News Kadaba Desk

ಮೊಬೈಲ್ ಚಾರ್ಜ್ ವೇಳೆ ಚಾರ್ಜರ್ ವೈರನ್ನು ಕಚ್ಚಿದ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಫೆ.02. ಮೊಬೈಲ್ ಚಾರ್ಜ್ ಆಗುತ್ತಿದ್ದ ವೇಳೆ ಚಾರ್ಜರ್ ವೈರ್ ಅನ್ನು ಕಚ್ಚಿದ ಪರಿಣಾಮ ಮಗುವೊಂದು ಮೃತಪಟ್ಟ ಘಟನೆ ಜಿಲ್ಲೆಯ ಆಲ್ದೂರಿನಲ್ಲಿ ನಡೆದಿದೆ. ಮೃತ ಮಗುವನ್ನು ಆಲ್ದೂರು ನಿವಾಸಿ ಇಂದ್ರೇಶ್ ಎಂಬವರ ಪುತ್ರ ಅಭಿಷೇಕ್(4) ಎಂದು ಗುರುತಿಸಲಾಗಿದೆ. ಮೊಬೈಲ್ ಚಾರ್ಜ್ ಆಗುತ್ತಿದ್ದ ವೇಳೆ ಪಕ್ಕದಲ್ಲಿದ್ದ ಅಭಿಷೇಕ್ ಆಟವಾಡುತ್ತಾ ಚಾರ್ಜರ್ ವೈರ್ ನ್ನು ಬಾಯಲ್ಲಿ ಕಚ್ಚಿದ್ದು, ತಕ್ಷಣ ವಿದ್ಯುತ್ ಶಾಕ್ ಹೊಡೆದು ಗಂಭೀರ ಗಾಯಗೊಂಡಿದ್ದ ಅಭಿಷೇಕ್ ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ […]

ಮೊಬೈಲ್ ಚಾರ್ಜ್ ವೇಳೆ ಚಾರ್ಜರ್ ವೈರನ್ನು ಕಚ್ಚಿದ ಮಗು ಮೃತ್ಯು Read More »

ಕರ್ನಾಟಕ

ಮಾಣಿ: ಬಸ್ – ಕಾರು ಢಿಕ್ಕಿ ► ಕಾರು ಚಾಲಕ ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಫೆ.02. ಹಠಾತ್ತನೆ ರಸ್ತೆಗೆ ಬಂದ ನಾಗರ ಹಾವು ಚಕ್ರದಡಿಗೆ ಬೀಳುವುದನ್ನು ತಪ್ಪಿಸಿದ ಕಾರಿನ ಹಿಂದಿದ್ದ ಬಸ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಓಮ್ನಿ ಕಾರಿಗೆ ಢಿಕ್ಕಿಯಾದ ಪರಿಣಾಮ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ನಡೆದಿದೆ. ಉಪ್ಪಿನಂಗಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ಸಿನ ಮುಂಭಾಗದಿಂದ ಸಂಚರಿಸುತ್ತಿದ್ದ ಕಾರಿಗೆ ಹಠಾತ್ತನೆ ಅಡ್ಡ ಬಂದ ನಾಗರಹಾವನ್ನು ತಪ್ಪಿಸಲು ಕಾರು ಚಾಲಕ ಬ್ರೇಕ್ ಹಾಕಿದ್ದು, ಈ ಸಂದರ್ಭದಲ್ಲಿ ಹಿಂದಿನಿಂದ

ಮಾಣಿ: ಬಸ್ – ಕಾರು ಢಿಕ್ಕಿ ► ಕಾರು ಚಾಲಕ ಗಂಭೀರ Read More »

ಕರಾವಳಿ

ಆರೋಗ್ಯ ಕ್ಷೇತ್ರಕ್ಕೆ ಭರ್ಜರಿ ಕೊಡುಗೆಗಳನ್ನು ನೀಡಿದ ಕೇಂದ್ರ ಬಜೆಟ್

ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ►ವಿಸಿಎಫ್ (ವೆಂಚರ್ ಕ್ಯಾಪಿಟಲ್ ಫಂಡ್)ಗಳು ಮತ್ತು ಆ್ಯಂಜೆಲ್ ಇನ್‌ವೆಸ್ಟರ್‌ಗಳ ಬೆಳವಣಿಗೆಗೆ ನೂತನ ಕ್ರಮಗಳು ಮತ್ತು ಹೂಡಿಕೆಯನ್ನು ಹೆಚ್ಚಿಸುವುದಕ್ಕಾಗಿ ನೂತನ ತೆರಿಗೆ ನಿಯಮಗಳು. ►ಫೋನ್‌ಗಳು ಮತ್ತು ಟಿವಿಗಳು ಸೇರಿದಂತೆ ಆಮದಿತ ಇಲೆಕ್ಟ್ರಾನಿಕ್ಸ್ ಉಪಕರಣಗಳು ದುಬಾರಿಯಾಗಲಿವೆ. ಮೊಬೈಲ್ ಫೋನ್‌ಗಳ ಮೇಲಿನ ಕಸ್ಟಮ್ ಸುಂಕವನ್ನು 15 ಶೇ.ದಿಂದ 20 ಶೇ.ಕ್ಕೆ ಹಾಗೂ ಕೆಲವು ಮೊಬೈಲ್ ಭಾಗಗಳ ಕಸ್ಟಮ್ ಸುಂಕವನ್ನು 15 ಶೇ.ಕ್ಕೆ ಮತ್ತು ಟಿವಿಗಳ ಕೆಲವು ಭಾಗಗಳ ಕಸ್ಟಮ್ ತೆರಿಗೆಯನ್ನು 15 ಶೇ.ಕ್ಕೆ ಏರಿಸಲು ಸರಕಾರ ಉದ್ದೇಶಿಸಿದೆ. ►ಆರೋಗ್ಯ

ಆರೋಗ್ಯ ಕ್ಷೇತ್ರಕ್ಕೆ ಭರ್ಜರಿ ಕೊಡುಗೆಗಳನ್ನು ನೀಡಿದ ಕೇಂದ್ರ ಬಜೆಟ್ Read More »

ರಾಷ್ಟ್ರೀಯ ನ್ಯೂಸ್

ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕಡಿದು ಕೊಲೆಗೆ ಯತ್ನಿಸಿದ ಭೂಪ ► ಪ್ರೀತಿಯನ್ನು ಉಳಿಸಲು ಮದುವೆಗೂ ಮೊದಲೇ ನಡೆದಿತ್ತು ತಲವಾರು ಕಾರುಬಾರು

(ನ್ಯೂಸ್ ಕಡಬ) newskadaba.com ಕಾರ್ಕಳ, ಫೆ.01. ಕಳೆದ ಒಂದು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕಡಿದು ಕೊಲೆಗೆ ಪ್ರಯತ್ನಿಸಿದ ಘಟನೆ ಹೆರ್ಮುಂಡೆಯ ಕುಕ್ಕುದಡಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವತಿಯನ್ನು ಹೆರ್ಮುಂಡೆ ಕರ್‍ಜಿಪಲ್ಕೆ ನಿವಾಸಿ ಶ್ರೀಧರ್ ಪೂಜಾರಿ ಮತ್ತು ಸುಗುಣ ಪೂಜಾರಿ ದಂಪತಿಗಳ ಅನುಶ್ರೀ (23) ಎಂದು ಗುರುತಿಸಲಾಗಿದ್ದು, ಘಟನೆಯಿಂದ ತನ್ನ ಎರಡು ಕೈಗಳು ಹಾಗೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಜೀವನ್ಮರಣ ಸ್ಥಿತಿಯಲ್ಲಿರುವ ಮಹಿಳೆಯನ್ನು ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಲಾಗಿದೆ. ಆಕೆಯ ಪತಿ ಹೆರ್ಮುಂಡೆಯ

ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕಡಿದು ಕೊಲೆಗೆ ಯತ್ನಿಸಿದ ಭೂಪ ► ಪ್ರೀತಿಯನ್ನು ಉಳಿಸಲು ಮದುವೆಗೂ ಮೊದಲೇ ನಡೆದಿತ್ತು ತಲವಾರು ಕಾರುಬಾರು Read More »

ಕರಾವಳಿ

ಕಲ್ಮಡ್ಕ: ಅಮಾನುಷ ರೀತಿಯಲ್ಲಿ ಜಾನುವಾರು ಸಾಗಾಟ ಪತ್ತೆ ► ಓಮ್ನಿ, ಬೈಕ್ ಸೇರಿ ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಫೆ.01. ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಎಲ್ಲಿಂದಲೋ ಕಳ್ಳತನ ಮಾಡಿ ಹಿಂಸಾತ್ಮಕ ರೀತಿಯಲ್ಲಿ ಕೈಕಾಲು ಕಟ್ಟಿ ಮಾರುತಿ ಓಮ್ನಿ ಕಾರಿನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಬೆಳ್ಳಾರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ. ಮಾರುತಿ ಓಮ್ನಿ (KA. 21.N.1129) ಕಾರಿನಲ್ಲಿ ಅಮಾನುಷವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಬೆಳ್ಳಾರೆ ಪೊಲೀಸರು ಠಾಣಾ ವ್ಯಾಪ್ತಿಯ ಕಲ್ಮಡ್ಕ ಗ್ರಾಮದ ಅಡಿಬಾಯಿ ಎಂಬಲ್ಲಿ

ಕಲ್ಮಡ್ಕ: ಅಮಾನುಷ ರೀತಿಯಲ್ಲಿ ಜಾನುವಾರು ಸಾಗಾಟ ಪತ್ತೆ ► ಓಮ್ನಿ, ಬೈಕ್ ಸೇರಿ ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ Read More »

ಕರಾವಳಿ

ಫೆಬ್ರವರಿ 04 ಕ್ಕೆ ಮತ್ತೊಮ್ಮೆ ಕರ್ನಾಟಕ ಬಂದ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.01. ಮಹದಾಯಿ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಬಗೆ ಹರಿಸುವ ಭರವಸೆಯನ್ನು ನೀಡದೇ ಇದ್ದರೆ ಫೆ.04 ರಂದು ಬೆಂಗಳೂರು ಬಂದ್ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ರಾಜ್ಯ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯುವಂತೆ ಮನವಿ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಅವರು ಬುಧವಾರದಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾವು ಜನವರಿ 25 ರಂದು ಸ್ವಯಂ ಪ್ರೇರಿತವಾಗಿ ಕರ್ನಾಟಕ

ಫೆಬ್ರವರಿ 04 ಕ್ಕೆ ಮತ್ತೊಮ್ಮೆ ಕರ್ನಾಟಕ ಬಂದ್ Read More »

ಕರ್ನಾಟಕ

ಕಾಲು ಮುರಿತಕ್ಕೊಳಗಾಗಿ ನರಳಾಡುತ್ತಿದ್ದ ಮಂಡ್ಯದ ಮಹಿಳೆಗೆ ನೆರವು ► ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.01. ಕಾಲು ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆಯಲೆಂದು ಆಂಧ್ರಪ್ರದೇಶದ ಪುತ್ತೂರಿಗೆ ತೆರಳಬೇಕಿದ್ದ ಮಹಿಳೆಯೋರ್ವರು ವಿಳಾಸದ ಗೊಂದಲದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸಿ ಇತ್ತ ವಿಳಾಸ ಸಿಗದೆ, ಅತ್ತ ಊರಿಗೂ ಹೋಗಲು ದುಡ್ಡಿಲ್ಲದೆ ಒದ್ದಾಡುತ್ತಿದ್ದ ಮಹಿಳೆಯೋರ್ವರಿಗೆ ಪುತ್ತೂರು ಶಾಸಕಿ ಸಹಾಯಹಸ್ತ ನೀಡಿದ ಘಟನೆ ಬುಧವಾರದಂದು ಸಂಜೆ ನಡೆದಿದೆ. ಮುರಿತಕ್ಕೊಳಗಾಗಿದ್ದ ಮಂಡ್ಯ ಮೂಲದ ಬಡ ಮಹಿಳೆ ಚಿಕಿತ್ಸೆಗೆಂದು ಪ್ರಸಿದ್ಧ ನಾಟಿ ಮದ್ದು ನೀಡಲಾಗುವ ಆಂಧ್ರಪ್ರದೇಶದ ಪುತ್ತೂರಿಗೆಂದು ಹೊರಟಿದ್ದರು. ಆದರೆ ವಿಳಾಸದ ಗೊಂದಲದಿಂದಾಗಿ ದಕ್ಷಿಣ ಕನ್ನಡದ

ಕಾಲು ಮುರಿತಕ್ಕೊಳಗಾಗಿ ನರಳಾಡುತ್ತಿದ್ದ ಮಂಡ್ಯದ ಮಹಿಳೆಗೆ ನೆರವು ► ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ Read More »

ಕರಾವಳಿ

ರಸ್ತೆ ಬದಿ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋದ ಪೋಷಕರು ► ಆಕ್ರಂದನ ಕೇಳಿ ಮಗುವನ್ನು ರಕ್ಷಿಸಿದ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಫೆ.01. ನಾಲ್ಕು ತಿಂಗಳ ಹೆಣ್ಣು ಮಗುವೊಂದನ್ನು ರಸ್ತೆ ಬದಿ ಬಿಟ್ಟು ಹೋಗಿರುವ ಘಟನೆ ಚಿಕ್ಕಬಳ್ಳಾಪುರದ ಪೊಶೆಟ್ಟಿಹಳ್ಳಿ ಗ್ರಾಮದಲ್ಲಿ ಬುಧವಾರದಂದು ಬೆಳಿಗ್ಗೆ ನಡೆದಿದೆ. ಪೊಶೆಟ್ಟಿಹಳ್ಳಿ ಗ್ರಾಮದ ಹೋಟೆಲೊಂದರ ಬಳಿ ಮಗುವೊಂದರ ಆಕ್ರಂದನ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಗ್ರಾಮಸ್ಥರಿಗೆ ಅಚ್ಚರಿ ಕಾದಿತ್ತು. ಯಾರೋ ನಾಲ್ಕು ತಿಂಗಳ ಹೆಣ್ಣು ಮಗುವೊಂದನ್ನು ಬಿಟ್ಟು ಹೋಗಿದ್ದನ್ನು ಕಂಡು ಗ್ರಾಮದ ನರಸಪ್ಪ ಎಂಬವರ ಕುಟುಂಬವು ಮಗುವನ್ನು ರಕ್ಷಿಸಿ ಆರೈಕೆ ಮಾಡಿದೆ. ಬಳಿಕ ಈ ಬಗ್ಗೆ ಸ್ಥಳೀಯರು ಮಕ್ಕಳ ಕಲ್ಯಾಣ

ರಸ್ತೆ ಬದಿ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋದ ಪೋಷಕರು ► ಆಕ್ರಂದನ ಕೇಳಿ ಮಗುವನ್ನು ರಕ್ಷಿಸಿದ ಗ್ರಾಮಸ್ಥರು Read More »

ಕರ್ನಾಟಕ

ಇಂದು ಬಹುನಿರೀಕ್ಷಿತ ‘ಕೇಂದ್ರ ಬಜೆಟ್ -2018’ ► ಜಿಎಸ್ಟಿ ಜಾರಿಯಾದ ನಂತರದ ಮೊದಲ ಬಜೆಟ್

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಫೆ.01. ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಬಹು ನಿರೀಕ್ಷಿತ ಐದನೇ ಮುಂಗಡಪತ್ರವನ್ನು ವಿತ್ತಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಸಂಸತ್ತಿನಲ್ಲಿ ಮಂಡಿಸಲಿದ್ದು, ಆರ್ಥಿಕ ಹಾಗೂ ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆಗಳನ್ನು ನಿರೀಕ್ಷಿಸಲಾಗಿದೆ. ಪೂರ್ವ ಸಿದ್ಧತೆಯ ಕೊರತೆಗಳ ಹೊರತಾಗಿಯೂ ನೋಟ್ ಬ್ಯಾನ್ ಹಾಗೂ ಸರಕು ಸೇವಾ ತೆರಿಗೆಯನ್ನು ಜಾರಿಗೆ ತಂದಿದ್ದರಿಂದಾಗಿ ಕುಸಿದಿರುವ ಆರ್ಥಿಕ ಮಟ್ಟವನ್ನು ಮೇಲೆತ್ತುವ ಕಠಿಣ ಸವಾಲು ವಿತ್ತ ಸಚಿವ ಅರುಣ್ ಜೈಟ್ಲಿಯವರ ಮುಂದಿದೆ‌. ಪ್ರಸಕ್ತ ಸಾಲಿನಲ್ಲಿ 8 ರಾಜ್ಯಗಳಲ್ಲಿ ನಡೆಯಲಿರುವ

ಇಂದು ಬಹುನಿರೀಕ್ಷಿತ ‘ಕೇಂದ್ರ ಬಜೆಟ್ -2018’ ► ಜಿಎಸ್ಟಿ ಜಾರಿಯಾದ ನಂತರದ ಮೊದಲ ಬಜೆಟ್ Read More »

ರಾಷ್ಟ್ರೀಯ ನ್ಯೂಸ್

ಸುಂಕದಕಟ್ಟೆ: ರಸ್ತೆ ಬದಿ ನಿಂತಿದ್ದ ಯುವಕನಿಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ► ಯುವಕ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಜ.31. ರಸ್ತೆ ಬದಿ ನಿಂತಿದ್ದ ಯುವಕನೋರ್ವನಿಗೆ ಕೆಎಸ್ಸಾರ್ಟಿಸಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಯುವಕ ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಸುಂಕದಕಟ್ಟೆ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಗಾಯಾಳು ಯುವಕನನ್ನು ಸುಂಕದಕಟ್ಟೆ ಸಮೀಪದ ಮೂಜೂರು ನಿವಾಸಿ ಆಸಿಫ್ ಎಂದು ಗುರುತಿಸಲಾಗಿದೆ. ಈತ ಸುಂಕದಕಟ್ಟೆ ದರ್ಗಾ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದಾಗ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಯುವಕನಿಗೆ ಕಡಬ

ಸುಂಕದಕಟ್ಟೆ: ರಸ್ತೆ ಬದಿ ನಿಂತಿದ್ದ ಯುವಕನಿಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ► ಯುವಕ ಗಂಭೀರ Read More »

ಕರಾವಳಿ
Scroll to Top