News Kadaba Desk

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಬೇಟೆಯನ್ನು ಮುಂದುವರಿಸಿದ ಭಾರತ ► ಮನು ಭಾಕರ್, ಪೂನಂ ಯಾದವ್ ರಿಗೆ ಚಿನ್ನ

(ನ್ಯೂಸ್ ಕಡಬ) newskadaba.com ಆಸ್ಟ್ರೇಲಿಯಾ, ಎ.08. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ನಾಲ್ಕನೇ ದಿನವಾದ ಇಂದು ಕೂಡಾ ಭಾರತವು ಮತ್ತೆರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಆರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಭಾರತದ ಪೂನಂ ಯಾದವ್ ಮತ್ತು ಮನು ಭಾಕರ್ ದೇಶಕ್ಕೆ ಚಿನ್ನ ಗೆದ್ದುಕೊಟ್ಟಿದ್ದು, ಭಾರತದ ಶೂಟರ್ ಹೀನಾ ಸಿಧು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಭಾರತದ ಶೂಟರ್ ರವಿಕುಮಾರ್ ಅವರು ಕಂಚು ಗೆದ್ದುಕೊಂಡಿದ್ದಾರೆ. 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ರವಿಕುಮಾರ್ ಅವರು […]

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಬೇಟೆಯನ್ನು ಮುಂದುವರಿಸಿದ ಭಾರತ ► ಮನು ಭಾಕರ್, ಪೂನಂ ಯಾದವ್ ರಿಗೆ ಚಿನ್ನ Read More »

ಕ್ರೀಡಾ ನ್ಯೂಸ್

ಕೆಎಸ್ಸಾರ್ಟಿಸಿಯಲ್ಲಿ 726 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ‌ ಆಹ್ವಾನ ► ಬಿಎಂಟಿಸಿಯಲ್ಲಿ 100 ವಿವಿಧ ಹುದ್ದೆಗಳಿಗೂ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಉದ್ಯೋಗ ಮಾಹಿತಿ, ಎ.08. ಕೆಎಸ್ಸಾರ್ಟಿಸಿ 726 ತಾಂತ್ರಿಕ ಸಹಾಯಕ ಹುದ್ದೆ ಹಾಗೂ ಬಿಎಂಟಿಸಿ 100 ಕಿರಿಯ ಸಹಾಯಕ ಕಮ್‌ ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಎಪ್ರಿಲ್ 25 ಕೊನೆಯ ದಿನಾಂಕವಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಯಲ್ಲಿ 826 ಹುದ್ದೆಗಳ ಭರ್ತಿಗೆ ಈ ಕೆಳಗೆ ಕಾಣಿಸಿದ ದಾಖಲಾತಿಗಳು ಬೇಕಾಗಿದೆ. ಅಂಚೆ ಕಚೇರಿಯಲ್ಲಿ ಅರ್ಜಿ ಶುಲ್ಕ ಪಾವತಿಸಿದ ಚಲನ್‌ನ ಪ್ರತಿ, ಹುದ್ದೆಗೆ

ಕೆಎಸ್ಸಾರ್ಟಿಸಿಯಲ್ಲಿ 726 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ‌ ಆಹ್ವಾನ ► ಬಿಎಂಟಿಸಿಯಲ್ಲಿ 100 ವಿವಿಧ ಹುದ್ದೆಗಳಿಗೂ ಅರ್ಜಿ ಆಹ್ವಾನ Read More »

ಉದ್ಯೋಗ

11 ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯ ► ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್

(ನ್ಯೂಸ್ ಕಡಬ) newskadaba.com ಮುಂಬೈ, ಎ.08. ಶನಿವಾರದಂದು ನಡೆದ ಐಪಿಎಲ್ 11ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 1 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ಮುನ್ನುಡಿ ಇಟ್ಟಿದೆ. ಆಲ್‌ರೌಂಡರ್ ಡ್ವೆಯ್ನೆ ಬ್ರಾವೊ ಅವರ (30 ಎಸೆತಗಳಲ್ಲಿ 68 ರನ್) ಅರ್ಧಶತಕ ಹಾಗೂ ಕೇದಾರ್ ಜಾಧವ್ ಸಂದರ್ಭೋಚಿತ ಬ್ಯಾಟಿಂಗ್ ನೆರವಿನಿಂದ ಐಪಿಎಲ್‌ನ ಆರಂಭಿಕ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಶ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ

11 ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯ ► ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ Read More »

ಕ್ರೀಡಾ ನ್ಯೂಸ್

ಪುತ್ತೂರು ಬಿಜೆಪಿ ಅಭ್ಯರ್ಥಿ ಆಯ್ಕೆಯ ಕಗ್ಗಂಟಿಗೆ ಕೊನೆಗೂ ತೆರೆ ► ಅಭ್ಯರ್ಥಿಯಾಗಿ ಸಂಜೀವ ಮಠಂದೂರು ಬಹುತೇಕ ಖಚಿತ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.07. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯ ಕಗ್ಗಂಟು ಕೊನೆಗೂ ಅಂತಿಮಗೊಂಡಿದ್ದು, ಪುತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಂಜೀವ ಮಠಂದೂರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅಭ್ಯರ್ಥಿ ಸ್ಥಾನಕ್ಕೆ ಕ್ಷೇತ್ರ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ಸದಸ್ಯ, ಹಿರಿಯ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹಾಗೂ ಹಿಂದೂ ಸಂಘಟನಾ ನಾಯಕ ಅರುಣ್ ಕುಮಾರ್ ಪುತ್ತಿಲರವರ ಹೆಸರು ಪ್ರಬಲವಾಗಿ ಕೇಳಿ

ಪುತ್ತೂರು ಬಿಜೆಪಿ ಅಭ್ಯರ್ಥಿ ಆಯ್ಕೆಯ ಕಗ್ಗಂಟಿಗೆ ಕೊನೆಗೂ ತೆರೆ ► ಅಭ್ಯರ್ಥಿಯಾಗಿ ಸಂಜೀವ ಮಠಂದೂರು ಬಹುತೇಕ ಖಚಿತ Read More »

ಕರಾವಳಿ

ಫರಂಗಿಪೇಟೆ: ತನ್ನಿಂತಾನೇ ಹೊತ್ತಿ ಉರಿದ ಜೇಬಲ್ಲಿಟ್ಟಿದ್ದ ಮೊಬೈಲ್ ► ಕಡಿಮೆ ಬೆಲೆಯ ಮೊಬೈಲ್ ಖರೀದಿಸುವಾಗ ಎಚ್ಚರ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.07. ಇತ್ತೀಚೆಗೆ ಫ್ಲಿಪ್ಕಾರ್ಟ್ ನಲ್ಲಿ ಖರೀದಿಸಿದ ಮೊಬೈಲ್ ಫೋನೊಂದು ಕೈಯಲ್ಲಿ‌ ಹಿಡಿದಿರುವಾಗಲೇ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಮಂಗಳೂರು ಹೊರವಲಯದ ಫರಂಗಿಪೇಟೆಯಲ್ಲಿ ಶನಿವಾರದಂದು ನಡೆದಿದೆ. ಫರಂಗಿಪೇಟೆ ನಿವಾಸಿ ಶರೀಖ್ ಮಹಮ್ಮದ್ ಇಬ್ರಾಹಿಂ ಎಂಬವರು 2018 ಜನವರಿ 19 ರಂದು ಫ್ಲಿಪ್ಕಾರ್ಟ್ ನಲ್ಲಿ ಐವೊಮಿ ಕಂಪನಿಗೆ ಸೇರಿದ 6500 ಬೆಲೆಯ ಮೊಬೈಲನ್ನು ಖರೀದಿಸಿದ್ದರು. ಶನಿವಾರದಂದು ಮೊಬೈಲನ್ನು ತನ್ನ ಕೈಯಲ್ಲಿ ಹಿಡಿದಿದ್ದ ಸಂದರ್ಭದಲ್ಲಿ ಏಕಾಏಕಿ ಮೊಬೈಲ್ ಒಳಗಿನಿಂದ ಶಬ್ದವೊಂದು ಕೇಳಿ ಬಂದಿದ್ದು, ಇದರಿಂದ

ಫರಂಗಿಪೇಟೆ: ತನ್ನಿಂತಾನೇ ಹೊತ್ತಿ ಉರಿದ ಜೇಬಲ್ಲಿಟ್ಟಿದ್ದ ಮೊಬೈಲ್ ► ಕಡಿಮೆ ಬೆಲೆಯ ಮೊಬೈಲ್ ಖರೀದಿಸುವಾಗ ಎಚ್ಚರ Read More »

ಕರಾವಳಿ

ಸಾವಿನ ದವಡೆಯಿಂದ ಮಹಿಳೆ ಮತ್ತು ಮಕ್ಕಳಿಬ್ಬರ ಪ್ರಾಣವುಳಿಸಿದ ಕೊಕ್ಕಡದ ಯುವಕರು ► ಯುವಕರಿಬ್ಬರ ಸಮಯೋಚಿತ ಕಾರ್ಯಕ್ಕೆ ಜಿಲ್ಲಾ ಎಸ್ಪಿಯವರಿಂದ ಪ್ರಶಂಸಾ ಪತ್ರ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.07. ನಾಲ್ಕು ದಿನಗಳ ಹಿಂದೆ ಬೆಂಗಳೂರು ಮೂಲದ ಮಹಿಳೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೈಯಲು ಬಂದಿರುವುದನ್ನು ತಿಳಿದು ಈ ಮೂವರನ್ನು ಪೋಲಿಸ್ ಇಲಾಖಾಧಿಕಾರಿಗಳಿಗೆ ತಿಳಿಸಿ ರಕ್ಷಿಸಿದ ಕಾರಣಕ್ಕಾಗಿ ಕೊಕ್ಕಡದ ಯುವಕರಿಬ್ಬರನ್ನು ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಡಾ. ರವಿಕಾಂತೇ ಗೌಡರವರು ಶನಿವಾರದಂದು ಪ್ರಶಂಸಾ ಪತ್ರ ನೀಡಿ ಪುರಸ್ಕರಿಸಿದರು. ಎಪ್ರಿಲ್ 04 ರಂದು ಬೆಂಗಳೂರಿನ ರಾಮನಗರ ಮೂಲದ ಶಿವಾಜಿ ರಾವ್ ಎಂಬವರ ಪತ್ನಿ ಚಂದ್ರಕಲಾ ಎಂಬಾಕೆ ಮನೆಯಲ್ಲಿ ಪತಿಯ ಹೆತ್ತವರ ಕಿರುಕುಳ ತಾಳಲಾರದೆ

ಸಾವಿನ ದವಡೆಯಿಂದ ಮಹಿಳೆ ಮತ್ತು ಮಕ್ಕಳಿಬ್ಬರ ಪ್ರಾಣವುಳಿಸಿದ ಕೊಕ್ಕಡದ ಯುವಕರು ► ಯುವಕರಿಬ್ಬರ ಸಮಯೋಚಿತ ಕಾರ್ಯಕ್ಕೆ ಜಿಲ್ಲಾ ಎಸ್ಪಿಯವರಿಂದ ಪ್ರಶಂಸಾ ಪತ್ರ Read More »

ಕರಾವಳಿ

ಆಲಂಕಾರು: ಸಾಫ್ಟ್ ಡ್ರಿಂಕ್ ಸಾಗಾಟದ ವಾಹನ ಟೆಲಿಫೋನ್ ಕಂಬಕ್ಕೆ ಢಿಕ್ಕಿ ► ಕಂಬ ತಲೆಯ ಮೇಲೆ ಬಿದ್ದು ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಎ.07. ಸಾಫ್ಟ್ ಡ್ರಿಂಕ್ ಸಾಗಾಟದ ವಾಹನವೊಂದು ಟೆಲಿಫೋನ್ ಕಂಬಕ್ಕೆ ಢಿಕ್ಕಿ ಹೊಡೆದು ಕಂಬ ತಲೆಯ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಆಲಂಕಾರಿನಲ್ಲಿ ಶನಿವಾರ ಅಪರಾಹ್ನ ನಡೆದಿದೆ. ಮೃತರನ್ನು ಕಡಬ ತಾಲೂಕಿನ ಪೆರಾಬೆ ಗ್ರಾಮದ ಬಾಲಾಜೆ ನಿವಾಸಿ ದಿ| ಅಂಗಾರ ಎಂಬವರ ಪುತ್ರ ಗಿರೀಶ್ (43) ಎಂದು ಗುರುತಿಸಲಾಗಿದೆ. ಆಲಂಕಾರು ಮದ್ಯದಂಗಡಿಯ ಮುಂಭಾಗದಲ್ಲಿದ್ದ ಟೆಲಿಫೋನ್ ಕಂಬಕ್ಕೆ ಭವಾನಿ ಸಾಫ್ಟ್ ಡ್ರಿಂಕ್ ಸಾಗಾಟದ ವಾಹನವು ಹಿಮ್ಮುಖವಾಗಿ ಚಲಿಸಿ ಢಿಕ್ಕಿ ಹೊಡೆದಿದ್ದು, ಈ

ಆಲಂಕಾರು: ಸಾಫ್ಟ್ ಡ್ರಿಂಕ್ ಸಾಗಾಟದ ವಾಹನ ಟೆಲಿಫೋನ್ ಕಂಬಕ್ಕೆ ಢಿಕ್ಕಿ ► ಕಂಬ ತಲೆಯ ಮೇಲೆ ಬಿದ್ದು ಓರ್ವ ಮೃತ್ಯು Read More »

ಕರಾವಳಿ

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನಾಳೆ (ಎ.08) ‘ಮಿಂಚಿನ ನೋಂದಣಿ’ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.07. ಮುಂದಿನ ತಿಂಗಳು‌ ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲು ಬಾಕಿಯಾಗಿದೆಯೇ…? ಹಾಗಿದ್ದಲ್ಲಿ ನಿಮಗೊಂದು ಸುವರ್ಣಾವಕಾಶವೊಂದಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು‌ ಬಿಟ್ಟು ಹೋಗಿರುವವರಿಗೆ, ತಿದ್ದುಪಡಿ ಮಾಡಲಿರುವವರಿಗೆ ನಾಳೆ (ಎಪ್ರಿಲ್ 8 ಭಾನುವಾರ)ದಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಚುನಾವಣಾ ಆಯೋಗವು “ಮಿಂಚಿನ ನೋಂದಣಿ” ಸೌಲಭ್ಯವನ್ನು ಆಯೋಜಿಸಿದೆ. ನಿಮ್ಮ ಹೆಸರು ಓಟರ್ ಲಿಸ್ಟ್ ನಲ್ಲಿ ಇದೆಯೋ ಇಲ್ಲವೋ

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನಾಳೆ (ಎ.08) ‘ಮಿಂಚಿನ ನೋಂದಣಿ’ ಕಾರ್ಯಕ್ರಮ Read More »

ಕರ್ನಾಟಕ

ಮೇ 07 ರಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ► ಎಪ್ರಿಲ್ ಅಂತ್ಯಕ್ಕೆ ದ್ವಿತೀಯ ಪಿಯು ಫಲಿತಾಂಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.07. ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮುಕ್ತಾಯಗೊಂಡಿದ್ದು, ಮೇ 07 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವರು, ಮೇ 08 ರಂದು ಆಯಾ ಶಾಲೆಗಳಲ್ಲಿ ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಈ ಬಾರಿಯ ಪರೀಕ್ಷಾ ಸುಧಾರಣಾ ಕ್ರಮಗಳು ತೃಪ್ತಿ ತಂದಿದ್ದು, ಮೇ 07 ರಂದು ವಿದ್ಯಾರ್ಥಿಗಳು ಫಲಿತಾಂಶ ನಿರೀಕ್ಷಿಸಬಹುದು ಎಂದರು. ಏಪ್ರಿಲ್ ಕೊನೆಯ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವೂ ಪ್ರಕಟ ಪಡಿಸಲಾಗುವುದೆಂದು

ಮೇ 07 ರಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ► ಎಪ್ರಿಲ್ ಅಂತ್ಯಕ್ಕೆ ದ್ವಿತೀಯ ಪಿಯು ಫಲಿತಾಂಶ Read More »

ಕರ್ನಾಟಕ

ಬಂಟ್ವಾಳ: ವಂಚಿಸಿ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.06. ವಂಚನೆ ಪ್ರಕರಣಕ್ಕೊಳಗಾಗಿ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ ಘಟನೆ ಶುಕ್ರವಾರದಂದು ನಡೆದಿದೆ.   ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವಳವೂರು ಉಮ್ಮರಗುಡ್ಡೆ ನಿವಾಸಿ ಶರೀಫ್ ಎಂಬವರ ಪುತ್ರ ಹನೀಫ್ ಎಂದು ಗುರುತಿಸಲಾಗಿದೆ. ಈತ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ 2015 ರಿಂದ ತಲೆಮರೆಸಿಕೊಂಡಿದ್ದನೆನ್ನಲಾಗಿದ್ದು, ಶುಕ್ರವಾರದಂದು ತುಂಬೆ ಗ್ರಾಮದ ಮದಕ ಎಂಬಲ್ಲಿದ್ದಾನೆಂಬ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು

ಬಂಟ್ವಾಳ: ವಂಚಿಸಿ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಕರಾವಳಿ
Scroll to Top