News Kadaba Desk

ಅಬುಧಾಬಿಯಲ್ಲಿ ಖುಲಾಯಿಸಿತು ಕೇರಳದ ಯುವಕನ ಅದೃಷ್ಟ ► ​ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಭಾರತೀಯ

(ನ್ಯೂಸ್ ಕಡಬ) newskadaba.com ಅಬುದಾಬಿ, ಫೆ.07. ಉದ್ಯೋಗ ನಿಮಿತ್ತ ಅಬುದಾಬಿಯಲ್ಲಿ ನೆಲೆಸಿದ್ದ ಕೇರಳದ ನಿವಾಸಿಯೊಬ್ಬರು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿ ಹೊರಹೊಮ್ಮಿದ್ದಾರೆ‌. ಕೋಟ್ಯಾಧಿಪತಿ ಅದೃಷ್ಟವಂತನನ್ನು ಕೇರಳದ ಕೃಷ್ಣನ್ ಕುಟ್ಟಿ ನಾಯರ್ ಎಂದು ಗುರುತಿಸಲಾಗಿದ್ದು, ಇವರು 500 ದಿರ್ಹಮ್ ಬೆಲೆಯ ರ್ಯಾಫಲ್ ಟಿಕೆಟನ್ನು ಗೆಳೆಯರ ಪಾಲುದಾರಿಕೆಯಲ್ಲಿ ಖರೀದಿಸಿದ್ದರು. ಇದೀಗ 10 ಮಿಲಿಯನ್ ದಿರ್ಹಮ್ (ಸುಮಾರು 17.68 ಕೋಟಿ ರೂ.) ಗೆಲ್ಲುವ ಮೂಲಕ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಇವರು ತಮಗೆ ಸಿಕ್ಕ ಬಹುಮಾನ ಮೊತ್ತವನ್ನು ತಮ್ಮ ಮೂವರು ಗೆಳೆಯರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು […]

ಅಬುಧಾಬಿಯಲ್ಲಿ ಖುಲಾಯಿಸಿತು ಕೇರಳದ ಯುವಕನ ಅದೃಷ್ಟ ► ​ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಭಾರತೀಯ Read More »

ಅಂತರ್ರಾಷ್ಟ್ರೀಯ ನ್ಯೂಸ್

ಕೊಕ್ಕಡ: ಲಂಚಕ್ಕಾಗಿ ಬೇಡಿಕೆಯಿಟ್ಟ ಗ್ರಾ.ಪಂ. ಅಧ್ಯಕ್ಷ ಹಾಗೂ ಪಿಡಿಓ ಎಸಿಬಿ ಬಲೆಗೆ ► ವಂಚನೆಯ ಬಲೆಯಲ್ಲಿ ಸಿಲುಕಿಸಲು ಲಂಚ ಬೇಡಿಕೆಯ ಆರೋಪ – ಗ್ರಾ.ಪಂ. ಅಧ್ಯಕ್ಷ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.06. ಕೊಕ್ಕಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಹಿಂದೆ ಮಾಡಲಾಗಿದ್ದ ಕಾಮಗಾರಿಯ ಬಿಲ್ ಪಾಸ್ಮಾಡಲು ಕೊಕ್ಕಡ ಗ್ರಾ.ಪಂ ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್ ಇವರು ಗುತ್ತಿಗೆದಾರ ಉಮ್ಮರ್ ಮಲ್ಲಿಗೆಮಜಲು  ಎಂಬವರಿಂದ 50,000ರೂ. ಲಂಚದ ಬೇಡಿಕೆ ಇಟ್ಟಿದ್ದಾಗಿ ಗ್ರಾ.ಪಂ. ಅಧ್ಯಕ್ಷರ ಮೇಲೆ ಗುತ್ತಿಗೆದಾರ ಎಸಿಬಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ 35 ಸಾವಿರವನ್ನು ಸದ್ರಿ ಗುತ್ತಿಗೆದಾರರಿಂದ ಕೊಕ್ಕಡ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಪುರುಷೋತ್ತಮ ಜಿ. ಇವರು ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೋಲೀಸರು ದಾಳಿ ನಡೆಸಿ ಗ್ರಾ.ಪಂ. ಅಧ್ಯಕ್ಷ ಮತ್ತು ಗ್ರಾ.ಪಂ.

ಕೊಕ್ಕಡ: ಲಂಚಕ್ಕಾಗಿ ಬೇಡಿಕೆಯಿಟ್ಟ ಗ್ರಾ.ಪಂ. ಅಧ್ಯಕ್ಷ ಹಾಗೂ ಪಿಡಿಓ ಎಸಿಬಿ ಬಲೆಗೆ ► ವಂಚನೆಯ ಬಲೆಯಲ್ಲಿ ಸಿಲುಕಿಸಲು ಲಂಚ ಬೇಡಿಕೆಯ ಆರೋಪ – ಗ್ರಾ.ಪಂ. ಅಧ್ಯಕ್ಷ Read More »

ಕರಾವಳಿ

ಮೂಡುಬಿದಿರೆ: ಬೈಕ್ – ಬಸ್ ಢಿಕ್ಕಿ ► ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಫೆ.06. ಬಸ್ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರದಂದು ಮೂಡಬಿದಿರೆಯಲ್ಲಿ ನಡೆದಿದೆ. ಮೃತ ಸವಾರನನ್ನು ಮೂಡುಬಿದಿರೆಯ ಹಂಡೇಲು ನಿವಾಸಿ ಯಾಸೀರ್ ಎಂದು ಗುರುತಿಸಲಾಗಿದೆ. ಈತ ತನ್ನ ಬೈಕಿನಲ್ಲಿ ತೆರಳುತ್ತಿದ್ದಾಗ ಹಂಡೇಲು ಸಮೀಪ ಖಾಸಗಿ ಬಸ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆನ್ನಲಾಗಿದೆ. ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಡುಬಿದಿರೆ: ಬೈಕ್ – ಬಸ್ ಢಿಕ್ಕಿ ► ಬೈಕ್ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

15 ವರ್ಷಗಳಿಗಿಂತ ಹಳೆಯ ವಾಹನಗಳು ಇನ್ಮುಂದೆ ಗುಜರಿಗೆ ► ಹಸಿರು ನ್ಯಾಯಾಧಿಕರಣದ ಆದೇಶವನ್ನು ಪಾಲಿಸಲು ಮುಂದಾದ ಕೇಂದ್ರ ಸರ್ಕಾರ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ನವದೆಹಲಿ, ಫೆ.06. ನೀವು 15 ವರ್ಷಗಳ ಹಿಂದಿನ ವಾಹನಗಳನ್ನು ಉಪಯೋಗಿಸುತ್ತಿದ್ದಲ್ಲಿ ಶೀಘ್ರದಲ್ಲೇ ಗುಜರಿಗೆ ಹಾಕಬೇಕಷ್ಟೇ. 2014 ರಲ್ಲಿ ಹಸಿರು ನ್ಯಾಯಾಧಿಕರಣ ಹೊರಡಿಸಿದ್ದ ಆದೇಶವನ್ನು ಪಾಲಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, 15 ವರ್ಷಗಳಿಗೂ ಹಳೆಯದಾದ 4 ಚಕ್ರ ಹಾಗೂ ದ್ವಿಚಕ್ರ ಸೇರಿದಂತೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತದೆ. ಇಂತಹದ್ದೊಂದು ನಿಯಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀಘ್ರವೇ ಜಾರಿಗೆ ಬರಲಿದ್ದು, ತದನಂತರ ದೇಶದೆಲ್ಲೆಡೆ ಜಾರಿಯಾಗುವ ಸಂಭವವಿದೆ. ಹಳೆಯ ವಾಹನವನ್ನು ಹೊಂದಿರುವವರು ಅದು ಸುಸ್ಥಿತಿಯಲ್ಲಿದ್ದರೂ

15 ವರ್ಷಗಳಿಗಿಂತ ಹಳೆಯ ವಾಹನಗಳು ಇನ್ಮುಂದೆ ಗುಜರಿಗೆ ► ಹಸಿರು ನ್ಯಾಯಾಧಿಕರಣದ ಆದೇಶವನ್ನು ಪಾಲಿಸಲು ಮುಂದಾದ ಕೇಂದ್ರ ಸರ್ಕಾರ Read More »

ರಾಷ್ಟ್ರೀಯ ನ್ಯೂಸ್

ಪತಂಜಲಿ ಉತ್ಪನ್ನ ಖರೀದಿದಾರರಿಗೆ ಶುಭ ಸುದ್ದಿ ► ಪತಂಜಲಿ ಗ್ರಾಹಕರಿಗೆ ಸಿಗಲಿದೆ ‘ಆರೋಗ್ಯ ವಿಮೆ’ ಸೌಲಭ್ಯ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಫೆ.06. ಈಗಾಗಲೇ ದಿಗ್ಗಜ ಕಂಪನಿಗಳಿಗೆಲ್ಲಾ ಪೈಪೋಟಿ ನೀಡಿರುವ ಪತಂಜಲಿ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ನೀಡಲು ಬಾಬಾ ರಾಮ್ ದೇವ್ ಮುಂದಾಗಿದ್ದಾರೆ. ಬಳ್ಳಾರಿಯಲ್ಲಿ ಆಯೋಜಿಸಿರುವ ಯೋಗ ಶಿಬಿರದಲ್ಲಿ ಪಾಲ್ಗೊಂಡ ನಂತರ, ಬಳ್ಳಾರಿಯ ಪತಂಜಲಿ ಸ್ಟೋರ್ ಗೆ ಭೇಟಿ ನೀಡಿ ಮಾತನಾಡಿದ ಅವರು, ಪತಂಜಲಿ ಸ್ಟೋರ್ ಗಳಲ್ಲಿ 500 ರೂ. ಗಿಂತ ಹೆಚ್ಚಿನ ಮೊತ್ತದ ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕರಿಗೆ ಲೋಯಾಲ್ಟಿ ಕಾರ್ಡ್ ನೀಡಲಾಗುವುದು. ಅಪಘಾತದಲ್ಲಿ ಮೃತಪಟ್ಟವರಿಗೆ 5 ಲಕ್ಷ ರೂ., ಅಂಗವೈಕಲ್ಯರಾದಲ್ಲಿ

ಪತಂಜಲಿ ಉತ್ಪನ್ನ ಖರೀದಿದಾರರಿಗೆ ಶುಭ ಸುದ್ದಿ ► ಪತಂಜಲಿ ಗ್ರಾಹಕರಿಗೆ ಸಿಗಲಿದೆ ‘ಆರೋಗ್ಯ ವಿಮೆ’ ಸೌಲಭ್ಯ Read More »

ರಾಷ್ಟ್ರೀಯ ನ್ಯೂಸ್

ಲಕ್ಷದ್ವೀಪಕ್ಕೆ ತೆರಳಿದ ಹಡಗು ನೀರುಪಾಲು ► ಆರು ಸಿಬ್ಬಂದಿಗಳ ರಕ್ಷಣೆ

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಮಂಗಳೂರು, ಫೆ.06. ಬಂದರಿನಿಂದ ಸರಕು ಸಾಗಿಸುತ್ತಾ ಲಕ್ಷದ್ವೀಪದತ್ತ ತೆರಳಿದ್ದ ಹಡಗು ಕಡಲಿನ ಪ್ರಕ್ಷುಬ್ಧ ಅಲೆಗೆ ಸಿಲುಕಿ ಭಾರೀ ಬಂಡೆಕಲ್ಲಿಗೆ ಬಡಿದು ಇಬ್ಬಾಗವಾಗಿ ನೀರುಪಾಲಾದ ಘಟನೆ ಸೋಮವಾರದಂದು ನಡೆದಿದೆ ಎನ್ನಲಾಗಿದೆ. ಹಡಗಿನಲ್ಲಿದ್ದ ಆರು ಮಂದಿ ಸಿಬ್ಬಂದಿಗಳನ್ನು ಅಲ್ಲಿನ ಮೀನುಗಾರರು ಕ್ಷಿಪ್ರ ಕಾರ್ಯಾಚರಣೆ ಮೂಲಕ ರಕ್ಷಿಸಿದ್ದಾರೆ. ಲಕ್ಷದ್ವೀಪದ ಹಾದಿ ಮಧ್ಯೆ ಸಿಗುವ ಕಿಲ್ಟನ್ ಎಂಬಲ್ಲಿ ಸಿಲುಕಿಕೊಂಡ ನೌಕೆಯಿಂದ ಸರಕು ಖಾಲಿ ಮಾಡಲು ಬಹಳಷ್ಟು ಪ್ರಯತ್ನ ನಡೆದರೂ ಬಹುತೇಕ ಸರಕು ಕಡಲ ಪಾಲಾಗಿದೆ. ಬೆಂಗ್ರೆ

ಲಕ್ಷದ್ವೀಪಕ್ಕೆ ತೆರಳಿದ ಹಡಗು ನೀರುಪಾಲು ► ಆರು ಸಿಬ್ಬಂದಿಗಳ ರಕ್ಷಣೆ Read More »

ಕರಾವಳಿ

ರಾಜ್ಯ ರಾಜಧಾನಿಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆ ► ರಕ್ಷಣೆಗಾಗಿ ಕಿ.ಮೀ. ಓಡಿದರೂ ನಡುರಸ್ತೆಯಲ್ಲೇ ಅಟ್ಟಾಡಿಸಿ ಕೊಂದರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.06. ರೌಡಿ ಶೀಟರ್ ಓರ್ವನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಹತ್ಯೆಗೈದ ಘಟನೆ ಸೋಮವಾರದಂದು ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ದುಷ್ಕರ್ಮಿಗಳಿಂದ ಹತ್ಯೆಗೊಳಗಾದಾತನ್ನು ರೌಡಿ ಸೈಕಲ್ ರವಿ ಸಹಚರ ಬನಶಂಕರಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಕುಮಾರ್ ಎಂದು ಗುರುತಿಸಲಾಗಿದೆ. ಯಲಚೇನಹಳ್ಳಿ ಮೆಟ್ರೋ ಸಮೀಪ ಈ ಹತ್ಯೆ ನಡೆದಿದ್ದು, ದುಷ್ಕರ್ಮಿಗಳು ನಡು ರಸ್ತೆಯಲ್ಲಿಯೇ ಅಟ್ಟಾಡಿಸಿ ಹೊಡೆದಿದ್ದಾರೆ. ಕುಮಾರ್ ಪ್ರಾಣ ಉಳಿಸಿಕೊಳ್ಳಲು ಒಂದು ಕಿಮೀ ಓಡಿದರೂ ಬೆನ್ನು ಬಿಡದ ದುಷ್ಕರ್ಮಿಗಳು ಕುಮಾರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ರಾಜ್ಯ ರಾಜಧಾನಿಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆ ► ರಕ್ಷಣೆಗಾಗಿ ಕಿ.ಮೀ. ಓಡಿದರೂ ನಡುರಸ್ತೆಯಲ್ಲೇ ಅಟ್ಟಾಡಿಸಿ ಕೊಂದರು Read More »

ಕರ್ನಾಟಕ

ಆಕಾಶಭವನ ಬಶೀರ್ ಕೊಲೆ ಪ್ರಕರಣ ► ಮತ್ತೋರ್ವ ಆರೋಪಿ ಪುತ್ತೂರಿನಲ್ಲಿ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.06. ಇತ್ತೀಚೆಗೆ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ನಡೆದ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ನಡೆದ ಆಕಾಶಭವನ ನಿವಾಸಿ ಬಶೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಕಾವೂರು ಪೊಲೀಸರು ಸೋಮವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಭಿಷೇಕ್ ಆರ್.ಎಸ್.(21) ಎಂದು ಗುರುತಿಸಲಾಗಿದೆ. ಪುತ್ತೂರು ತಾಲೂಕಿನ ಬನ್ನೂರು ಎಂಬಲ್ಲಿದ್ದ ಆರೋಪಿಯನ್ನು ವಿಶೇಷ ತನಿಖಾ ತಂಡದ ಕಾವೂರು ಠಾಣಾ ಪೊಲೀಸ್ ನಿರೀಕ್ಷಕ ಕೆ.ಆರ್.ನಾಯ್ಕ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಪ್ರಕರಣಕ್ಕೆ

ಆಕಾಶಭವನ ಬಶೀರ್ ಕೊಲೆ ಪ್ರಕರಣ ► ಮತ್ತೋರ್ವ ಆರೋಪಿ ಪುತ್ತೂರಿನಲ್ಲಿ ಬಂಧನ Read More »

ಕರಾವಳಿ

ನೆಕ್ಕಿಲಾಡಿ: ಅಕ್ರಮ ಮದ್ಯ ಮಾರಾಟ ► ಹೊಟೇಲ್ ಮಾಲಕ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.06. ಯಾವುದೇ ಪರವಾನಗಿ ಇಲ್ಲದೆ ಅಕ್ರಮ ಮದ್ಯ ಮಾರಾಟವನ್ನು ಪತ್ತೆಹಚ್ಚಿರುವ ಬಂಟ್ವಾಳ ಪೊಲೀಸರು ವಿವಿಧ ಕಂಪೆನಿಗಳ ಮದ್ಯವನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ ಘಟನೆ ಕಡೇಶ್ವಾಲ್ಯದಲ್ಲಿ ಸೋಮವಾರದಂದು ನಡೆದಿದೆ. ಕಡೆಶ್ವಾಲ್ಯದ ನೆಕ್ಕಿಲಾಡಿಯ ಹೊಟೆಲ್ ನಲ್ಲಿ ಅಕ್ರಮವಾಗಿ ಯಾವುದೇ ಪರವಾನಗೆ ಇಲ್ಲದೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ 4,720 ರೂ ಬೆಲೆಯ ವಿವಿಧ ಕಂಪನಿಗಳ 11.880 ಲೀಟರ್

ನೆಕ್ಕಿಲಾಡಿ: ಅಕ್ರಮ ಮದ್ಯ ಮಾರಾಟ ► ಹೊಟೇಲ್ ಮಾಲಕ ಬಂಧನ Read More »

ಕರಾವಳಿ

ಕೌಕ್ರಾಡಿ: ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.05. ಅನಾರೋಗ್ಯದಿಂದ ಬಳಲುತ್ತಿದ್ದ ಅವಿವಾಹಿತ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ಕೌಕ್ರಾಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೌಕ್ರಾಡಿ ಗ್ರಾಮದ ಕೊಕ್ಕಡ ಕಾಪಿನ ಬಾಗಿಲು ನಿವಾಸಿ ದಿ| ದುಗ್ಗಣ್ಣ ಗೌಡ ಎಂಬವರ ಪುತ್ರ ನೇಮಣ್ಣ ಗೌಡ (56) ಎಂದು ಗುರುತಿಸಲಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರು ತನ್ನ ಅನಾರೋಗ್ಯ ಪೀಡಿತ ತಾಯಿಯೊಂದಿಗೆ ವಾಸವಾಗಿದ್ದರು. ಅವಿವಾಹಿತರಾಗಿದ್ದ ಇವರು ಸೋಮವಾರ ಸಂಜೆ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೌಕ್ರಾಡಿ: ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ
Scroll to Top