತ್ ದರಕಡಿತದ ತರಕಾರಿ ಮೇಳ ► ಟೊಮ್ಯಾಟೊ, ಸಾಂಬಾರ್ ಸೌತೆ 05 ರೂ. ಉಳಿದಂತೆ ತರಕಾರಿಗಳಿಗೆ 10 ರೂ.

(ನ್ಯೂಸ್ ಕಡಬ) newskadaba.com ಕಡಬ, ಜ.05. ಟೊಮ್ಯಾಟೊ, ಸಾಂಬಾರ್ ಸೌತೆ ಕಿಲೋವೊಂದಕ್ಕೆ 05 ರೂ. ಉಳಿದ ತರಕಾರಿಗಳಿಗೆ 10 ರೂ. ನಂತೆ ದರ ನಿಗದಿಪಡಿಸಲಾಗಿದೆ. ಇದು ಎಲ್ಲೋ ಘಟ್ಟ ಪ್ರದೇಶದಲ್ಲಿನ ತರಕಾರಿಗಳ ದರ ಪಟ್ಟಿ ಎಂದು ಭಾವಿಸಬೇಡಿ. ಕಡಬದ ಯಶೋದಾ ಜನರಲ್ ಸ್ಟೋರ್‌ನಲ್ಲಿ ಭಾರೀ ದರಕಡಿತದ ತರಕಾರಿ ಮೇಳ ಜನವರಿ 05 ಶುಕ್ರವಾರದಿಂದ ನಡೆಯಲಿದೆ. ಈ ಮೇಳದಲ್ಲಿ ಲೋಡು ಲೋಡು ತರಕಾರಿಗಳನ್ನು ನೇರವಾಗಿ ಬೆಳೆಗಾರರ ಕೈಯಿಂದ ತರಿಸಿಕೊಂಡು ಗ್ರಾಹಕರಿಗೆ ನೀಡಲಾಗುತ್ತದೆ. ಉಳಿದಂತೆ ತರಕಾರಿಗಳಾದ ಬಟಾಟೆ, ಮೂಲಂಗಿ, ನವಿಲುಕೋಸು,

ಕಡಬದ ಯಶೋದಾ ಜನರಲ್ ಸ್ಟೋರ್‌ನಲ್ಲಿ ಬೃಹತ್ ದರಕಡಿತದ ತರಕಾರಿ ಮೇಳ ► ಟೊಮ್ಯಾಟೊ, ಸಾಂಬಾರ್ ಸೌತೆ 05 ರೂ. ಉಳಿದಂತೆ ತರಕಾರಿಗಳಿಗೆ 10 ರೂ. Read More »

ಕರಾವಳಿ

ಕಾರ್ಕಳ: ಯುವಕನಿಗೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ತಂಡ ► ಗಾಯಾಳು ಯುವಕ ಆಸ್ಪತ್ರೆಗೆ

(ನ್ಯೂಸ್ ಕಡಬ) newskadaba.com ಕಾರ್ಕಳ, ಜ.05. ಕರಾವಳಿಯಲ್ಲಿ ಕೋಮು ಘರ್ಷಣೆಯ ಬಿಸಿ ಆರುವುದಕ್ಕಿಂತ ಮೊದಲೇ ಯುವಕನೋರ್ವನಿಗೆ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಕಾರ್ಕಳದ ಬಂಗ್ಲೆಗುಡ್ಡೆ ಜಂಕ್ಷನ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಫುಲ್ಕೇರಿ ನಿವಾಸಿ ಮೊಹ್ಸಿನ್ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಬಂಗ್ಲೆಗುಡ್ಡೆ ಜಂಕ್ಷನ್ ನಲ್ಲಿ ನಿಂತಿದ್ದಾಗ ಉಡುಪಿ ಜಿಲ್ಲಾ ಬಜರಂಗದಳದ ಮುಖಂಡ ಮಹೇಶ್ ಶೆಣೈ ನೇತೃತ್ವದಲ್ಲಿ ಬಂದ ಆರೇಳು ಮಂದಿಯ ತಂಡ ಮೊಹ್ಸಿನ್ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದೆ ಎಂದು ಪೊಲೀಸ್ ದೂರು

ಕಾರ್ಕಳ: ಯುವಕನಿಗೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ತಂಡ ► ಗಾಯಾಳು ಯುವಕ ಆಸ್ಪತ್ರೆಗೆ Read More »

ಕರ್ನಾಟಕ

ಪಾಣೆಮಂಗಳೂರು: ಬಸ್-ಸ್ಕೂಟರ್ ಢಿಕ್ಕಿ ► ಸವಾರರಿಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜ.04. ಹೀರೋ ಮೆಸ್ಟ್ರೋ ದ್ವಿಚಕ್ರ ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿಯುಂಟಾದ ಪರಿಣಾಮ ಸವಾರರಿಬ್ಬರು ಮೃತಪಟ್ಟ ದಾರುಣ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಎಂಬಲ್ಲಿ ಗುರುವಾರದಂದು ನಡೆದಿದೆ. ಮೃತರನ್ನು ಸಜೀಪ ನಿವಾಸಿಗಳಾದ ಅಝಾದ್(20) ಮತ್ತು ಮಹಮ್ಮದ್ ಹರ್ಷಿದ್ (18) ಎಂದು ಗುರುತಿಸಲಾಗಿದೆ. ಬಂಟ್ವಾಳ ದಿಂದ ಮೆಲ್ಕಾರ್ ಕಡೆಗೆ ದ್ವಿಚಕ್ರ ವಾಹನದಲ್ಲಿ ಸ್ನೇಹಿತರಿಬ್ಬರು ತೆರಳುತ್ತಿದ್ದಾಗ ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿಯಾಗಿದೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೆಲ್ಕಾರ್

ಪಾಣೆಮಂಗಳೂರು: ಬಸ್-ಸ್ಕೂಟರ್ ಢಿಕ್ಕಿ ► ಸವಾರರಿಬ್ಬರು ಮೃತ್ಯು Read More »

ಕರಾವಳಿ

ಕೊನೆಗೂ ದೀಪಕ್ ಕುಟುಂಬಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದ ಜಿಲ್ಲಾಡಳಿತ ► ರುದ್ರಭೂಮಿ ತಲುಪಿದ ದೀಪಕ್ ಮೃತದೇಹ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.04. ಬುಧವಾರದಂದು ಮಧ್ಯಾಹ್ನ ಕಾಟಿಪಳ್ಳದಲ್ಲಿ ಬರ್ಬರ ಹತ್ಯೆಗೀಡಾಗಿರುವ ಬಿಜೆಪಿ ಕಾರ್ಯಕರ್ತ ದೀಪಕ್ ಅವರ ಮೃತದೇಹವನ್ನು ಸ್ವೀಕರಿಸುವ ಮೊದಲು ಗೃಹ ಸಚಿವರು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದಿದ್ದ ದೀಪಕ್ ಕುಟುಂಬ ಸದಸ್ಯರು ಹಾಗೂ ಕಾಟಿಪಳ್ಳ ಗ್ರಾಮಸ್ಥರನ್ನು ಮನವೊಲಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಸಿಕಾಂತ್ ಸೆಂಥಿಲ್ ಹಾಗೂ ನಗರ ಪೊಲೀಸ್ ಆಯುಕ್ತ ಸುರೇಶ್ ಯಶಸ್ವಿಯಾಗಿದ್ದಾರೆ. ಸರಕಾರದ ವತಿಯಿಂದ ಆರಂಭದಲ್ಲಿ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿತ್ತು. ಬಡ ಕುಟುಂಬದ ದೀಪಕ್‌ಗೆ 50 ಲಕ್ಷ ರೂ.

ಕೊನೆಗೂ ದೀಪಕ್ ಕುಟುಂಬಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದ ಜಿಲ್ಲಾಡಳಿತ ► ರುದ್ರಭೂಮಿ ತಲುಪಿದ ದೀಪಕ್ ಮೃತದೇಹ Read More »

ಕರಾವಳಿ

ದೀಪಕ್ ರಾವ್ ಹತ್ಯೆ ಖಂಡಿಸಿ ಕಡಬದಲ್ಲಿ ರಸ್ತೆ ತಡೆದು ಪ್ರತಿಭಟನೆ ► ರಾಜ್ಯ ಸರಕಾರದ ವಿರುದ್ಧ ಘೋಷಣೆ

(ನ್ಯೂಸ್ ಕಡಬ) newskadaba.com ಕಡಬ, ಜ.04. ಬುಧವಾರ ಮಧ್ಯಾಹ್ನ ಕಾಟಿಪಳ್ಳದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತನ ಕೊಲೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನ ಸುಮಾರು 20 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಮುಖಂಡ ರವಿರಾಜ್ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಹಿಂದೂ ಸಮುದಾಯದ ಮೇಲೆ ಮತಾಂಧ ದುಷ್ಕರ್ಮಿಗಳಿಂದ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವವರ ಹಲ್ಲೆ, ಕೊಲೆಯು ಎಗ್ಗಿಲ್ಲದೆ ನಡೆಯುತ್ತಿದೆ.

ದೀಪಕ್ ರಾವ್ ಹತ್ಯೆ ಖಂಡಿಸಿ ಕಡಬದಲ್ಲಿ ರಸ್ತೆ ತಡೆದು ಪ್ರತಿಭಟನೆ ► ರಾಜ್ಯ ಸರಕಾರದ ವಿರುದ್ಧ ಘೋಷಣೆ Read More »

ಕರಾವಳಿ
Scroll to Top